AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದ ಟಾಪ್ 10 ಕಾರುಗಳಲ್ಲಿ ಒಂದೂ ಪೆಟ್ರೋಲ್ ಕಾರಿಲ್ಲ; ಹಾಗಾದ್ರೆ ಯಾವ ಕಾರು?

ಚೀನಾದಲ್ಲಿ ಆಗಸ್ಟ್ 2026ರಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಒಂದೇ ಒಂದು ಪೆಟ್ರೋಲ್ ಕಾರು ಸ್ಥಾನ ಪಡೆದಿಲ್ಲ. 10ರಲ್ಲಿ 9 ಕಾರುಗಳು ಸಂಪೂರ್ಣ ಎಲೆಕ್ಟ್ರಿಕ್‌ ಆಗಿದ್ದರೆ, ಒಂದು ಪ್ಲಗ್‌ಇನ್ ಹೈಬ್ರಿಡ್‌ ಆಗಿದೆ. ಗೀಲಿ EX2, ಲೀಪ್‌ಮೋಟರ್ A10, ಟೆಸ್ಲಾ ಮಾಡೆಲ್ Y ಸೇರಿದಂತೆ ಹಲವು ಎಲೆಕ್ಟ್ರಿಕ್ ಕಾರುಗಳು ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.

ಚೀನಾದ ಟಾಪ್ 10 ಕಾರುಗಳಲ್ಲಿ ಒಂದೂ ಪೆಟ್ರೋಲ್ ಕಾರಿಲ್ಲ; ಹಾಗಾದ್ರೆ ಯಾವ ಕಾರು?
China Ev Cars
ಮಾಲಾಶ್ರೀ ಅಂಚನ್​
| Edited By: |

Updated on: Sep 17, 2026 | 3:18 PM

Share

ಮುಖ್ಯಾಂಶಗಳು

  • ಚೀನಾದ ಟಾಪ್ 10ರಲ್ಲಿ ಪೆಟ್ರೋಲ್ ಕಾರೇ ಇಲ್ಲ!
  • ಚೀನಾದಲ್ಲಿ ಆಗಸ್ಟ್ 2026ರಲ್ಲಿ ಎಲೆಕ್ಟ್ರಿಕ್ ಕಾರುಗಳದ್ದೇ ಹವಾ!
  • 10ರಲ್ಲಿ 9 ಕಾರುಗಳು ಎಲೆಕ್ಟ್ರಿಕ್‌ ಆಗಿದ್ದರೆ, ಒಂದು ಪ್ಲಗ್‌ಇನ್ ಹೈಬ್ರಿಡ್‌

ಚೀನಾದಲ್ಲಿ ಎಲೆಕ್ಟ್ರಿಕ್ ಕಾರುಗಳ (Electric Car) ಬೇಡಿಕೆ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎಂಬುದಕ್ಕೆ ಆಗಸ್ಟ್ 2026ರ ಕಾರು ಮಾರಾಟದ ಅಂಕಿ-ಅಂಶಗಳು ಸಾಕ್ಷಿಯಾಗಿವೆ. ಆಗಸ್ಟ್‌ನಲ್ಲಿ ಚೀನಾದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಒಂದೇ ಒಂದು ಪೆಟ್ರೋಲ್ ಕಾರು ಕೂಡ ಸ್ಥಾನ ಪಡೆದಿಲ್ಲ. ಈ ಪಟ್ಟಿಯಲ್ಲಿರುವ 10 ಕಾರುಗಳಲ್ಲಿ 9 ಕಾರುಗಳು ಸಂಪೂರ್ಣ ಎಲೆಕ್ಟ್ರಿಕ್‌ ಆಗಿದ್ದರೆ, ಒಂದು ಕಾರು ಪ್ಲಗ್-ಇನ್ ಹೈಬ್ರಿಡ್‌ ಆಗಿದೆ. ಕಡಿಮೆ ರನ್ನಿಂಗ್‌ ಕಾಸ್ಟ್‌, ನಿರ್ವಹಣಾ ವೆಚ್ಚ ಕಡಿಮೆ ಇರುವುದು ಹಾಗೂ ಚಾರ್ಜಿಂಗ್‌ ಸೌಲಭ್ಯಗಳು ಹೆಚ್ಚುತ್ತಿರುವುದು ಸೇರಿದಂತೆ ಹಲವು ಕಾರಣಗಳಿಂದ ಎಲೆಕ್ಟ್ರಿಕ್ ವಾಹನಗಳತ್ತ ಗ್ರಾಹಕರ ಒಲವು ಹೆಚ್ಚುತ್ತಿದೆ.

ಮೊದಲ ಸ್ಥಾನದಲ್ಲಿ ಗೀಲಿ EX2

ಆಗಸ್ಟ್‌ನಲ್ಲಿ ಚೀನಾದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಯನ್ನು ಗೀಲಿ EX2 ಪಡೆದುಕೊಂಡಿದೆ. ಈ ಎಲೆಕ್ಟ್ರಿಕ್ ಕಾರಿನ 39,651 ಯೂನಿಟ್‌ಗಳು ಮಾರಾಟವಾಗಿವೆ. ಚೀನಾದಲ್ಲಿ ಇದರ ಬೆಲೆ 65,000ರಿಂದ 95,000 ಯುವಾನ್‌ವರೆಗೆ ಇದೆ. ಭಾರತೀಯ ಕರೆನ್ಸಿಯಲ್ಲಿ ಇದು ಸರಿಸುಮಾರು ₹9.2 ಲಕ್ಷದಿಂದ ₹13.5 ಲಕ್ಷದವರೆಗೆ ಆಗುತ್ತದೆ.

ಎರಡನೇ ಸ್ಥಾನದಲ್ಲಿ ಲೀಪ್‌ಮೋಟರ್ A10 ಇದೆ. ಆಗಸ್ಟ್‌ನಲ್ಲಿ ಈ ಎಲೆಕ್ಟ್ರಿಕ್ ಕಾರಿನ 30,652 ಯೂನಿಟ್‌ಗಳು ಮಾರಾಟವಾಗಿವೆ. ಚೀನಾದಲ್ಲಿ ಇದರ ಬೆಲೆ 66,000ರಿಂದ 87,000 ಯುವಾನ್‌ವರೆಗೆ ಇದೆ.

ಟಾಪ್ 3ರಲ್ಲಿ ಟೆಸ್ಲಾ ಮಾಡೆಲ್ Y

ಟೆಸ್ಲಾದ ಮಾಡೆಲ್ Y ಆಗಸ್ಟ್ ಮಾರಾಟ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಚೀನಾದಲ್ಲಿ ಈ ಎಲೆಕ್ಟ್ರಿಕ್ ಕಾರಿನ 29,260 ಯೂನಿಟ್‌ಗಳು ಮಾರಾಟವಾಗಿವೆ. ಇದರ ಬೆಲೆ 2,64,000ರಿಂದ 3,14,000 ಯುವಾನ್‌ವರೆಗೆ ಇದೆ.

Helmet Camera: ಹೆಲ್ಮೆಟ್‌ಗೆ ಕ್ಯಾಮೆರಾ ಅಳವಡಿಸುವುದು ಹೇಗೆ? ಎಷ್ಟು ಖರ್ಚು, ಏಕೆ ಅಗತ್ಯ?

ನಾಲ್ಕನೇ ಸ್ಥಾನದಲ್ಲಿ ಫಾಂಗ್ ಚೆಂಗ್ ಬಾವೊ Ti7 ಇದೆ. ಈ ಪಟ್ಟಿಯಲ್ಲಿರುವ ಏಕೈಕ ಹೈಬ್ರಿಡ್ ಕಾರು ಇದಾಗಿದೆ. ಆಗಸ್ಟ್‌ನಲ್ಲಿ ಇದರ 23,471 ಯೂನಿಟ್‌ಗಳು ಮಾರಾಟವಾಗಿವೆ. ಇದರ ಬೆಲೆ 1,80,000ರಿಂದ 2,40,000 ಯುವಾನ್‌ವರೆಗೆ ಇದೆ. ಇನ್ನು ಐದನೇ ಸ್ಥಾನವನ್ನು BYD Atto 2 ಪಡೆದುಕೊಂಡಿದೆ. ಈ ಎಲೆಕ್ಟ್ರಿಕ್ ಕಾರಿನ 22,958 ಯೂನಿಟ್‌ಗಳು ಆಗಸ್ಟ್‌ನಲ್ಲಿ ಮಾರಾಟವಾಗಿವೆ. ಚೀನಾದಲ್ಲಿ ಇದರ ಬೆಲೆ 75,000ರಿಂದ 1,20,000 ಯುವಾನ್‌ವರೆಗೆ ಇದೆ.

6ರಿಂದ 10ನೇ ಸ್ಥಾನದಲ್ಲಿರುವ ಕಾರುಗಳು

ಟೆಸ್ಲಾ ಮಾಡೆಲ್ 3 ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಆಗಸ್ಟ್‌ನಲ್ಲಿ ಚೀನಾದಲ್ಲಿ ಇದರ 20,787 ಯೂನಿಟ್‌ಗಳು ಮಾರಾಟವಾಗಿವೆ. ಇದರ ಬೆಲೆ 2,36,000ರಿಂದ 3,40,000 ಯುವಾನ್‌ವರೆಗೆ ಇದೆ. ಚಾಂಗನ್ Nevo Q05 ಏಳನೇ ಸ್ಥಾನ, ಎಂಟನೇ ಸ್ಥಾನದಲ್ಲಿರುವ Li Auto i6 ಕಾರು, ಬಿವೈಡಿ Dolphin ಒಂಬತ್ತನೇ ಸ್ಥಾನದಲ್ಲಿದ್ದು, ಶಯೋಮಿ SU7 ಟಾಪ್ 10 ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗಾಣಗಾಪುರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
ಗಾಣಗಾಪುರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
ದಸರಾ ಗಜಪಡೆಗೆ ಹಣ್ಣು ತಿನ್ನಿಸಿದ ತ್ರಿಷಿಕಾ, ಆದ್ಯವೀರ್
ದಸರಾ ಗಜಪಡೆಗೆ ಹಣ್ಣು ತಿನ್ನಿಸಿದ ತ್ರಿಷಿಕಾ, ಆದ್ಯವೀರ್
2028ಕ್ಕೆ ರಾಮನಗರದಿಂದಲೇ ಸ್ಪರ್ಧೆ: ನಿಖಿಲ್​ ಕುಮಾರಸ್ವಾಮಿ
2028ಕ್ಕೆ ರಾಮನಗರದಿಂದಲೇ ಸ್ಪರ್ಧೆ: ನಿಖಿಲ್​ ಕುಮಾರಸ್ವಾಮಿ
ಎತ್ತಿನಹೊಳೆ ಯೋಜನೆಯ ಕಾಮಗಾರಿ ವೀಕ್ಷಿಸಿದ ಸಚಿವ ಚಲುವರಾಯಸ್ವಾಮಿ
ಎತ್ತಿನಹೊಳೆ ಯೋಜನೆಯ ಕಾಮಗಾರಿ ವೀಕ್ಷಿಸಿದ ಸಚಿವ ಚಲುವರಾಯಸ್ವಾಮಿ
ಪೆಟ್ರೋಲ್ ಬಂಕ್‌ಗಳಲ್ಲಿ ವಂಚನೆ ಆರೋಪದ ಬಗ್ಗೆ ‘ಟಿವಿ9’ ರಿಯಾಲಿಟಿ ಚೆಕ್
ಪೆಟ್ರೋಲ್ ಬಂಕ್‌ಗಳಲ್ಲಿ ವಂಚನೆ ಆರೋಪದ ಬಗ್ಗೆ ‘ಟಿವಿ9’ ರಿಯಾಲಿಟಿ ಚೆಕ್
ಪ್ರಧಾನಿ ಮೋದಿ ಹುಟ್ಟುಹಬ್ಬದ ಹಿನ್ನೆಲೆ ವಿ. ಸೋಮಣ್ಣ ವಿಶೇಷ ಪೂಜೆ
ಪ್ರಧಾನಿ ಮೋದಿ ಹುಟ್ಟುಹಬ್ಬದ ಹಿನ್ನೆಲೆ ವಿ. ಸೋಮಣ್ಣ ವಿಶೇಷ ಪೂಜೆ
ಸಿಎಂ ಬರಲಿರುವ ಸ್ಥಳಕ್ಕೆ ನುಗ್ಗಲು ಯತ್ನಿಸಿದ ಎಸ್​ಎಫ್​ಐ ಮುಖಂಡರು ವಶಕ್ಕೆ
ಸಿಎಂ ಬರಲಿರುವ ಸ್ಥಳಕ್ಕೆ ನುಗ್ಗಲು ಯತ್ನಿಸಿದ ಎಸ್​ಎಫ್​ಐ ಮುಖಂಡರು ವಶಕ್ಕೆ
ಕಲಬುರಗಿಯಲ್ಲಿ ಸಿದ್ದರಾಮಯ್ಯ ಮೂರ್ತಿ ಸ್ಥಾಪನೆ: ಪಾಲಿಕೆಯಿಂದ ತೆರವು
ಕಲಬುರಗಿಯಲ್ಲಿ ಸಿದ್ದರಾಮಯ್ಯ ಮೂರ್ತಿ ಸ್ಥಾಪನೆ: ಪಾಲಿಕೆಯಿಂದ ತೆರವು
ತಾನೇ ವಿಡಿಯೋ ಮಾಡಿಸಿ ಯೂಟ್ಯೂಬರ್ ವಿರುದ್ಧ ಕೇಸ್ ದಾಖಲಿಸಿದ ಇನ್ಸ್​ಪೆಕ್ಟರ್!
ತಾನೇ ವಿಡಿಯೋ ಮಾಡಿಸಿ ಯೂಟ್ಯೂಬರ್ ವಿರುದ್ಧ ಕೇಸ್ ದಾಖಲಿಸಿದ ಇನ್ಸ್​ಪೆಕ್ಟರ್!
ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಯ್ತು ಅವಿನಾಶ್-ಮಂಜು ಜಗಳ
ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಯ್ತು ಅವಿನಾಶ್-ಮಂಜು ಜಗಳ