AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ಅಭ್ಯಾಸಗಳು ಸಮಾಜದಲ್ಲಿ ನಿಮ್ಮ ಗೌರವವನ್ನೇ ಹಾಳುಮಾಡಿಬಿಡುತ್ತದೆ

ಪ್ರತಿಯೊಬ್ಬರೂ ಸಹ ತಮಗೆ ಸಮಾಜದಲ್ಲಿ ಗೌರವ ಸಿಗಬೇಕು, ಗೌರವಯುತವಾಗಿ ಬಾಳಬೇಕು ಎಂದು ಬಯಸುತ್ತಾರೆ. ಆದರೆ ಕೆಲವೊಮ್ಮೆ ಕೆಲವರು ತಮ್ಮದೇ ಆದ ಕೆಲವು ಕೆಟ್ಟ ಅಭ್ಯಾಸಗಳಿಂದಾಗಿ ಸಮಾಜದಲ್ಲಿ ತಮ್ಮ ಗೌರವವನ್ನು ಕಳೆದುಕೊಳ್ಳುತ್ತಾರೆ. ಒಬ್ಬ ವ್ಯಕ್ತಿಯು ಇತರರ ದೃಷ್ಟಿಯಲ್ಲಿ ಕ್ರಮೇಣ ಗೌರವವನ್ನು ಕಳೆದುಕೊಳ್ಳುತ್ತಾನೆ. ಈ ಲೇಖನದಲ್ಲಿ, ನಿಮ್ಮ ಖ್ಯಾತಿ ಮತ್ತು ವ್ಯಕ್ತಿತ್ವ ಎರಡನ್ನೂ ತಿಳಿಯದೆ ಹಾನಿ ಮಾಡುವ ಮೂರು ಅಭ್ಯಾಸಗಳ ಬಗ್ಗೆ ತಿಳಿಯಿರಿ.

Chanakya Niti: ಈ ಅಭ್ಯಾಸಗಳು ಸಮಾಜದಲ್ಲಿ ನಿಮ್ಮ ಗೌರವವನ್ನೇ ಹಾಳುಮಾಡಿಬಿಡುತ್ತದೆ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Feb 26, 2026 | 7:41 PM

Share

ಪ್ರತಿಯೊಬ್ಬರೂ ಸಹ ಈ ಸಮಾಜದಲ್ಲಿ ಗೌರವವನ್ನು (respect) ಗಳಿಸಬೇಕು, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಬಯಸುತ್ತಾರೆ. ಈ ಗೌರವವನ್ನು ಗಳಿಸುವುದು ಎಷ್ಟು ಕಷ್ಟವೋ ಅದನ್ನು ಕಾಪಾಡಿಕೊಳ್ಳುವುದು ಸಹ ಅಷ್ಟೇ ಕಷ್ಟ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಇಷ್ಟು ಮಾತ್ರವಲ್ಲ ಕೆಲವೊಂದು ಅಭ್ಯಾಸಗಳ ಕಾರಣದಿಂದ ಗಳಿಸಿದ ಗೌರವವೆಲ್ಲಾ ಹಾಳಾಗಿಬಿಡುತ್ತದೆ ಎಂದಿದ್ದಾರೆ. ಕೆಲವೊಮ್ಮೆ  ಕೆಲವರು ತಮ್ಮದೇ ಆದ ಕೆಲವು ಕೆಟ್ಟ ಅಭ್ಯಾಸಗಳಿಂದಾಗಿ ಸಮಾಜದಲ್ಲಿ ತಮ್ಮ ಗೌರವ, ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾರಂತೆ. ಹಾಗಿದ್ರೆ ಯಾವ ಅಭ್ಯಾಸಗಳು ಗೌರವವನ್ನು ಹಾಳು ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ.

ಸಮಾಜದಲ್ಲಿ ಗೌರವವನ್ನು ಹಾಳು ಮಾಡುವ ಅಭ್ಯಾಸಗಳಿವು:

ಅತಿಯಾಗಿ ಮಾತನಾಡುವ ಅಭ್ಯಾಸ: ಆಚಾರ್ಯ ಚಾಣಕ್ಯರ ಪ್ರಕಾರ, ಎಲ್ಲೆಡೆ ಯೋಚಿಸದೆ ಮಾತನಾಡುವ ಯಾರಾದರೂ ಸಮಾಜದಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಾರೆ. ಹೆಚ್ಚು ಮಾತನಾಡುವವರು ತಮ್ಮ ವೈಯಕ್ತಿಕ ವಿಷಯಗಳು, ಯೋಜನೆ ಮತ್ತು ದೌರ್ಬಲ್ಯಗಳನ್ನು ಇತರರಿಗೆ ಬಹಿರಂಗಪಡಿಸುತ್ತಾರೆ. ಸಮಾಜವು ಅಂತಹ ಜನರನ್ನು ಎಂದಿಗೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಹಿತಮಿತವಾಗಿ ಬುದ್ಧಿವಂತಿಕೆಯಿಂದ ಮಾತನಾಡುವವರು ಬುದ್ಧಿವಂತರು, ಅಂತಹವರಿಗೆ ಸಮಾಜದಲ್ಲಿ ಹೆಚ್ಚಿನ ಗೌರವವಿರುತ್ತದೆ.

ಎಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸುವ ಅಭ್ಯಾಸ: ಕೆಲವು ಜನರು ಯಾವಾಗಲೂ ಇತರರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾರೆ. ಅಂತಹ ವ್ಯಕ್ತಿಗಳು ತಮ್ಮ ಸ್ವಂತ ಆಲೋಚನೆ ಮತ್ತು ಸ್ವಾಭಿಮಾನವನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಇಂತಹವರಿಗೆ ಯಾವುದೇ ಗೌರವ ಸಹ ಇರುವುದಿಲ್ಲ. ಸಮಾಜದಲ್ಲಿ ನೀವು ಗೌರವಾನ್ವಿತರಾಗಲು ಬಯಸಿದರೆ, ನಿಮ್ಮ ಮಿತಿಗಳನ್ನು ನಿಗದಿಪಡಿಸುವುದು ಮತ್ತು ಯಾವುದೇ ತಪ್ಪನ್ನು ಭಯವಿಲ್ಲದೆ ವಿರೋಧಿಸುವುದು ಬಹಳ ಮುಖ್ಯವಾಗುತ್ತದೆ.

ಇದನ್ನೂ ಓದಿ: ಶ್…‌ ನಿಮ್ಮ ಸೀಕ್ರೆಟ್‌ಗಳನ್ನು ಯಾರೊಂದಿಗೂ ಶೇರ್‌ ಮಾಡಬೇಡಿ

 ಕೆಟ್ಟವರ ಸಹವಾಸ:   ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿ ಒಳ್ಳೆಯವನೋ, ಕೆಟ್ಟವನೋ ಎಂಬುದನ್ನು ಆತನ ಸಹವಾಸ ಮತ್ತು ಸ್ನೇಹಿತರಿಂದಲೂ ನಿರ್ಧಾರವಾಗುತ್ತದೆ. ಒಬ್ಬ ವ್ಯಕ್ತಿಯು ನಕಾರಾತ್ಮಕ ಅಥವಾ ಕೆಟ್ಟ ಸ್ವಭಾವದ ಜನರೊಂದಿಗಿನ ಸಹವಾಸದಲ್ಲಿದ್ದರೆ ಕ್ರಮೇಣ ಆತನ ವ್ಯಕ್ತಿತ್ವ, ಗೌರವವೂ ಹಾಳಾಗುತ್ತದೆ. ಹಾಗಾಗಿ ಯಾವಾಗಲೂ ಒಳ್ಳೆಯವರ ಸಹವಾಸವನ್ನು ಮಾಡಬೇಕು. ಇದಲ್ಲದೆ ಕೆಟ್ಟ ಚಟಗಳು ಕೂಡ ವ್ಯಕ್ತಿಯ ಗೌರವವನ್ನು ಹಾಳು ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಲಾರಿ ಪಲ್ಟಿಯಾಗುತ್ತಿದ್ದಂತೆ ಕೂಲ್ ಡ್ರಿಂಕ್ಸ್​ ಬಾಟಲಿಗಳನ್ನು ದೋಚಿದ ಜನ!
ಲಾರಿ ಪಲ್ಟಿಯಾಗುತ್ತಿದ್ದಂತೆ ಕೂಲ್ ಡ್ರಿಂಕ್ಸ್​ ಬಾಟಲಿಗಳನ್ನು ದೋಚಿದ ಜನ!
ಎರಡು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕ: ಕೊನೆಗೆ ಆಕೆಯನ್ನ ಕೊಂದೇ ಬಿಟ್ಟ
ಎರಡು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕ: ಕೊನೆಗೆ ಆಕೆಯನ್ನ ಕೊಂದೇ ಬಿಟ್ಟ
ಮಗಳನ್ನು ಶಾಲೆಗೆ ಬಿಟ್ಟ ಮಹಿಳೆಗೆ ಥಳಿಸಿ ಚಿನ್ನ ಕದ್ದ ಕಳ್ಳರು!
ಮಗಳನ್ನು ಶಾಲೆಗೆ ಬಿಟ್ಟ ಮಹಿಳೆಗೆ ಥಳಿಸಿ ಚಿನ್ನ ಕದ್ದ ಕಳ್ಳರು!
ಕಡುವಿನಹೊಸಹಳ್ಳಿಯಲ್ಲಿ ಯುಗಾದಿ ಹೊನ್ನಾರು ಸಂಭ್ರಮ
ಕಡುವಿನಹೊಸಹಳ್ಳಿಯಲ್ಲಿ ಯುಗಾದಿ ಹೊನ್ನಾರು ಸಂಭ್ರಮ
ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌ ಅಭ್ಯಾಸ; ವಿಡಿಯೋ ನೋಡಿ
ಟಾಪ್ ಗೇರ್​ನಲ್ಲಿ ವಿರಾಟ್ ಬ್ಯಾಟಿಂಗ್‌ ಅಭ್ಯಾಸ; ವಿಡಿಯೋ ನೋಡಿ
ಹುತ್ತಕ್ಕೆ ಕೈಹಾಕಿ ಹಾವನ್ನೆತ್ತಿ ಆಡಿದ ಬಾಲಕ; ಶಾಕಿಂಗ್ ವಿಡಿಯೋ ನೋಡಿ
ಹುತ್ತಕ್ಕೆ ಕೈಹಾಕಿ ಹಾವನ್ನೆತ್ತಿ ಆಡಿದ ಬಾಲಕ; ಶಾಕಿಂಗ್ ವಿಡಿಯೋ ನೋಡಿ
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು!
ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು!
'ಕೈ' ಟಿಕೆಟ್​​ ಸಿಗದಿದ್ರೆ BJPಯಿಂದ ಶಾಮನೂರು ಮೊಮ್ಮಗ ಸ್ಪರ್ಧೆ!: ಯತ್ನಾಳ್​
'ಕೈ' ಟಿಕೆಟ್​​ ಸಿಗದಿದ್ರೆ BJPಯಿಂದ ಶಾಮನೂರು ಮೊಮ್ಮಗ ಸ್ಪರ್ಧೆ!: ಯತ್ನಾಳ್​
ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್​ನ ಅತಿದೊಡ್ಡ ಎಲ್​ಎನ್​ಜಿ ಸ್ಥಾವರ
ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್​ನ ಅತಿದೊಡ್ಡ ಎಲ್​ಎನ್​ಜಿ ಸ್ಥಾವರ
ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್​​ ಹೇಳಿಕೆಗೆ ಡಿಕೆಶಿ ಉತ್ತರ ನೋಡಿ
ಸಿಎಂ ಹುದ್ದೆ ಖಾಲಿ ಇಲ್ಲ ಎಂಬ ವೇಣುಗೋಪಾಲ್​​ ಹೇಳಿಕೆಗೆ ಡಿಕೆಶಿ ಉತ್ತರ ನೋಡಿ