AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

1500 ಕೋಟಿ ಬಳಿಕ ಕುಸಿದ ‘ರಾಮಾಯಣ’ ಕಲೆಕ್ಷನ್, 15ನೇ ದಿನ ಗಳಿಸಿದ್ದೆಷ್ಟು?

‘ರಾಮಾಯಣ’ ಸಿನಿಮಾ, ‘ಧುರಂಧರ್ 2’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳ ದಾಖಲೆಯನ್ನು ಬಾಕ್ಸ್ ಆಫೀಸ್​​ನಲ್ಲಿ ಈಗಾಗಲೇ ಮುರಿದಿದೆ. ಆದರೆ ಸಿನಿಮಾ 1500 ಕೋಟಿ ಗಳಿಕೆಯ ಬಳಿಕ ಬಾಕ್ಸ್ ಆಫೀಸ್​​ನಲ್ಲಿ ತುಸು ನಿಧಾನವಾದಂತಿದೆ. ನಿನ್ನೆ ಅಂದರೆ 15ನೇ ದಿನ, ‘ರಾಮಾಯಣ’ ಸಿನಿಮಾದ ಗಳಿಕೆಯಲ್ಲಿ ಇಳಿಕೆ ಕಂಡು ಬಂದಿದೆ. ಸಿನಿಮಾ ತಮ್ಮ 15ನೇ ದಿನ ಬಾಕ್ಸ್ ಆಫೀಸ್​​ನಲ್ಲಿ 19.35 ಕೋಟಿ ರೂಪಾಯಿ ಮಾತ್ರವೇ ಗಳಿಕೆ ಮಾಡಿದೆ. ಇದು ತೀರ ಸಣ್ಣ ಮೊತ್ತವಲ್ಲದಿದ್ದರೂ, 2000 ಕೋಟಿ ಗುರಿ ಹೊತ್ತಿರುವ ಸಿನಿಮಾಕ್ಕೆ ಸಣ್ಣ ಮೊತ್ತವೇ ಆಗಿದೆ.

1500 ಕೋಟಿ ಬಳಿಕ ಕುಸಿದ ‘ರಾಮಾಯಣ’ ಕಲೆಕ್ಷನ್, 15ನೇ ದಿನ ಗಳಿಸಿದ್ದೆಷ್ಟು?
Ramayana
ಮಂಜುನಾಥ ಸಿ.
|

Updated on:Nov 20, 2026 | 7:18 AM

Share

ಮುಖ್ಯಾಂಶಗಳು

  • ರಾಮಾಯಣ ಸಿನಿಮಾ ಕಲೆಕ್ಷನ್ ರಿಪೋರ್ಟ್
  • 15ನೇ ದಿನಕ್ಕೆ ತುಸು ಕುಸಿದ ಗಳಿಕೆ
  • 15ನೇ ದಿನ ಸಿನಿಮಾ ಗಳಿಕೆ ಮಾಡಿದ್ದೆಷ್ಟು?

‘ರಾಮಾಯಣ’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 1500 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಈ ಸಿನಿಮಾ, ‘ಧುರಂಧರ್ 2’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳ ದಾಖಲೆಯನ್ನು ಬಾಕ್ಸ್ ಆಫೀಸ್​​ನಲ್ಲಿ ಈಗಾಗಲೇ ಮುರಿದಿದೆ. ಆದರೆ ಸಿನಿಮಾ 1500 ಕೋಟಿ ಗಳಿಕೆಯ ಬಳಿಕ ಬಾಕ್ಸ್ ಆಫೀಸ್​​ನಲ್ಲಿ ತುಸು ನಿಧಾನವಾದಂತಿದೆ. ನಿನ್ನೆ ಅಂದರೆ 15ನೇ ದಿನ, ‘ರಾಮಾಯಣ’ ಸಿನಿಮಾದ ಗಳಿಕೆಯಲ್ಲಿ ಇಳಿಕೆ ಕಂಡು ಬಂದಿದೆ. ಸಿನಿಮಾ ತಮ್ಮ 15ನೇ ದಿನ ಬಾಕ್ಸ್ ಆಫೀಸ್​​ನಲ್ಲಿ 19.35 ಕೋಟಿ ರೂಪಾಯಿ ಮಾತ್ರವೇ ಗಳಿಕೆ ಮಾಡಿದೆ. ಇದು ತೀರ ಸಣ್ಣ ಮೊತ್ತವಲ್ಲದಿದ್ದರೂ, 2000 ಕೋಟಿ ಗುರಿ ಹೊತ್ತಿರುವ ಸಿನಿಮಾಕ್ಕೆ ಸಣ್ಣ ಮೊತ್ತವೇ ಆಗಿದೆ.

‘ರಾಮಾಯಣ’ ಸಿನಿಮಾವು 15ನೇ ದಿನದಲ್ಲಿ 19.35 ಕೋಟಿ ರೂಪಾಯಿ ಹಣ ಗಳಿಸಿದ್ದು, ಆ ಮೂಲಕ ಸಿನಿಮಾದ ಒಟ್ಟು ಗಳಿಕೆ 1547 ಕೋಟಿ ರೂಪಾಯಿಗಳಾಗಿವೆ. ಭಾರತದಾದ್ಯಂತ ಸಿನಿಮಾದ 21437 ಶೋಗಳು ಪ್ರದರ್ಶನ ಆಗುತ್ತಿದ್ದು, ಅದರಲ್ಲಿ ಹಿಂದಿಯಲ್ಲಿ ಹೆಚ್ಚು ಅಂದರೆ 17 ಸಾವಿರಕ್ಕೂ ಹೆಚ್ಚು ಶೋಗಳು ಪ್ರದರ್ಶನ ಆಗುತ್ತಿವೆ. ನಿನ್ನೆ (ನವೆಂಬರ್ 19) ಹಿಂದಿ ಆವೃತ್ತಿ 14 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಕರ್ನಾಟಕದಲ್ಲಿ 1.40 ಕೋಟಿ, ತಮಿಳಿನಲ್ಲಿ 1.50 ಕೋಟಿ, ತೆಲುಗು ಆವೃತ್ತಿ 70 ಲಕ್ಷ ಮತ್ತು ವಿಶೇಷವಾಗಿ ಮಲಯಾಳಂ ಆವೃತ್ತಿ 1.75 ಕೋಟಿ ಗಳಿಕೆ ಮಾಡಿದೆ. ದಕ್ಷಿಣ ಭಾರತದಲ್ಲಿ ಮಲಯಾಳಂ ಆವೃತ್ತಿ ಹೆಚ್ಚು ಹಣ ಗಳಿಕೆ ಮಾಡಿರುವುದು ಅಪರೂಪ.

14ನೇ ದಿನದ ಗಳಿಕೆಗೆ ಹೋಲಿಕೆ ಮಾಡಿದರೆ 15ನೇ ದಿನದ ಗಳಿಕೆಯಲ್ಲಿ ಇಳಿಕೆ ಕಂಡು ಬಂದಿದೆ. ‘ರಾಮಾಯಣ’ ಸಿನಿಮಾವು 14ನೇ ದಿನದಲ್ಲಿ 23.20 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆದರೆ 15ನೇ ದಿನ ಗಳಿಕೆಯಲ್ಲಿ ಇಳಿಕೆಯಾಗಿದ್ದು 19.35 ಕೋಟಿ ಗಳಿಸಿದೆ. ಆದರೆ ಈ ಮೊತ್ತ ವಾರಾಂತ್ಯದಲ್ಲಿ ಅಂದರೆ ಇಂದಿನಿಂದ ಮುಂದಿನ ಮೂರು ನಾಲ್ಕು ದಿನಗಳಲ್ಲಿ ಏರಿಕೆ ಆಗಲಿದೆ. ವಾರಾಂತ್ಯದಲ್ಲಿ ಕುಟುಂಬ ಪ್ರೇಕ್ಷಕರು ಚಿತ್ರಮಂದಿರಕ್ಕೆ ಧಾವಿಸುವ ಸಾಧ್ಯತೆ ಇರುವ ಕಾರಣ ಸಿನಿಮಾದ ಗಳಿಕೆಯಲ್ಲಿ ಮತ್ತೆ ಹೆಚ್ಚಳ ಆಗುವ ದಟ್ಟ ಸಾಧ್ಯತೆ ಇದೆ.

ಇದನ್ನೂ ಓದಿ:ವಿಶ್ವದಾದ್ಯಂತ 1500 ಕೋಟಿ ಗಳಿಸಿದ ‘ರಾಮಾಯಣ’; 2000 ಕೋಟಿ ಗಡಿ ತಲುಪುತ್ತಾ ರಣಬೀರ್-ಯಶ್ ಸಿನಿಮಾ?

ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 1500 ಕೋಟಿಗೂ ಹೆಚ್ಚು ಗಳಿಕೆ ಮಾಡಿರುವ ‘ರಾಮಾಯಣ’ ಸಿನಿಮಾ 2000 ಕೋಟಿ ಗಳಿಕೆ ಮಾಡುವ ನಿರೀಕ್ಷೆಯಲ್ಲಿದೆ. ಆ ಮೂಲಕ ಭಾರತದ ಹಿಂದಿನ ಎಲ್ಲ ಬಾಕ್ಸ್ ಆಫೀಸ್​​ ದಾಖಲೆಗಳನ್ನು ಪುಡಿಗಟ್ಟುವ ಮಹಾತ್ವಾಕಾಂಕ್ಷೆ ಹೊಂದಿದೆ. ಆದರೆ ಎರಡನೇ ವಾರದ ಬಳಿಕ ಸಿನಿಮಾದ ಗಳಿಕೆಯಲ್ಲಿ ಆಗಿರುವ ಇಳಿಕೆ 2000 ಕೋಟಿಯ ನಿರೀಕ್ಷೆಯನ್ನು ತುಸು ಮಂಕಾಗಿಸಿದೆ. ಆದರೆ ವಾರಾಂತ್ಯದ ಕಲೆಕ್ಷನ್ ಹೆಚ್ಚಾದಲ್ಲಿ ಮತ್ತೆ 2000 ಕೋಟಿ ಗಳಿಕೆ ಮಾಡುವ ಆಸೆ ಜೀವಂತವಾಗಿರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:17 am, Fri, 20 November 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
ಬಸವ ಮಂಟಪʼ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟ ಸಮ್ಮತಿ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಶಿಕ್ಷಕರು ಬೈದಿದ್ದಕ್ಕೆ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಪರಾರಿ
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಸುಳ್ಳಿನಿಂದ ಕಲುಷಿತಗೊಂಡಿದ್ದ ಭೀಮಾನದಿ ಕ್ಲೀನ್ ಮಾಡಿದ ಪೌರ ಕಾರ್ಮಿಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಹಸಿದು ಕಂಗಾಲಾಗಿದ್ದ ಸ್ಪರ್ಧಿಗಳಿಗೆ ಕಿಚ್ಚನಿಂದ ಬಂತು ಬಿರಿಯಾನಿ: ವಿಡಿಯೋ
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಸಿಸಿಬಿ ಇನ್ಮುಂದೆ 'ಆ್ಯಂಟಿ ರೌಡಿ ಸ್ಕ್ವಾಡ್'
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
ಮೂರನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಇಬ್ಬರು ಅಸ್ವಸ್ಥ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
'ನಮ್ಮ ಹಳೇ ಬಾಸ್​​ ಕುಮಾರಸ್ವಾಮಿ ಭಸ್ಮಾಸುರನಂತೆ': ಹೆಚ್​​.ಸಿ. ಬಾಲಕೃಷ್ಣ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
‘ಕಲಾವಿದರ ಸಂಘದಲ್ಲಿ ಯಾರೂ ಇರಲ್ಲ’: ಆರೋಪಕ್ಕೆ ರಾಕ್​ಲೈನ್ ವೆಂಕಟೇಶ್ ಉತ್ತರ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ
ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ನಿವಾಸದ ಮೇಲೆ ಎಸ್ಐಟಿ ದಾಳಿ