AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಯಾಬಿಟಿಸ್ ಇದ್ದರೆ ಪಾದಗಳ ಬಗ್ಗೆ ಇರಲಿ ಎಚ್ಚರ! ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ

ಮಧುಮೇಹವು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವುದಲ್ಲದೆ, ನಿಮ್ಮ ಪಾದಗಳಿಗೆ ಹಾನಿಯನ್ನುಂಟುಮಾಡುತ್ತದೆ. ಅದಕ್ಕಾಗಿಯೇ ಪ್ರತಿದಿನ ನಿಮ್ಮ ಪಾದಗಳನ್ನು ನೋಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಯಾಕೆ ಪಾದಗಳನ್ನು ಗಮನಿಸಬೇಕು, ಆರೋಗ್ಯ ತಜ್ಞರು ಡಯಾಬಿಟಿಕ್ ಫುಟ್ ಸಮಸ್ಯೆಯನ್ನು ತಡೆಯಲು ಈ ರೀತಿ ಮಾಡುವುದು ಬಹಳ ಒಳ್ಳೆಯದು ಎಂಬುದಕ್ಕೆ ಕಾರಣವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಡಯಾಬಿಟಿಸ್ ಇದ್ದರೆ ಪಾದಗಳ ಬಗ್ಗೆ ಇರಲಿ ಎಚ್ಚರ! ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ
Diabetic Foot ProblemsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 29, 2026 | 11:00 PM

Share

ಮುಖ್ಯಾಂಶಗಳು

  • ಮಧುಮೇಹ ರೋಗಿಗಳು ಪ್ರತಿದಿನ ಪಾದಗಳನ್ನು ಪರೀಕ್ಷಿಸುವುದು ಏಕೆ ಮುಖ್ಯ?
  • ಡಯಾಬಿಟಿಸ್‌ನಿಂದ ಪಾದ ಕತ್ತರಿಸುವ ಪರಿಸ್ಥಿತಿ ಬರದಿರಲಿ... ಈ ಆರೋಗ್ಯ ಸಲಹೆ ಪಾಲಿಸಿ
  • ಮಧುಮೇಹ ನಿಯಂತ್ರಣಕ್ಕೆ ಔಷಧ ಮಾತ್ರ ಸಾಕಾಗದು; ಪಾದಗಳ ಆರೈಕೆಯೂ ಅಷ್ಟೇ ಮುಖ್ಯ

ಮಧುಮೇಹ (Diabetes) ಇಂದು ವಿಶ್ವದಾದ್ಯಂತ ವೇಗವಾಗಿ ಹೆಚ್ಚುತ್ತಿರುವ ಜೀವನಶೈಲಿ ಸಂಬಂಧಿತ ಕಾಯಿಲೆಗಳಲ್ಲಿ ಒಂದಾಗಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ದೀರ್ಘಕಾಲ ನಿಯಂತ್ರಣದಲ್ಲಿರದಿದ್ದರೆ ಅದು ಕಣ್ಣು, ಹೃದಯ, ಮೂತ್ರಪಿಂಡ ಮಾತ್ರವಲ್ಲದೆ ಪಾದಗಳ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ. ಹಲವರು ನೋವು ಕಾಣಿಸಿಕೊಂಡ ನಂತರ ಮಾತ್ರ ಪಾದಗಳ ಬಗ್ಗೆ ಗಮನ ಹರಿಸುತ್ತಾರೆ. ಆದರೆ ತಜ್ಞರ ಪ್ರಕಾರ ಪ್ರತಿದಿನ ಪಾದಗಳನ್ನು ಪರಿಶೀಲಿಸುವ ಅಭ್ಯಾಸವೇ ಡಯಾಬಿಟಿಕ್ ಫುಟ್ ಸಮಸ್ಯೆಯನ್ನು ತಡೆಯುವ ಅತ್ಯುತ್ತಮ ಮಾರ್ಗವಾಗಿದೆ. ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಅಂಡ್ ಕಿಡ್ನಿ ಡಿಸೀಸ್ (NIDDK) ಪ್ರಕಾರ, ದೀರ್ಘಕಾಲದ ಅಧಿಕ ರಕ್ತದ ಸಕ್ಕರೆಯಿಂದ ನರಗಳು ಮತ್ತು ರಕ್ತನಾಳಗಳು ಹಾನಿಗೊಳಗಾಗುತ್ತವೆ. ಇದರಿಂದ ಡಯಾಬಿಟಿಕ್ ನ್ಯೂರೋಪತಿ (Diabetic Neuropathy) ಉಂಟಾಗಿ ಪಾದಗಳಲ್ಲಿ ಸಂವೇದನೆ ಕಡಿಮೆಯಾಗಬಹುದು.

ಮಧುಮೇಹದಿಂದ ಪಾದಗಳಿಗೆ ಹೇಗೆ ಹಾನಿಯಾಗುತ್ತದೆ?

  • ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿದಾಗ ಪಾದಗಳಿಗೆ ರಕ್ತಸಂಚಾರ ಕಡಿಮೆಯಾಗುತ್ತದೆ.
  • ಪಾದಗಳಲ್ಲಿ ಜುಮ್ಮೆನಿಸುವುದು ಅಥವಾ ಚುಚ್ಚಿದಂತಾಗುವುದು
  • ಸುಡುವ ಅನುಭವ
  • ನೋವು ಅಥವಾ ಸಂಪೂರ್ಣ ಸಂವೇದನೆ ಕಳೆದುಕೊಳ್ಳುವುದು
  • ಸಣ್ಣ ಗಾಯಗಳೂ ಗೊತ್ತಾಗದಿರುವುದು
  • ಗಾಯಗಳು ನಿಧಾನವಾಗಿ ಗುಣಮುಖವಾಗುವುದು
  • ಸೋಂಕಿನ ಅಪಾಯ ಹೆಚ್ಚಾಗುವುದು

ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಗಾಯಗಳು ಗಂಭೀರವಾಗಿ ಬೆಳೆದು ಶಸ್ತ್ರಚಿಕಿತ್ಸೆ ಅಥವಾ ಅಪರೂಪದ ಸಂದರ್ಭಗಳಲ್ಲಿ ಅಂಗವಿಚ್ಛೇದನದ ಅಪಾಯವೂ ಉಂಟಾಗಬಹುದು.

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

  • ಗುಣವಾಗದ ಗಾಯಗಳು
  • ಪಾದಗಳಲ್ಲಿ ಕೆಂಪು ಅಥವಾ ಊತ
  • ಗಾಯದಿಂದ ಕೀವು ಹೊರಬರುವುದು
  • ಪಾದಗಳು ಹೆಚ್ಚು ಬಿಸಿಯಾಗಿರುವ ಅನುಭವ
  • ನಿರಂತರ ನೋವು ಅಥವಾ ಮರಗಟ್ಟುವಿಕೆ
  • ಚರ್ಮದ ಬಣ್ಣ ಬದಲಾವಣೆ
  • ಪದೇ ಪದೇ ಗುಳ್ಳೆಗಳು (Blisters)
  • ಉಗುರು ಸುತ್ತ ಸೋಂಕು
  • ನಡೆಯಲು ತೊಂದರೆ

ಇದನ್ನೂ ಓದಿ: ಪ್ರತಿದಿನ ವೈಟ್ ರೈಸ್ ತಿನ್ನುತ್ತಿದ್ದೀರಾ? ತೂಕ ನಿಯಂತ್ರಣಕ್ಕೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಮಧುಮೇಹ ರೋಗಿಗಳು ಪ್ರತಿದಿನ ಪಾಲಿಸಬೇಕಾದ ಪಾದಗಳ ಆರೈಕೆ

  • ಪ್ರತಿದಿನ ಉಗುರು, ಪಾದದ ಅಡಿಭಾಗ ಹಾಗೂ ಬೆರಳುಗಳ ಮಧ್ಯೆ ಪರಿಶೀಲಿಸಿ.
  • ಪಾದಗಳನ್ನು ತೊಳೆದು ಚೆನ್ನಾಗಿ ಒಣಗಿಸಿಕೊಳ್ಳಿ.
  • ಚರ್ಮ ಒಣಗದಂತೆ ಮಾಯಿಶ್ಚರೈಸರ್ ಬಳಸಿ. ಆದರೆ ಬೆರಳುಗಳ ಮಧ್ಯೆ ಹಚ್ಚಬೇಡಿ.
  • ಯಾವಾಗಲೂ ಸರಿಯಾದ ಗಾತ್ರದ ಶೂ ಮತ್ತು ಹತ್ತಿಯ ಸಾಕ್ಸ್ ಧರಿಸಿ.
  • ಚಪ್ಪಲಿ ಹಾಕದೆಯೇ ಬರಿ ಕಾಲಿನಲ್ಲಿ ನಡೆಯುವುದನ್ನು ತಪ್ಪಿಸಿ.
  • ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಮಿತವಾಗಿ ನಿಯಂತ್ರಣದಲ್ಲಿ ಇಡಿ.
  • ವರ್ಷಕ್ಕೊಮ್ಮೆ ಅಥವಾ ವೈದ್ಯರ ಸಲಹೆಯಂತೆ ಪಾದಗಳ ಸಂಪೂರ್ಣ ಪರೀಕ್ಷೆ ಮಾಡಿಸಿಕೊಳ್ಳಿ.

ಪಾದಗಳ ಆರೋಗ್ಯಕ್ಕಾಗಿ ತಿನ್ನಬೇಕಾದ ಆಹಾರಗಳು

  • ಹಸಿರು ಸೊಪ್ಪುಗಳು
  • ಸಂಪೂರ್ಣ ಧಾನ್ಯಗಳು
  • ಬೇಳೆಕಾಳುಗಳು
  • ಕಡಲೆಕಾಯಿ ಮತ್ತು ಬಾದಾಮಿ
  • ಮೀನು (ಒಮೆಗಾ-3)
  • ವಿಟಮಿನ್ ಬಿ12 ಮತ್ತು ವಿಟಮಿನ್ ಡಿ ಇರುವ ಆಹಾರಗಳು
  • ಸಾಕಷ್ಟು ನೀರು

ಕೆಳಗಿನ ಪರಿಸ್ಥಿತಿಗಳಲ್ಲಿ ವಿಳಂಬ ಮಾಡದೆ ವೈದ್ಯರನ್ನು ಸಂಪರ್ಕಿಸಿ.

  • ಎರಡು ದಿನಗಳಾದರೂ ಗಾಯ ಗುಣವಾಗದಿದ್ದರೆ
  • ಕೀವು ಅಥವಾ ದುರ್ವಾಸನೆ ಇದ್ದರೆ
  • ಜ್ವರದೊಂದಿಗೆ ಪಾದದಲ್ಲಿ ಸೋಂಕು ಕಂಡುಬಂದರೆ
  • ತೀವ್ರ ಊತ ಅಥವಾ ಕಪ್ಪು ಬಣ್ಣದ ಚರ್ಮ ಕಂಡುಬಂದರೆ
  • ನಡೆಯಲು ಸಾಧ್ಯವಾಗದಷ್ಟು ನೋವು ಇದ್ದರೆ

ಸೂಚನೆ: ಮಧುಮೇಹದಲ್ಲಿ ಪಾದಗಳ ಆರೈಕೆ ದೈನಂದಿನ ಅಭ್ಯಾಸವಾಗಬೇಕು. ನಿಯಮಿತ ರಕ್ತದ ಸಕ್ಕರೆ ನಿಯಂತ್ರಣ, ಆರೋಗ್ಯಕರ ಆಹಾರ, ವ್ಯಾಯಾಮ ಹಾಗೂ ಪಾದಗಳ ಸ್ವಚ್ಛತೆ ಡಯಾಬಿಟಿಕ್ ಫುಟ್ ಸಮಸ್ಯೆಗಳ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್