ಜಗದೀಶ್ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.
ಪಾವಗಡದಲ್ಲಿ ವರುಣಾರ್ಭಟ: ಟಿ.ಎನ್. ಪೇಟೆ ಗ್ರಾಮದಲ್ಲಿ ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಗೆ ಟಿ.ಎನ್.ಪೇಟೆ ಗ್ರಾಮದಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಧರೆಗುರುಳಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ ಎನ್ನುವುದು ಸಮಾಧಾನಕರ ಸಂಗತಿ.
- Jagadisha B
- Updated on: Oct 6, 2026
- 1:20 pm
ಬಿ.ವೈ.ವಿಜಯೇಂದ್ರ ನೇತೃತ್ವದ ಸಭೆಯಲ್ಲೇ ಇಬ್ಬರು ನಾಯಕರ ಬೆಂಬಲಗರಿಂದ ಗಲಾಟೆ
ಸೇವಾ ಸಂಕಲ್ಪ ಅಭಿಯಾನದಡಿ ಬೂತ್ ವಿಜಯ ಸಂಕಲ್ಪ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ದಿಲೀಪ್ ಕುಮಾರ್ ಹಾಗೂ ಟಿಕೆಟ್ ಆಕಾಂಕ್ಷಿಯಾಗಿದ್ದ ಗ್ಯಾಸ್ ಬಾಬು ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲೇ ಈ ಗಲಾಟೆಯಾಗಿದೆ.
- Jagadisha B
- Updated on: Oct 4, 2026
- 4:35 pm
ಸೇವಾ ಸಂಕಲ್ಪ ಕಾರ್ಯಕ್ರಮದಲ್ಲಿ ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಾಗಲವಾಡಿ ಜುಂಜಪ್ಪನ ಹಟ್ಟಿಯಲ್ಲಿ ನಡೆದ ಸೇವಾ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ರಾಜಕೀಯ ಜೀವನದ ಸ್ಮರಣಾರ್ಥ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿಜಯೇಂದ್ರ ಅವರು ಜುಂಜಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದ ಭಕ್ತಿಯ ವಾತಾವರಣದಲ್ಲಿ ಪಾಲ್ಗೊಂಡರು.
- Jagadisha B
- Updated on: Oct 4, 2026
- 12:35 pm
ತುಮಕೂರು ಶಿರಾದಲ್ಲಿ ತೀವ್ರ ಕುಡಿಯುವ ನೀರಿನ ಸಂಕಷ್ಟ: ದೊಡ್ಡಕೆರೆ ಬರಿದಾಗುವ ಭೀತಿ
ತುಮಕೂರು ಜಿಲ್ಲೆಯ ಶಿರಾ ನಗರವು ತೀವ್ರ ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿದೆ. ನಗರದ ಜೀವನಾಡಿಯಾದ ದೊಡ್ಡಕೆರೆಯಲ್ಲಿ 186 ಎಂಸಿಎಫ್ಟಿ ಸಾಮರ್ಥ್ಯವಿದ್ದರೂ, ಕೇವಲ 12 ಎಂಸಿಎಫ್ಟಿ ನೀರು ಮಾತ್ರ ಬಾಕಿಯಿದ್ದು, ಇದು ಕೇವಲ ಒಂದು ತಿಂಗಳಿಗಷ್ಟೇ ಸಾಕಾಗಲಿದೆ. ಹೇಮಾವತಿ ನಾಲೆಯಿಂದ ನೀರು ನಿಂತಿದ್ದು, ರೈತರು ಮತ್ತು ನಾಗರಿಕರಲ್ಲಿ ಆತಂಕ ಹೆಚ್ಚಾಗಿದೆ.
- Jagadisha B
- Updated on: Oct 2, 2026
- 3:00 pm
ಸಿದ್ಧಗಂಗಾ ಮಠದ ಜಮೀನಲ್ಲೂ ಅಕ್ರಮ ಆರೋಪ: ಸಿಎಂ ಭೇಟಿಯಾಗಲು ಹೋಗಿದ್ದರೇ ಸ್ವಾಮೀಜಿ? ಅಸಲಿ ಮಾಹಿತಿ ಬಿಚ್ಚಿಟ್ಟ ಸಿದ್ದಲಿಂಗ ಶ್ರೀ
ಸಿದ್ಧಗಂಗಾ ಮಠದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಿದ್ದಲಿಂಗ ಶ್ರೀ ಸ್ಪಷ್ಟನೆ ನೀಡಿದ್ದಾರೆ. ನೈಸ್ ಯೋಜನೆಗೆ ನೀಡಿದ್ದ 7 ಎಕರೆ 39 ಗುಂಟೆ ಜಮೀನಿನ ಪೈಕಿ ಬಳಕೆಯಾಗದ ಭೂಮಿಯನ್ನು ವಾಪಸ್ ಕೇಳಿದ್ದು ನಿಜ ಎಂದು ಅವರು ತಿಳಿಸಿದ್ದಾರೆ. ಸಿಎಂ ಭೇಟಿಯ ಬಗ್ಗೆ ಕೇಳಿಬಂದ ಆರೋಪಗಳ ಸಂಬಂಧ ಅಸಲಿ ಮಾಹಿತಿ ಬಹಿರಂಗಪಡಿಸಿದ್ದಾರೆ. ವಿವರಗಳಿಗೆ ಮುಂದೆ ಓದಿ.
- Jagadisha B
- Updated on: Oct 1, 2026
- 2:14 pm
ತಮ್ಮ ವಿರುದ್ಧ ಸ್ಪರ್ಧೆಗೆ ಡಿಕೆಶಿಗೆ ವಿಜಯೇಂದ್ರ ಆಹ್ವಾನ: ಹರಿಪ್ರಸಾದ್ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಲಿ ಎಂದು ವ್ಯಂಗ್ಯ
ಕಾಂಗ್ರೆಸ್ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕೆಪಿಸಿಸಿ ಆಯೋಜಿಸಿರುವ ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಇಂದು (ಸೆ.30) ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಚಾಲನೆ ನೀಡಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಪಾದಯಾತ್ರೆ ಶುರುವಾಗಿದೆ. ಇನ್ನು ತಮ್ಮ ಕ್ಷೇತ್ರದಿಂದ ಪಾದಯಾತ್ರೆ ಶುರು ಮಾಡಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ.
- Jagadisha B
- Updated on: Sep 30, 2026
- 8:10 pm
ಕೆಪಿಎಸ್‌ಸಿ ಹಗರಣದ ಕಿಂಗ್ಪಿನ್ ಬಸವರಾಜ್ ಕನ್ನಾಳೆಗೆ ಮತ್ತೊಂದು ಆಘಾತ: ತುಮಕೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯತ್ವಕ್ಕೂ ಕಂಟಕ
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದ ಮುಖ್ಯ ಆರೋಪಿ ಬಸವರಾಜ್ ಕನ್ನಾಳೆಗೆ ಶೋಕಾಸ್ ನೋಟಿಸ್‌ಗೆ ಉತ್ತರಿಸದ ಹಿನ್ನೆಲೆಯಲ್ಲಿ, ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸ್ಥಾನ ರದ್ದಾಗುವ ಸಾಧ್ಯತೆ ನಿಶ್ಚಿತವಾಗಿದೆ. ಎರಡನೇ ನೋಟಿಸ್ ನೀಡಿ ಸೆಪ್ಟೆಂಬರ್ 28ಕ್ಕೆ 7 ದಿನ ಮುಗಿದರೂ ಕನ್ನಾಳೆಯಿಂದ ಉತ್ತರ ಬಾರದ ಕಾರಣ ವಿಚಾರವನ್ನು ವಿವಿಯ ಕುಲಪತಿಗಳು ರಾಜ್ಯಪಾಲರಿಗೆ ತಲುಪಿಸಿದ್ದಾರೆ ಎನ್ನಲಾಗಿದೆ.
- Jagadisha B
- Updated on: Sep 30, 2026
- 6:58 pm
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಸುರಿದ ಭಾರೀ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಕೆರೆಯಂತಾಗಿ ಜಲಾವೃತಗೊಂಡಿದ್ದು, ಶಾಲಾ ಆವರಣಗಳಲ್ಲೂ ನೀರು ನಿಂತಿದೆ. ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಆಸ್ತಿಪಾಸ್ತಿಗಳಿಗೂ ಹಾನಿಯಾಗಿದೆ. ಮಳೆರಾಯನ ಅಬ್ಬರಕ್ಕೆ ನಗರದಾದ್ಯಂತ ಹಲವೆಡೆ ನೀರು ತುಂಬಿಕೊಂಡಿದೆ. ಮಳೆ ನೀರು ಬಸ್ ನಿಲ್ದಾಣದೊಳಗೆ ನುಗ್ಗಿದ್ದರಿಂದ ಬಸ್ಗಳ ಸಂಚಾರ ಮತ್ತು ಪ್ರಯಾಣಿಕರ ಓಡಾಟಕ್ಕೆ ಅಡಚಣೆಯಾಗಿದೆ.
- Jagadisha B
- Updated on: Sep 30, 2026
- 1:28 pm
ತುಮಕೂರು: 26ರ ಯುವಕನ ಜತೆ 36ರ ಮಹಿಳೆಯ ಲವ್, ಲಿವ್ ಇನ್! ಮಾಜಿ ಪತಿಯಿಂದ ಮಹಿಳೆಯ ಪ್ರಿಯಕರನ ಕೊಲೆ
ತುಮಕೂರು ನಗರದ ಜನತಾ ಕಾಲೋನಿಯಲ್ಲಿ ಮಹಿಳೆಯೊಂದಿಗೆ ವಾಸವಿದ್ದ 26 ವರ್ಷದ ದಸ್ತಗೀರ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಆರೋಪದಲ್ಲಿ ಮಹಿಳೆಯ ಮಾಜಿ ಪತಿ ಗೌಸ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಏತನ್ಮಧ್ಯೆ, ಗಾಯಗೊಂಡಿದ್ದ ದಸ್ತಗೀರ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.
- Jagadisha B
- Updated on: Sep 23, 2026
- 11:41 am
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಾದಿಗ ಸಮುದಾಯದ ಯುವಕನ ಕೊಲೆ: ಕಾರಣ ಇಲ್ಲಿದೆ
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ 17 ವರ್ಷದ ಯುವಕನ ಕೊಲೆ ನಡೆದಿದೆ. ಜಾತಿ ನಿಂದನೆ ಮಾಡಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮೃತ ಯುವಕನ ತಾಯಿ ನೀಡಿದ ದೂರಿನ ಅನ್ವಯ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Jagadisha B
- Updated on: Sep 21, 2026
- 3:51 pm
ತೋಟದಲ್ಲಿ ಗಾಂಜಾ ಗಿಡ ಬೆಳೆದು ಸಿಕ್ಕಿಬಿದ್ದ ಪೊಲೀಸಪ್ಪನ ಪುತ್ರ: ಅತ್ತ ತಂದೆಯಿಂದ ಜಾಗೃತಿ, ಇತ್ತ ಮಗನಿಂದ ಕುಕೃತ್ಯ!
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಗುಡ್ಡದಹಳ್ಳಿ ಹಟ್ಟಿಯಲ್ಲಿ ತೋಟದಲ್ಲಿ ಗಾಂಜಾ ಗಿಡ ಬೆಳೆದಿದ್ದ ಪೊಲೀಸ್ ಸಿಬ್ಬಂದಿಯ ಪುತ್ರನನ್ನು ಚೇಳೂರು ಪೊಲೀಸರು ಬಂಧಿಸಿದ್ದಾರೆ. 950 ಗ್ರಾಂಗಳಷ್ಟು ತೂಕವಿದ್ದ ಗಿಡವನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ವೇಳೆ ಆರೋಪಿ ದೇವರ ಪೂಜೆಗೆಂದು ತಾನು ಗಾಂಜಾ ಗಿಡ ಬೆಳೆಸಿದ್ದೆ ಎಂದು ಪೊಲೀಸರ ಬಳಿ ಹೇಳಿದ್ದಾನೆ ಎನ್ನಲಾಗಿದೆ.
- Jagadisha B
- Updated on: Sep 21, 2026
- 11:39 am
ರಾಜಣ್ಣ ನಿವಾಸದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭೋಜನಕೂಟ: ಮತ್ತೆ ಅಹಿಂದ ಸಂಘಟನೆಯ ಸುಳಿವು!
ತುಮಕೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾಜಿ ಸಚಿವ ರಾಜಣ್ಣ ನಿವಾಸದಲ್ಲಿ ಭೋಜನ ಕೂಟದಲ್ಲಿ ಪಾಲ್ಗೊಂಡಿರುವುದು ಈಗ ರಾಜಕೀಯ ವಲಯದಲ್ಲಿ ಗುಸುಗುಸು ಹರಡಲು ಕಾರಣವಾಗಿದೆ. ಈ ಸಂದರ್ಭದಲ್ಲಿ ಅಹಿಂದ ಸಂಘಟನೆ, ರಾಜಣ್ಣನವರ ಸಚಿವ ಸ್ಥಾನ ಹಾಗೂ ಅಪೆಕ್ಸ್ ಅಧ್ಯಕ್ಷ ಸ್ಥಾನ ಕುರಿತು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗಹನ ಚರ್ಚೆ ನಡೆದಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
- Jagadisha B
- Updated on: Sep 19, 2026
- 2:28 pm