AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2027ರ ವಿಶ್ವಕಪ್ ಮೇಲೆ ಕಣ್ಣು: ಇಂಗ್ಲೆಂಡ್ ವಿರುದ್ಧ ಸರಣಿಗೆ ಭಾರತ ತಂಡ ಸಿದ್ಧ

ಭಾರತ U19 ಮಹಿಳಾ ತಂಡವನ್ನು ಇಂಗ್ಲೆಂಡ್ U19 ಮಹಿಳಾ ತಂಡದ ವಿರುದ್ಧದ ಐದು ಪಂದ್ಯಗಳ T20 ಸರಣಿಗೆ ಪ್ರಕಟಿಸಲಾಗಿದೆ. ನವೆಂಬರ್ 26ರಿಂದ ಡಿಸೆಂಬರ್ 6ರವರೆಗೆ ವಡೋದರಾ ಮತ್ತು ಸೂರತ್‌ನಲ್ಲಿ ನಡೆಯಲಿದೆ. ಭವಿಕಾ ಅಹಿರೆ ತಂಡದ ನಾಯಕಿಯಾಗಿದ್ದಾರೆ. 2027ರ ICC U19 ಮಹಿಳಾ T20 ವಿಶ್ವಕಪ್‌ಗೆ ಸಿದ್ಧತೆ ಇದರ ಮುಖ್ಯ ಉದ್ದೇಶವಾಗಿದೆ. ಸಂಪೂರ್ಣ ತಂಡ ಮತ್ತು ವೇಳಾಪಟ್ಟಿ ಲಭ್ಯವಿದೆ.

2027ರ ವಿಶ್ವಕಪ್ ಮೇಲೆ ಕಣ್ಣು: ಇಂಗ್ಲೆಂಡ್ ವಿರುದ್ಧ ಸರಣಿಗೆ ಭಾರತ ತಂಡ ಸಿದ್ಧ
India Womens U19
ಪೃಥ್ವಿಶಂಕರ
|

Updated on: Nov 21, 2026 | 6:10 PM

Share

ಇಂಗ್ಲೆಂಡ್ ಅಂಡರ್-19 ಮಹಿಳಾ ತಂಡದ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೆ ಭಾರತ ಅಂಡರ್-19 ಮಹಿಳಾ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ನವೆಂಬರ್ 26ರಿಂದ ಡಿಸೆಂಬರ್ 6ರವರೆಗೆ ವಡೋದರಾ ಮತ್ತು ಸೂರತ್‌ನಲ್ಲಿ ಈ ಸರಣಿ ನಡೆಯಲಿದೆ. 15 ಆಟಗಾರ್ತಿಯರ ತಂಡಕ್ಕೆ ಭವಿಕಾ ಅಹಿರೆ ನಾಯಕಿಯಾಗಿ ಆಯ್ಕೆಯಾಗಿದ್ದು, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ನಿಭಾಯಿಸಲಿದ್ದಾರೆ. ಅನಾದಿ ತಗ್ಡೆ ಉಪನಾಯಕಿಯಾಗಿ ನೇಮಕಗೊಂಡಿದ್ದಾರೆ. ಶ್ರೇಯಾ ಎಸ್. ಚವಾಣ್ ತಂಡದ ಮತ್ತೊಬ್ಬ ವಿಕೆಟ್ ಕೀಪರ್ ಆಗಿದ್ದಾರೆ. 2027ರ ಜನವರಿಯಲ್ಲಿ ನಡೆಯಲಿರುವ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ಗೆ ಸಿದ್ಧತೆ ಮಾಡಿಕೊಳ್ಳುವ ಉದ್ದೇಶದಿಂದ ಈ ಸರಣಿಯನ್ನು ಆಯೋಜಿಸಲಾಗಿದೆ.

ನವೆಂಬರ್ 26ರಿಂದ ಸರಣಿ ಆರಂಭ

ಐದು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯ ನವೆಂಬರ್ 26ರಂದು ವಡೋದರಾದಲ್ಲಿ ನಡೆಯಲಿದೆ. ಇದೇ ಮೈದಾನದಲ್ಲಿ ನವೆಂಬರ್ 28ರಂದು ಎರಡನೇ ಪಂದ್ಯ ನಡೆಯಲಿದೆ. ನಂತರ ಸರಣಿ ಸೂರತ್‌ಗೆ ಸ್ಥಳಾಂತರಗೊಳ್ಳಲಿದ್ದು, ಡಿಸೆಂಬರ್ 1ರಂದು ಮೂರನೇ ಪಂದ್ಯ, ಡಿಸೆಂಬರ್ 3ರಂದು ನಾಲ್ಕನೇ ಪಂದ್ಯ ಹಾಗೂ ಡಿಸೆಂಬರ್ 6ರಂದು ಐದನೇ ಮತ್ತು ಅಂತಿಮ ಪಂದ್ಯ ನಡೆಯಲಿದೆ.

ಪಂದ್ಯಗಳ ವೇಳಾಪಟ್ಟಿ

  • ನವೆಂಬರ್ 26: ಮೊದಲ ಟಿ20, ವಡೋದರಾ, ಸಂಜೆ 6 ಗಂಟೆ
  • ನವೆಂಬರ್ 28: ಎರಡನೇ ಟಿ20, ವಡೋದರಾ, ಮಧ್ಯಾಹ್ನ 1 ಗಂಟೆ
  • ಡಿಸೆಂಬರ್ 1: ಮೂರನೇ ಟಿ20, ಸೂರತ್, ಸಂಜೆ 6 ಗಂಟೆ
  • ಡಿಸೆಂಬರ್ 3: ನಾಲ್ಕನೇ ಟಿ20, ಸೂರತ್, ಸಂಜೆ 6 ಗಂಟೆ
  • ಡಿಸೆಂಬರ್ 6: ಐದನೇ ಟಿ20, ಸೂರತ್, ಮಧ್ಯಾಹ್ನ 1 ಗಂಟೆ.

ಭಾರತ ಅಂಡರ್-19 ಮಹಿಳಾ ತಂಡ: ಭವಿಕಾ ಅಹಿರೆ (ನಾಯಕಿ ಹಾಗೂ ವಿಕೆಟ್ ಕೀಪರ್), ಇರಾ ಜಾಧವ್, ನಿಧಿ ಮಹ್ತೋ, ಪೂರ್ವಾ ಸಿವಾಚ್, ಮೆಹೆಕ್ ನರವೇಸ್, ಮೈತ್ರಿ ಮನಿಯಾರ್, ಈಶ್ವರಿ ಅವಸಾರೆ, ದಿಯಾ ಯಾದವ್, ಶ್ರೇಯಾ ಎಸ್. ಚವಾಣ್ (ವಿಕೆಟ್ ಕೀಪರ್), ಸಮೈರಾ ರಾಘವ್, ಕುಮಾರಿ ಪಲಕ್, ಉಮಾ ಕಶ್ವಿ, ಅಚ್ಸಾ ಪರ್ಮಾರ್, ಅನಾದಿ ತಗ್ಡೆ (ಉಪನಾಯಕಿ) ಮತ್ತು ಪಲಕ್ ಸಿಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More