AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಮಿಕಂಡಕ್ಟರ್ ಭವಿಷ್ಯ ನಿರ್ಮಿಸಲು ಹೊರಟ ಭಾರತ; 1.27 ಲಕ್ಷ ಕೋಟಿ ರೂ ವೆಚ್ಚದ ಸೆಮಿಕಾನ್ 2.0 ಚಾಲನೆ

ಕೇಂದ್ರ ಸರ್ಕಾರವು ಎರಡನೇ ಹಂತದ ಸೆಮಿಕಾನ್ ಯೋಜನೆಗೆ ಚಾಲನೆ ನೀಡಿದೆ. ಸೆಮಿಕಾನ್ 2026 ಸೆಪ್ಟೆಂಬರ್ 17ರಿಂದ 19ರವರೆಗೆ ನಡೆಯುತ್ತದೆ. ಸೆಮಿಕಂಡಕ್ಟರ್ ಭವಿಷ್ಯದ ನಿರ್ಮಾಣಕ್ಕಾಗಿ ಸರ್ಕಾರ ಈ 1.27 ಲಕ್ಷ ಕೋಟಿ ರೂ ವೆಚ್ಚದ ಸೆಮಿಕಂಡಕ್ಟರ್ ಯೋಜನೆಯನ್ನು ರೂಪಿಸಿದೆ. ಮೊದಲ ಹಂತದಲ್ಲಿ ಸೆಮಿಕಂಡಕ್ಟರ್ ಉದ್ಯಮದ ತಳಹದಿ ನಿರ್ಮಿಸುವ ಸರ್ಕಾರದ ಪ್ರಯತ್ನ ಯಶಸ್ವಿಯಾಗಿದೆ. ಈಗ ಎರಡನೇ ಹಂತ ಶುರುವಾಗಿದೆ.

ಸೆಮಿಕಂಡಕ್ಟರ್ ಭವಿಷ್ಯ ನಿರ್ಮಿಸಲು ಹೊರಟ ಭಾರತ; 1.27 ಲಕ್ಷ ಕೋಟಿ ರೂ ವೆಚ್ಚದ ಸೆಮಿಕಾನ್ 2.0 ಚಾಲನೆ
ಸೆಮಿಕಾನ್ ಇಂಡಿಯಾ 2.0Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 17, 2026 | 7:40 PM

Share

ನವದೆಹಲಿ, ಸೆಪ್ಟೆಂಬರ್ 17: ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಉದ್ಯಮದ ಪ್ರಮುಖ ಕೇಂದ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರವು ‘ಸೆಮಿಕಾನ್ 2.0’ (Semicon 2.0) ಯೋಜನೆಗೆ ಚಾಲನೆ ನೀಡಿದೆ. ‘ಸೆಮಿಕಾನ್ 1.0’ ಯಶಸ್ಸಿನ ನಂತರ, 2026ರ ಜುಲೈನಲ್ಲಿ ₹1,75,500 ಕೋಟಿ ಆಯವ್ಯಯದೊಂದಿಗೆ ಈ ನೂತನ ಹಂತವನ್ನು ಅನುಮೋದಿಸಲಾಗಿದೆ. ನವದೆಹಲಿಯ ಯಶೋಭೂಮಿ ಕನ್ವೆನ್ಷನ್ ಹಾಲ್​ನಲ್ಲಿ ನಡೆಯುತ್ತಿರುವ ‘ಸೆಮಿಕಾನ್ ಇಂಡಿಯಾ 2026’ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರಕ್ರಿಯೆಗೆ ಮತ್ತಷ್ಟು ವೇಗ ನೀಡಿದ್ದಾರೆ.

₹1,75,500 ಕೋಟಿ ವೆಚ್ಚದ ಈ ಯೋಜನೆಯು ಕೇವಲ ಚಿಪ್ ತಯಾರಿಕೆಯಷ್ಟೇ ಅಲ್ಲದೆ, ಸಂಶೋಧನೆ (R&D), ಚಿಪ್ ವಿನ್ಯಾಸ, ಯಂತ್ರೋಪಕರಣಗಳು ಮತ್ತು ಕಚ್ಚಾವಸ್ತುಗಳು, ಫ್ಯಾಬ್‌ಗಳ ಸ್ಥಾಪನೆ, ನುರಿತ ಮಾನವಸಂಪನ್ಮೂಲ ಹಾಗೂ ಸುಧಾರಿತ ಪ್ಯಾಕೇಜಿಂಗ್ ಎಂಬ 6 ಪ್ರಮುಖ ಸ್ತಂಭಗಳ ಮೇಲೆ ಗಮನಹರಿಸಲಿದೆ.

ಇದನ್ನೂ ಓದಿ: ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತದ ದಾಪುಗಾಲು; ಒಂದು ದಶಕದಲ್ಲಿ ಸಾಧ್ಯವಾಗುವಂಥದ್ದನ್ನು ನಾಲ್ಕೇ ವರ್ಷದಲ್ಲಿ ಸಾಧಿಸಿದೆ ಭಾರತ: ಗರ್ವ ಪಟ್ಟ ಮೋದಿ

ಆಮದು ಅವಲಂಬನೆ ತಗ್ಗಿಸುವುದು: 2017ರಿಂದ 2025ರ ಅವಧಿಯಲ್ಲಿ ಭಾರತವು 150 ಬಿಲಿಯನ್ ಡಾಲರ್ ಮೌಲ್ಯದ ಸೆಮಿಕಂಡಕ್ಟರ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ದೇಶೀಯ ಬೇಡಿಕೆಯು 2030ರ ವೇಳೆಗೆ 110 ಬಿಲಿಯನ್ ಡಾಲರ್ ಹಾಗೂ 2035ರ ವೇಳೆಗೆ 200 ಬಿಲಿಯನ್ ಡಾಲರ್ ದಾಟುವ ಅಂದಾಜಿದ್ದು, ಆಮದು ಕಡಿಮೆ ಮಾಡುವುದು ರಾಷ್ಟ್ರೀಯ ಆದ್ಯತೆಯಾಗಿದೆ.

ಸೆಮಿಕಾನ್ 1.0 ಸಾಧನೆಗಳು: ಸೆಮಿಕಾನ್ ಯೋಜನೆಯ ಮೊದಲ ಹಂತದಲ್ಲಿ ₹1.64 ಲಕ್ಷ ಕೋಟಿಗೂ ಅಧಿಕ ಹೂಡಿಕೆಯ 12 ತಯಾರಿಕಾ ಘಟಕಗಳಿಗೆ ಅನುಮೋದನೆ ನೀಡಲಾಗಿದ್ದು, ಈಗಾಗಲೇ 5 ಘಟಕಗಳು ವಾಣಿಜ್ಯ ಉತ್ಪಾದನೆ ಪ್ರಾರಂಭಿಸಿವೆ. ಜೊತೆಗೆ 24 ಚಿಪ್ ಡಿಸೈನ್ ಯೋಜನೆಗಳಿಗೆ ಉತ್ತೇಜನ ನೀಡಲಾಗಿದೆ.

ಬ್ರ್ಯಾಂಡ್ ‘ಆತ್ಮನಿರ್ಭರ ಭಾರತ’: ಚಂದ್ರಯಾನ-3 ಹಾಗೂ ಆದಿತ್ಯ-ಎಲ್1 ನೌಕೆಗಳಲ್ಲಿ ಪಂಜಾಬ್‌ನ ಮೊಹಾಲಿಯಲ್ಲಿರುವ ‘ಸೆಮಿಕಂಡಕ್ಟರ್ ಲ್ಯಾಬೊರೇಟರಿ’ (SCL) ತಯಾರಿಸಿದ ಸ್ವದೇಶಿ ಚಿಪ್‌ಗಳನ್ನು ಯಶಸ್ವಿಯಾಗಿ ಬಳಸಲಾಗಿತ್ತು.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಸೆಮಿಕಾನ್ ಇಂಡಿಯಾ 2026 ಕಾರ್ಯಕ್ರಮ ಉದ್ಘಾಟನೆ; ಸೆಮಿಕಂಡಕ್ಟರ್ ಕ್ಷೇತ್ರದ ಉದ್ಯಮಿಗಳ ಸಮಾಗಮ

ಜಾಗತಿಕ ಪಾಲುದಾರಿಕೆ: ಭಾರತವು ಅಮೆರಿಕ, ಜಪಾನ್, ಯುರೋಪಿಯನ್ ಯೂನಿಯನ್, ಸಿಂಗಾಪುರ ಮತ್ತು ಜರ್ಮನಿಯೊಂದಿಗೆ ಸೆಮಿಕಂಡಕ್ಟರ್ ತಂತ್ರಜ್ಞಾನ ವಿನಿಮಯಕ್ಕಾಗಿ ಸಹಯೋಗ ಹೊಂದಿದೆ. ಜಾಗತಿಕ ಚಿಪ್ ವಿನ್ಯಾಸಪಟುಗಳ ಪೈಕಿ ಶೇ. 20 ರಷ್ಟು ನುರಿತ ಇಂಜಿನಿಯರ್‌ಗಳು ಭಾರತದಲ್ಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More