AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೂ ದಾಖಲೆಗಾಗಿ ಪರದಾಟ: ಕೊರೆಯುವ ಚಳಿಯಲ್ಲಿ ಗೋಣಿಚೀಲ ಹೊದ್ದು ತಹಶೀಲ್ದಾರ್ ಕಚೇರಿ ಗೇಟ್ ಬಳಿಯೇ ಮಲಗಿದ ರೈತ!

ಭೂ ದಾಖಲೆಗಾಗಿ ಪರದಾಟ: ಕೊರೆಯುವ ಚಳಿಯಲ್ಲಿ ಗೋಣಿಚೀಲ ಹೊದ್ದು ತಹಶೀಲ್ದಾರ್ ಕಚೇರಿ ಗೇಟ್ ಬಳಿಯೇ ಮಲಗಿದ ರೈತ!

ಜಗದೀಶ ಬಿ.
| Edited By: |

Updated on: Nov 20, 2026 | 12:42 PM

Share

ತುಮಕೂರಿನ ಮಧುಗಿರಿ ತಹಶೀಲ್ದಾರ್ ಕಚೇರಿಯಲ್ಲಿ ರೈತ ನಾಗರಾಜ್ ಭೂ ದಾಖಲೆಗಳಿಗಾಗಿ ಕಾಯುತ್ತಾ ಸಂಜೆ ಮನೆಗೆ ತೆರಳಲಾಗದೆ ಕಚೇರಿ ಗೇಟ್‌ನಲ್ಲೇ ರಾತ್ರಿ ಕಳೆದರು. ತಹಶೀಲ್ದಾರ್ ನಂದಿನಿ ವಿಷಯ ತಿಳಿದು ತಡರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಊಟ, ಆಶ್ರಯ ಒದಗಿಸಿ, ದಾಖಲೆಗಳನ್ನು ನೀಡುವ ಭರವಸೆ ನೀಡಿದರು.

ತುಮಕೂರು, ನವೆಂಬರ್ 20: ಜಿಲ್ಲೆಯ ಮಧುಗಿರಿ ತಹಶೀಲ್ದಾರ್ ಕಚೇರಿಯಲ್ಲಿ ಬಗರ್ ಹುಕುಂಗೆ ಸಂಬಂಧಿಸಿದ ಭೂ ದಾಖಲೆಗಳಿಗಾಗಿ ರೈತ ನಾಗರಾಜ್ ಅವರು ಪರದಾಡಿದ್ದಾರೆ. ಬೆಳಗ್ಗೆ ಕಚೇರಿಗೆ ಬಂದ ನಾಗರಾಜ್‌ಗೆ ಸಂಜೆ ವೇಳೆಗೆ ದಾಖಲೆಗಳನ್ನು ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಸಂಜೆ ಎಂಟು ಗಂಟೆಯಾದರೂ ದಾಖಲೆಗಳು ದೊರೆಯಲಿಲ್ಲ.

ಸೂರ್ಯಾಸ್ತದ ನಂತರ ಊರಿಗೆ ತೆರಳಲು ಬಸ್ಸುಗಳು ಸಿಗದ ಕಾರಣ, ಮಧುಗಿರಿ ತಹಶೀಲ್ದಾರ್ ಕಚೇರಿ ಗೇಟ್‌ನ ಹೊರಗಡೆಯೇ ರಾತ್ರಿ ಕಳೆಯುವ ಅನಿವಾರ್ಯತೆ ರೈತ ನಾಗರಾಜ್ ಅವರಿಗೆ ಎದುರಾಯಿತು. ಚಳಿಯನ್ನೂ ಲೆಕ್ಕಿಸದೆ ಗೋಣಿಚೀಲ ಹೊದ್ದು ಅಲ್ಲೇ ಮಲಗಿದ್ದರು. ರೈತ ಮಲಗಿರುವ ವಿಷಯ ತಿಳಿದ ತಹಶೀಲ್ದಾರ್ ನಂದಿನಿ ಅವರು ತಡರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರೈತ ನಾಗರಾಜ್‌ಗೆ ಊಟ ತರಿಸಿಕೊಟ್ಟ ಅವರು, ಕಚೇರಿಯೊಳಗೇ ಮಲಗಲು ವ್ಯವಸ್ಥೆ ಕಲ್ಪಿಸಿದರು ಮತ್ತು ದಾಖಲೆಗಳನ್ನು ನೀಡುವ ಭರವಸೆ ನೀಡಿದರು. ರಾತ್ರಿ ಕಚೇರಿಯಲ್ಲಿ ಮಲಗಿದ್ದ ರೈತ ಮರುದಿನ ಬೆಳಗ್ಗೆ ಮನೆಗೆ ತೆರಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More