AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ: ಅಪಘಾತದಲ್ಲಿ ಬ್ರೈನ್ ಡೆಡ್ ಆದ ಯುವ ಇಂಜಿನಿಯರ್ ಅಂಗಾಂಗ ದಾನ: ದುಃಖದಲ್ಲೂ ಮಾದರಿಯಾದ ಪೋಷಕರು

ಹೊಳೆನರಸೀಪುರ ತಾಲೂಕಿನ 31 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ರವಿಕುಮಾರ್ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸತತ ಮೂರು ತಿಂಗಳ ಚಿಕಿತ್ಸೆ ಪಡೆದಿದ್ದರು. ಆದರೂ ಫಲಿಸದೆ ಬಳಿಕ ಬ್ರೈನ್ ಡೆಡ್ ಸ್ಥಿತಿ ತಲುಪಿದ್ದರು. ತೀವ್ರ ದುಃಖದ ನಡುವೆಯೂ ಪೋಷಕರು ಏಕೈಕ ಮಗನ ಅಂಗಾಂಗ ದಾನ ಮಾಡಿ ಮಾದರಿಯಾಗಿದ್ದಾರೆ.

ಹಾಸನ: ಅಪಘಾತದಲ್ಲಿ ಬ್ರೈನ್ ಡೆಡ್ ಆದ ಯುವ ಇಂಜಿನಿಯರ್ ಅಂಗಾಂಗ ದಾನ: ದುಃಖದಲ್ಲೂ ಮಾದರಿಯಾದ ಪೋಷಕರು
ರವಿಕುಮಾರ್Image Credit source: tv9
ಮಂಜುನಾಥ ಕೆಬಿ
| Edited By: |

Updated on: Oct 03, 2026 | 7:57 AM

Share

ಮುಖ್ಯಾಂಶಗಳು

  • ಅಪಘಾತದಲ್ಲಿ ಮೃತಪಟ್ಟ ಯುವ ಇಂಜಿನಿಯರ್ ಅಂಗಾಂಗ ದಾನ
  • ಏಕೈಕ ಮಗನ ಅಂಗಾಂಗ ದಾನ ಮಾಡಿದ ಪೋಷಕರು
  • ದುಃಖದಲ್ಲೂ ಸಮಾಜಕ್ಕೆ ಮಾದರಿಯಾದ ಕುಟುಂಬ

ಹಾಸನ, ಅಕ್ಟೋಬರ್ 3: ಬೆಂಗಳೂರಿನಲ್ಲಿ ಐಟಿ ಉದ್ಯೋಗ ಮಾಡುತ್ತಿದ್ದ ಹಾಸನ ಮೂಲದ ಯುವಕ ರಜೆ ನಿಮಿತ್ತ ಊರಿಗೆ ಬಂದಿದ್ದ ವೇಳೆ ಭೀಕರ ರಸ್ತೆ ಅಪಘಾತಕ್ಕೆ ಸಿಲುಕಿದ್ದರು. ಸತತ ಮೂರು ತಿಂಗಳ ಚಿಕಿತ್ಸೆಯ ಬಳಿಕ ಅವರು ಬ್ರೈನ್ ಡೆಡ್ ಸ್ಥಿತಿ ತಲುಪಿ ಮೃತಪಟ್ಟಿದ್ದು, ತೀವ್ರ ದುಃಖದ ನಡುವೆಯೂ ಪೋಷಕರು ಏಕೈಕ ಮಗನ ಅಂಗಾಂಗ ದಾನ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿಕಟ್ಟೆ ಗ್ರಾಮದ ಚಂದ್ರೇಗೌಡ ಹಾಗೂ ಶಿವಮ್ಮ ದಂಪತಿಯ ಏಕೈಕ ಪುತ್ರ 31 ವರ್ಷದ ರವಿಕುಮಾರ್ ಮೃತಪಟ್ಟ ಯುವಕ.

ನಡೆದಿದ್ದೇನು?

ಬೆಂಗಳೂರಿನ ವಿಪ್ರೋ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ರವಿಕುಮಾರ್, ರಜೆ ನಿಮಿತ್ತ ಊರಿಗೆ ಬಂದಿದ್ದರು. ಜುಲೈ 6ರಂದು ಹೊಳೆನರಸೀಪುರ ತಾಲೂಕಿನ ಪರಸನಹಳ್ಳಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರವಿಕುಮಾರ್ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಆಸ್ಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

3 ತಿಂಗಳ ಚಿಕಿತ್ಸೆಯ ನಂತರ ಬ್ರೈನ್ ಡೆಡ್

ತೀವ್ರ ನಿಗಾ ಘಟಕದಲ್ಲಿ ವೈದ್ಯರ ತಂಡ ಸತತವಾಗಿ ಚಿಕಿತ್ಸೆ ನೀಡಿದರೂ ರವಿಕುಮಾರ್ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಸತತ ಮೂರು ತಿಂಗಳ ಚಿಕಿತ್ಸೆಯ ಬಳಿಕ ಅವರು ಬ್ರೈನ್ ಡೆಡ್ ಸ್ಥಿತಿ ತಲುಪಿರುವುದಾಗಿ ವೈದ್ಯರು ಘೋಷಿಸಿದರು. ಕಣ್ಣೆದುರೇ ಬೆಳೆದು ನಿಂತಿದ್ದ ಏಕೈಕ ಮಗನನ್ನು ಕಳೆದುಕೊಂಡು ಪೋಷಕರು ತೀವ್ರ ಶೋಕದಲ್ಲಿದ್ದರು. ಈ ದುಃಖದ ನಡುವೆಯೂ ರವಿಕುಮಾರ್ ಅವರ ನೆನಪನ್ನು ಶಾಶ್ವತವಾಗಿಡುವ ಉದ್ದೇಶದಿಂದ ಅಂಗಾಂಗ ದಾನಕ್ಕೆ ಮುಂದಾದರು.

ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಿದ ಅಂಗಾಂಗ ದಾನ: ಆದರೆ ಕಿಡ್ನಿ ಕಸಿಗಾಗಿ ಇಂದಿಗೂ ವರ್ಷಗಟ್ಟಲೆ ಕಾಯಬೇಕಾದ ಸ್ಥಿತಿ

ರಾಜ್ಯ ಸರ್ಕಾರದ ಅಧಿಕೃತ ಅಂಗಾಂಗ ದಾನ ಸಂಸ್ಥೆಯಾದ ಜೀವಸಾರ್ಥಕತೆ ಮೂಲಕ ರವಿಕುಮಾರ್ ಅವರ ಅಂಗಾಂಗಗಳನ್ನು ದಾನ ಮಾಡಲಾಯಿತು. ಈ ಮೂಲಕ ಅಂಗಾಂಗಗಳ ಅಗತ್ಯವಿದ್ದ ಹಲವು ರೋಗಿಗಳಿಗೆ ನವಜೀವನ ದೊರೆಯುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More