Guillain-Barré Syndrome: ಗುಯಿಲಿನ್‌ ಬಾರ್‌ ಸಿಂಡ್ರೋಮ್‌ ಎಂದರೇನು? ತಡೆಗಟ್ಟುವುದು ಹೇಗೆ ತಿಳಿದುಕೊಳ್ಳಿ

ಜಿಬಿಎಸ್‌(GBS) ಅಥವಾ ಗುಯಿಲಿನ್‌ ಬಾರ್‌ ಸಿಂಡ್ರೋಮ್‌ ಎಂಬ ಹೆಸರಿನ ರೋಗ ಭಾರಿ ಸುದ್ದಿಯಲ್ಲಿದೆ. ದೇಶಾದ್ಯಂತ ಈ ಬಗ್ಗೆ ಕಳವಳ ಹೆಚ್ಚಾಗಿದ್ದು, ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆಯೇ ಭಯ ಪಡುವಂತಾಗಿದೆ. ಆದರೆ ಈ ಸಿಂಡ್ರೋಮ್‌ ಹೊಸದಾಗಿ ಬಂದದ್ದಲ್ಲ. ಈ ಹಿಂದೆಯೂ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇದು ಕಾಣಿಸಿಕೊಂಡಿದ್ದು ಸೋಂಕಿನಿಂದ ಬಳಲುತ್ತಿರುವ ರೋಗಿಗಳನ್ನು ಸರಿಯಾದ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಹಾಗಾದರೆ ಏನಿದು ಜಿಬಿ ಸಿಂಡ್ರೋಮ್‌? ಇದರ ಗುಣಲಕ್ಷಣಗಳೇನು? ಚಿಕಿತ್ಸೆ ಹೇಗೆ ತಿಳಿದುಕೊಳ್ಳಿ.

Guillain-Barré Syndrome: ಗುಯಿಲಿನ್‌ ಬಾರ್‌ ಸಿಂಡ್ರೋಮ್‌ ಎಂದರೇನು? ತಡೆಗಟ್ಟುವುದು ಹೇಗೆ ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
Follow us
Digi Tech Desk
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 01, 2025 | 6:04 PM

ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ರೋಗಗಳು ಕಂಡು ಬರುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಅದೇ ರೀತಿ ಪುಣೆಯಲ್ಲಿ ಜಿಬಿಎಸ್‌(GBS) ಅಥವಾ ಗುಯಿಲಿನ್‌ ಬಾರ್‌ ಸಿಂಡ್ರೋಮ್‌ ಎಂಬ ಹೆಸರಿನ ರೋಗ ಭಾರಿ ಸುದ್ದಿಯಲ್ಲಿದೆ. ದೇಶಾದ್ಯಂತ ಈ ಬಗ್ಗೆ ಕಳವಳ ಹೆಚ್ಚಾಗಿದ್ದು, ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆಯೇ ಭಯ ಪಡುವಂತಾಗಿದೆ. ಆದರೆ ಈ ಸಿಂಡ್ರೋಮ್‌ ಹೊಸದಾಗಿ ಬಂದದ್ದಲ್ಲ. ಈ ಹಿಂದೆಯೂ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇದು ಕಾಣಿಸಿಕೊಂಡಿದ್ದು ಸೋಂಕಿನಿಂದ ಬಳಲುತ್ತಿರುವ ರೋಗಿಗಳನ್ನು ಸರಿಯಾದ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಹೀಗಾಗಿ ಈ ರೋಗದ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೆ ಈ ಸಿಂಡ್ರೋಮ್‌ ಬಗ್ಗೆ ಸರಿಯಾಗಿ ತಿಳಿದುಕೊಂಡು ಸರಿಯಾದ ರೀತಿಯಲ್ಲಿ ಅರಿವು ಮೂಡಿಸಬೇಕಾಗಿದೆ. ಹಾಗಾದರೆ ಏನಿದು ಜಿಬಿ ಸಿಂಡ್ರೋಮ್‌? ಇದರ ಗುಣಲಕ್ಷಣಗಳೇನು? ಚಿಕಿತ್ಸೆ ಹೇಗೆ ತಿಳಿದುಕೊಳ್ಳಿ.

ಈ ಸಿಂಡ್ರೋಮ್‌ ಬಗ್ಗೆ ಕೆಎಂಸಿ ಆಸ್ಪತ್ರೆಯ ನರರೋಗ ತಜ್ಞ ಶಿವಾನಂದ ಪೈ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, “ಗುಯಿಲಿನ್‌ ಬಾರ್‌ ಸಿಂಡ್ರೋಮ್‌ ಅಪರೂಪವಾಗಿದ್ದು ಅದೇ ರೀತಿ ಗಂಭೀರವಾದ ನರಮಂಡಲದ ಸಮಸ್ಯೆಯಾಗಿದೆ. ದೇಹದಲ್ಲಿ ಪ್ರತಿರೋಧಕ ವ್ಯವಸ್ಥೆ (ರೋಗ ನಿರೋಧಕ) ನರಮಂಡಲದ ಮೇಲೆ ದಾಳಿ ಮಾಡುತ್ತವೆ ಇದರಿಂದ ಜಿಬಿಎಸ್‌ ಸಿಂಡ್ರೋಮ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣವಾಗುವ ‘ಕ್ಯಾಂಪೈಲೋಬ್ಯಾಕ್ಟರ್‌ ಜೆಜುನಿ ‘(Campylobacter jejuni) ಸೋಂಕು, ಅಶುದ್ಧ ಆಹಾರ, ನೀರು ಸೇವನೆಯಿಂದ ದೇಹವನ್ನು ಸೇರುತ್ತವೆ. ಈ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಸಂದರ್ಭದಲ್ಲಿ ದೇಹದ ಪ್ರತಿರೋಧಕ ವ್ಯವಸ್ಥೆ ನರಗಳ ಮೇಲೆ ದಾಳಿ ನಡೆಸುತ್ತದೆ. ಈ ಮೂಲಕ 1- 3 ವಾರದಲ್ಲಿ ರೋಗ ಕಾಣಿಸಿಕೊಳ್ಳುತ್ತದೆ” ಎಂದು ಅವರು ಹೇಳಿದ್ದಾರೆ.

ಲಕ್ಷಣಗಳೇನು?

ಸ್ನಾಯು ದೌರ್ಬಲ್ಯದಿಂದ ಆರಂಭವಾಗಿ, ಕೈ ಕಾಲುಗಳಲ್ಲಿ ಜುಮ್‌ ಎನಿಸುವ ಅನುಭವ ಕಾಡುತ್ತದೆ. ಸಮಸ್ಯೆ ತೀವ್ರವಾದಂತೆ ಪಾರ್ಶ್ವವಾಯು, ಉಸಿರಾಟದ ಸಮಸ್ಯೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಚಿಕುನ್‌ಗುನ್ಯ, ಡೆಂಗ್ಯೂ ನಂತಹ ಸೋಂಕು ದೇಹದಲ್ಲಿದ್ದಾಗಲೂ ಕೂಡ ಈ ಗುಯಿಲಿನ್‌ ಸಿಂಡ್ರೋಮ್‌ ಉಂಟಾಗಬಹುದು. ಇದರ ಜೊತೆಗೆ ಅತಿಸಾರ, ಹೊಟ್ಟೆ ನೋವು, ಜ್ವರ, ವಾಂತಿ ಕೂಡ ರೋಗದ ಲಕ್ಷಣಗಳಾಗಿವೆ.

ಯಾವ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ?

ಯಾವ ಕಾರಣಕ್ಕೆ ಈ ರೋಗ ಕಾಣಿಸಿಕೊಳ್ಳಬಹುದು ಎಂಬುದಕ್ಕೆ ನಿಖರ ಉತ್ತರವಿಲ್ಲ. ಆದರೆ ಇದನ್ನು ಶೀಘ್ರ ಗುರುತಿಸಿದಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಸೂಕ್ತವಾದ ಚಿಕಿತ್ಸೆ ಸಿಗದಿದ್ದಲ್ಲಿ ಇದು ಗಂಭೀರ ಸ್ವರೂಪಕ್ಕೆ ಹೋಗಬಹುದು. ಕೆಎಂಸಿ ಮಂಗಳೂರು ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಈ ಸಮಸ್ಯೆಯಿಂದ ಬಳಲುತ್ತಿರುವ 5-10 ಪ್ರಕರಣ ಪ್ರತಿ ತಿಂಗಳು ವರದಿಯಾಗುತ್ತದೆ. ಆದರೆ ಸೂಕ್ತ ಚಿಕಿತ್ಸೆ ಮೂಲಕ ರೋಗವನ್ನು ಆರಂಭಿಕ ಹಂತದಲ್ಲೇ ಗುಣಪಡಿಸಲಾಗುತ್ತದೆ. ಕೆಲವು ಸಮಯದಲ್ಲಿ ಈ ರೋಗದ ಪ್ರಕರಣಗಳಲ್ಲಿ ಏರಿಕೆಯಾಗುವುದೂ ಇದೆ. ಡಿಸೆಂಬರ್‌ನಿಂದ ಮಾರ್ಚ್ ಹಾಗೂ ಜುಲೈನಿಂದ ಸೆಪ್ಟೆಂಬರ್‌ ಸಮಯದಲ್ಲಿ ಜಿ ಬಿ ಸಿಂಡ್ರೋಮ್‌ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತವೆ.

ಯಾವ ರೀತಿಯ ಚಿಕಿತ್ಸೆ ನೀಡಬೇಕು?

ರೋಗ ಲಕ್ಷಣ ಕಾಣಿಸಿಕೊಂಡ ಬಳಿಕ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ. ಕಾಲುಗಳಲ್ಲಿ ಜುಮ್‌ ಎನಿಸುವ ಅನುಭವ, ನಿಶ್ಶಕ್ತಿ ಇವೆಲ್ಲವೂ ಇದರ ಆರಂಭಿಕ ಲಕ್ಷಣಗಳಾಗಿದ್ದು ಇದು ತೋಳುಗಲ್ಲಿ ಕಾಣಿಸಿಕೊಂಡು ದೇಹದ ವಿವಿಧ ಭಾಗಗಳಿಗೂ ಹರಡಬಹುದು. ಇದನ್ನು ಕಡೆಗಣಿಸಿದಲ್ಲಿ ರೋಗಿಯು ಉಸಿರಾಟದ ಸಮಸ್ಯೆಗೆ ಗುರಿಯಾಗಬಹುದು ಹಾಗಾಗಿ ಈ ಸಮಯದಲ್ಲಿ ತುರ್ತು ವೈದ್ಯಕೀಯ ನೆರವು ಅತ್ಯಗತ್ಯವಾಗಿರುತ್ತದೆ. ಈ ಹಂತದಲ್ಲಿ ನರರೋಗ ತಜ್ಞರಿಂದ ಚಿಕಿತ್ಸೆ ಪಡೆಯಬೇಕಾಗುತ್ತದೆ. ಜಿಬಿ ಸಿಂಡ್ರೋಮ್‌ನ್ನು ಪತ್ತೆಹಚ್ಚಲು ರೋಗಿಯ ನರ ಮಂಡಲ ಪರೀಕ್ಷೆ, ಸೆರೆಬ್ರೋ ಸ್ಪೈನಲ್‌ ದ್ರವ ಪರೀಕ್ಷೆ ಸೇರಿ ರೋಗಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈದ್ಯರು ಚಿಕಿತ್ಸೆ ವಿಧಾನವನ್ನು ಅನುಸರಿಸುತ್ತಾರೆ. 99% ಪ್ರಕರಣಗಳಲ್ಲಿ ಈ ರೋಗವನ್ನು ಗುಣಪಡಿಸಬಹುದು ಆದರೆ ರೋಗಿಯು ಗುಣಮುಖವಾಗುವ ಸಮಯ ರೋಗಿಯಿಂದ ರೋಗಿಗೆ ಬೇರೆ ಬೇರೆಯಾಗಿರುತ್ತದೆ. ರೋಗ ಕಾಣಿಸಿಕೊಂಡರೂ ಚಿಕಿತ್ಸೆಗೆ ತಡಮಾಡಿದರೆ ಈ ಸಾಧ್ಯತೆ ಬಹಳ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಈ ಬೀಜಗಳನ್ನು ಸೇವನೆ ಮಾಡಿ

ರೋಗ ಬರದಂತೆ ತಡೆಯಬಹುದೇ?

ನಿಖರವಾಗಿ ಯಾವ ಕಾರಣಕ್ಕೆ ಜಿಬಿ ಸಿಂಡ್ರೋಮ್‌ ಕಾಣಿಸಿಕೊಳ್ಳಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದು ಸಾಂಕ್ರಾಮಿಕವಲ್ಲದ ಆದರೆ ದೇಹದೊಳಗೆ ಹೊಕ್ಕಿದ ಬ್ಯಾಕ್ಟೀರಿಯಾದಿಂದಲೇ ಜಿ ಬಿ ಸಿಂಡ್ರೋಮ್‌ ಸಮಸ್ಯೆ ಆರಂಭವಾಗುತ್ತದೆ.

ಹೀಗಾಗಿ ಆಹಾರದಲ್ಲಿ ಸ್ವಚ್ಛತೆ ಬಹಳ ಮುಖ್ಯ.

ಹಣ್ಣು, ತರಕಾರಿಗಳನ್ನು ಶುಚಿಗೊಳಿಸಿ ಸೇವಿಸಿ.

ಮಾಂಸಾಹಾರವನ್ನು ಸರಿಯಾದ ಪ್ರಮಾಣದಲ್ಲಿ ಬೇಯಿಸಿ ಸೇವಿಸಿ.

ಅಡಿಗೆ ತಯಾರಿಸುವ ಪ್ರದೇಶ ಶುಚಿಯಾಗಿರುವಂತೆ ನೋಡಿಕೊಳ್ಳಿ.

ನೀರು ಕುದಿಸಿ ಕುಡಿಯುವ ಅಭ್ಯಾಸವಿರಲಿ.

ರೋಗದ ಬಗ್ಗೆ ತಪ್ಪು ಸುದ್ದಿ ಹರಡದೇ ಶೀಘ್ರ ಚಿಕಿತ್ಸೆಗೆ ಪ್ರೋತ್ಸಾಹಿಸಿ. ರೋಗಿಗೆ ಮಾನಸಿಕ ಬೆಂಬಲ, ಶಕ್ತಿ ನೀಡಿ. ಆರೋಗ್ಯ ಪೂರ್ಣ ಆಹಾರ ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ.

ಕೆಎಂಸಿ ಆಸ್ಪತ್ರೆಯ ನರರೋಗ ತಜ್ಞ ಶಿವಾನಂದ ಪೈ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:54 pm, Sat, 1 February 25

ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್:ಮೈಲಾರಲಿಂಗೇಶ್ವರ ಕಾರ್ಣಿಕ
ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್:ಮೈಲಾರಲಿಂಗೇಶ್ವರ ಕಾರ್ಣಿಕ
ಗುಂಡಿನ ದಾಳಿ ನಡೆದಾಗ ಚಿಕಿತ್ಸೆಗೆ ಬಾಗಪ್ಪ ₹ 1 ಕೋಟಿ ಖರ್ಚು ಮಾಡಿದ್ದನಂತೆ
ಗುಂಡಿನ ದಾಳಿ ನಡೆದಾಗ ಚಿಕಿತ್ಸೆಗೆ ಬಾಗಪ್ಪ ₹ 1 ಕೋಟಿ ಖರ್ಚು ಮಾಡಿದ್ದನಂತೆ
ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್​ ಅಧ್ಯಕ್ಷ
ವಿಮಾನ ನಿಲ್ದಾಣದಲ್ಲಿ ಮೋದಿಯನ್ನು ತಬ್ಬಿ ಬೀಳ್ಕೊಟ್ಟ ಫ್ರಾನ್ಸ್​ ಅಧ್ಯಕ್ಷ
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪ ಹರಿಜನ್ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗಿ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಬಾಗಪ್ಪನನ್ನು ಪ್ರೀತಿಸಿ ವರಿಸಿದ ಮಹಿಳೆ ಸರ್ಕಾರೀ ವಕೀಲೆಯಾಗಿದ್ದರು: ಮಹಾಂತೇಶ
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ಪದದ ವ್ಯಾಖ್ಯಾನ ಬದಲಾದಂತಿದೆ!
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಉಡುಪಿಗೆ ಬಂದು ದೈವಕ್ಕೆ ಕೈ ಮುಗಿದ ತಮಿಳು ನಟ ವಿಶಾಲ್
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಮಾರ್ಸಿಲ್ಲೆಯಲ್ಲಿ ಭಾರತೀಯ ಕಾನ್ಸುಲೇಟ್ ಉದ್ಘಾಟನೆ; ಮೋದಿ, ಮೋದಿ ಘೋಷಣೆ
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಜನರಿಂದ ಬಡ್ಡಿ ಪೀಕಿ ಪೀಕಿಯೇ ಯಲ್ಲಪ್ಪ ಮಿಸ್ಕಿನ್,  ಬಡ್ಡಿ ಯಲ್ಲಪ್ಪನಾದ!
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?
ಪತ್ನಿಗೆ ಸಿಲ್ಕ್​ ಸೀರೆ ಖರೀದಿಸಿದ ಡಿಕೆ ಶಿವಕುಮಾರ್: ಬೆಲೆ ಎಷ್ಟು ಗೊತ್ತಾ?