TV9 Festival of India: ಟಿವಿ 9 ಹಬ್ಬಕ್ಕೆ ದಿನಗಣನೆ ಶುರು, ಇದು ಭಾರತೀಯ ಶ್ರೀಮಂತ ಸಂಸ್ಕೃತಿಯ ಅನಾವರಣ

ಟಿವಿ9 ನೆಟ್‌ವರ್ಕ್ ವತಿಯಿಂದ ದೆಹಲಿಯ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ 5 ದಿನಗಳ 'ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ' ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ಈ ಉತ್ಸವವು ಅಕ್ಟೋಬರ್ 9ರಿಂದ ಪ್ರಾರಂಭವಾಗಿ ಅಕ್ಟೋಬರ್ 13 ರವರೆಗೆ ನಡೆಯಲಿದೆ. ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ’ ಭಾರತದ ಶ್ರೀಮಂತ ಸಾಂಸ್ಕೃತಿಕ ಚಟುವಟಿಕೆಗಳ ವಿಜೃಂಭಣೆಯ ಆಚರಣೆಯಲ್ಲಿ ಒಂದಾಗಿದ್ದು, ಅತ್ಯುತ್ತಮ ಕಲೆ, ಸಂಗೀತ, ಆಹಾರ ಮತ್ತು ಫ್ಯಾಷನ್ ಕಣ್ಮನ ಸೆಳೆಯಲಿದ್ದು, ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಎಲ್ಲರಿಗೂ ಉಚಿತ ಪ್ರವೇಶವಿದೆ.

TV9 Festival of India: ಟಿವಿ 9 ಹಬ್ಬಕ್ಕೆ ದಿನಗಣನೆ ಶುರು, ಇದು ಭಾರತೀಯ ಶ್ರೀಮಂತ ಸಂಸ್ಕೃತಿಯ ಅನಾವರಣ
ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ
Follow us
Digi Tech Desk
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 05, 2024 | 10:48 AM

ನವರಾತ್ರಿ ಹಬ್ಬದ ಸಂಭ್ರಮವು ಆರಂಭವಾಗಿದ್ದು, ಈ ವಿಶೇಷವಾದ ಹಬ್ಬದ ದಿನವನ್ನು ಮತ್ತಷ್ಟು ರಂಗೇರಿಸಲು ಟಿವಿ9 ನೆಟ್‌ವರ್ಕ್ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಕ್ಟೋಬರ್ 9 ರಿಂದ 13 ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಪ್ರಸ್ತುತ ಪಡಿಸಲಾಗುತ್ತಿದೆ. ದೆಹಲಿಯ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ಐದು ದಿನಗಳ ಕಾಲ ನಡೆಯುವ ಈ ಹಬ್ಬವು ಹೊಸ ಲೋಕಕ್ಕೆ ಕರೆದುಕೊಂಡು ಹೋಗಲಿದೆ.

ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಉತ್ಸಾಹಭರಿತ ಆಚರಣೆಯಾಗಿದ್ದು, ಅತ್ಯುತ್ತಮವಾದ ಸಂಪ್ರದಾಯ ಮತ್ತು ಆಧುನಿಕತೆಯನ್ನು ಒಟ್ಟುಗೂಡಿಸುವ ಪ್ರಯತ್ನ ಇದಾಗಿದೆ. ಈ ಕಾರ್ಯಕ್ರಮವು ಶಾಪಿಂಗ್ ಪ್ರಿಯರಿಗೆ , ಆಹಾರ ಪ್ರಿಯರಿಗೆ ಹಾಗೂ ಸಂಗೀತ ಪ್ರಿಯರಿಗೆ ಹೇಳಿ ಮಾಡಿಸಿದ್ದಾಗಿದ್ದು, ಇಲ್ಲಿಗೆ ಭೇಟಿ ನೀಡಿದರೆ ವಿಶೇಷ ಅನುಭವವೊಂದು ಆಗುವುದಂತೂ ಖಂಡಿತ.

ಹಬ್ಬದ ವಾತಾವರಣವನ್ನು ಆನಂದಿಸುವುದರೊಂದಿಗೆ ಈ ಉತ್ಸವದಲ್ಲಿ 250 ಕ್ಕೂ ಹೆಚ್ಚು ಶಾಪಿಂಗ್ ಮಳಿಗೆಗಳನ್ನು ಗ್ರಾಹಕರ ಗಮನ ಸೆಳೆಯಲಿದೆ. ಈ ಮಳಿಗೆಗಳಲ್ಲಿ ಅತ್ಯಾಧುನಿಕ ಗೃಹೋಪಯೋಗಿ ಉಪಕರಣಗಳು, ಗ್ಯಾಜೆಟ್‌ಗಳು, ಫ್ಯಾಷನ್-ಫಾರ್ವರ್ಡ್ ಉಡುಪುಗಳು, ಪೀಠೋಪಕರಣಗಳು ಸೇರಿದಂತೆ ವಿವಿಧ ಆಕರ್ಷಕವಾದ ವಸ್ತುಗಳನ್ನು ಕಾಣಬಹುದು. ದೇಶದ ಮೂಲೆ ಮೂಲೆಯ ಕುಶಲಕರ್ಮಿಗಳು ತಯಾರಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನವು ಇರಲಿದೆ. ಅದಲ್ಲದೇ, ಅತಿ ಎತ್ತರದ ವಿಗ್ರಹದೊಂದಿಗೆ ದುರ್ಗಾ ಪೂಜೆಯ ನೇರ ದರ್ಶನವನ್ನು ಪಡೆಯಬಹುದು.

ಕಾರ್ಯಕ್ರಮದ ವಿವರಗಳು

ಕಾರ್ಯಕ್ರಮ : TV9 ಫೆಸ್ಟಿವಲ್ ಆಫ್ ಇಂಡಿಯಾ

ದಿನಾಂಕ: ಅಕ್ಟೋಬರ್ 9 ರಿಂದ 13, 2024

ಸ್ಥಳ: ಮೇಜರ್ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂ, ಇಂಡಿಯಾ ಗೇಟ್ ಹತ್ತಿರ, ನವದೆಹಲಿ

ಸಮಯ : ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆ

ಆಹಾರ ಪ್ರಿಯರಾಗಿದ್ದರೇ ವಿವಿಧ ರುಚಿಕರವಾದ ಖಾದ್ಯಗಳನ್ನು ಸವಿಯಬಹುದು. ದೆಹಲಿಯ ಮಸಾಲೆಯುಕ್ತ ಬೀದಿ ಆಹಾರದಿಂದ ಹಿಡಿದು, ಲಕ್ನೋದ ಬೆಣ್ಣೆ ಕಬಾಬ್‌ಗಳು ಮತ್ತು ಬಂಗಾಳಿ ಸಿಹಿತಿಂಡಿಗಳಿಂದ ಹೈದರಾಬಾದ್ ಬಿರಿಯಾನಿಗಳವರೆಗೆ ಭಾರತದ ಮೂಲೆ ಮೂಲೆಯ ಆಹಾರಗಳು ಇಲ್ಲಿ ಸಿಗುತ್ತದೆ. ಹೀಗಾಗಿ ಈ ಹಬ್ಬ ಹರಿದಿನಗಳಲ್ಲಿ ವಿವಿಧ ಬಗೆಯ ತಿನಿಸುಗಳನ್ನು ಸವಿಯುವುದರೊಂದಿಗೆ ವಿವಿಧ ಬಗೆಯ ಸಾಮಾನುಗಳನ್ನು ಖರೀದಿಸಬಹುದು.

ಈ ಉತ್ಸವದಲ್ಲಿ ಶಾಪಿಂಗ್ ಜೊತೆಗೆ ಲೈವ್ ಸಂಗೀತವನ್ನು ಆನಂದಿಸಲು ಬಹುದು. ಬಾಲಿವುಡ್ ಹಿಟ್ ಗೀತೆಗಳು ಹಾಗೂ ಜನಪದ ಹಾಡುಗಳನ್ನು ಕಿವಿಯನ್ನು ಇಂಪಾಗಿಸುತ್ತದೆ. ಐದು ದಿನಗಳ ಕಾರ್ಯಕ್ರಮದಲ್ಲಿ 20 ಕ್ಕೂ ಹೆಚ್ಚು ಲೈವ್ ಪ್ರದರ್ಶನಗಳನ್ನು ನೀವು ವೀಕ್ಷಿಸಬಹುದು. ಈ ಕಾರ್ಯಕ್ರಮದಲ್ಲಿ ಭಾರತದ ವಿವಿಧ ಭಾಗಗಳ ಕಲಾವಿದರು ಪಾಲ್ಗೊಳ್ಳಲಿದ್ದು ಮನೋರಂಜನೆಯ ರಸದೌತಣವನ್ನು ನೀಡಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ