AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು, ನಿಮ್ಮ ಆಯ್ಕೆ ಯಾವುದು?

ಪ್ರತಿ ವಾರದಂತೆ ಈ ವಾರವೂ ಸಹ ಕೆಲವು ಹಿಟ್ ಸಿನಿಮಾಗಳು ಮತ್ತು ವೆಬ್ ಸರಣಿಗಳು ಒಟಿಟಿಗೆ ಬಂದಿವೆ. ಈ ವಾರ ಒಂದು ಕನ್ನಡ ಸಿನಿಮಾ ಸಹ ಸೇರಿದಂತೆ ಪರಭಾಷೆಯ ಕೆಲ ಹಿಟ್ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಿವೆ. ಜನಪ್ರಿಯ ಅಂತರಾಷ್ಟ್ರೀಯ ವೆಬ್ ಸರಣಿಗಳು ಸಹ ಈ ವಾರ ಒಟಿಟಿಗೆ ಬಂದಿವೆ. ಯಾವ ಸಿನಿಮಾಗಳು ಯಾವ ಒಟಿಟಿ ವೇದಿಕೆಗಳಲ್ಲಿ ವೀಕ್ಷಣೆಗೆ ಲಭ್ಯವಿವೆ? ಮಾಹಿತಿ ಇಲ್ಲಿದೆ...

ಮಂಜುನಾಥ ಸಿ.
|

Updated on: Nov 21, 2026 | 10:48 AM

Share
ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿ, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿರುವ ಹಾರರ್ ಸಿನಿಮಾ ‘418’ ಈ ವಾರ ಒಟಿಟಿಗೆ ಬಂದಿದೆ. ಚೈತ್ರಾ ಆಚಾರ್ ಸೇರಿದಂತೆ ಕನ್ನಡದ ಹಲವು ಕಲಾವಿದರು ನಟನೆ ಮಾಡಿರುವ ಇದೊಂದು ಹಾರರ್-ಥ್ರಿಲ್ಲರ್ ಕಥಾನಕ ಹೊಂದಿರುವ ಸಿನಿಮಾ ಆಗಿದ್ದು, ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

1 / 6
ಮಲಯಾಳಂ ಸಿನಿಮಾ ‘ಚಿರಮ್’ ನವಿರಾದ ಪ್ರೇಮಕತೆ ಹೊಂದಿರುವ ಸಿನಿಮಾ. ಬೌಲ್ ಸಂಗೀತದ ಬಗ್ಗೆ ಸಂಶೋಧನೆ ನಡೆಸುವ ನಾಯಕಿ, ಫೋಟೊಗ್ರಾಫರ್ ಒಬ್ಬರೊಟ್ಟಿಗೆ ಪ್ರೀತಿಯಲ್ಲಿ ಬಿದ್ದು ಆತನೊಟ್ಟಿಗೆ ಕೇರಳದ ಕಾಡುಗಳಲ್ಲಿ ಬುಡಕಟ್ಟು ಸಮುದಾಯಗಳನ್ನು ಭೇಟಿ ಆಗುತ್ತಾಳೆ. ಬಳಿಕ ಫೋಟೊಗ್ರಾಫರ್ ಕಾಣೆ ಆಗುತ್ತಾನೆ. ಮುಂದೇನಾಗುತ್ತದೆ ಎಂಬುದೇ ಕತೆ. ಸಿನಿಮಾ ಸನ್ ನೆಕ್ಸ್ಟ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

2 / 6
‘ಕ್ರೇಜಿ ಕಲ್ಯಾಣಂ’ ತೆಲುಗಿನ ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ. ದೊಡ್ಡ ಅಳಿಯನ ವರ್ತನೆಯಿಂದ ಕಿರಿ ಮಗಳನ್ನು ವಿದೇಶದ ವರನಿಗೆ ಮದುವೆ ಮಾಡಿಕೊಡುವ ಪ್ರಯತ್ನ ಮಾಡುವ ಅಪ್ಪನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಆಹಾ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.

3 / 6
ಜನಪ್ರಿಯ ಯೂಟ್ಯೂಬರ್ ಭುವನ್ ಭಾಮ್ ಒಬ್ಬರೇ ವಿವಿಧ ಪಾತ್ರಗಳಲ್ಲಿ ನಟಿಸಿ ನಿರ್ಮಾಣ ಮಾಡಿರುವ ವೆಬ್ ಸರಣಿ. ವೆಬ್ ಸರಣಿಯ ಮೊದಲ ಭಾಗ ಈಗಾಗಲೇ ರಿಲೀಸ್ ಆಗಿದೆ. ಇದೀಗ ಇದೇ ವೆಬ್ ಸರಣಿಯ ಎರಡನೇ ಸೀಸನ್ ನೆಟ್​​ಫ್ಲಿಕ್ಸ್​​ನಲ್ಲಿ ಈ ವಾರ ತೆರೆಗೆ ಬಂದಿದೆ.

4 / 6
‘ಮಾಂಗ್ಲಿಕ್’ ಬೆಂಗಾಳಿ ಮೂಲ ವೆಬ್ ಸರಣಿ ಈ ವಾರ ಒಟಿಟಿಗೆ ಬಂದಿದೆ. ನೆಟ್​​ಫ್ಲಿಕ್ಸ್​​ನಲ್ಲಿ ಹಲವು ಭಾಷೆಗಳಲ್ಲಿ ಲಭ್ಯವಿರುವ ಈ ವೆಬ್ ಸರಣಿ ಕನ್ನಡದ ‘ಅಯ್ಯನ ಮನೆ’ ವೆಬ್ ಸರಣಿಯ ಕತೆಯನ್ನು ಹೋಲುವಂತಿದೆ. ಆದರೆ ಇದು ರೀಮೇಕ್ ಅಲ್ಲ.

5 / 6
ಕ್ಟಿಸ್ಟೊಫರ್ ನೋಲನ್ ನಿರ್ದೇಶನದ ‘ದಿ ಆಡಸ್ಸಿ’ ಸಿನಿಮಾ ಇದೇ ವರ್ಷ ಜುಲೈ ತಿಂಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಿ ಭಾರಿ ಮೆಚ್ಚುಗೆ ಗಳಿಸಿತ್ತು. ಆ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಸಿನಿಮಾ ಆಪಲ್ ಟಿವಿ, ಅಮೆಜಾನ್ ಸೇರಿದಂತೆ ಇನ್ನೂ ಕೆಲ ಒಟಿಟಿಗಳಿಗೆ ರಿಲೀಸ್ ಆಗಿದೆ. ಆದರೆ ಸದ್ಯಕ್ಕೆ ಅದು ಪೇ ಪರ್ ವೀವ್ ಮಾದರಿಯಲ್ಲಿ ಮಾತ್ರ ವೀಕ್ಷಣೆಗೆ ಲಭ್ಯವಿದೆ.

6 / 6
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?

ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ

ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ

ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?

ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ

ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ

ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ

ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ

ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ

ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್