AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಚಿತ್ರಕ್ಕೆ ಪರೋಕ್ಷ ಟಾಂಗ್ ಕೊಟ್ಟರಾ ‘ಹನುಮಾನ್ ಅಂಶ್’ ನಿರ್ದೇಶಕ?

2000 ಕೋಟಿ ಬಜೆಟ್‌ನ ‘ರಾಮಾಯಣ’ ಸಿನಿಮಾ 1500 ಕೋಟಿ ಗಳಿಸಿರುವ ಬೆನ್ನಲ್ಲೇ ‘ಹನುಮಾನ್ ಅಂಶ್’ ನಿರ್ದೇಶಕ ವಿಶಾಲ್ ಚತುರ್ವೇದಿ ಸಿನಿಮಾ ಬಜೆಟ್ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಹೂಡಿಕೆಗೆ ತಕ್ಕ ಪ್ರತಿಫಲ ಬರದಿದ್ದರೆ ಸಿನಿಮಾ ಫ್ಲಾಪ್ ಎನಿಸಿಕೊಳ್ಳುತ್ತದೆ ಎನ್ನುವ ಮೂಲಕ ದೊಡ್ಡ ಬಜೆಟ್ ಚಿತ್ರಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

‘ರಾಮಾಯಣ’ ಚಿತ್ರಕ್ಕೆ ಪರೋಕ್ಷ ಟಾಂಗ್ ಕೊಟ್ಟರಾ ‘ಹನುಮಾನ್ ಅಂಶ್’ ನಿರ್ದೇಶಕ?
ರಾಮಾಯಣ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 21, 2026 | 7:30 AM

Share

ಮುಖ್ಯಾಂಶಗಳು

  • 2000 ಕೋಟಿ ಬಜೆಟ್‌ನ 'ರಾಮಾಯಣ' ಚಿತ್ರಕ್ಕೆ ಪರೋಕ್ಷ ಟಾಂಗ್ ಕೊಟ್ಟರಾ ವಿಶಾಲ್?
  • ಹೂಡಿಕೆಗೆ ತಕ್ಕ ಗಳಿಕೆ ಬರದಿದ್ದರೆ ಸಿನಿಮಾ ಫ್ಲಾಪ್ ಎಂದ ‘ಹನುಮಾನ್ ಅಂಶ್’ ನಿರ್ದೇಶಕ
  • ಸಣ್ಣ ಬಜೆಟ್‌ನಲ್ಲಿ 450 ಕೋಟಿ ಗಳಿಸಿದ ನಿರ್ದೇಶಕನ ಮಾತಿನಿಂದ ಬಾಲಿವುಡ್‌ನಲ್ಲಿ ಹೊಸ ಚರ್ಚೆ

ನಿತೇಶ್ ತಿವಾರಿ ನಿರ್ದೇಶನದ, ಯಶ್ ಮತ್ತು ರಣಬೀರ್ ಕಪೂರ್ ನಟನೆಯ ಬಹುನಿರೀಕ್ಷಿತ ‘ರಾಮಾಯಣ: ಭಾಗ 1’ ಸಿನಿಮಾದ ಬಜೆಟ್ ಮತ್ತು ಗಳಿಕೆಯ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಸುಮಾರು 2000 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 1500 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ. ಈ ನಡುವೆ 450 ಕೋಟಿ ಗಳಿಸಿ ದಾಖಲೆ ಬರೆದ ‘ಹನುಮಾನ್ ಅಂಶ್’ ಸಿನಿಮಾದ ನಿರ್ದೇಶಕ ವಿಶಾಲ್ ಚತುರ್ವೇದಿ ಅವರು ಸಿನಿಮಾ ಬಜೆಟ್ ಬಗ್ಗೆ ನೀಡಿರುವ ಹೇಳಿಕೆ ಈಗ ಕುತೂಹಲ ಮೂಡಿಸಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ ವಿಶಾಲ್ ಚತುರ್ವೇದಿ, ತಾವು ಇನ್ನೂ ‘ರಾಮಾಯಣ’ ಸಿನಿಮಾ ನೋಡಿಲ್ಲ ಎಂದು ಹೇಳಿದ್ದಾರೆ. ‘ಕೆಲಸದ ಒತ್ತಡದಿಂದ ನನಗೆ ಇನ್ನೂ ಸಮಯ ಸಿಕ್ಕಿಲ್ಲ. ಆದರೆ ಆ ಸಿನಿಮಾವನ್ನು ನೋಡಲು ನಾನು ಬಹಳ ಉತ್ಸುಕನಾಗಿದ್ದೇನೆ’ ಎಂದಿದ್ದಾರೆ. ಇದೇ ವೇಳೆ ಸಿನಿಮಾವೊಂದರ ಗೆಲುವಿನಲ್ಲಿ ಬಜೆಟ್ ನಿಯಂತ್ರಣ ಎಷ್ಟು ಮುಖ್ಯ ಎಂಬುದನ್ನು ವಿವರಿಸುವ ಮೂಲಕ ದೊಡ್ಡ ಬಜೆಟ್ ಸಿನಿಮಾಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಹೂಡಿಕೆ ಮತ್ತು ಲಾಭದ ಲೆಕ್ಕಾಚಾರದ ಬಗ್ಗೆ ಮಾತನಾಡಿದ ವಿಶಾಲ್, ‘ನಮ್ಮ ಚಿತ್ರರಂಗದಲ್ಲಿ ಕಾಗದದ ಮೇಲೆ ಲೆಕ್ಕಾಚಾರ ಸರಿ ಇದ್ದರೆ ಮಾತ್ರ ಸಿನಿಮಾ ಮಾಡಬೇಕು. ನೀವು ಒಂದು ಸಿನಿಮಾಗೆ 200 ಕೋಟಿ ರೂಪಾಯಿ ಹೂಡಿಕೆ ಮಾಡಿ, ಅದು 400 ಕೋಟಿ ಗಳಿಸದಿದ್ದರೆ ಅದನ್ನು ಫ್ಲಾಪ್ ಎಂದೇ ಕರೆಯಲಾಗುತ್ತದೆ. ಹೂಡಿಕೆಗೆ ತಕ್ಕ ಪ್ರತಿಫಲ ಬಂದರೆ ಮಾತ್ರ ಸಿನಿಮಾ ಗೆದ್ದಂತೆ’ ಎಂದು ನೇರವಾಗಿ ಹೇಳಿದ್ದಾರೆ.

ದೊಡ್ಡ ಬಜೆಟ್ ಸಿನಿಮಾಗಳು ಯಾಕೆ ಸೋಲುತ್ತವೆ ಎಂಬುದಕ್ಕೂ ಅವರು ಕಾರಣ ನೀಡಿದ್ದಾರೆ. ’ನಿರ್ದೇಶಕರು ಸಿನಿಮಾ ಮಾಡುವಾಗ ಒಟ್ಟು ಬಜೆಟ್ ಬಗ್ಗೆ ಬಹಳ ಎಚ್ಚರಿಕೆಯಿಂದಿರಬೇಕು. ಕೆಲವೊಮ್ಮೆ ಭಾರಿ ಬಜೆಟ್‌ನಲ್ಲಿ ನಿರ್ಮಾಣವಾದ ಅದ್ಭುತ ಸಿನಿಮಾಗಳು ಕೂಡ ನಿರೀಕ್ಷಿತ ಗಳಿಕೆ ಕಾಣದೆ ಬಾಕ್ಸ್ ಆಫೀಸ್‌ನಲ್ಲಿ ಸೋಲುತ್ತವೆ. ಹೀಗಾಗಿ ಬಜೆಟ್ ಜೊತೆಗೆ ಚಿತ್ರಕಥೆ ಕೂಡ ಅಷ್ಟೇ ಮುಖ್ಯವಾಗಿರುತ್ತದೆ’ ಎಂದು ವಿಶಾಲ್ ಚತುರ್ವೇದಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’ದ ಬಗ್ಗೆ ‘ಕೃಷ್ಣ’ನ ಅಸಮಾಧಾನ, ‘ರಾವಣ’ನ ಬಗ್ಗೆ ಕಟು ಟೀಕೆ

2000 ಕೋಟಿ ಬಜೆಟ್‌ನ ‘ರಾಮಾಯಣ’ ಸಿನಿಮಾ 1500 ಕೋಟಿ ಗಳಿಸಿರುವ ಸಂದರ್ಭದಲ್ಲೇ ವಿಶಾಲ್ ಈ ಮಾತುಗಳನ್ನಾಡಿದ್ದಾರೆ. ಹೂಡಿಕೆಗಿಂತ ಕಡಿಮೆ ಗಳಿಸಿದರೆ ಅದು ಫ್ಲಾಪ್ ಎಂಬ ಅವರ ಲೆಕ್ಕಾಚಾರವು ‘ರಾಮಾಯಣ’ ಚಿತ್ರವನ್ನೇ ಗುರಿಯಾಗಿಸಿ ಹೇಳಿದಂತಿದೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಸಣ್ಣ ಬಜೆಟ್‌ನಲ್ಲಿ ಸಿನಿಮಾ ಮಾಡಿ 450 ಕೋಟಿ ಗಳಿಸಿರುವ ವಿಶಾಲ್ ಮಾತು ಈಗ ಬಾಲಿವುಡ್‌ನಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ