AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಭೀರ್ ಕರೆ ಮಾಡಿದ್ದರು… ಸರ್ಫರಾಝ್ ಖಾನ್ ಬಿಚ್ಚಿಟ್ಟ ಸತ್ಯ!

ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ಮಾಹಿತಿ ಸೋರಿಕೆ ವದಂತಿ ಮತ್ತು ಇದರಿಂದ ಉಂಟಾದ ನೋವಿನ ಕುರಿತು ಬ್ಯಾಟರ್ ಸರ್ಫರಾಝ್ ಖಾನ್ ಸ್ಪಷ್ಟನೆ ನೀಡಿದ್ದು, ಸಂಕಷ್ಟದ ಸಮಯದಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಕರೆ ಮಾಡಿ ತನಗೆ ಧೈರ್ಯ ತುಂಬಿದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಗಂಭೀರ್ ಕರೆ ಮಾಡಿದ್ದರು... ಸರ್ಫರಾಝ್ ಖಾನ್ ಬಿಚ್ಚಿಟ್ಟ ಸತ್ಯ!
Gautam Gambhir - Sarfaraz KhanImage Credit source: BCCI
ಝಾಹಿರ್ ಯೂಸುಫ್
|

Updated on: Nov 21, 2026 | 2:13 PM

Share

ಟೀಮ್ ಇಂಡಿಯಾದ ಯುವ ಬ್ಯಾಟರ್ ಸರ್ಫರಾಝ್ ಖಾನ್ ಅವರು 2024–25ರ ಆಸ್ಟ್ರೇಲಿಯಾ ಪ್ರವಾಸದ (ಬಾರ್ಡರ್-ಗವಾಸ್ಕರ್ ಟ್ರೋಫಿ) ವೇಳೆ ಭಾರತೀಯ ಡ್ರೆಸ್ಸಿಂಗ್ ರೂಂನ ಆಂತರಿಕ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ ಎಂಬ ಗಂಭೀರ ವದಂತಿಗಳ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರ ಯೂಟ್ಯೂಬ್ ಚಾನೆಲ್‌ನ ‘ಬೈಠ್ & ಬೋಲ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸುಳ್ಳು ಆರೋಪಗಳು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಎಷ್ಟು ಮಾನಸಿಕ ನೋವು ನೀಡಿವೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ವಿವಾದದ ಹಿನ್ನೆಲೆ ಏನು?

2024–25ರ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೆಲ್ಬೋರ್ನ್ ಟೆಸ್ಟ್ ಸೋಲಿನ ನಂತರ, ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಆಟಗಾರರ ಪ್ರದರ್ಶನದ ಬಗ್ಗೆ ಡ್ರೆಸ್ಸಿಂಗ್ ರೂಂನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ತಂಡದ ಒಳಗಿನ ಈ ರಹಸ್ಯ ಮಾಹಿತಿಯನ್ನು ಸರ್ಫರಾಝ್ ಖಾನ್ ಅವರೇ ಹೊರಹಾಕಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದ್ದವು.

ಫೋನ್ ಸ್ವಿಚ್ ಆಫ್!

ಸಂದರ್ಶನದಲ್ಲಿ ಆ ಕರಾಳ ದಿನಗಳನ್ನು ನೆನೆದ ಸರ್ಫರಾಝ್, “ಬಾರ್ಡರ್-ಗವಾಸ್ಕರ್ ಟ್ರೋಫಿ ಮುಗಿದು ಸುಮಾರು 25-30 ದಿನಗಳು ಕಳೆದಿದ್ದವು. ಸರಣಿಯಲ್ಲಿ ಆದ ಗಾಯದ ಚೇತರಿಕೆಗಾಗಿ ನಾನು ಬೆಂಗಳೂರಿನ ಎನ್‌ಸಿಎ ನಲ್ಲಿದ್ದೆ. ಇದ್ದಕ್ಕಿದ್ದಂತೆ ನಾನು ವಿಮಾನದಿಂದ ಇಳಿದ ತಕ್ಷಣ ನನ್ನ ಫೋನ್‌ಗೆ ಸಾಲು ಸಾಲು ಕರೆಗಳು ಮತ್ತು ಸಂದೇಶಗಳು ಬರಲು ಶುರುವಾದವು. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಏನೇನೋ ಬರೆಯಲಾಗಿತ್ತು” .

” ಪರಿಸ್ಥಿತಿ ಎಷ್ಟರಮಟ್ಟಿಗೆ ಕೈಮೀರಿತ್ತೆಂದರೆ, ನಾನು ನನ್ನ ಫೋನ್ ಸ್ವಿಚ್ ಆಫ್ ಮಾಡಬೇಕಾಯಿತು. ನನಗೆ ಯಾರ ಬಳಿ ಮಾತನಾಡಬೇಕು, ಯಾರಿಗೆ ಸತ್ಯ ಹೇಳಬೇಕು ಎಂಬುದೇ ತಿಳಿಯದಾಗಿತ್ತು. ನಾನು ಕೆಲವರಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ,” ಎಂದು ಸರ್ಫರಾಝ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ.

ಆರೋಪಗಳನ್ನು ತಳ್ಳಿಹಾಕಿದ ಬ್ಯಾಟರ್!

ತಮ್ಮ ಮೇಲಿನ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ ಸರ್ಫರಾಝ್, “ಅಂತಹ ಯಾವುದೇ ಘಟನೆ ನಡೆದಿರಲಿಲ್ಲ. ಒಂದು ವೇಳೆ ನಾನು ನಿಜವಾಗಿಯೂ ಡ್ರೆಸ್ಸಿಂಗ್ ರೂಮ್ ಮಾಹಿತಿಯನ್ನು ಸೋರಿಕೆ ಮಾಡಿದ್ದರೆ, ನನ್ನನ್ನು ಮತ್ತೆ ‘ಭಾರತ ಎ’ ತಂಡಕ್ಕಾಗಲಿ ಅಥವಾ ಶ್ರೀಲಂಕಾ ಪ್ರವಾಸದ ಮುಖ್ಯ ತಂಡಕ್ಕಾಗಲಿ ಆಯ್ಕೆ ಮಾಡುತ್ತಿರಲಿಲ್ಲ. ಈ ವದಂತಿಯನ್ನು ಯಾರು ಮತ್ತು ಏಕೆ ಹಬ್ಬಿಸಿದರು ಎಂಬುದು ನನಗೆ ಇಂದಿಗೂ ತಿಳಿದಿಲ್ಲ,” ಎಂದು ತರ್ಕಬದ್ಧವಾಗಿ ಉತ್ತರಿಸಿದ್ದಾರೆ.

ಗೌತಮ್ ಗಂಭೀರ್ ಬೆಂಬಲ:

ಈ ವಿವಾದವು ಕೇವಲ ತಮ್ಮ ವೃತ್ತಿಜೀವನಕ್ಕೆ ಮಾತ್ರವಲ್ಲದೆ ತಮ್ಮ ಕುಟುಂಬಕ್ಕೂ ತೀವ್ರ ನೋವು ತಂದಿತ್ತು ಎಂದು ಸರ್ಫರಾಝ್ ಹೇಳಿದ್ದಾರೆ. “ನನ್ನ ತಂದೆ (ನೌಶಾದ್ ಖಾನ್) ಮತ್ತು ಸಹೋದರ ಮುಶೀರ್ ತುಂಬಾ ನೊಂದುಕೊಂಡಿದ್ದರು. ನನ್ನ ಪತ್ನಿ ಕಣ್ಣೀರಿಡುತ್ತಿದ್ದಳು,” ಎಂದು ಅವರು ಭಾವುಕರಾದರು.

ಇಂತಹ ಸಂಕಷ್ಟದ ಸಮಯದಲ್ಲಿ ತಮಗೆ ಮೊದಲು ಕರೆ ಮಾಡಿ ಧೈರ್ಯ ತುಂಬಿದ್ದು ಮುಖ್ಯ ಕೋಚ್ ಗೌತಮ್ ಗಂಭೀರ್ ಎಂದು ಸರ್ಫರಾಝ್ ಖಾನ್ ಸ್ಮರಿಸಿದ್ದಾರೆ:

ವದಂತಿ ಹಬ್ಬಿದ ಎರಡು ದಿನಗಳ ನಂತರ ಗೌತಮ್ ಗಂಭೀರ್ ಸ್ವತಃ ಸರ್ಫರಾಝ್​ಗೆ ಕರೆ ಮಾಡಿ, “ಇವೆಲ್ಲಾ ಊಹಾಪೋಹಗಳು ಅಷ್ಟೇ, ಇಂತಹ ರಾಜಕೀಯಕ್ಕೆ ತಲೆಕೆಡಿಸಿಕೊಳ್ಳಬೇಡ. ಕೇವಲ ನಿನ್ನ ಆಟದ ಮೇಲೆ ಗಮನ ಹರಿಸು,” ಎಂದು ಸಲಹೆ ನೀಡಿದ್ದರು.

ಈ ವೇಳೆ ಸರ್ಫರಾಝ್ ತಮ್ಮ ತಂದೆ ಹಾಗೂ ಪತ್ನಿಯ ದುಃಖದ ಬಗ್ಗೆ ಹೇಳಿಕೊಂಡಾಗ, ಗಂಭೀರ್ ಅವರು ಸರ್ಫರಾಝ್ ತಂದೆ ನೌಶಾದ್ ಖಾನ್ ಅವರಿಗೂ ಕರೆ ಮಾಡಿ ಮಾತನಾಡಿದ್ದರು. “ಇಂತಹ ಮಾತುಗಳಿಗೆ ಬೆಲೆ ಕೊಡಬೇಡಿ, ಸರ್ಫರಾಝ್ ಒಬ್ಬ ಉತ್ತಮ ಕ್ರಿಕೆಟಿಗ. ಆತ ತನ್ನ ಆಟವನ್ನು ಮುಂದುವರಿಸಲಿ. ನಿಮಗೆ ಯಾವುದೇ ಸಹಾಯ ಬೇಕಿದ್ದರೂ ನನಗೆ ಕರೆ ಮಾಡಿ,” ಎಂದು ಗಂಭೀರ್ ಭರವಸೆ ನೀಡಿದ್ದರು.

ಒಟ್ಟಾರೆಯಾಗಿ, ಡ್ರೆಸ್ಸಿಂಗ್ ರೂಂ ವಿವಾದದ ಕಹಿ ನೆನಪುಗಳನ್ನು ಬದಿಗಿಟ್ಟಿರುವ ಸರ್ಫರಾಝ್ ಖಾನ್, ಸದ್ಯ ಕೋಚ್ ಗೌತಮ್ ಗಂಭೀರ್ ಅವರ ಬೆಂಬಲದೊಂದಿಗೆ ಮತ್ತೆ ತಮ್ಮ ಬ್ಯಾಟಿಂಗ್‌ನತ್ತ ಸಂಪೂರ್ಣ ಗಮನ ಹರಿಸಿದ್ದಾರೆ. ಆಧಾರರಹಿತ ಆರೋಪಗಳಿಗೆ ತಮ್ಮ ಪ್ರದರ್ಶನದ ಮೂಲಕವೇ ಉತ್ತರ ನೀಡಲು ಸಜ್ಜಾಗಿರುವ ಸರ್ಫರಾಝ್, ಶೀಘ್ರದಲ್ಲೇ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಮಿಂಚಲಿ ಎಂಬುದೇ ಕ್ರಿಕೆಟ್ ಪ್ರೇಮಿಗಳ ಆಶಯ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ವಿದ್ಯಾಭ್ಯಾಸಕ್ಕೆ ನೆರವಾಗಿದ್ದವನಿಂದಲೇ ಕೃತ್ಯ
ವಿದ್ಯಾಭ್ಯಾಸಕ್ಕೆ ನೆರವಾಗಿದ್ದವನಿಂದಲೇ ಕೃತ್ಯ
ಹಿರಿಯೂರು ಉಪಚುನಾವಣೆ: ಅಮಿತ್​ ಶಾ ಭೇಟಿಯಾಗಿ ರಿಪೋರ್ಟ್​ ಕೊಟ್ಟ ವಿಜಯೇಂದ್ರ
ಹಿರಿಯೂರು ಉಪಚುನಾವಣೆ: ಅಮಿತ್​ ಶಾ ಭೇಟಿಯಾಗಿ ರಿಪೋರ್ಟ್​ ಕೊಟ್ಟ ವಿಜಯೇಂದ್ರ
ಬಸವ ಮಂಟಪ ಕೃತಿ ವಿವಾದ: ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ವಶಕ್ಕೆ
ಬಸವ ಮಂಟಪ ಕೃತಿ ವಿವಾದ: ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ವಶಕ್ಕೆ
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?
ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ