AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಲೆಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ! ಈ ಅಭ್ಯಾಸಗಳು ಸಮಸ್ಯೆಯನ್ನು ಹೆಚ್ಚಿಸಬಹುದು

ಡ್ಯಾಂಡ್ರಫ್ ಸಾಮಾನ್ಯ ಸಮಸ್ಯೆಯಾಗಿದ್ದರೂ ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಸರಿಯಾದ ಆರೈಕೆ, ಸಮತೋಲಿತ ಆಹಾರ, ಒತ್ತಡ ನಿಯಂತ್ರಣ ಹಾಗೂ ಸೂಕ್ತ ಆಂಟಿ-ಡ್ಯಾಂಡ್ರಫ್ ಶ್ಯಾಂಪೂ ಬಳಕೆಯಿಂದ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಲಕ್ಷಣಗಳು ತೀವ್ರವಾಗಿದ್ದರೆ ಅಥವಾ ದೀರ್ಘಕಾಲ ಮುಂದುವರಿದರೆ ತಜ್ಞರನ್ನು ಸಂಪರ್ಕಿಸುವುದು ಅತ್ಯಗತ್ಯ. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ತಲೆಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ! ಈ ಅಭ್ಯಾಸಗಳು ಸಮಸ್ಯೆಯನ್ನು ಹೆಚ್ಚಿಸಬಹುದು
Recurring DandruffImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on:Jul 30, 2026 | 11:08 PM

Share

ಮುಖ್ಯಾಂಶಗಳು

  • ಡ್ಯಾಂಡ್ರಫ್ ನಿಯಂತ್ರಿಸಲು ಏನು ಮಾಡಬೇಕು?
  • ತಲೆಹೊಟ್ಟಿನ ಸಮಸ್ಯೆ ಕಡಿಮೆಯಾಗುತ್ತಿಲ್ಲವೇ? ತಜ್ಞರು ಹೇಳಿರುವ ಈ ಸಲಹೆಗಳನ್ನು ಅನುಸರಿಸಿ
  • ಡ್ಯಾಂಡ್ರಫ್ ಮತ್ತೆ ಮತ್ತೆ ಬರುವುದನ್ನು ತಡೆಯಲು ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ತಲೆಹೊಟ್ಟಿನ (ಡ್ಯಾಂಡ್ರಫ್) ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಸಾಮಾನ್ಯವಾಗಿ ಕಂಡುಬರುತ್ತಿದೆ. ಉತ್ತಮ ಹೇರ್ ಕೇರ್ ಮಾಡಿದರೂ ಕೆಲವರಲ್ಲಿ ಡ್ಯಾಂಡ್ರಫ್ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ತಲೆಯ ಚರ್ಮದ ಭಾಗದಿಂದ ಬಿಳಿ ಅಥವಾ ಹಳದಿ ಬಣ್ಣದ ಸಣ್ಣ ಪದರಗಳು ಉದುರುವುದು, ತೀವ್ರ ತುರಿಕೆ, ಒಣ ಚರ್ಮ ಇವು ಇದರ ಸಾಮಾನ್ಯ ಲಕ್ಷಣಗಳಾಗಿವೆ. ಅನೇಕರು ಇದನ್ನು ಸಣ್ಣ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ. ಆದರೆ ದೀರ್ಘಕಾಲ ಡ್ಯಾಂಡ್ರಫ್ ಮುಂದುವರಿದರೆ ಉರಿಯೂತ, ಕೆಂಪಾಗುವುದು, ಸಣ್ಣ ಗಾಯಗಳು ಹಾಗೂ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಡ್ಯಾಂಡ್ರಫ್ ಕಡಿಮೆಯಾದ ತಕ್ಷಣ ಅನುಸರಿಸುತ್ತಿರುವ ಸಲಹೆಗಳನ್ನು ನಿಲ್ಲಿಸುವುದು ಅಥವಾ ಸರಿಯಾದ ಆರೈಕೆ ಮಾಡದಿರುವುದು ಸಮಸ್ಯೆ ಮತ್ತೆ ಮರುಕಳಿಸಲು ಪ್ರಮುಖ ಕಾರಣವಾಗಬಹುದು. ಆದ್ದರಿಂದ ಕೇವಲ ಡ್ಯಾಂಡ್ರಫ್ ಹೋಗುವುದಷ್ಟೇ ಅಲ್ಲ, ಸ್ಕಾಲ್ಪ್ ಆರೋಗ್ಯ ಕಾಪಾಡಿಕೊಳ್ಳುವುದೂ ಅಷ್ಟೇ ಮುಖ್ಯ.

ಡ್ಯಾಂಡ್ರಫ್ ಹೆಚ್ಚಾಗಲು ಕಾರಣ:

ಆಂಟಿ-ಡ್ಯಾಂಡ್ರಫ್ ಶ್ಯಾಂಪೂವನ್ನು ಬೇಗ ನಿಲ್ಲಿಸುವುದು: ಡ್ಯಾಂಡ್ರಫ್ ಕಡಿಮೆಯಾದ ಕೂಡಲೇ ಹಲವರು ಔಷಧೀಯ ಶ್ಯಾಂಪೂ ಬಳಕೆಯನ್ನು ನಿಲ್ಲಿಸುತ್ತಾರೆ. ಇದರಿಂದ ಸಮಸ್ಯೆ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ.

ಶ್ಯಾಂಪೂವನ್ನು ತಕ್ಷಣ ತೊಳೆಯುವುದು: ಆಂಟಿ-ಡ್ಯಾಂಡ್ರಫ್ ಶ್ಯಾಂಪೂವನ್ನು ಕೂದಲಿನ ಬುಡಕ್ಕೆ ಹಚ್ಚಿದ ಬಳಿಕ ಕನಿಷ್ಠ 3–5 ನಿಮಿಷ ಇರಿಸಿ ನಂತರ ತೊಳೆಯಬೇಕು. ಇದರಿಂದ ಅದರಲ್ಲಿರುವ ಔಷಧೀಯ ಅಂಶಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ.

ಕೂದಲಿನ ಬುಡವನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು: ಕೂದಲನ್ನು ಮಾತ್ರ ತೊಳೆಯುವುದು ಸಾಕಾಗುವುದಿಲ್ಲ. ಅದರ ಬುಡದ ಎಣ್ಣೆ, ಧೂಳು ಹಾಗೂ ಸತ್ತ ಚರ್ಮದ ಕೋಶಗಳು ಸೇರುವುದರಿಂದ ಡ್ಯಾಂಡ್ರಫ್ ಹೆಚ್ಚಾಗಬಹುದು.

ಅತಿಯಾಗಿ ಹೇರ್ ಆಯಿಲ್ ಮತ್ತು ಸ್ಟೈಲಿಂಗ್ ಉತ್ಪನ್ನಗಳ ಬಳಕೆ: ಅತಿಯಾಗಿ ಎಣ್ಣೆ, ಹೇರ್ ಜೆಲ್, ಹೇರ್ ಸ್ಪ್ರೇ ಹಾಗೂ ಇತರ ಸ್ಟೈಲಿಂಗ್ ಉತ್ಪನ್ನಗಳನ್ನು ಬಳಸುವುದರಿಂದ ತಲೆಚರ್ಮದಲ್ಲಿ ಎಣ್ಣೆ ಮತ್ತು ಕೊಳಕು ಹೆಚ್ಚಾಗಿ ಡ್ಯಾಂಡ್ರಫ್ ತೀವ್ರವಾಗಬಹುದು.

ಇದನ್ನೂ ಓದಿ: ಪದೇ ಪದೇ ಗ್ಯಾಸ್ ಆಗುವುದಕ್ಕೆ ಈ ತಪ್ಪುಗಳೇ ಕಾರಣ! ಜೀರ್ಣಕ್ರಿಯೆ ಸಮಸ್ಯೆ ತಡೆಯಲು ಈ ಸಲಹೆಗಳನ್ನು ಅನುಸರಿಸಿ

ತಲೆಯನ್ನು ಪದೇ ಪದೇ ಕೆರೆದುಕೊಳ್ಳುವುದು: ನಿರಂತರವಾಗಿ ತುರಿಕೆ ಗಾಯವಾಗಬಹುದು. ಇದರಿಂದ ಬ್ಯಾಕ್ಟೀರಿಯಾ ಸೋಂಕಿನ ಅಪಾಯವೂ ಹೆಚ್ಚಾಗಬಹುದು.

ಡ್ಯಾಂಡ್ರಫ್ ನಿಯಂತ್ರಿಸಲು ಏನು ಮಾಡಬೇಕು?

  • ವೈದ್ಯರು ಅಥವಾ ತಜ್ಞರು ಸೂಚಿಸಿದ ಆಂಟಿ-ಡ್ಯಾಂಡ್ರಫ್ ಶ್ಯಾಂಪೂವನ್ನು ಸರಿಯಾಗಿ ಬಳಸಿ.
  • ವಾರಕ್ಕೆ 2–3 ಬಾರಿ ಕೂದಲನ್ನು ಸ್ವಚ್ಛವಾಗಿ ತೊಳೆಯಿರಿ.
  • ಶ್ಯಾಂಪೂವನ್ನು ಕೂದಲಿನ ಬುಡಕ್ಕೆ ಹಚ್ಚಿ ಕೆಲವು ನಿಮಿಷಗಳ ಕಾಲ ಇರಿಸಿ ನಂತರ ತೊಳೆಯಿರಿ.
  • ಹೇರ್ ಆಯಿಲ್ ಮತ್ತು ಸ್ಟೈಲಿಂಗ್ ಉತ್ಪನ್ನಗಳನ್ನು ಮಿತವಾಗಿ ಬಳಸಿ.
  • ವೈಯಕ್ತಿಕ ಟವೆಲ್ ಮತ್ತು ಹಣಿಗೆಯನ್ನು ಬಳಸಿ ಮತ್ತು ಅದನ್ನು ಸ್ವಚ್ಛವಾಗಿಡಿ.
  • ಸಮತೋಲಿತ ಆಹಾರ ಸೇವಿಸಿ ಹಾಗೂ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.
  • ಒತ್ತಡ (Stress) ಕಡಿಮೆ ಮಾಡಲು ಯೋಗ, ಧ್ಯಾನ ಅಥವಾ ನಿಯಮಿತ ವ್ಯಾಯಾಮ ಮಾಡಿ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

  • ಹಲವು ವಾರಗಳ ಚಿಕಿತ್ಸೆಯ ಬಳಿಕವೂ ಡ್ಯಾಂಡ್ರಫ್ ಕಡಿಮೆಯಾಗದಿದ್ದರೆ
  • ತೀವ್ರ ತುರಿಕೆ ಅಥವಾ ಉರಿಯೂತ ಇದ್ದರೆ
  • ಚರ್ಮ ಕೆಂಪಾಗುವುದು ಅಥವಾ ನೋವು ಕಾಣಿಸಿಕೊಂಡರೆ
  • ಕೂದಲಿನ ಬುಡದಲ್ಲಿ ಊತ ಅಥವಾ ಕೀವು ಕಾಣಿಸಿಕೊಂಡರೆ
  • ಕೂದಲು ಅತಿಯಾಗಿ ಉದುರಲು ಆರಂಭಿಸಿದರೆ

ಗಮನಿಸಿ: ಈ ಲೇಖನವು ಆರೋಗ್ಯ ಮಾಹಿತಿಗಾಗಿ ಮಾತ್ರ. ಯಾವುದೇ ಚಿಕಿತ್ಸೆ ಅಥವಾ ಔಷಧಿಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಬಳಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:06 pm, Thu, 30 July 26

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ