AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಹೊಸಕೊಪ್ಪಲು ರೈತನಿಗೆ 66 ಪೈಸೆ ಪಾವತಿಸಿದ ಬ್ಯಾಂಕ್: ಹೇಗೆ ಗೊತ್ತಾ?

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಬ್ಯಾಂಕೊಂದು ಗ್ರಾಹಕನ ಬಳಿ 9 ರೂ 34 ಪೈಸೆ ಸಾಲ ಕಟ್ಟಿಸಿಕೊಂಡ ಘಟನೆ ನಡೆದಿದ್ದು, ಇದಕ್ಕೆ ಗ್ರಾಹಕ 10 ರೂ. ಪಾವತಿ ಮಾಡಿ 66 ಪೈಸೆ ವಾಪಸ್‌ ಕೊಡಿ ಎಂದು ಪಟ್ಟು ಹಿಡಿದು ಬ್ಯಾಂಕ್​​​​ ಸಿಬ್ಬಂದಿಗೆ ಛಳಿಬಿಡಿಸಿದ್ದ. ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇದೀಗ ಬ್ಯಾಂಕ್ ರೈತನಿಗೆ 66 ಪೈಸೆ ಪಾವತಿಸಿದೆ.

ಕೊನೆಗೂ ಹೊಸಕೊಪ್ಪಲು ರೈತನಿಗೆ 66 ಪೈಸೆ ಪಾವತಿಸಿದ ಬ್ಯಾಂಕ್: ಹೇಗೆ ಗೊತ್ತಾ?
ರೈತ ಚೊಕ್ಕಣ್ಣಗೌಡ
ಮಂಜುನಾಥ ಕೆಬಿ
| Edited By: |

Updated on: Mar 14, 2026 | 2:04 PM

Share

ಹಾಸನ, (ಮಾರ್ಚ್ 14): ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಕೊಪ್ಪಲು ರೈತನಿಗೆ ಕೆನರಾ ಬ್ಯಾಂಕ್ (Sakleshpura canara bank) ನೀಡಬೇಕಿದ್ದ 66 ಪೈಸೆ ಹಣವನ್ನು ಕೊನೆಗೂ ಮರುಪಾವತಿಸಿದೆ. ಕೆಲವು ವರ್ಷಗಳ ಹಿಂದೆ ಹೊಸಕೊಪ್ಪಲು ಗ್ರಾಮದ ರೈತ ಚೊಕ್ಕಣ್ಣಗೌಡ 50 ಸಾವಿರ ರೂ. ಸಾಲವನ್ನು (Loan)  ಕೆನರಾ ಬ್ಯಾಂಕ್‌ನಲ್ಲಿ ಪಡೆದಿದ್ದರು. ಸಕಾಲಕ್ಕೆ ಸಾಲ ತೀರುವಳಿ ಮಾಡಿದ್ದ ರೈತನಿಗೆ ಕೆಲವು ದಿನಗಳ ನಂತರ ಇನ್ನೂ 9.34 ಪೈಸೆ ಸಾಲ ಬಾಕಿ ಇದ್ದು ತಕ್ಷಣವೇ ಮರುಪಾವತಿಸುವಂತೆ ನೋಟಿಸ್‌ ನೀಡಿದ್ದಲ್ಲದೆ ಪದೇಪದೆ ಕರೆ ಮಾಡುತ್ತಿದ್ದರು. ಇದರಿಂದ ಬೇಸತ್ತ ರೈತ ಬ್ಯಾಂಕಿಗೆ ತೆರಳಿ 10 ರೂ. ನೀಡಿ ಸಾಲಕ್ಕೆ ಜಮಾ ಮಾಡಿಕೊಂಡು ಉಳಿದ 66 ಪೈಸೆ ವಾಪಸ್ ನೀಡುವಂತೆ ಬ್ಯಾಂಕ್‌ ಕ್ಯಾಷಿಯರ್ ಗೆ ಒತ್ತಾಯಿಸಿದ್ದರು. ಪೈಸೆಗೆ ಪೈಸೆ ಲೆಕ್ಕ ಹಾಕಿ ತಮ್ಮ ಹಣವನ್ನು ವಾಪಸ್‌ ಕೇಳುತ್ತೀರಾ. ನಮಗೂ ಹಣ ವಾಪಸ್ ಕೊಡಿ ಎಂದು ರೈತ ಚೊಕ್ಕಣ್ಣಗೌಡ ಬ್ಯಾಂಕ್ ಸಿಬ್ಬಂದಿಗೆ ಚಳಿ ಬಿಡಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಇದೀಗ ಬ್ಯಾಂಕ್, ಚೊಕ್ಕಣ್ಣಗೌಡ ಖಾತೆಗೆ 66 ಪೈಸೆ ಹಣವನ್ನು ಅಕೌಂಟ್‌ಗೆ ಹಾಕಿದೆ.

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ ರೈತ ಚೊಕ್ಕಣ್ಣಗೌಡ ಅವರು ಹಲವು ವರ್ಷಗಳಿಂದೆ ಬೆಳೆ ಸಾಲ ಪಡೆದುಕೊಂಡಿದ್ದರು. ಬಳಿಕ ಸಾಲವನ್ನು ವಾಪಸ್ ಕಟ್ಟಿದ್ದರು. ಆದ್ರೆ, ಬಾಕಿದ್ದ ಇದ್ದ 9 ರೂಪಾಯಿ 34 ಪೈಸೆ ಬಾಕಿ ಸಾಲ ಪಾವತಿಸುವಂತೆ ಬ್ಯಾಂಕ್ ಬೆನ್ನುಬಿದ್ದಿತ್ತು. ಹಲವು ಬಾರಿ ಕರೆ ಮಾಡಿ ಸಾಲ ಕಟ್ಟಲು ಒತ್ತಾಯಿಸಲಾಗಿತ್ತು. ಇದರಿಂದ ಕೆರಳಿದ ರೈತ ಚೊಕ್ಕಣ್ಣಗೌಡ, ಬ್ಯಾಂಕ್​​ಗೆ ಹೋಗಿ 10 ರೂ. ನೀಡಿ 9 ರೂಪಾಯಿ 34 ಪೈಸೆ ತೆಗೆದುಕೊಂಡು ಬಾಕಿ 66 ಪೈಸೆ ವಾಪಸ್ ಕೊಡುವಂತೆ ಆಗ್ರಹಿಸಿದ್ದರು.  66 ಪೈಸೆ ಚಿಲ್ಲರೆ ಇಲ್ಲ ಎಂಬ ಸಬೂಬು ಹೇಳಿದ್ದರಿಂದ ಮಾತಿನ ಚಕಮಕಿ ನಡೆದಿತ್ತು. ಪೈಸೆಗೆ ಪೈಸೆ ಲೆಕ್ಕ ಹಾಕಿ ತಮ್ಮ ಹಣವನ್ನು ವಾಪಸ್‌ ಕೇಳುತ್ತೀರಾ. ನಮಗೂ ಹಣ ವಾಪಸ್ ಕೊಡಿ ಎಂದು ರೈತ ಚೊಕ್ಕಣ್ಣಗೌಡ ಪಟ್ಟು ಹಿಡಿದಿದ್ದರು. ಈ ವೇಳೆ ಬ್ಯಾಂಕ್ ವ್ಯವಸ್ಥಾಪಕರು ರೈತನ ಕ್ಷಮೆ ಕೇಳುವ ಮೂಲಕ ಪ್ರಕರಣಕ್ಕೆ ಇತ್ಯರ್ಥ ಹಾಡಿದ್ದರು.

ಇದನ್ನೂ ಓದಿ: ಹಾಸನ: 9 ರೂ 34 ಪೈಸೆ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್​​ಗೆ ಚಳಿ ಬಿಡಿಸಿದ ಗ್ರಾಹಕ

ಅಲ್ಲದೇ ರೈತನ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬ್ಯಾಂಕ್​​ನವರಿಗೆ ಸರಿಯಾಗಿಯೇ ಚಳಿ ಬಿಡಿಸಿದ್ದಾರೆ ಚೊಕ್ಕಣ್ಣಗೌಡರ ಪರ ಬ್ಯಾಟಿಂಗ್ ಮಾಡಿದ್ದರು. ಇನ್ನು ಈ ವಿಚಾರ ಬ್ಯಾಂಕ್​​​ಮ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ನಂತರ 66 ಪೆಸೆಯನ್ನು ರೈತನ ಅಕೌಂಟ್‌ಗೆ ಹಾಕಿ ಎಸ್‌ಎಂಎಸ್ ಕಳುಹಿಸಿದೆ. ಇದರೊಂದಿಗೆ ಪೈಸೆಗೆ ಪೈಸೆ ಕೊಡುಕೊಳ್ಳುವಿಕೆ ಸುಖಾಂತ್ಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us