ಶೈನ್ ಶೆಟ್ಟಿ ಅಭಿನಯದ ‘ಶಂಕರಾಭರಣ’ ಸಿನಿಮಾ ನೋಡಿ ಮೆಚ್ಚಿದ ಪ್ರೇಕ್ಷಕರು
ನವೆಂಬರ್ 20ರಂದು ಬಿಡುಗಡೆ ಆಗುತ್ತಿರುವ ‘ಶಂಕರಾಭರಣ’ ಚಿತ್ರದ ಪ್ರೀಮಿಯರ್ ಶೋ ಕೆಲವು ಕಡೆ ನಡೆದಿದೆ. ಈ ಸಿನಿಮಾ ನೋಡಿದ ಜನರು ಅನೇಕ ಅಂಶಗಳನ್ನು ಇಷ್ಟಪಟ್ಟಿದ್ದಾರೆ. ಮೈಸೂರಿನಲ್ಲಿ ನಡೆದ ಪ್ರೀಮಿಯರ್ ಶೋ ನೋಡಿದ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬುದು ಈ ವಿಡಿಯೋದಲ್ಲಿದೆ.
ಟ್ರೇಲರ್ ಮೂಲಕ ಗಮನ ಸೆಳೆದ ‘ಶಂಕರಾಭರಣ’ ಸಿನಿಮಾಗೆ ಪ್ರೇಕ್ಷಕರ ಮೆಚ್ಚುಗೆ ಸಿಕ್ಕಿದೆ. ನವೆಂಬರ್ 20ರಂದು ಬಿಡುಗಡೆ ಆಗುತ್ತಿರುವ ಈ ಚಿತ್ರದ ಪ್ರೀಮಿಯರ್ ಶೋ ಕೆಲವು ಕಡೆ ನಡೆದಿದೆ. ಸಿನಿಮಾ ನೋಡಿದ ಜನರು ಅನೇಕ ಅಂಶಗಳನ್ನು ಇಷ್ಟಪಟ್ಟಿದ್ದಾರೆ. ಈ ಸಿನಿಮಾದಲ್ಲಿ ಹಾರರ್ ಅಂಶಗಳ ಜೊತೆಗೆ ಕಾಮಿಡಿ ಕೂಡ ಇದೆ. ಅದು ಪ್ರೇಕ್ಷಕರಿಗೆ ಇಷ್ಟ ಆಗಿದೆ. ಇಡೀ ಫ್ಯಾಮಿಲಿ ಕುಳಿತು ನೋಡುವಂತಹ ಸಿನಿಮಾ ಎಂದು ಪ್ರೇಕ್ಷಕರು ತಮ್ಮ ವಿಮರ್ಶೆ ತಿಳಿಸಿದ್ದಾರೆ. ಈ ಸಿನಿಮಾಗೆ ಸುಮಂತ್ ಭಟ್ ಅವರು ನಿರ್ದೇಶನ ಮಾಡಿದ್ದಾರೆ. ಶೈನ್ ಶೆಟ್ಟಿ ಅವರಿಗೆ ಜೋಡಿಯಾಗಿ ತನ್ವಿ ರಾಮ್ ನಟಿಸಿದ್ದಾರೆ. ಸಂಪತ್ ಕುಮಾರ್, ದೀಪಕ್ ರೈ ಪಾಣಾಜೆ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಮೈಸೂರಿನಲ್ಲಿ ನಡೆದ ಪ್ರೀಮಿಯರ್ ಶೋ ನೋಡಿದ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬುದು ಈ ವಿಡಿಯೋದಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

