Chanakya Niti: ಜೀವನದಲ್ಲಿ ಸಂತೋಷವಾಗಿರಬೇಕೆಂದರೆ ಚಾಣಕ್ಯರ ಈ ತತ್ವಗಳನ್ನು ಅನುಸರಿಸಿ
ಜೀವನದಲ್ಲಿ ಸಂತೋಷವಾಗಿರಬೇಕು, ನೆಮ್ಮದಿಯಿಂದ ಜೀವನ ನಡೆಸಬೇಕು ಎಂಬ ಬಯಕೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದ್ರೆ ಹೆಚ್ಚಿನವರು ಇಂದು ತಮ್ಮ ಜೀವನದಲ್ಲಿ ಸಂತೋಷವಾಗಿಲ್ಲ, ಯಾವಾಗಲೂ ಒಂದಲ್ಲಾ ಒಂದು ಚಿಂತೆಯಲ್ಲೇ ಮುಳುಗಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಂತೋಷವನ್ನು ಬಯಸಿದರೆ ಚಾಣಕ್ಯರು ಹೇಳಿಕೊಟ್ಟಿರುವ ಈ ಮಾರ್ಗಗಳನ್ನು ಅನುಸರಿಸಿ.

ಜೀವನದಲ್ಲಿ (life) ಹ್ಯಾಪಿ ಆಗಿರ್ಬೇಕು ಅನ್ನೋದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಆದರೆ ಇಂದಿನ ಈ ಬ್ಯುಸಿ ಜೀವನಶೈಲಿಯ ಕಾರಣ ಹೆಚ್ಚಿನವರು ಒತ್ತಡದಲ್ಲಿಯೇ ಜೀವನವನ್ನು ನಡೆಸುತ್ತಿದ್ದಾರೆ. ಹೌದು ಹೆಚ್ಚಿನವರಿಗೆ ಇಂದು ಸಂತೋಷವನ್ನು ಕಂಡುಕೊಳ್ಳುವುದೇ ಬಹುದೊಡ್ಡ ಸವಾಲಾಗಿದೆ. ನೀವು ಕೂಡ ಇದೇ ರೀತಿ ಜೀವನದಲ್ಲಿ ಶಾಂತಿ ಮತ್ತು ಸಂತೋಷವನ್ನು ಬಯಸುತ್ತಿದ್ದೀರಾ? ಹಾಗಿದ್ರೆ ಚಾಣಕ್ಯರು ಹೇಳಿರುವ ಈ ಮಾತುಗಳನ್ನು ತಪ್ಪದೆ ಪಾಲಿಸಿ. ಇದರಿಂದ ನೀವು ಖಂಡಿತವಾಗಿ ಜೀವನದಲ್ಲಿ ಖುಷಿ ಖುಷಿಯಾಗಿರಬಹುದು.
ಜೀವನದಲ್ಲಿ ಸಂತೋಷವಾಗಿರಲು ಏನು ಮಾಡಬೇಕು ಗೊತ್ತಾ?
ಹಿಂದಿನ ಘಟನೆಗಳ ಬಗ್ಗೆ ವಿಷಾದಿಸಬೇಡಿ: ಭೂತಕಾಲವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಅನೇಕ ಜನರು ತಮ್ಮ ಹಿಂದಿನ ತಪ್ಪುಗಳು ಅಥವಾ ಕೆಟ್ಟ ಸಮಯಗಳ ಬಗ್ಗೆ ಯೋಚಿಸಿ, ತಮ್ಮ ವರ್ತಮಾನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಅಭ್ಯಾಸವನ್ನು ತ್ಯಜಿಸಬೇಕು. ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಲು ಆಗಿ ಹೋದಂತಹ ಘಟನೆಗಳನ್ನು ಮರೆತು ವರ್ತಮಾನದಲ್ಲಿ ಬದುಕಲು ಕಲಿಯುವುದು ತುಂಬಾ ಮುಖ್ಯ ಎಂದಿದ್ದಾರೆ ಚಾಣಕ್ಯ.
ನಿಮ್ಮ ದೌರ್ಬಲ್ಯವನ್ನು ಯಾರಿಗೂ ಹೇಳಬೇಡಿ: ಜೀವನದಲ್ಲಿನ ನೆಮ್ಮದದಿ ಹಾಳಾಗಲು ಪ್ರಮುಖ ಕಾರಣವೆಂದರೆ ನಮ್ಮ ವೈಯಕ್ತಿಕ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು. ಚಾಣಕ್ಯರ ಪ್ರಕಾರ, ನಮ್ಮ ದೌರ್ಬಲ್ಯಗಳನ್ನು ಯಾರಿಗೂ ಬಹಿರಂಗಪಡಿಸಬಾರದು ಏಕೆಂದರೆ ಜನರು ಅವುಗಳನ್ನು ಅಪಹಾಸ್ಯ ಮಾಡಬಹುದು ಅಥವಾ ಅವುಗಳ ಲಾಭ ಪಡೆಯಬಹುದು. ನಿಮ್ಮ ರಹಸ್ಯಗಳನ್ನು ಯಾರಿಗೂ ಹೇಳದೆ ನಿಮ್ಮಲ್ಲಿಯೇ ಇಟ್ಟುಕೊಳ್ಳುವುದರಿಂದ ಅನಗತ್ಯ ಮಾನಸಿಕ ಒತ್ತಡವನ್ನು ತಪ್ಪಿಸಬಹುದು.
ಇದನ್ನೂ ಓದಿ: ಜೀವನದಲ್ಲಿ ಹಣ, ಶ್ರೀಮಂತಿಕೆ ಗಳಿಸಲು ಚಾಣಕ್ಯರ ಈ ಮಾತುಗಳನ್ನು ಪಾಲಿಸಿ
ಫಲಿತಾಂಶಗಳ ಬಗ್ಗೆ ಚಿಂತಿಸದೆ ಕೆಲಸ ಮಾಡಿ: ನಾವು ಕೆಲಸದ ಬಗ್ಗೆ ಯೋಚಿಸುವುದಕ್ಕಿಂತ ಫಲಿತಾಂಶಗಳ ಬಗ್ಗೆ ಹೆಚ್ಚು ಯೋಚಿಸಿದಾಗ ಒತ್ತಡ ಉಂಟಾಗುತ್ತದೆ. ಇದರಿಂದ ಮನಸ್ಸಿನ ನೆಮ್ಮದಿಯೇ ಹಾಳಾಗುತ್ತದೆ. ಹಾಗಾಗಿ ಕಠಿಣ ಪರಿಶ್ರಮದ ಮೇಲೆ ಮಾತ್ರ ಗಮನಹರಿಸಿ. ಫಲಿತಾಂಶದ ಬಗ್ಗೆ ಚಿಂತಿಸುವುದನ್ನು ಬಿಟ್ಟಾಗ, ನಿಮ್ಮ ಮನಸ್ಸು ಸ್ವಯಂಚಾಲಿತವಾಗಿ ಶಾಂತವಾಗುತ್ತದೆ ಮತ್ತು ನೀವು ಕೆಲಸ ಮಾಡಲು ಹೆಚ್ಚು ಒಲವು ತೋರುತ್ತೀರಿ, ಸಂತೋಷವಾಗಿಯೂ ಇರುತ್ತೀರಿ.
ದುರಾಸೆ ಮತ್ತು ನಿರೀಕ್ಷೆಗಳಿಂದ ದೂರವಿರಿ: ನಿರೀಕ್ಷೆಯೇ ಮಾನವನ ಅತೃಪ್ತಿ ಮತ್ತು ನೋವಿಗೆ ದೊಡ್ಡ ಕಾರಣ ಎನ್ನುತ್ತಾರೆ ಚಾಣಕ್ಯ. ನಾವು ಇತರರಿಂದ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಾಗ ಮತ್ತು ಅವುಗಳನ್ನು ಅವರು ಪೂರೈಸದಿದ್ದಾಗ, ನಮ್ಮ ಮನಸ್ಸಿಗೆ ತುಂಬಾನೇ ನೋವಾಗುತ್ತದೆ. ಇದರೊಂದಿಗೆ ದುರಾಸೆಯೂ ಸಹ ನಮ್ಮ ಸಂತೋಷವನ್ನು ಕಿತ್ತುಕೊಳ್ಳುತ್ತದೆ. ಹಾಗಾಗಿ ನಿಮ್ಮಲ್ಲಿರುವದರಲ್ಲಿ ಸಂತೋಷವಾಗಿರಲು ಕಲಿಯಿರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
