AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನದಲ್ಲಿ ಮನಕಲಕುವ ಘಟನೆ: ರೈತ ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್

ಹಾಸನದಲ್ಲಿ ಮನಕಲಕುವ ಘಟನೆ: ರೈತ ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್

ಮಂಜುನಾಥ ಕೆಬಿ
| Edited By: |

Updated on: Oct 03, 2026 | 9:33 PM

Share

ಹಾಸನ ತಾಲೂಕಿನ ದುದ್ದ ಗ್ರಾಮದಲ್ಲಿ ರೈತ ಮಹಿಳೆಯೋರ್ವರು, ಕೇಂದ್ರ ಬರದ ಅಧ್ಯಯನ ತಂಡದ ಮುಂದೆ ಕಣ್ಣೀರಿಟ್ಟಿರುವ ಘಟನೆ ನಡೆದಿದೆ.ಮಳೆ ಇಲ್ಲದೆ ಬೆಳೆ ಹೋಯ್ತು, ರೋಗ ಬಾಧೆಯಿಂದ ಹಾಳಾಗಿದ್ದ ಜೋಳ ತಿಂದು ಹಸು ಕೂಡ ಸತ್ತು ಹೋಗಿದೆ. ಹಾಲು ನೀಡುತ್ತಿದ್ದ ಹಸು ಮೃತಪಟ್ಟಿದೆ. ನಾವು ಜೀವನಕ್ಕೆ ಏನು ಮಾಡೋಣ ಎಂದು ಅಳಲು ತೋಡಿಕೊಂಡಳು. ರೈತ ಮಹಿಳೆಯ ಸಮಸ್ಯೆ ಕೇಳಿ ಸಂಸದ ಶ್ರೇಯಸ್ ಪಟೇಲ್‌ ಸಹ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಹಾಸನ, (ಅಕ್ಟೋಬರ್ 3): ಮಳೆ ಬೆಳೆ ಇಲ್ಲದೇ ಕರ್ನಾಟಕದಲ್ಲಿ ಬರ ಆವರಿಸಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಬರ ವೀಕ್ಷಣೆಗೆಂದು ಕೇಂದ್ರದಿಂದ ಅಧಿಕಾರಗಳ ತಂಡ ರಾಜ್ಯಕ್ಕೆ ಆಗಮಿಸಿದ್ದು, ವಿವಿಧ ಜಿಲ್ಲೆಗಳಲ್ಲಿ ಬರ ವೀಕ್ಷಣೆ ನಡೆಸಿದೆ. ಅದರಂತೆ ಅಧಿಕಾರಿಗಳು ಹಾಸನದಲ್ಲಿ ಬರ ಅಧ್ಯಯನ ನಡೆಸುವಾಗ ಮನಕಲಕುವ ಘಟನೆಯೊಂದು ನಡೆದಿದೆ. ಹೌದು…. ಹಾಸನ ತಾಲೂಕಿನ ದುದ್ದ ಗ್ರಾಮದಲ್ಲಿ ರೈತ ಮಹಿಳೆಯೋರ್ವರು, ಕೇಂದ್ರ ಬರದ ಅಧ್ಯಯನ ತಂಡದ ಮುಂದೆ ಕಣ್ಣೀರಿಟ್ಟಿರುವ ಘಟನೆ ನಡೆದಿದೆ.ಮಳೆ ಇಲ್ಲದೆ ಬೆಳೆ ಹೋಯ್ತು, ರೋಗ ಬಾಧೆಯಿಂದ ಹಾಳಾಗಿದ್ದ ಜೋಳ ತಿಂದು ಹಸು ಕೂಡ ಸತ್ತು ಹೋಗಿದೆ. ಹಾಲು ನೀಡುತ್ತಿದ್ದ ಹಸು ಮೃತಪಟ್ಟಿದೆ. ನಾವು ಜೀವನಕ್ಕೆ ಏನು ಮಾಡೋಣ ಎಂದು ಅಳಲು ತೋಡಿಕೊಂಡಳು. ರೈತ ಮಹಿಳೆಯ ಸಮಸ್ಯೆ ಕೇಳಿ ಸಂಸದ ಶ್ರೇಯಸ್ ಪಟೇಲ್‌ ಸಹ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More