ಕೆಎಸ್‌ಆರ್‌ಟಿಸಿಗೆ ರಾಷ್ಟ್ರಮಟ್ಟದ ‘ಸ್ಕಾಚ್’ ಗೌರವ: ಪಾರದರ್ಶಕ ನೇಮಕಾತಿ ಮತ್ತು ತರಬೇತಿಗೆ ಸಂದ ದೊಡ್ಡ ಜಯ!
ಕೆಎಸ್‌ಆರ್‌ಟಿಸಿ ತನ್ನ “ಪಾರದರ್ಶಕ ನೇಮಕಾತಿ ಮತ್ತು ಪರಿಣಾಮಕಾರಿ ತರಬೇತಿ ಕಾರ್ಯಕ್ರಮ”ಕ್ಕಾಗಿ ಪ್ರತಿಷ್ಠಿತ ಸ್ಕೋಚ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ. ತಂತ್ರಜ್ಞಾನ ಆಧಾರಿತ ನೇಮಕಾತಿಯ ಮೂಲಕ ಮಾನವ ಹಸ್ತಕ್ಷೇಪವಿಲ್ಲದೆ ಪಾರದರ್ಶಕತೆಯನ್ನು ಖಾತ್ರಿಪಡಿಸಲಾಗಿದೆ. 2000 ಚಾಲಕರು/ನಿರ್ವಾಹಕರು ಮತ್ತು 300 ತಾಂತ್ರಿಕ ಸಿಬ್ಬಂದಿ ನೇಮಕಗೊಂಡಿದ್ದು, 12,000ಕ್ಕೂ ಹೆಚ್ಚು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇದು ನಿಗಮದ ಪ್ರಗತಿಗೆ ಸಹಕಾರಿಯಾಗಿದೆ.
- Kannada Tech Desk
- Updated on: Mar 28, 2026
- 9:42 pm
India Vice President Election: ಭಾರತದ ಉಪರಾಷ್ಟ್ರಪತಿ ಚುನಾವಣೆ; ಮತದಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ
ಉಪರಾಷ್ಟ್ರಪತಿ ಚುನಾವಣೆ 2025: ಜಗದೀಪ್ ಧನ್ಖರ್ (Jagdeep Dhankhar) ರಾಜೀನಾಮೆ ಬಳಿಕ ತೆರವಾದ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಇಂದು ಮತದಾನ ನಡೆಯುತ್ತಿದೆ. ಭಾರತದ 17ನೇ ಉಪರಾಷ್ಟ್ರಪತಿ ಚುನಾವಣೆಗೆ ಇಂದು ಸಂಸತ್ ಭವನದಲ್ಲಿ ಮತದಾನ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಮತದಾನ ಮಾಡಿದ್ದಾರೆ.
- Kannada Tech Desk
- Updated on: Sep 9, 2025
- 11:23 am
ಚಿನ್ನ ಖರೀದಿಸಲು ಹೋಗುತ್ತಿದ್ದೀರಾ? ಅದಕ್ಕೂ ಮೊದಲು ಈ ಆ್ಯಪ್ ಇನ್ಸ್ಟಾಲ್ ಮಾಡಿಕೊಳ್ಳಿ
BIS Care App: ನೀವು ಖರೀದಿಸುವ ಚಿನ್ನ ಅಸಲಿ ಮತ್ತು ನಕಲಿ ಎಂದು ಗುರುತಿಸಲು ಸಹಾಯ ಮಾಡುವ ಅಪ್ಲಿಕೇಶನ್ ಹೆಸರು BIS ಕೇರ್ ಆ್ಯಪ್. ಹಾಲ್‌ಮಾರ್ಕ್ ಮತ್ತು ISI ಪ್ರಮಾಣೀಕೃತ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಟ್ರ್ಯಾಕ್ ಮಾಡಲು ಈ ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ.
- Kannada Tech Desk
- Updated on: Feb 28, 2025
- 2:33 pm
Guillain-Barré Syndrome: ಗುಯಿಲಿನ್ ಬಾರ್ ಸಿಂಡ್ರೋಮ್ ಎಂದರೇನು? ತಡೆಗಟ್ಟುವುದು ಹೇಗೆ ತಿಳಿದುಕೊಳ್ಳಿ
ಜಿಬಿಎಸ್(GBS) ಅಥವಾ ಗುಯಿಲಿನ್ ಬಾರ್ ಸಿಂಡ್ರೋಮ್ ಎಂಬ ಹೆಸರಿನ ರೋಗ ಭಾರಿ ಸುದ್ದಿಯಲ್ಲಿದೆ. ದೇಶಾದ್ಯಂತ ಈ ಬಗ್ಗೆ ಕಳವಳ ಹೆಚ್ಚಾಗಿದ್ದು, ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆಯೇ ಭಯ ಪಡುವಂತಾಗಿದೆ. ಆದರೆ ಈ ಸಿಂಡ್ರೋಮ್ ಹೊಸದಾಗಿ ಬಂದದ್ದಲ್ಲ. ಈ ಹಿಂದೆಯೂ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇದು ಕಾಣಿಸಿಕೊಂಡಿದ್ದು ಸೋಂಕಿನಿಂದ ಬಳಲುತ್ತಿರುವ ರೋಗಿಗಳನ್ನು ಸರಿಯಾದ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಹಾಗಾದರೆ ಏನಿದು ಜಿಬಿ ಸಿಂಡ್ರೋಮ್? ಇದರ ಗುಣಲಕ್ಷಣಗಳೇನು? ಚಿಕಿತ್ಸೆ ಹೇಗೆ ತಿಳಿದುಕೊಳ್ಳಿ.
- Kannada Tech Desk
- Updated on: Feb 1, 2025
- 6:04 pm
TV9 Festival of India: ಟಿವಿ 9 ಹಬ್ಬಕ್ಕೆ ದಿನಗಣನೆ ಶುರು, ಇದು ಭಾರತೀಯ ಶ್ರೀಮಂತ ಸಂಸ್ಕೃತಿಯ ಅನಾವರಣ
ಟಿವಿ9 ನೆಟ್‌ವರ್ಕ್ ವತಿಯಿಂದ ದೆಹಲಿಯ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ 5 ದಿನಗಳ 'ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ' ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ಈ ಉತ್ಸವವು ಅಕ್ಟೋಬರ್ 9ರಿಂದ ಪ್ರಾರಂಭವಾಗಿ ಅಕ್ಟೋಬರ್ 13 ರವರೆಗೆ ನಡೆಯಲಿದೆ. ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ’ ಭಾರತದ ಶ್ರೀಮಂತ ಸಾಂಸ್ಕೃತಿಕ ಚಟುವಟಿಕೆಗಳ ವಿಜೃಂಭಣೆಯ ಆಚರಣೆಯಲ್ಲಿ ಒಂದಾಗಿದ್ದು, ಅತ್ಯುತ್ತಮ ಕಲೆ, ಸಂಗೀತ, ಆಹಾರ ಮತ್ತು ಫ್ಯಾಷನ್ ಕಣ್ಮನ ಸೆಳೆಯಲಿದ್ದು, ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಎಲ್ಲರಿಗೂ ಉಚಿತ ಪ್ರವೇಶವಿದೆ.
- Kannada Tech Desk
- Updated on: Oct 5, 2024
- 10:48 am
ಅಶ್ಲೀಲ ವಿಡಿಯೋ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ರಾಹುಲ್ ಗಾಂಧಿ, ಪ್ರಜ್ವಲ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ
ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ರಕ್ಷಣೆ ಕೊಡಬೇಕು ಹಾಗೂ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ಹೇಳಿದ್ದಾರೆ.
- Kannada Tech Desk
- Updated on: May 4, 2024
- 12:32 pm
Bone Health: ನಿಮ್ಮ ಮೂಳೆಗಳನ್ನು ಗಟ್ಟಿಗೊಳಿಸುವ ಸರಳ ವಿಧಾನಗಳಿವು
ನಮ್ಮ ಶರೀರಕ್ಕೆ ಒಂದು ಸುಂದರ ಆಕಾರವನ್ನು ನೀಡುವಂತಹ ನಮ್ಮ ಮೂಳೆಗಳು ದೇಹಕ್ಕೆ ಚೌಕಟ್ಟಿನ ರೂಪವನ್ನು ನೀಡುವಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸಿವೆ. ಮೂಳೆಗಳು ನಮ್ಮನ್ನು ನೇರವಾಗಿ ನಿಲ್ಲುವಂತೆ ಮಾಡುತ್ತವೆ, ಚಲನೆಗೆ ಸಹಾಯ ಮಾಡುತ್ತವೆ ಮತ್ತು ನಮ್ಮ ಆಂತರಿಕ ಅಂಗಗಳನ್ನು ರಕ್ಷಿಸುತ್ತವೆ. ಈ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕೆಂಬುದರ ಮಾಹಿತಿ ಇಲ್ಲಿದೆ.
- Kannada Tech Desk
- Updated on: Apr 29, 2024
- 3:28 pm
ಕಾಂಗ್ರೆಸ್ನಲ್ಲಿ ಒಕ್ಕಲಿಗರು ಮುಖ್ಯಮಂತ್ರಿಯಾಗ್ತಾರೆ: ಹೊಸ ಬಾಂಬ್ ಸಿಡಿಸಿದ ಸಚಿವ ಕೃಷ್ಣ ಬೈರೇಗೌಡ
ಕರ್ನಾಟಕ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ನಡೆಯುತ್ತಿರುವ ಪೈಪೋಟಿ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಸಿದ್ದರಾಮಯ್ಯ ಬಳಿಕ ಡಿಕೆ ಶಿವಕುಮಾರ್ ಅವರೇ ಸಿಎಂ ಆಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರ ಮಧ್ಯೆ ಇದೀಗ ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ನಲ್ಲಿ ಒಕ್ಕಲಿಗರು ಮುಖ್ಯಮಂತ್ರಿಯಾಗುತ್ತಾರೆ ಎಂದು ಸಚಿವರೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
- Kannada Tech Desk
- Updated on: Apr 24, 2024
- 5:30 pm
ಇಂದು ಹಿಂದೂ ಧರ್ಮಕ್ಕೆ ಹೊಸ ವರ್ಷದ ಆರಂಭ, ಪ್ರಕೃತಿಯ ನೈಜತೆಗೆ ಯುಗಾದಿ ಸಾಕ್ಷಿ
ಯುಗಾದಿ ಹಬ್ಬವು ಬ್ರಹ್ಮಾಂಡವನ್ನು ಸೃಷ್ಟಿಸುವ ಭಗವಾನ್ ಬ್ರಹ್ಮನ ಶ್ರಮವನ್ನು ಸೂಚಿಸುತ್ತದೆ. ದುರ್ಗಾ ದೇವಿಯು ಒಂಬತ್ತು ರೂಪಗಳನ್ನು ಆಚರಿಸುವ ಒಂಬತ್ತು ದಿನಗಳ ಉತ್ಸವದ ಮೊದಲ ದಿನ ಚೈತ್ರ ನವರಾತ್ರಿಯ ದಿನವಂದು ಆರಂಭವಾಗುತ್ತದೆ ಎನ್ನುವ ಇತಿಹಾಸ ಇದೆ. ಹಬ್ಬವು ಚಾಳಿಗಾಲದ ನಂತರ ವಸಂತಕಾಲದ ಆರಂಭದ ಜೊತೆ ಹವಾಮಾನವನ್ನು ಸೂಚಿಸುವುದಾಗಿದೆ . ಹೊಸ ಋತುವನ್ನು ಸ್ವಾಗತಿಸಲು ಆಚರಿಸುವ ಹಬ್ಬ ಇದಾಗಿದೆ ಎಂಬ ಮಾತಿದೆ.
- Kannada Tech Desk
- Updated on: Apr 9, 2024
- 10:17 am
99% ಕ್ಯಾನ್ಸರ್ ಕೋಶಗಳ ನಾಶ, ವಿಜ್ಞಾನಿಗಳಿಂದ ಹೊಸ ವಿಧಾನ
ವಿಜ್ಞಾನಿಗಳು ಹೊಸ ಅಧ್ಯಾಯವೊಂದನ್ನು ತಿಳಿಸಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಗಳಿಗೆ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ. ವಿಜ್ಞಾನಿಗಳು ಈ ಬಯೋಮೆಕಾನಿಕಲ್ ತಂತ್ರದ ಬಗ್ಗೆ ತಿಳಿಸಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಗೆ ಈ ಹೊಸ ತಂತ್ರ ಹೇಗೆ ಪೂರಕವಾಗಿರಲಿದೆ ಎಂಬ ಬಗ್ಗೆ ಇಲ್ಲಿ ತಿಳಿಸಿದ್ದಾರೆ.
- Kannada Tech Desk
- Updated on: Mar 28, 2024
- 2:54 pm
ಇಡ್ಲಿ ಪ್ರಿಯರಿಗೆ ಶಾಕಿಂಗ್ ಸುದ್ದಿ; ಇನ್ಮುಂದೆ ಈ ತಿಂಡಿ ತಿನ್ನುವಾಗ ಯೋಚಿಸಬೇಕು!
ಇನ್ನುಮುಂದೆ ನೀವು ಇಡ್ಲಿ ತಿನ್ನಬೇಕು ಎಂದರೆ ನೀವು ಒಮ್ಮೆ ಯೋಚನೆ ಮಾಡಲೇಬೇಕು. ಇಡ್ಲಿ ಪ್ರಿಯರಿಗೆ ಶಾಕ್ ಆಗುವ ವಿಚಾರವೊಂದನ್ನು ಅಧ್ಯಯನ ಬಯಲಿಗೆಳೆದಿದೆ. ನಮ್ಮ ಜೀವ ವೈವಿಧ್ಯಕ್ಕೆ ಹಾನಿ ಉಂಟುಮಾಡುವ ಪಟ್ಟಿಯಲ್ಲಿ ಇಡ್ಲಿಯ ಹೆಸರು ಕೂಡ ಇದೆ. ಏನಿದು ಹೊಸ ಸಂಗತಿ ಅಂತೀರಾ? ಇಲ್ಲಿದೆ ಪೂರ್ತಿ ಮಾಹಿತಿ.
- Kannada Tech Desk
- Updated on: Feb 26, 2024
- 8:11 pm
ದಿಲ್ಲಿಯಿಂದ ಬೆಂಗಳೂರಿಗೆ ಕುಮಾರಸ್ವಾಮಿ ವಾಪಸ್: ಸೀಟು ಹಂಚಿಕೆ ಬಗ್ಗೆ ಹೇಳಿದ್ದಿಷ್ಟು
ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾದ್ಯಕ್ಷ ಎಚ್ಡಿ ಕುಮಾರಸ್ವಾಮಿ ಅವರು ದೆಹಲಿಯಿಂದ ವಾಪಸ್ ಬೆಂಗಳೂರಿಗೆ ಮರಳಿದ್ದಾರೆ. ದಿಢೀರ್ ಎಂದು ನಿನ್ನೆ(ಫೆಬ್ರವರಿ 21) ಕುಮಾರಸ್ವಾಮಿ ಪುತ್ರನ ಜೊತೆ ದೆಹಲಿಗೆ ತೆರಳಿ ಕೇಂದ್ರ ಅಮಿತ್ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ಮಹತ್ವದ ಚರ್ಚೆ ಮಾಡಿ ಇಂದು(ಫೆ,22) ವಾಪಸ್ ಬೆಂಗಳೂರಿಗೆ ಲ್ಯಾಂಡ್ ಆಗಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಏಕಾಏಕಿ ದೆಹಲಿಗೆ ಹೋಗಿರುವ ಕಾರಣವನ್ನು ತಿಳಿಸಿದ್ದಾರೆ.
- Kannada Tech Desk
- Updated on: Feb 22, 2024
- 8:10 pm