Chanakya Niti

Chanakya Niti

ಚಾಣಕ್ಯ ನೀತಿ, ಪ್ರಾಚೀನ ಭಾರತೀಯ ವಿದ್ವಾಂಸ ಚಾಣಕ್ಯರಿಂದ ಕ್ರಿ.ಪೂ. 300 ರ ಸುಮಾರಿಗೆ ಸಂಯೋಜಿಸಲ್ಪಟ್ಟಿದೆ, ಇದು ಪೂರ್ಣವಾದ ಜೀವನಕ್ಕಾಗಿ ಪ್ರಾಯೋಗಿಕ ಮಾರ್ಗದರ್ಶನವನ್ನು ನೀಡುವ ಸಲಹೆಗಳ ಸಂಗ್ರಹವಾಗಿದೆ. ರಾಜ ಚಂದ್ರಗುಪ್ತ ಮೌರ್ಯನಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಚಾಣಕ್ಯನ ಬೋಧನೆಗಳು ಜೀವನ, ಆಡಳಿತ ಮತ್ತು ತಂತ್ರದ ವಿವಿಧ ಅಂಶಗಳನ್ನು ಒಳಗೊಂಡಿದೆ. ಮಾನವ ಸ್ವಭಾವ, ರಾಜಕೀಯ ಮತ್ತು ಅರ್ಥಶಾಸ್ತ್ರದ ಬಗ್ಗೆ ಅವರ ಒಳನೋಟಗಳು ಈ ಪಠ್ಯದಲ್ಲಿ ಅಡಕವಾಗಿವೆ. ಸಾಮಾನ್ಯವಾಗಿ ಚಾಣಕ್ಯರನ್ನು ಮ್ಯಾಕಿಯಾವೆಲ್ಲಿ, ಅರಿಸ್ಟಾಟಲ್ ಮತ್ತು ಪ್ಲೇಟೋನಂತಹ ಚಿಂತಕರಿಗೆ ಹೋಲಿಸಲಾಗುತ್ತದೆ. ಚಾಣಕ್ಯನ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ, ಆಧುನಿಕ ಜಗತ್ತಿನಲ್ಲಿ ಯಶಸ್ಸು, ನಾಯಕತ್ವ ಮತ್ತು ನೈತಿಕ ಜೀವನವನ್ನು ಬಯಸುವವರಿಗೆ ಸ್ಫೂರ್ತಿ ಮತ್ತು ಪ್ರಾಯೋಗಿಕ ಸಲಹೆಯ ಮೂಲವಾಗಿ ಕಾರ್ಯನಿರ್ವಹಿಸುತ್ತದೆ.

ಇನ್ನೂ ಹೆಚ್ಚು ಓದಿ

Chanakya Niti: ನಿಮ್ಮ ಆತ್ಮೀಯರೇ ದ್ರೋಹ ಬಗೆದಾಗ ಈ ವಿಷಯ ನೆನಪಿನಲ್ಲಿಡಿ ಎನ್ನುತ್ತಾನೆ ಚಾಣಕ್ಯ

ಈ ಕಾಲದಲ್ಲಿ ಯಾರನ್ನು ನಂಬುವುದು, ಯಾರನ್ನು ಬಿಡುವುದು ತಿಳಿಯುವುದಿಲ್ಲ. ನಾವು ಅತಿಯಾಗಿ ನಂಬಿದ ವ್ಯಕ್ತಿಗಳೇ ನಮಗೆ ಮೋಸ ಮಾಡುತ್ತಾರೆ. ಆದರೆ ಎಷ್ಟೋ ಸಲ ಆ ಕಹಿ ನೆನಪಿನಲ್ಲಿ ಕೊರಗುತ್ತೇವೆ. ಹೀಗಾಗಿ ಆಚಾರ್ಯ ಚಾಣಕ್ಯನು ತನ್ನ ನೀತಿಯಲ್ಲಿ ನಂಬಿಕೆ ದ್ರೋಹವಾದಾಗ ಏನು ಮಾಡಬೇಕು ಎನ್ನುವ ಸಲಹೆಗಳನ್ನು ನೀಡಿದ್ದಾನೆ ಆ ಕುರಿತಾದ ಮಾಹಿತಿ ಇಲ್ಲಿದೆ.

Chanakya Niti : ಈ ವ್ಯಕ್ತಿಗಳು ಎಷ್ಟೇ ಓದಿದ್ದರೂ ಶತಮೂರ್ಖರಂತೆ, ಇವರ ಸಹವಾಸ ಮಾಡ್ಲೇಬೇಡಿ

ಈಗಿನ ಕಾಲದಲ್ಲಿ ನಮ್ಮ ಸುತ್ತಮುತ್ತಲಿನಲ್ಲಿರುವ ವ್ಯಕ್ತಿಗಳು ಹೇಗೆ ಇರುತ್ತಾರೆ ಎಂದು ಊಹೆ ಮಾಡುವುದಕ್ಕೂ ಕಷ್ಟ. ಹೀಗಾಗಿ ಅವರೊಂದಿಗೆ ವ್ಯವಹರಿಸುವಾಗ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲುವುದಿಲ್ಲ. ಆದರೆ ಆಚಾರ್ಯ ಚಾಣಕ್ಯನು ಈ ಐದು ವ್ಯಕ್ತಿಗಳ ಜೊತೆಗೆ ಹೆಚ್ಚು ಜಾಗರೂಕರಾಗಿರಬೇಕು. ಈ ವ್ಯಕ್ತಿಗಳು ಯಾವಾಗಲೂ ಮೂರ್ಖರಾಗಿರುತ್ತಾರೆ ಎಂದಿದ್ದಾರೆ. ಹಾಗಾದ್ರೆ ಆ ಐದು ಮೂರ್ಖ ವ್ಯಕ್ತಿಗಳು ಯಾರೆಲ್ಲಾ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

Chanakya Niti : ಚಾಣಕ್ಯನ ಪ್ರಕಾರ ಯಶಸ್ಸಿನ ಗುಟ್ಟು ಇದೆ ನೋಡಿ

ಯಶಸ್ಸು ಇದನ್ನು ಕೇಳಿದರೆ ಮನಸ್ಸಿಗೆ ಎಷ್ಟು ಖುಷಿಯಾಗುತ್ತದೆಯೋ, ಯಶಸ್ಸು ಸಾಧಿಸಲು ಕಠಿಣ ಪರಿಶ್ರಮವು ಅಷ್ಟೇ ಅಗತ್ಯ. ಅದಲ್ಲದೇ, ಎಲ್ಲರೂ ಕೂಡ ತಮ್ಮ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಅದೆಷ್ಟೋ ಸಲ ಗುರಿಯತ್ತ ಹೆಜ್ಜೆ ಹಾಕುವಾಗ ಸೋಲು ಬೆಂಬಿಡದೇ ಕಾಡಬಹುದು. ಈ ವೇಳೆಯಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿರಲೇಬೇಕು. ಅದರೊಂದಿಗೆ ಈ ಮೂರು ವಿಷಯಗಳನ್ನು ತಿಳಿದವರಿಗೆ ಮಾತ್ರ ಯಶಸ್ಸು ಗಳಿಸುತ್ತಾರಂತೆ. ಆಚಾರ್ಯ ಚಾಣಕ್ಯನ ಈ ಮಾತುಗಳು ಶಸ್ವಿ ವ್ಯಕ್ತಿಯಾಗಲು ಕಾರಣವಾಗುತ್ತದೆ. ಇದರಿಂದ ಸುಲಭವಾಗಿ ಗುರಿಯನ್ನು ಸಾಧಿಸಬಹುದು.

Chanakya Niti : ಮೂರ್ಖರ ಜೊತೆಗೆ ಹೇಗೆ ವರ್ತಿಸಬೇಕು? ಚಾಣಕ್ಯ ಹೀಗೆನ್ನುವುದು ಯಾಕೆ?

ಜೀವನದಲ್ಲಿ ನಮ್ಮ ಜೊತೆಗೆ ಸ್ನೇಹ ಸಂಬಂಧ ಬೆಳೆಸುವ ವ್ಯಕ್ತಿಗಳೆಲ್ಲರೂ ಬುದ್ಧಿವಂತರಾಗಿರುತ್ತಾರೆ ಎಂದು ಹೇಳುವುದು ಕಷ್ಟ. ಆದರೆ ಕೆಲವೊಮ್ಮೆ ಮೂರ್ಖರು ಕೂಡ ಸ್ನೇಹಿತರಾಗಬಹುದು. ಒಂದು ವೇಳೆ ಸುತ್ತಮುತ್ತಲಿನಲ್ಲಿ ಮೂರ್ಖ ವ್ಯಕ್ತಿಗಳಿದ್ದರೆ ಆ ವ್ಯಕ್ತಿಗಳ ಜೊತೆಗೆ ಹೇಗಿರಬೇಕು.ಈ ಗುಣಸ್ವಭಾವ ವ್ಯಕ್ತಿಗಳ ಜೊತೆಗೆ ಯಾವತ್ತಿಗೂ ಜಾಗರೂಕರಾಗಿರಬೇಕು ಎಂದು ಚಾಣಕ್ಯನು ತಿಳಿಸಿದ್ದಾನೆ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Chanakya Niti :ಯಶಸ್ವಿಯಾಗಲು ಈ ನಾಲ್ಕು ವಿಚಾರದಲ್ಲಿ ಹಿಂಜರಿಕೆ ಪಡಬಾರದಂತೆ

ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನ ಸಾಧಿಸಲು ಬಯಸುತ್ತಾನೆ. ಆದರೆ ಕೆಲವರು ತಮ್ಮ ಜೀವನದಲ್ಲಿ ಮಾಡುವ ಈ ತಪ್ಪುಗಳಿಂದ ಯಶಸ್ಸು ಎನ್ನುವುದು ದೂರದ ಮಾತಾಗಿ ಬಿಡುತ್ತದೆ. ಚಾಣಕ್ಯ ಹೇಳುವಂತೆ ಈ ನಾಲ್ಕು ವಿಚಾರದಲ್ಲಿ ವ್ಯಕ್ತಿಯೂ ಯಾವುದೇ ಹಿಂಜರಿಕೆ ಅಥವಾ ನಾಚಿಕೆಯನ್ನು ಪಟ್ಟುಕೊಳ್ಳಬಾರದಂತೆ. ಒಂದು ವೇಳೆ ಹಿಂಜರಿದರೆ ಆತನು ಅಂದುಕೊಂಡಂತೆ ಬದುಕಲು ಸಾಧ್ಯವಿಲ್ಲವಂತೆ. ಹಾಗಾದ್ರೆ ಚಾಣಕ್ಯ ಹೇಳುವ ಆ ನಾಲ್ಕು ವಿಚಾರಗಳಾವುವು? ಎನ್ನುವುದರ ಮಾಹಿತಿ ಇಲ್ಲಿದೆ.

Chanakya Niti : ಹುಡುಗನು ಹುಡುಗಿಯ ಮನಸ್ಸನ್ನು ಗೆಲ್ಲೋದು ಹೇಗೆ? ಚಾಣಕ್ಯನ ಈ ಸಲಹೆ ಪಾಲಿಸಿ

ಮೀನಿನ ಹೆಜ್ಜೆ, ನದಿಯ ಮೂಲ ಮತ್ತು ಹೆಣ್ಣಿನ ಮನಸ್ಸನ್ನು ತಿಳಿದುಕೊಳ್ಳುವುದು ತುಂಬಾ ಕಠಿಣ ಎಂದು ಹಿರಿಯರು ಹೇಳಿರುವುದನ್ನು ಕೇಳಿರಬಹುದು. ಹೆಣ್ಣನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಹುಡುಗಿಯ ಮನಸ್ಸಿನಲ್ಲಿ ಸ್ಥಾನ ಪಡೆಯುವುದು ಅಷ್ಟೇ ಕಷ್ಟಕರ. ಆದರೆ ಆಚಾರ್ಯ ಚಾಣಕ್ಯನು ಹುಡುಗಿಯರ ಮನಸ್ಸನ್ನು ಗೆಲ್ಲೋದು ಹೇಗೆ ಎನ್ನುವ ಬಗ್ಗೆ ನೀತಿಯಲ್ಲಿ ಉಲ್ಲೇಖಿಸಿದ್ದಾನೆ. ಹಾಗಾದ್ರೆ ಚಾಣಕ್ಯ ನೀತಿಯಲ್ಲಿ ಹುಡುಗಿಯರ ವಿಷಯದಲ್ಲಿ ಹುಡುಗರಿಗೆ ನೀಡಿದ ಸಲಹೆಗಳೇನು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Chanakya Niti : ಇಂತಹ ಜಾಗದಲ್ಲಿ ತಾಳ್ಮೆ ವಹಿಸಿದರೆ ನಿಮಗೆ ನೆಮ್ಮದಿ ಸಿಗುವುದು ಖಂಡಿತ

ನೆಮ್ಮದಿ ಎನ್ನುವ ಪದವು ಕೇಳುವುದಕ್ಕೂ ಎಷ್ಟು ಚಂದವೋ ಬದುಕಿಗೂ ಕೂಡ ಅಷ್ಟೇ ಅಗತ್ಯ. ಹಣ ಅಂತಸ್ತು, ಹೆಂಡತಿ, ಮಕ್ಕಳು, ಕುಟುಂಬ ಹಾಗೂ ಆರೋಗ್ಯವಿದ್ದು ನೆಮ್ಮದಿಯಿಲ್ಲದೇ ಹೋದರೆ ಬದುಕಲು ಸಾಧ್ಯವೇ ಇಲ್ಲ. ಹೀಗಾಗಿ ಚಾಣಕ್ಯನು ಈ ಜೀವನದಲ್ಲಿ ನೆಮ್ಮದಿಯಾಗಿರಬೇಕಾದರೆ ಈ ಕೆಲವು ಸನ್ನಿವೇಶಗಳಲ್ಲಿ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದೇ ಉತ್ತಮವಂತೆ. ಹಾಗಾದ್ರೆ ವ್ಯಕ್ತಿಯೊಬ್ಬ ಯಾವೆಲ್ಲಾ ಸ್ಥಳಗಳಲ್ಲಿ ಮೌನವಹಿಸುವುದು ಉತ್ತಮ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

Chanakya Niti : ಗಂಡ ಹೆಂಡತಿ ಸಂಬಂಧವನ್ನು ಹಾಳು ಮಾಡುವ ವಿಚಾರಗಳಿವು

ಯಾವ ಸಂಬಂಧಗಳಲ್ಲಿ ಮನಸ್ತಾಪ ಹಾಗೂ ಜಗಳಗಳು ಇಲ್ಲ ಹೇಳಿ,.ಆದರೆ ಜಗಳವೇ ಜೀವನವಾಗಿಬಿಟ್ಟರೆ ನೆಮ್ಮದಿಗೆ ಜಾಗವಿಲ್ಲ. ಆದರೆ ಮುನಿಸು ಇದ್ದಲ್ಲಿ ಪ್ರೀತಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಗಂಡ ಹೆಂಡತಿ ಸಂಬಂಧವು ಇದಕ್ಕೆ ಹೊರತಾಗಿಲ್ಲ. ಸಂಗಾತಿಗಳಿಬ್ಬರ ನಡುವೆ ಬಾಂಧವ್ಯವನ್ನು ಈ ಸಣ್ಣ ಪುಟ್ಟ ವಿಚಾರಗಳನ್ನು ಹಾಳು ಮಾಡುತ್ತವೆ. ಇವುಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕೆಂದು ಚಾಣಕ್ಯನು ತಿಳಿಸುತ್ತಾನೆ.

Chanakya Niti : ನಿಮ್ಮಲ್ಲಿ ಈ ಗುಣಗಳಿದ್ದರೆ ಕುಟುಂಬದಲ್ಲಿ ದುಃಖಕ್ಕೆ ಜಾಗನೇ ಇಲ್ಲ ಬಿಡಿ

ಪ್ರತಿಯೊಬ್ಬರು ಜೀವನದಲ್ಲಿ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಕೆಲವು ಕುಟುಂಬದಲ್ಲಿ ಸಂತೋಷ ಎನ್ನುವುದೇ ದೂರದ ಮಾತಾಗಿರುತ್ತದೆ. ಕೆಲವರ ಕುಟುಂಬದಲ್ಲಿ ಯಾವಾಗ ನೋಡಿದರೂ,ಕಷ್ಟ ನೋವುಗಳಿಂದ ನೆಮ್ಮದಿ ಅನ್ನೋದೇ ಇರುವುದಿಲ್ಲ. ಹೀಗಾಗಿ ಮಹಾನ್ ಆಚಾರ್ಯ ಚಾಣಕ್ಯ ಕುಟುಂಬದಲ್ಲಿ ಸದಾ ಸಂತೋಷ ನೆಲೆಸಲು ಈ ಕೆಲವು ಸಲಹೆಗಳನ್ನು ತಿಳಿಸಿದ್ದಾರೆ. ಅದಲ್ಲದೇ, ಇಂತಹ ಗುಣವಿರುವ ವ್ಯಕ್ತಿಗಳು ಕುಟುಂಬದಲ್ಲಿದ್ದರೆ ಖುಷಿಯೇ ನೆಲೆಸಿರುತ್ತದೆ.

Chanakya Niti : ಪತ್ನಿಯಾದವಳು ಪತಿಯ ಈ ತಪ್ಪುಗಳನ್ನು ಎಂದಿಗೂ ಮುಚ್ಚಿಡಲೇಬಾರದು

ಬಹುತೇಕ ದಂಪತಿಗಳು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಒಬ್ಬರನ್ನೊಬ್ಬರು ಅನುಸರಿಸಿಕೊಂಡು ಹೋಗುತ್ತಾರೆ. ಆದರೆ ಚಾಣಕ್ಯನು ತನ್ನ ನೀತಿ ಶಾಸ್ತ್ರದಲ್ಲಿ ಪತಿಯ ಈ ಕೆಲವು ತಪ್ಪುಗಳನ್ನು ಅಥವಾ ಕೆಟ್ಟ ಅಭ್ಯಾಸಗಳನ್ನು ಪತ್ನಿಯು ಎಂದಿಗೂ ನಿರ್ಲಕ್ಷಿಸಬಾರದಂತೆ. ಇದರಿಂದ ಭವಿಷ್ಯದಲ್ಲಿ ಪಶ್ಚಾತ್ತಾಪ ಪಡಬೇಕಾಗಬಹುದಂತೆ. ಹಾಗಾದ್ರೆ ಹೆಂಡತಿಯು ತನ್ನ ಗಂಡನ ಯಾವ ಕೆಟ್ಟ ಅಭ್ಯಾಸಗಳನ್ನು ಮುಚ್ಚಿಡಬಾರದು ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.