AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ದ ಬಗ್ಗೆ ‘ಕೃಷ್ಣ’ನ ಅಸಮಾಧಾನ, ‘ರಾವಣ’ನ ಬಗ್ಗೆ ಕಟು ಟೀಕೆ

ಇತ್ತೀಚೆಗಷ್ಟೆ ಹಿಂದೂ ಸಂಘಟನೆಯೊಂದು ‘ರಾಮಾಯಣ’ ಸಿನಿಮಾದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ, ಸಿನಿಮಾ ಅನ್ನು ಬಾಯ್​​ಕಾಟ್ ಮಾಡುವಂತೆ ಮನವಿ ಮಾಡಿತ್ತು. ಇದೀಗ ಜನಪ್ರಿಯ ನಟ, ಬಿ ಆರ್ ಚೋಪ್ರಾ ಅವರ ‘ಮಹಾಭಾರತ’ ಸಿನಿಮಾನಲ್ಲಿ ಕೃಷ್ಣನ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಟ ಹಾಗೂ ಮಾಜಿ ಸಂಸದರೂ ಆಗಿರುವ ನಿತೀಶ್ ಭಾರಧ್ವಾಜ್ ‘ರಾಮಾಯಣ’ ಸಿನಿಮಾ ಅನ್ನು ಟೀಕೆ ಮಾಡಿದ್ದಾರೆ.

‘ರಾಮಾಯಣ’ದ ಬಗ್ಗೆ ‘ಕೃಷ್ಣ’ನ ಅಸಮಾಧಾನ, ‘ರಾವಣ’ನ ಬಗ್ಗೆ ಕಟು ಟೀಕೆ
Ramayana Krishna
ಮಂಜುನಾಥ ಸಿ.
|

Updated on:Nov 20, 2026 | 10:07 AM

Share

ಮುಖ್ಯಾಂಶಗಳು

  • ರಾಮಾಯಣ ಸಿನಿಮಾ ಬಗ್ಗೆ ನಿತೀಶ್ ಭಾರಧ್ವಜ ಟೀಕೆ
  • ಮಹಾಭಾರತದ ಕೃಷ್ಣ ಪಾತ್ರಧಾರಿ ನಿತೀಶ್ ಭಾರಧ್ವಜ
  • ಮಾಜಿ ಸಂಸದರೂ ಆಗಿರುವ ನಿತೀಶ್ ಟೀಕೆ ಮಾಡಿದ್ದಾರೆ

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಭಾಗ 1’ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತಿದೆ. ಜನ ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಸಿನಿಮಾದ ಬಗ್ಗೆ ಕೆಲವರು ಕೊಂಕುಗಳನ್ನು ಸಹ ಎತ್ತಿದ್ದಾರೆ. ಇತ್ತೀಚೆಗಷ್ಟೆ ಹಿಂದೂ ಸಂಘಟನೆಯೊಂದು ‘ರಾಮಾಯಣ’ ಸಿನಿಮಾದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ, ಸಿನಿಮಾ ಅನ್ನು ಬಾಯ್​​ಕಾಟ್ ಮಾಡುವಂತೆ ಮನವಿ ಮಾಡಿತ್ತು. ಇದೀಗ ಜನಪ್ರಿಯ ನಟ, ಬಿ ಆರ್ ಚೋಪ್ರಾ ಅವರ ‘ಮಹಾಭಾರತ’ ಸಿನಿಮಾನಲ್ಲಿ ಕೃಷ್ಣನ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಟ ಹಾಗೂ ಮಾಜಿ ಸಂಸದರೂ ಆಗಿರುವ ನಿತೀಶ್ ಭಾರಧ್ವಾಜ್ ‘ರಾಮಾಯಣ’ ಸಿನಿಮಾ ಅನ್ನು ಟೀಕೆ ಮಾಡಿದ್ದಾರೆ.

ಮಾಧ್ಯಮವೊಂದಕ್ಕೆ ಸಂದರ್ಶನ ನಿಡಿರುವ ನಿತೀಶ್ ಭಾರಧ್ವಜ್, ಚಿತ್ರದ ಹಣಕಾಸಿನ ಮೂಲದ ಬಗ್ಗೆ ಪ್ರಶ್ನೆ ಎತ್ತಿರುವ ಜೊತೆಗೆ ಸಿನಿಮಾ ಅನ್ನು ಕಮ್ಯೂನಿಸ್ಟ್ ಅಜೆಂಡಾ ಹೊಂದಿದ ಸಿನಿಮಾ ಎಂದಿದ್ದಾರೆ. ಈ ಹಿಂದೆ ಸಿನಿಮಾದ ಟ್ರೈಲರ್ ನೋಡಿ ಮೆಚ್ಚಿದ್ದ ಅವರು ‘ಈ ಚಿತ್ರ ಆಸ್ಕರ್‌ನಲ್ಲಿ ಅತ್ಯುತ್ತಮ ಅಂತರರಾಷ್ಟ್ರೀಯ ಚಿತ್ರ ಪ್ರಶಸ್ತಿ ಗೆಲ್ಲಬಹುದು’ ಎಂದು ಹೇಳಿದ್ದರು. ಆದರೆ ಸಂಪೂರ್ಣ ಚಿತ್ರ ನೋಡಿದ ಬಳಿಕ ತಮ್ಮ ಮೆಚ್ಚುಗೆಯನ್ನು ಹಿಂಪಡೆದಿದ್ದಾರೆ.

ಶ್ರೀರಾಮನನ್ನು ‘ಭಾವರಹಿತ ಮುಖದ ಸಾಮಾನ್ಯ ಮನುಷ್ಯ’ನಾಗಿ ಕುಗ್ಗಿಸಿ ತೋರಿಸಲಾಗಿದೆ ಎಂದು ಟೀಕೆ ಮಾಡಿರುವ ಅವರು, ರಾಮ ಎಂದರೆ ಮರ್ಯಾದೆ, ರಾಮ ಅಯೋಧ್ಯೆ ಬಿಡುವಾಗ ಅಳುವ ದೃಶ್ಯವೂ ಸರಿಯಲ್ಲ, ‘ರಘುಕುಲ ರೀತಿ ಸದಾ ಚಲಿ ಆಯೀ, ಪ್ರಾಣ ಜಾಯೇ ಪರ ವಚನ ನ ಜಾಯೇ’ ಎಂಬ ಇಕ್ಷ್ವಾಕು ವಂಶದ ಆದರ್ಶ ಪಾಲನೆಯೇ ಆತನಿಗೆ ಮುಖ್ಯವಾದುದು ಎಂದು ಆಕ್ಷೇಪಿಸಿದರು.

ಇದನ್ನೂ ಓದಿ:‘ರಾಮಾಯಣ’ ಸಿನಿಮಾ ಪ್ರೇಕ್ಷಕರಿಗೆ ಗುಡ್ ನ್ಯೂಸ್: ನವೆಂಬರ್ 20ರಿಂದ ಟಿಕೆಟ್ ದರ ಇಳಿಕೆ

ಯಶ್ ನಿರ್ವಹಿಸಿದ ರಾವಣ ಪಾತ್ರದ ಬಗ್ಗೆ ತೀಕ್ಷ್ಣ ಟೀಕೆ ಮಾಡಿದ ಅವರು, ರಾವಣನ ನಕಾರಾತ್ಮಕ ಗುಣಗಳನ್ನು ತೋರಿಸಿಲ್ಲ, ಆತ ‘ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ನಾಯಕನಂತೆ’ ಕಾಣುತ್ತಾನೆ. ರಾವಣ ಜ್ಞಾನಿ, ನ್ಯಾಯಪರ ರಾಜನಾಗಿದ್ದರೆ ವಿಷ್ಣುವಿನ ಅವತಾರದ ಅಗತ್ಯವೇನಿತ್ತು? ಇದು ಅವತಾರ ಪರಿಕಲ್ಪನೆಯನ್ನೇ ನಿರರ್ಥಕಗೊಳಿಸುತ್ತದೆ. ಓದದ ಯುವ ಪೀಳಿಗೆ ಎರಡು ವರ್ಷ ರಾವಣನನ್ನು “ಕೂಲ್ ಡ್ಯೂಡ್” ಎಂದು ಮೆಚ್ಚಿದರೆ, ಭಾಗ 2ರಲ್ಲಿ ರಾಮ ರಾವಣನನ್ನು ಸಂಹರಿಸುವುದನ್ನು ಹೇಗೆ ತೋರಿಸುವಿರಿ? “ಖಳನಾಯಕನನ್ನು ನಾಯಕನನ್ನಾಗಿ, ನಾಯಕನನ್ನು ಖಳನನ್ನಾಗಿ ಮಾಡುತ್ತಿದ್ದೀರಿ. ಅರಣ್ಯಕಾಂಡ ಮತ್ತು ಯುದ್ಧಕಾಂಡದ ಹಲವು ಪ್ರಸಂಗಗಳನ್ನು ಕೈಬಿಡಲಾಗಿದೆ’ ಎಂದೂ ಹೇಳಿದರು.

ಸಿನಿಮಾಕ್ಕೆ ಹಾಕಿರುವ ಬಂಡವಾಳದ ಮೂಲದ ಬಗ್ಗೆಯೂ ಪ್ರಶ್ನೆ ಮಾಡಿದ ಅವರು, ‘ಲಕ್ಸೆಂಬರ್ಗ್, ಯುಎಇ ಮತ್ತು ಸಿಂಗಾಪುರದಿಂದ ನಿರ್ಮಾಣ ಸಂಸ್ಥೆಗೆ ಹಣ ಬಂದಿದೆ ಎಂದು ಭಾರದ್ವಾಜ್ ಹೇಳಿದರು. ಇಂತಹ “ಅಜೆಂಡಾ ಜನ”ರನ್ನು “ಹೊಸ ಬ್ರಿಟಿಷರು” ಎಂದು ಕರೆದ ಅವರು, ಭಾರತೀಯ ನಾಗರಿಕತೆಯನ್ನು ಕುಗ್ಗಿಸಲು ಸಿನಿಮಾ ಬಳಕೆಯಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಸರ್ಕಾರ ಪರಿಶೀಲಿಸಬೇಕು” ಎಂದರು.

Published On - 10:06 am, Fri, 20 November 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸಿಎಂ ಸಂಧಾನದ ನಂತರವೂ 4ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಧರಣಿ!
ಸಿಎಂ ಸಂಧಾನದ ನಂತರವೂ 4ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಧರಣಿ!
ಹಿರಿಯೂರು ಉಪಚುನಾವಣೆ: ಕುಮಾರಸ್ವಾಮಿ ಬಳಿ ಅಮಿತ್​ ಶಾ ಚರ್ಚೆ
ಹಿರಿಯೂರು ಉಪಚುನಾವಣೆ: ಕುಮಾರಸ್ವಾಮಿ ಬಳಿ ಅಮಿತ್​ ಶಾ ಚರ್ಚೆ
ಅಕ್ವಾನ್ ಚಂಡಮಾರುತ: ಒಡಿಶಾ, ಆಂಧ್ರದಲ್ಲಿ 3 ಲಕ್ಷ ಜನರ ಸ್ಥಳಾಂತರ
ಅಕ್ವಾನ್ ಚಂಡಮಾರುತ: ಒಡಿಶಾ, ಆಂಧ್ರದಲ್ಲಿ 3 ಲಕ್ಷ ಜನರ ಸ್ಥಳಾಂತರ
ಇಂದು ಪ್ರಬೋಧಿನಿ ಏಕಾದಶಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಪ್ರಬೋಧಿನಿ ಏಕಾದಶಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
‘ಮಹಾರಾಣಿ ಆಗಬಾರದು’ ಮಂಜಿಗೆ ನೇರವಾಗಿ ಹೇಳಿದ ಮಂಜ: ವಿಡಿಯೋ
‘ಮಹಾರಾಣಿ ಆಗಬಾರದು’ ಮಂಜಿಗೆ ನೇರವಾಗಿ ಹೇಳಿದ ಮಂಜ: ವಿಡಿಯೋ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ