ಜೇನುಕಲ್ ಸಿದ್ದೇಶ್ವರ ಕ್ಷೇತ್ರಕ್ಕೆ ದಾನ ಕೋರುವ ನೆಪದಲ್ಲಿ ಒಂಟಿ ಮನೆಗೆ ನುಗ್ಗಿ ಸುಲಿಗೆಗೆ ಯತ್ನಿಸಿದ್ದ ನಕಲಿ ಸ್ವಾಮೀಜಿಗಳು ಸಿಕ್ಕಿಬಿದ್ದಿದ್ದಾರೆ. ಕಾವಿ, ರುದ್ರಾಕ್ಷಿ, ವಿಭೂತಿ, ಲಿಂಗದ ಕಾಯಿ ಧರಿಸಿ ಸ್ವಾಮೀಜಿ ವೇಷದಲ್ಲಿ ಮನೆಗೆ ನುಗ್ಗಿದ್ದರು. ಆದ್ರೆ, ಮಹಿಳೆಯ ಚಾಣಾಕ್ಷತನದಿಂದ ಕಳ್ಳ ಸ್ವಾಮಿಗಳು ತಗ್ಲಾಕೊಂಡು ಗೂಸಾ ತಿಂದಿದ್ದಾರೆ.