ಜೈಲಿನಲ್ಲಿರೋ ದರ್ಶನ್ ಭೇಟಿ ಮಾಡಿ ಬಂದ ಧನ್ವೀರ್; ‘ಹಯಗ್ರೀವ’ ಬಗ್ಗೆ ಚರ್ಚೆ?
ಕನ್ನಡದ ನಟ ಧನ್ವೀರ್ ಅವರು ದರ್ಶನ್ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ಈ ಕಾರಣಕ್ಕೆ ಆಗಾಗ ದರ್ಶನ್ ಬಳಿ ತೆರಳಿ ಅವರನ್ನು ಭೇಟಿ ಮಾಡುತ್ತಾ ಇರುತ್ತಾರೆ. ಈ ವೇಳೆ ದರ್ಶನ್ ಬಳಿ ಧನ್ವೀರ್ ಮಾತನಾಡಿದ್ದಾರೆ. ಆ ಬಳಿಕದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಗಮನ ಸೆಳೆದಿದೆ. ಧನ್ವೀರ್ ಅವರ ನಿಯತ್ತಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
ಧನ್ವೀರ್ ಅವರು ಮಾರ್ಚ್ 13ರಂದು ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ, ದರ್ಶನ್ ಅವರನ್ನು ಭೇಟಿ ಮಾಡಿ ಹೊರ ಬಂದಿದ್ದಾರೆ. ಈ ಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಧನ್ವೀರ್ಗೆ ದರ್ಶನ್ ಮೇಲೆ ವಿಶೇಷ ಪ್ರೀತಿ ಇದೆ. ಸದಾ ದರ್ಶನ್ಗೆ ಕಾವಲಾಗಿ ನಿಂತಿದ್ದಾರೆ ಧನ್ವೀರ್. ಧನ್ವೀರ್ ಅಭಿನಯದ ‘ಹಯಗ್ರೀವ’ ಚಿತ್ರ ಕೆಲವರಿಂದ ಮೆಚ್ಚುಗೆ ಪಡೆದಿದೆ. ಈ ಬಗ್ಗೆ ದರ್ಶನ್ ಜೊತೆ ಅವರು ಚರ್ಚಿಸಿರಬಹುದು ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Mar 14, 2026 08:20 AM
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

