AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕಕ್ಕೆ ಮಂಡಳಿ ಅನುಮೋದನೆ; ನೋಯೆಲ್ ಟಾಟಾ ವಿರೋಧ

ಟಾಟಾ ಸನ್ಸ್ ಎಕ್ಸಿಕ್ಯೂಟಿವ್ ಛೇರ್ಮನ್ ಸ್ಥಾನಕ್ಕೆ ಎನ್ ಚಂದ್ರಶೇಖರನ್ ಅವರನ್ನು ಮರುನೇಮಕ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಟಾಟಾ ಸನ್ಸ್ ಮಂಡಳಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎರಡು ಅವಧಿ ಟಾಟಾ ಸನ್ಸ್ ಎಕ್ಸಿಕ್ಯೂಟಿವ್ ಛೇರ್ಮನ್ ಆಗಿದ್ದ ಎನ್ ಚಂದ್ರಶೇಖರನ್ ಮೂರನೇ ಅವಧಿ ಮುಂದುವರಿಯದಿರಲು ನಿರ್ಧರಿಸಿದ್ದರು.

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕಕ್ಕೆ ಮಂಡಳಿ ಅನುಮೋದನೆ; ನೋಯೆಲ್ ಟಾಟಾ ವಿರೋಧ
ಎನ್ ಚಂದ್ರಶೇಖರನ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 17, 2026 | 5:22 PM

Share

ನವದೆಹಲಿ, ಸೆಪ್ಟೆಂಬರ್ 17: ಟಾಟಾ ಸನ್ಸ್ ಸಂಸ್ಥೆಯ (Tata Sons) ಕಾರ್ಯಾಧ್ಯಕ್ಷ ಸ್ಥಾನದಲ್ಲಿ (Executive Chairman) ಮುಂದುವರಿಯಲು ಬಯಸುವುದಿಲ್ಲ ಎಂದು ನಿರ್ಗಮಿಸುತ್ತಿದ್ದ ಎನ್ ಚಂದ್ರಶೇಖರನ್ (N Chandrasekaran) ಅವರನ್ನು ಸಂಸ್ಥೆಯು ಟಾಟಾ ಮಾಡದೆ ಮತ್ತೆ ಕೈಬೀಸಿ ಕರೆಯುತ್ತಿದೆ. ಟಾಟಾ ಸನ್ಸ್ ಕಂಪನಿಯ ಆಡಳಿತ ಮಂಡಳಿಯು ಎನ್‌ ಚಂದ್ರಶೇಖರನ್ ಅವರನ್ನು ಮೂರನೇ ಅವಧಿಗೆ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಮರುನೇಮಕ ಮಾಡಲು ಅನುಮೋದನೆ ನೀಡಿದೆ. ಪ್ರಸ್ತುತ ಅವಧಿಯು ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ, ಅವರ ಅತ್ಯುತ್ತಮ ನಾಯಕತ್ವ ಹಾಗೂ ಸಂಸ್ಥೆಯ ಪ್ರಗತಿಯನ್ನು ಪರಿಗಣಿಸಿ ಮುಂದಿನ ಐದು ವರ್ಷಗಳ ಅವಧಿಗೆ ಈ ಜವಾಬ್ದಾರಿಯನ್ನು ವಹಿಸಲಾಗಿದೆ.

ಎಕ್ಸಿಕ್ಯೂಟಿವ್ ಛೇರ್ಮನ್ ಹುದ್ದೆಯಲ್ಲಿ ನಟರಾಜನ್ ಚಂದ್ರಶೇಖರನ್ ಅವರು ಎರಡು ಅವಧಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವಧಿಯು 2027ರ ಫೆಬ್ರುವರಿ 20ರಂದು ಅಂತ್ಯಗೊಳ್ಳುತ್ತದೆ. ಅಷ್ಟರೊಳಗೆ ಬೇರೆ ವ್ಯಕ್ತಿಯನ್ನು ಆ ಹುದ್ದೆಗೆ ಹುಡುಕಿಕೊಳ್ಳಿ. ತಾನು ಮೂರನೇ ಅವಧಿಗೆ ಮುಂದುವರಿಯುವುದಿಲ್ಲ ಎಂದು ಚಂದ್ರಶೇಖರನ್ ಹೇಳಿದ್ದರು. ಇದೀಗ ಟಾಟಾ ಸನ್ಸ್​ನ ಆಡಳಿತ ಮಂಡಳಿ ಸಭೆಯಲ್ಲಿ ಎನ್ ಚಂದ್ರಶೇಖರನ್ ಅವರ ಮರುನೇಮಕಕ್ಕೆ ಬಹುಮತದಿಂದ ಅನುಮೋದನೆ ಸಿಕ್ಕಿದೆ. ಟಾಟಾ ಟ್ರಸ್ಟ್ಸ್​ನ ಮುಖ್ಯಸ್ಥ ನೋಯೆಲ್ ಟಾಟಾ ಅವರೊಬ್ಬರು ಮಾತ್ರ ಮಂಡಳಿಯಲ್ಲಿ ಚಂದ್ರಶೇಖರನ್ ಮರುನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರಾಗಿದ್ದಾರೆ.

ಇದನ್ನೂ ಓದಿ: ಚೀನಾದ ಟಾಪ್ 10 ಕಾರುಗಳಲ್ಲಿ ಒಂದೂ ಪೆಟ್ರೋಲ್ ಕಾರಿಲ್ಲ; ಹಾಗಾದ್ರೆ ಯಾವ ಕಾರು?

ನೋಯೆಲ್ ಟಾಟಾ ಅವರೊಬ್ಬರದ್ದೇ ವಿರೋಧ?

ಟಾಟಾ ಸನ್ಸ್​ನಲ್ಲಿ ಮೂರನೇ ಅವಧಿಗೆ ಮುಂದುವರಿಯಲು ಎನ್ ಚಂದ್ರಶೇಖರನ್ ಬಯಸಿದ್ದರೆಂದು ಹೇಳಲಾಗುತ್ತದೆ. ಆದರೆ, ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದ ಬೆಂಬಲ ಇರಲಿಲ್ಲ. ನೋಯೆಲ್ ಟಾಟಾ ವಿರೋಧ ಮಾಡಿದ್ದರು. ಈ ಕಾರಣಕ್ಕೆ ಚಂದ್ರಶೇಖರನ್ ಅವರು ತಾನು ಮೂರನೇ ಅವಧಿಗೆ ಮುಂದುವರಿಯುವುದಿಲ್ಲ ಎಂದು ಹೇಳಿದ್ದರು. ಆದರೆ, ಟಾಟಾ ಸನ್ಸ್ ಮಂಡಳಿಯ ಇತರ ಸದಸ್ಯರಿಗೆ ಚಂದ್ರಶೇಖರನ್ ಮುಂದುವರಿಯುವುದು ಬೇಕಾಗಿದೆ. ಇಲ್ಲಿಯೂ ನೋಯೆಲ್ ಟಾಟಾ ವಿರೋಧಿಸುತ್ತಿದ್ದಾರೆ.

ಟಾಟಾ ಸನ್ಸ್​ನ ಎಕ್ಸಿಕ್ಯೂಟಿವ್ ಛೇರ್ಮನ್ ನೇಮಕ ನಿರ್ಧಾರವನ್ನು ಇಬ್ಬರೂ ನಾಮಿನಿ ಡೈರೆಕ್ಟರ್​ಗಳು ಅನುಮೋದನೆ ಮಾಡಬೇಕು. ಇಲ್ಲದಿದ್ದರೆ ಅದು ಅನೂರ್ಜಿತವಾಗುತ್ತದೆ ಎಂಬುದು ನೋಯೆಲ್ ಟಾಟಾ ಅವರ ವಾದ. ಇಬ್ಬರು ನಾಮಿನಿ ನಿರ್ದೇಶಕರಲ್ಲಿ ಅವರೂ ಒಬ್ಬರಾಗಿದ್ದಾರೆ. ತನ್ನ ಸಮ್ಮತಿ ಇಲ್ಲದೆಯೇ ಟಾಟಾ ಸನ್ಸ್ ಬೋರ್ಡ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಮಾನ್ಯತೆ ಇಲ್ಲ ಎನ್ನುತ್ತಾರೆ ನೋಯೆಲ್ ಟಾಟಾ.

ಇದನ್ನೂ ಓದಿ: ಈ ಕಾನೂನಿನಿಂದ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧಕ್ಕೆ ಹಿನ್ನಡೆ, ಜಾಗತಿಕ ಇಂಧನ ಮಾರುಕಟ್ಟೆಗೂ ಧಕ್ಕೆ: ಭಾರತ ಪ್ರತಿಕ್ರಿಯೆ

ನೋಯೆಲ್ ಟಾಟಾ ಅವರು ಟಾಟಾ ಟ್ರಸ್ಟ್ಸ್​ನ ಅಧ್ಯಕ್ಷರಾಗಿದ್ದಾರೆ. ಈ ಟಾಟಾ ಟ್ರಸ್ಟ್ಸ್ ಸಂಸ್ಥೆಯು ಟಾಟಾ ಸನ್ಸ್ ಅನ್ನು ನಿಯಂತ್ರಿಸುತ್ತದೆ. ಟಾಟಾ ಗ್ರೂಪ್​ನ ಎಲ್ಲಾ ಕಂಪನಿಗಳು ಟಾಟಾ ಸನ್ಸ್ ಅಧೀನದಲ್ಲಿ ಬರುತ್ತವೆ. ಅಂತಿಮವಾಗಿ ಇದರ ಪ್ರಮುಖ ಸೂತ್ರಧಾರ ನೋಯೆಲ್ ಟಾಟಾ ಅವರಾಗಿರುತ್ತಾರೆ.

ಟಾಟಾ ಸನ್ಸ್ ಅನ್ನು ಲಿಸ್ಟೆಡ್ ಕಂಪನಿಯಾಗಿ ಮಾಡುವ ಪ್ರಸ್ತಾಪ ಇದೆ. ಇದಕ್ಕೆ ನೋಯೆಲ್ ಟಾಟಾ ಅವರ ವಿರೋಧ ಇದೆ. ಇವೆಲ್ಲವೂ ಕೂಡ ಟಾಟಾ ಸನ್ಸ್​ನ ಮುಖ್ಯಸ್ಥರ ಸ್ಥಾನದ ವಿಚಾರದಲ್ಲಿ ಸಂಕೀರ್ಣತೆ ತಂದಿಟ್ಟಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ