ಸಲ್ಮಾನ್ ಖಾನ್ ಇಂದ ರಕ್ಷಣೆಗಾಗಿ ವಿಶೇಷ ಬಾಡಿಗಾರ್ಡ್ ನೇಮಿಸಿಕೊಂಡಿದ್ದ ಐಶ್ವರ್ಯಾ ರೈ
ಅಭಿಷೇಕ್ ಅವರನ್ನು ಐಶ್ವರ್ಯಾ ಮದುವೆ ಆಗುವ ಕೆಲ ವರ್ಷಗಳ ಮುನ್ನ ಐಶ್ವರ್ಯಾ ಹೆಸರು ಸಲ್ಮಾನ್ ಖಾನ್ ಜೊತೆಗೆ ಕೇಳಿ ಬಂದಿತ್ತು. ಇವರಿಬ್ಬರ ಪ್ರೀತಿಗಿಂತಲೂ ಇವರ ಬ್ರೇಕಪ್ ಇಡೀ ದೇಶದ ಗಮನ ಸೆಳೆದಿತ್ತು. ಸಲ್ಮಾನ್ ಖಾನ್, ಐಶ್ವರ್ಯಾ ರೈ ಜೊತೆ ಬ್ರೇಕಪ್ ಆದ ಬಳಿಕ ಐಶ್ವರ್ಯಾ ಮನೆಯ ಬಳಿ ಜಗಳ ಮಾಡಿ, ಬೆದರಿಕೆಗಳನ್ನೆಲ್ಲ ಹಾಕಿದ್ದರು. ಇದೇ ಕಾರಣಕ್ಕೆ ಐಶ್ವರ್ಯಾ ರೈ ಒಬ್ಬ ವಿಶೇಷ ಬಾಡಿಗಾರ್ಡ್ ಅನ್ನು ನೇಮಕ ಮಾಡಿಕೊಂಡಿದ್ದರಂತೆ.

ಮುಖ್ಯಾಂಶಗಳು
- ಐಶ್ವರ್ಯಾ ರೈ-ಸಲ್ಮಾನ್ ಖಾನ್ ಹಳೆ ಕತೆ
- ಐಶ್ವರ್ಯಾ ರೈ ಬಾಡಿಗಾರ್ಡ್ ಸಂದರ್ಶನ
- ಸಲ್ಮಾನ್ ಖಾನ್ ಇಂದ ರಕ್ಷಿಸಲು ಬಾಡಿಗಾರ್ಡ್ ನೇಮಕ
ಐಶ್ವರ್ಯಾ ರೈ, ಬಚ್ಚನ್ ಮನೆ ಸೊಸೆಯಾಗಿ 19 ವರ್ಷಗಳಾಗಿವೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ 2007 ರಲ್ಲಿ ವಿವಾಹವಾಗಿದ್ದರು. ಇಬ್ಬರಿಗೂ ಮುದ್ದಾದ ಮಗಳಿದ್ದಾಳೆ. ಆದರೆ ಅಭಿಷೇಕ್ ಅವರನ್ನು ಐಶ್ವರ್ಯಾ ಮದುವೆ ಆಗುವ ಕೆಲ ವರ್ಷಗಳ ಮುನ್ನ ಐಶ್ವರ್ಯಾ ಹೆಸರು ಸಲ್ಮಾನ್ ಖಾನ್ ಜೊತೆಗೆ ಕೇಳಿ ಬಂದಿತ್ತು. ಇವರಿಬ್ಬರ ಪ್ರೀತಿಗಿಂತಲೂ ಇವರ ಬ್ರೇಕಪ್ ಇಡೀ ದೇಶದ ಗಮನ ಸೆಳೆದಿತ್ತು. ಸಲ್ಮಾನ್ ಖಾನ್, ಐಶ್ವರ್ಯಾ ರೈ ಜೊತೆ ಬ್ರೇಕಪ್ ಆದ ಬಳಿಕ ಐಶ್ವರ್ಯಾ ಮನೆಯ ಬಳಿ ಜಗಳ ಮಾಡಿ, ಬೆದರಿಕೆಗಳನ್ನೆಲ್ಲ ಹಾಕಿದ್ದರು. ಇದೇ ಕಾರಣಕ್ಕೆ ಐಶ್ವರ್ಯಾ ರೈ ಒಬ್ಬ ವಿಶೇಷ ಬಾಡಿಗಾರ್ಡ್ ಅನ್ನು ನೇಮಕ ಮಾಡಿಕೊಂಡಿದ್ದರಂತೆ.
ಇದೀಗ ಆ ಬಾಡಿಗಾರ್ಡ್ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ್ದು, 2002ರಲ್ಲಿ ನಡೆದ ಘಟನೆಗಳ ಬಗ್ಗೆ ಮಾತನಾಡಿದ್ದಾರೆ, ‘ರೋಹನ್ ಸಿಪ್ಪಿ ನಿರ್ದೇಶನದ ‘ಕುಚ್ ನಾ ಕಹೋ’ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಜೊತೆ ಐಶ್ವರ್ಯಾ ರೈ ನಟಿಸುತ್ತಿದ್ದರು. ಆಗ ಐಶ್ವರ್ಯಾ ಅವರ ಅಂಗರಕ್ಷಕರಾಗಿದ್ದ ಕೇತನ್ ಕರಂದೆ ಆ ಸಿನಿಮಾದ ಚಿತ್ರೀಕರಣದಲ್ಲಿ ನಡೆದ ಘಟನೆಯನ್ನು ಹಂಚಿಕೊಂಡಿದ್ದಾರೆ. ಸಲ್ಮಾನ್‌ರಿಂದ ಐಶ್ವರ್ಯಾ ಅವರನ್ನು ರಕ್ಷಿಸಲು ತಮ್ಮನ್ನು ನೇಮಿಸಿಕೊಳ್ಳಲಾಗಿತ್ತು ಎಂದು ಕೇತನ್ ಬಹಿರಂಗಪಡಿಸಿದ್ದಾರೆ.
‘ಒಂದು ಕಾಲದಲ್ಲಿ ನಾನು ಐಶ್ವರ್ಯಾ ರೈ ಅವರ ಬಾಡಿಗಾರ್ಡ್ ಆಗಿದ್ದೆ. ಸಲ್ಮಾನ್ ಖಾನ್ ಕಾರಣದಿಂದಲೇ ನನ್ನನ್ನು ನೇಮಿಸಲಾಗಿತ್ತು. ಸಲ್ಮಾನ್‌ರಿಂದ ಐಶ್ವರ್ಯಾ ರೈ ಅವರನ್ನು ಸುರಕ್ಷಿತವಾಗಿಡಲು ನನ್ನನ್ನು ನೇಮಿಸಿಕೊಳ್ಳಲಾಗಿತ್ತು. ಆದರೆ ನಾನು ಅಲ್ಲಿ ಕೇವಲ ಏಳು ದಿನಗಳ ಮಟ್ಟಿಗೆ ಕೆಲಸ ಮಾಡಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ;ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ನಟಿ
ಸಲ್ಮಾನ್ ಖಾನ್ ಇಂದ ಭೀತಿ ಇದ್ದಿದ್ದರಿಂದ ಐಶ್ವರ್ಯಾ ಅವರನ್ನು ಕರೆದುಕೊಂಡು ಬರುವುದು ಮತ್ತು ಸಿನಿಮಾ ಸೆಟ್‌ಗಳಿಗೆ ಬಿಡುವುದು ತಮ್ಮ ಕೆಲಸವಾಗಿತ್ತು ಎಂದು ಕೇತನ್ ತಿಳಿಸಿದ್ದಾರೆ. ಒಮ್ಮೆ ಅವರು ಫ್ಯಾಷನ್ ಶೋ ಒಂದಕ್ಕೆ ಹೋಗಿದ್ದಾಗಲೂ ಕೇತನ್ ಅದೇ ನಿಯಮವನ್ನು ಪಾಲಿಸಿದ್ದರು. ಆದರೆ, ಶೋ ಮುಗಿಸಿ ಹಿಂತಿರುಗುವಾಗ ದಾರಿಯಲ್ಲಿ ಅವರಿಗೆ ಸಲ್ಮಾನ್ ಎದುರಾಗಿದ್ದರು. ಈ ಘಟನೆಯ ನಂತರ ತಾವು ಕೆಲಸ ಬಿಟ್ಟಿದ್ದಾಗಿ ಕೇತನ್ ಹೇಳಿದ್ದಾರೆ. ಅಂದು ಅಲ್ಲಿ ಏನು ನಡೆಯಿತು ಎಂದು ಕೇತನ್ ಹೇಳಿಲ್ಲ. ಆದರೆ ತಾನು ಸಲ್ಮಾನ್ ಮತ್ತು ಐಶ್ವರ್ಯಾ ಇಬ್ಬರ ಅಭಿಮಾನಿಯೂ ಆಗಿರುವುದರಿಂದ ಇಬ್ಬರ ನಡುವೆ ಸಿಕ್ಕಿಹಾಕಿಕೊಳ್ಳಲು ಇಷ್ಟಪಡಲಿಲ್ಲ ಎಂದು ತಿಳಿಸಿದ್ದಾರೆ.
ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ನಡುವೆ ತೀವ್ರ ಚಕಮಕಿ ನಡೆದಿತ್ತು. ಸಲ್ಮಾನ್ ಖಾನ್ ಇಂದ ಐಶ್ವರ್ಯಾ ರೈ ಬ್ರೇಕಪ್ ಮಾಡಿಕೊಂಡ ಬಳಿಕ ಸಲ್ಮಾನ್ ಖಾನ್ ರೌಡಿ ರೀತಿ ವರ್ತಿಸಿದ್ದರು. ಆ ಬಗ್ಗೆ ಕೆಲವಾರು ಹಳೆಯ ಪತ್ರಕರ್ತರು ಪುಸ್ತಗಳಲ್ಲಿ ಬರೆದಿದ್ದೂ ಸಹ ಇದೆ. ಶಾರುಖ್ ಖಾನ್ ಅಭಿನಯದ ‘ಚಲ್ತೆ ಚಲ್ತೆ’ ಸಿನಿಮಾ ಸೆಟ್‌ನಲ್ಲಿ ಸಲ್ಮಾನ್ ಕಾರಣದಿಂದಾಗಿ ಚಿತ್ರೀಕರಣವನ್ನು ನಿಲ್ಲಿಸಬೇಕಾದ ಘಟನೆಯನ್ನು ಬಾಲಿವುಡ್ ಬಗ್ಗೆ ಬರೆದ ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ. ಆ ಪುಸ್ತಕದಲ್ಲಿ, ‘ಸಲ್ಮಾನ್ ಖಾನ್ ‘ಚಲ್ತೆ ಚಲ್ತೆ’ ಚಿತ್ರೀಕರಣವನ್ನು ನಿಲ್ಲಿಸಿದರು ಮತ್ತು ಮುಂದಿನ ನಾಲ್ಕೂವರೆ ಗಂಟೆಗಳ ಕಾಲ ಸಮಾಧಾನಗೊಳ್ಳದೆ ಇದ್ದರು. ಅಜೀಜ್ ಮಿರ್ಜಾ ಸಿನಿಮಾವನ್ನು ರದ್ದುಗೊಳಿಸಬೇಕಾಯಿತು. ಇದರಿಂದ ಐಶ್ವರ್ಯಾ ರೈ ಬಚ್ಚನ್ ‘ಚಲ್ತೆ ಚಲ್ತೆ’ ಮಾತ್ರವಲ್ಲದೆ, ಶಾರುಖ್ ಖಾನ್ ಅವರ ‘ವೀರ್-ಜಾರಾ’ ಮತ್ತು ‘ಮೈ ಹೂ ನಾ’ ಚಿತ್ರಗಳಿಂದಲೂ ಹೊರಗುಳಿಯುವಂತಾಯಿತು’ ಎಂದು ಬರೆಯಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




