AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಯಾವುದೇ ಕಾರಣಕ್ಕೂ ಇಂತಹ ಜನರ ಸಹವಾಸ ಮಾಡಬೇಡಿ ಎಂದಿದ್ದಾರೆ ಚಾಣಕ್ಯ

ಚಾಣಕ್ಯರ ಪ್ರಕಾರ, ಒಳ್ಳೆಯ ಜನರ ಸಹವಾಸವು ಒಬ್ಬ ವ್ಯಕ್ತಿಯನ್ನು ಉತ್ತಮನನ್ನಾಗಿ ವ್ಯಕ್ತಿಯಾಗಿ ಪರಿವರ್ತಿಸಿದರೆ, ಕೆಟ್ಟ ಜನರ ಸಹವಾಸವು ವ್ಯಕ್ತಿಯ ಭವಿಷ್ಯವನ್ನೇ ಹಾಳುಮಾಡುತ್ತದೆ. ಆದ್ದರಿಂದ, ಶತ್ರುಗಳಿಗಿಂತಲೂ ತುಂಬಾನೇ ಡೇಂಜರ್‌ ಆಗಿರುವಂತಹ ಈ ಕೆಲವೊಂದಿಷ್ಟು ಜನರ ಸಹವಾಸ ಒಳ್ಳೆಯದಲ್ಲ ಎಂದು ಚಾಣಕ್ಯರು ಎಚ್ಚರಿಸಿದ್ದಾರೆ. ಹಾಗಿದ್ರೆ ಎಂತಹ ಜನರ ಸಹವಾಸ ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.

Chanakya Niti: ಯಾವುದೇ ಕಾರಣಕ್ಕೂ ಇಂತಹ ಜನರ ಸಹವಾಸ ಮಾಡಬೇಡಿ ಎಂದಿದ್ದಾರೆ ಚಾಣಕ್ಯ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Mar 07, 2026 | 8:11 PM

Share

ಆಚಾರ್ಯ ಚಾಣಕ್ಯರು  (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ಯಶಸ್ಸು, ಜೀವನಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಜೊತೆಗೆ  ನಮ್ಮ ಯಶಸ್ಸು ನಮ್ಮ ಕಠಿಣ ಪರಿಶ್ರಮದ ಮೇಲೆ ಮಾತ್ರವಲ್ಲದೆ ನಮ್ಮ ಸಹವಾಸದ ಮೇಲೂ ಅವಲಂಬಿತವಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ಕೆಲವು ಜನರ ಸಹವಾಸವು ನಮ್ಮ ಭವಿಷ್ಯವನ್ನು ಕತ್ತಲೆಯಾಗಿಸಬಹುದು. ಅಂತಹ ಜನರು ಆಜನ್ಮ ಶತ್ರುಗಳಿದ್ದಂತೆ. ಅಂತಹವರು ನಿಮ್ಮ ಅಮೂಲ್ಯ ಸಮಯ ಮತ್ತು ಹಣವನ್ನು ನಿಧಾನವಾಗಿ ನಾಶಮಾಡುತ್ತಾರೆ. ಆದ್ದರಿಂದ, ಅಂತಹ ಜನರ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕು ಎಚ್ಚರಿಕೆ ನೀಡಿದ್ದಾರೆ. ಹಾಗಿದ್ರೆ ಎಂತಹ ಜನರ ಜೊತೆಯಿದ್ದರೆ ಜೀವನವೇ ನಾಶವಾಗುತ್ತದೆ ಎಂಬುದನ್ಮು ನೋಡೊಣ ಬನ್ನಿ.

ಇಂತಹವರ ಸಹವಾಸ ಒಳ್ಳೆಯದಲ್ಲ:

ಇತರರಲ್ಲಿ ತಪ್ಪುಗಳನ್ನು ಹುಡುಕುವವರು: ಚಾಣಕ್ಯನ ಪ್ರಕಾರ, ಪ್ರತಿಯೊಂದು ಸನ್ನಿವೇಶದಲ್ಲೂ ನಿಮ್ಮಲ್ಲಿ ತಪ್ಪುಗಳನ್ನು ಹುಡುಕುವವರು ಅತ್ಯಂತ ಅಪಾಯಕಾರಿ ವ್ಯಕ್ತಿಗಳು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.  ಅಂತಹ ಜನರು ನಿಮ್ಮ ಸಾಧನೆಗಳಲ್ಲಿಯೂ ತಪ್ಪು ಹುಡುಕುತ್ತಾರೆ. ಇಂತಹ ಮನಸ್ಥಿಯ ಜನರು ನಿಮ್ಮ ಸುತ್ತಮುತ್ತ ಇದ್ದರೆ, ನಿಮ್ಮ ಸಕಾರಾತ್ಮಕ ಶಕ್ತಿಯೇ ನಾಶವಾಗುತ್ತದೆ. ಮತ್ತು ಯಾವಾಗಲೂ ನೀವು ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಇಂತಹ ಜನರಿಂದ ನೀವು ದೂರವಿರುವುದೇ ಒಳ್ಳೆಯದು.

ಸುಳ್ಳುಗಾರರು : ಯಾವುದೇ ಸಂಬಂಧ ಅಥವಾ ವ್ಯವಹಾರದ ಅಡಿಪಾಯವೇ ನಂಬಿಕೆ. ಪ್ರತಿಯೊಂದು ವಿಷಯದಲ್ಲೂ ಸುಳ್ಳು ಹೇಳುವ ವ್ಯಕ್ತಿಯ ಮೇಲೆ ನಂಬಿಕೆ ಇಟ್ಟರೆ ಅಥವಾ ಆತನನ್ನು ನಂಬಿ ಹೂಡಿಕೆ ಮಾಡಿದರೆ ಇದರಿಂದ ಯಾವುದೇ ರೀತಿಯ ಲಾಭ ಸಿಗಲಾರದು, ಇತಂಹವರಿಂದ ನೋವು, ನಷ್ಟವೇ ಹೆಚ್ಚು ಎಂದು ಚಾಣಕ್ಯ ಹೇಳುತ್ತಾರೆ. ಇಂತಹವರ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಹಾಗಾಗಿ ಸುಳ್ಳುಗಾರರ ಸಹವಾಸ ಒಳ್ಳೆಯದಲ್ಲ.

ಸೋಮಾರಿ ವ್ಯಕ್ತಿ:ಸೋಮಾರಿತನವನ್ನು ಮನುಷ್ಯನ ದೊಡ್ಡ ಶತ್ರು ಎಂದು ಪರಿಗಣಿಸಲಾಗಿದೆ. ಚಾಣಕ್ಯರ ಪ್ರಕಾರ, ಕಠಿಣ ಪರಿಶ್ರಮದಿಂದ ನುಣುಚಿಕೊಳ್ಳುವ ವ್ಯಕ್ತಿಯು ಇತರರನ್ನು ಸಹ ಸೋಮಾರಿಯನ್ನಾಗಿ ಮಾಡುತ್ತಾನೆ. ಇಂತಹ ಸೋಮಾರಿಗಳೊಂದಿಗಿದ್ದರೆ ನಿಮ್ಮ ಶಕ್ತಿ, ಸಮಯ ಎರಡೂ ವ್ಯರ್ಥವಾಗುತ್ತದೆ.

ಇದನ್ನೂ ಓದಿ: ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಚಾಣಕ್ಯರ ಸಲಹೆಗಳನ್ನು ಪಾಲಿಸಿ

ಜಗಳಗಂಟಿ ವ್ಯಕ್ತಿ: ಕೆಲವು ಜನರು ಕ್ಷುಲ್ಲಕ ವಿಷಯಗಳಿಗೆ ಗಲಾಟೆ ಮಾಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಚಾಣಕ್ಯ ನೀತಿಯ ಪ್ರಕಾರ, ಅಂತಹ ಜನರೊಂದಿಗಿನ ಸಹವಾಸ ತುಂಬಾನೇ ಡೇಂಜರ್.‌ ಇವರು ಸುಮ್ಮಸುಮ್ಮನೆ ಜಗಳವಾಡುವ ಮೂಲಕ ನಿಮ್ಮ ನೆಮ್ಮದಿಯನ್ನೇ ಹಾಳುಮಾಡಿಬಿಡುತ್ತಾರೆ.

ಸ್ವಾರ್ಥಿಗಳು: ಸ್ವಾರ್ಥ ಮನೋಭಾವವನ್ನು ಹೊಂದಿರುವ ಜನರೊಂದಿಗಿನ ಸಹವಾಸ ಕೂಡ ಒಳ್ಳೆಯದಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಈ ಸ್ವಾರ್ಥಿಗಳು ತಮ್ಮ ಕಾರ್ಯಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುತ್ತಾರೆ, ಆದರೆ ಇವರು ನಿಮ್ಮ ಸಹಾಯಕ್ಕೆ ಖಂಡಿತ ಬರಲಾರರು. ಹಾಗಾಗಿ ಈ ಸ್ವಾರ್ಥ ಮನೋಭಾವನದ ಜನರಿಂದ ದೂರವಿದ್ದಷ್ಟು ನೀವು ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಯುಗಾದಿ ವರ್ಷ ಭವಿಷ್ಯ; ಮಿಥುನ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ಮಿಥುನ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ
ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ
ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ
ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ
ಟ್ರೋಫಿಗಾಗಿ ಕೆಲವರ ಹೃದಯ ಛಿದ್ರಗೊಳಿಸುವುದರಲ್ಲಿ ತಪ್ಪಿಲ್ಲ; ಸ್ಯಾಂಟ್ನರ್
ಟ್ರೋಫಿಗಾಗಿ ಕೆಲವರ ಹೃದಯ ಛಿದ್ರಗೊಳಿಸುವುದರಲ್ಲಿ ತಪ್ಪಿಲ್ಲ; ಸ್ಯಾಂಟ್ನರ್
ಯುಗಾದಿ ವರ್ಷ ಭವಿಷ್ಯ; ವೃಷಭ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ವೃಷಭ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?
ಯುಗಾದಿ ವರ್ಷ ಭವಿಷ್ಯ; ಮೇಷ ರಾಶಿಯ ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ
ಯುಗಾದಿ ವರ್ಷ ಭವಿಷ್ಯ; ಮೇಷ ರಾಶಿಯ ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ
ಬಜೆಟ್ ಬೆನ್ನಲ್ಲೇ ಅಧಿಕಾರ ಹಂಚಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಶಾಕಿಂಗ್ ಮಾತು
ಬಜೆಟ್ ಬೆನ್ನಲ್ಲೇ ಅಧಿಕಾರ ಹಂಚಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಶಾಕಿಂಗ್ ಮಾತು
ಸಿನಿಮಾ ಜರ್ನಿಗೆ ಬೆಂಬಲವಾಗಿ ನಿಂತ ಶಿವಣ್ಣನಿಗೆ ಧನ್ಯವಾದ ಹೇಳಿದ ವಿಜಯ್
ಸಿನಿಮಾ ಜರ್ನಿಗೆ ಬೆಂಬಲವಾಗಿ ನಿಂತ ಶಿವಣ್ಣನಿಗೆ ಧನ್ಯವಾದ ಹೇಳಿದ ವಿಜಯ್
ಕೋಲಾರದ ರೈತನ ಮಗ ಯುಪಿಎಸ್​ಸಿ ಪಾಸ್​ ಮಾಡಿದ್ದು ಹೇಗೆ ಗೊತ್ತಾ?
ಕೋಲಾರದ ರೈತನ ಮಗ ಯುಪಿಎಸ್​ಸಿ ಪಾಸ್​ ಮಾಡಿದ್ದು ಹೇಗೆ ಗೊತ್ತಾ?
ಬೆಂಗಳೂರು ಹೋಟೆಲ್​ಗಳಲ್ಲಿ ಕಾಫಿ, ತಿಂಡಿ ದರ ಹೆಚ್ಚಳ ಸಾಧ್ಯತೆ
ಬೆಂಗಳೂರು ಹೋಟೆಲ್​ಗಳಲ್ಲಿ ಕಾಫಿ, ತಿಂಡಿ ದರ ಹೆಚ್ಚಳ ಸಾಧ್ಯತೆ