AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶಂಕರಾಭರಣ’ ವಿಮರ್ಶೆ: ಹೆದರಿಸಿದರೂ ಆಪ್ತವಾಗುವ ಪ್ರೇತದ ಬಸ್ ಪ್ರಯಾಣ

‘ಶಂಕರಾಭರಣ’ ವಿಮರ್ಶೆ: ಹೆದರಿಸಿದರೂ ಆಪ್ತವಾಗುವ ಪ್ರೇತದ ಬಸ್ ಪ್ರಯಾಣ
Shankarabharana Movie Poster

ಶಂಕರಾಭರಣ

UA
  • Time - 152 Minutes
  • Released - November 20, 2026
  • Language - Kannada
  • Genre - Adventure, Comedy, Horror
Cast - ಶೈನ್ ಶೆಟ್ಟಿ, ತನ್ವಿ ರಾಮ್, ಸಂಪತ್ ರಾಜ್, ದೀಪಕ್ ರೈ ಪಾಣಾಜೆ, ಅನಿಲ್ ಕುಮಾರ್ ಎ., ತನ್ವಿ ರಾವ್ ಮುಂತಾದವರು.
Director - ಸುಮಂತ್ ಭಟ್
3
Critic's Rating
ಮದನ್​ ಕುಮಾರ್​
|

Updated on:Nov 20, 2026 | 6:57 PM

Share

ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ಅವರು ‘ಶಂಕರಾಭರಣ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಸುಮಂತ್ ಭಟ್ ಅವರು ನಿರ್ದೇಶನ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಬಸ್ ಕೂಡ ಒಂದು ಪ್ರಮುಖ ಪಾತ್ರವಾಗಿ ಕಾಣಿಸಿಕೊಂಡಿದೆ. ದಿವಾಕರ್ ಶೆಟ್ಟಿ ಮತ್ತು ಶೈನ್ ಶೆಟ್ಟಿ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹಾರರ್ ಮತ್ತು ಸಸ್ಪೆನ್ಸ್ ಶೈಲಿಯಲ್ಲಿ ಮೂಡಿಬಂದಿರುವ ‘ಶಂಕರಾಭರಣ’ ಚಿತ್ರದ ವಿಮರ್ಶೆ ಇಲ್ಲಿದೆ..

‘ಶಂಕರಾಭರಣ’ ಸಿನಿಮಾದ ಟ್ರೇಲರ್ ಬಿಡುಗಡೆ ಆದಾಗ ಕಥೆಯ ಬಗ್ಗೆ ಭಾರಿ ಕೌತುಕ ನಿರ್ಮಾಣ ಆಗಿತ್ತು. ಇದು ಹಾರರ್ ಸಿನಿಮಾ ಎಂಬ ಅನಿಸಿಕೆ ಬಲವಾಗಿತ್ತು. ಜೊತೆಗೆ ಚಿತ್ರದಲ್ಲಿ ಸಸ್ಪೆನ್ಸ್ ಕೂಡ ಇರಲಿದೆ ಎಂಬುದು ಖಚಿತವಾಗಿತ್ತು. ಅದು ನಿಜವಾಗಿದೆ. ಹಾರರ್ ಮತ್ತು ಸಸ್ಪೆನ್ಸ್ ಅಂಶಗಳ ಮಿಶ್ರಣವಾಗಿ ಈ ಸಿನಿಮಾವನ್ನು ಮಾಡಲಾಗಿದೆ. ಜೊತೆಗೆ ಕಾಮಿಡಿ ದೃಶ್ಯಗಳಿಗೂ ಪ್ರಾಮುಖ್ಯತೆ ನೀಡಲಾಗಿದೆ.

ಕಥೆಯ ಬಗ್ಗೆ ಹೇಳೋದಾದರೆ, ಕಥಾನಾಯಕ ಶಂಕರ (ಶೈನ್ ಶೆಟ್ಟಿ) ಚಿಕ್ಕ ವಯಸ್ಸಿನಿಂದಲೂ ಡ್ರೈವರ್ ಆಗಬೇಕು ಎಂದು ಕನಸು ಕಂಡವನು. ಹೈಸ್ಕೂಲ್ ಓದುತ್ತಿರುವಾಗಲೇ ಬಸ್ ಓಡಿಸುವ ಸಾಹಸಕ್ಕೆ ಕೈ ಹಾಕಿದವನು. ‘ನಾನು ಡ್ರೈವರ್ ಆಗಿ ಹುಟ್ಟಿಲ್ಲ. ಡ್ರೈವರ್ ಆಗಲು ಹುಟ್ಟಿದವನು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ದೊಡ್ಡವನಾದ ಬಳಿಕ, ಅಂದುಕೊಂಡಂತೆಯೇ ಆತ ಡ್ರೈವರ್ ಆಗುತ್ತಾನೆ. ಆದರೆ ಮುಂದಿನ ಪಯಣ ಆತ ಅಂದುಕೊಂಡಷ್ಟು ಸುಲಭವಾಗಿ ಇರುವುದಿಲ್ಲ.

ಬಸ್ ಮಾಲಿಕನ ಜೊತೆ ಶಂಕರನಿಗೆ ಜಗಳ ಆಗುತ್ತದೆ. ನಂತರ ತಾನೇ ಸ್ವಂತ ಬಸ್ ಖರೀದಿಸುವ ನಿರ್ಧಾರಕ್ಕೆ ಬರುತ್ತಾನೆ. ಹತ್ತಾರು ವರ್ಷಗಳಿಂದ ಬಸ್ ಹೋಗಿರದ ತೌಡುಗೋಳಿ ಎಂಬ ಊರಿಗೆ ತನ್ನ ಬಸ್ ಸೇವೆ ಆರಂಭಿಸುತ್ತಾನೆ. ಆದರೆ ಆ ಊರಿನಲ್ಲಿ ದೆವ್ವದ ಕಾಟ ಶುರುವಾಗುತ್ತದೆ. ಜೊತೆಗೆ ಪಿ.ಟಿ. ಸುಧ (ಸಂಪತ್ ರಾಜ್) ಎಂಬ ಭಯಾನಕ ವಿಲನ್ ಕೂಡ ಕಾಟ ಕೊಡುತ್ತಾನೆ. ಎಲ್ಲರನ್ನೂ ಎದುರಿಸಿ ಶಂಕರ ಗೆಲ್ಲುತ್ತಾನಾ? ದೆವ್ವದ ಕಾಟದಿಂದ ಬಚಾವ್ ಆಗುತ್ತಾನಾ? ನಿಜಕ್ಕೂ ದೆವ್ವ ಇದೆಯಾ ಅಥವಾ ಇದೆಲ್ಲ ಮನುಷ್ಯರ ಕುತಂತ್ರವಾ ಎಂಬಿತ್ಯಾದಿ ಪ್ರಶ್ನೆಗಳನ್ನು ಮೂಡಿಸುತ್ತಾ ಕಥೆ ಸಾಗುತ್ತದೆ.

‘ಶಂಕರಾಭರಣ’ ಸಿನಿಮಾದ ಮೊದಲಾರ್ಧದಲ್ಲಿ ಪ್ರೇಕ್ಷಕರಿಗೆ ಸಾಕಷ್ಟು ಪ್ರಶ್ನೆಗಳು ಮೂಡುತ್ತವೆ. ಕಥೆಯೊಳಗೆ ಇರುವ ಹಲವು ಎಳೆಗಳು ಯಾವಾಗ ತೆರೆದುಕೊಳ್ಳುತ್ತವೆ ಎಂದು ಕಾತುರದಿಂದ ಕಾಯುವಂತೆ ಆಗುತ್ತದೆ. ಮಧ್ಯಂತರ ಸಮೀಪಿಸುವಾಗ ಪ್ರೇಕ್ಷಕರು ನಿರೀಕ್ಷಿಸಿದಂತೆಯೇ ಟ್ವಿಸ್ಟ್ ಎದುರಾಗುತ್ತದೆ. ದ್ವಿತೀಯಾರ್ಧದಲ್ಲಿ ಹೆಚ್ಚಿನ ಥ್ರಿಲ್ ಇರಬಹುದು ಎಂಬ ನಿರೀಕ್ಷೆ ಮೂಡುತ್ತದೆ.

ದ್ವಿತೀಯಾರ್ಧದಲ್ಲಿ ಹೊಸ ವೇಗ ಪಡೆದುಕೊಂಡು ಮುನ್ನುಗ್ಗಬೇಕಾಗಿದ್ದ ‘ಶಂಕರಾಭರಣ’ ಬಸ್ ಕಹಾನಿ ಯಾಕೋ ಕೊಂಚ ನಿಧಾನಗತಿಯಲ್ಲಿ ಸಾಗುತ್ತದೆ. ಅಸಲಿ ತಿರುಳನ್ನು ಹಿಡಿದಿಟ್ಟುಕೊಂಡಿರುವ ಫ್ಲ್ಯಾಶ್ ಬ್ಯಾಕ್ ತೆಗೆದುಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ. ಸಿನಿಮಾದಲ್ಲಿ ದೆವ್ವ-ಭೂತ ಇದ್ದರೂ ಕೂಡ ಅವುಗಳ ತೀವ್ರತೆ ಕಡಿಮೆ ಇರುವುದರಿಂದ ಹಾರರ್ ಅನುಭವ ಅಷ್ಟೇನೂ ಆಗುವುದಿಲ್ಲ. ಆದರೆ ಪ್ರೇತವಾಗಿ ಕಾಣಿಸಿಕೊಂಡ ತನ್ವಿ ರಾವ್ ಪಾತ್ರ ಡಿಫರೆಂಟ್ ಆಗಿ ಮೂಡಿಬಂದಿದೆ. ಕೆಟ್ಟವರನ್ನು ಹೆದರಿಸುತ್ತ, ಒಳ್ಳೆಯವರ ಜೊತೆ ಆಪ್ತ ಸ್ನೇಹಿತೆಯ ರೀತಿ ವರ್ತಿಸುವ ದೆವ್ವ ಈ ಚಿತ್ರದಲ್ಲಿದೆ.

ಇದನ್ನೂ ಓದಿ: ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು

ಈ ಸಿನಿಮಾದಲ್ಲಿ ಕಾಮಿಡಿಗೆ ಕೊರತೆ ಆಗಿಲ್ಲ. ಆರಂಭದಿಂದಲೂ ತಿಳಿಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗಿಸುವ ಪ್ರಯತ್ನ ಮಾಡಲಾಗಿದೆ. ಗಮನ ಸೆಳೆಯುವಂತಹ ಸಂಭಾಷಣೆಗಳಿವೆ. ಅನಿಲ್ ಕುಮಾರ್ ಎ., ಸಂಪತ್ ರಾಜ್, ದೀಪಕ್ ರೈ ಪಾಣಾಜೆ ಮುಂತಾದವರು ಉತ್ತಮ ಅಭಿನಯ ನೀಡಿದ್ದಾರೆ. ಶೈನ್ ಶೆಟ್ಟಿ ಅವರು ತಮಗೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಿಸಿಕೊಂಡಿದ್ದಾರೆ. ನಾಯಕಿ ತನ್ವಿ ರಾಮ್ ಅವರಿಗೆ ಸ್ಕ್ರೀನ್ ಸ್ಪೇಸ್ ಕಡಿಮೆ ಇದೆ. ಇರುವ ದೃಶ್ಯಗಳಲ್ಲೇ ಅವರು ಗಮನ ಸೆಳೆಯುತ್ತಾರೆ. ತನ್ವಿ ರಾವ್ ಅವರು ಕಥೆಗೆ ಟ್ವಿಸ್ಟ್ ನೀಡುವಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಥೆಯನ್ನು ಇನ್ನಷ್ಟು ಚೆನ್ನಾಗಿ ವಿವರಿಸುವ ಅವಕಾಶ ನಿರ್ದೇಶಕರಿಗೆ ಇತ್ತು. ದೆವ್ವದ ಕಾಟದ ಹಿಂದಿರುವ ಕ್ರೈಂ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದರೆ ಹಾರರ್ ಪ್ರಿಯರ ಮೆಚ್ಚುಗೆ ಗಳಿಸಬಹುದಿತ್ತು. ಲಾಜಿಕ್ ಬಗ್ಗೆ ಒಂದಷ್ಟು ಗಮನ ಹರಿಸಿದ್ದರೆ ಕಥೆಗೆ ಹೆಚ್ಚಿನ ತೂಕ ಬರುತ್ತಿತ್ತು. ಕಥೆ-ಚಿತ್ರಕಥೆಯ ಬರವಣಿಗೆಯ ಸಮಯದಲ್ಲಿ ಇಂಥ ಕೆಲವು ಅಂಶಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿತ್ತು ಎನಿಸುತ್ತದೆ. ಹಾಗಿದ್ದರೂ ಕೂಡ ಒಮ್ಮೆ ನೋಡಿಸಿಕೊಂಡು ಹೋಗುವ ಗುಣ ಈ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:56 pm, Fri, 20 November 26

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ
ಬಡವರಿಗೆ ವಿತರಿಸಬೇಕಿದ್ದ ಸರ್ಕಾರಿ ಆಸ್ಪತ್ರೆ ಔಷಧಿಗಳು ನದಿಯಲ್ಲಿ ಪತ್ತೆ!
ಬಡವರಿಗೆ ವಿತರಿಸಬೇಕಿದ್ದ ಸರ್ಕಾರಿ ಆಸ್ಪತ್ರೆ ಔಷಧಿಗಳು ನದಿಯಲ್ಲಿ ಪತ್ತೆ!
ಗೋಣಿಚೀಲ ಹೊದ್ದು ತಹಶೀಲ್ದಾರ್ ಕಚೇರಿ ಗೇಟ್ ಬಳಿಯೇ ಮಲಗಿದ ರೈತ!
ಗೋಣಿಚೀಲ ಹೊದ್ದು ತಹಶೀಲ್ದಾರ್ ಕಚೇರಿ ಗೇಟ್ ಬಳಿಯೇ ಮಲಗಿದ ರೈತ!
ರಂಭಾಪುರಿ ಪೀಠದ  ಬಗ್ಗೆಯೂ ‘ಬಸವ ಮಂಟಪ’ ಪುಸ್ತಕದಲ್ಲಿ ವಿವಾದಾತ್ಮಕ ಉಲ್ಲೇಖ!
ರಂಭಾಪುರಿ ಪೀಠದ  ಬಗ್ಗೆಯೂ ‘ಬಸವ ಮಂಟಪ’ ಪುಸ್ತಕದಲ್ಲಿ ವಿವಾದಾತ್ಮಕ ಉಲ್ಲೇಖ!