AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು

ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು

ಸುಷ್ಮಾ ಚಕ್ರೆ
|

Updated on: Oct 02, 2026 | 6:45 PM

Share

111 ಕಿಲೋಮೀಟರ್ ಉದ್ದದ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ-ಬನಿಹಾಲ್ ರೈಲ್ವೆ ವಿಭಾಗದಲ್ಲಿ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 75 ಕಿ.ಮೀ.ನಿಂದ 100 ಕಿ.ಮೀ.ಗೆ ಏರಿಸಲಾಗಿದೆ. ಇಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಬಳಸಿ ಈ ವೇಗದ ಪರೀಕ್ಷೆಯನ್ನು ನಡೆಸಲಾಯಿತು. ಈ ಪ್ರಾಯೋಗಿಕ ಸಂಚಾರದ ಸಮಯದಲ್ಲಿ ರೈಲು ಚೆನಾಬ್ ರೈಲ್ವೆ ಸೇತುವೆ ಮತ್ತು ಅಂಜಿ ಖಾಡ್ ಸೇತುವೆಗಳೆರಡನ್ನೂ ಯಶಸ್ವಿಯಾಗಿ ದಾಟಿದೆ. ನದಿಯ ತಳದಿಂದ 359 ಮೀಟರ್ ಎತ್ತರದಲ್ಲಿರುವ ಚೆನಾಬ್ ರೈಲ್ವೆ ಸೇತುವೆಯು ವಿಶ್ವದಲ್ಲೇ ಅತ್ಯಂತ ಎತ್ತರದ ರೈಲ್ವೆ ಆರ್ಚ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1,315 ಮೀಟರ್ ಉದ್ದವಿರುವ ಈ ಸೇತುವೆಯನ್ನು ಗಂಟೆಗೆ 100 ಕಿ.ಮೀ. ವೇಗದಲ್ಲಿ ರೈಲುಗಳು ಸಂಚರಿಸುವಂತೆ ವಿನ್ಯಾಸಗೊಳಿಸಲಾಗಿದೆ.

ನವದೆಹಲಿ, ಅಕ್ಟೋಬರ್ 2: ಕತ್ರಾ-ಬನಿಹಾಲ್ ರೈಲ್ವೆ ವಿಭಾಗದಲ್ಲಿ ಗರಿಷ್ಠ ವೇಗದ ಮಿತಿಯನ್ನು ಹೆಚ್ಚಿಸಿದ ನಂತರ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಭಾರತದ ಅತ್ಯಂತ ಪ್ರಸಿದ್ಧ ಎರಡು ರೈಲ್ವೆ ಸೇತುವೆಗಳಾದ ಚೆನಾಬ್-ಅಂಜಿ ಮೇಲೆ ಗಂಟೆಗೆ 100 ಕಿ.ಮೀ. ವೇಗದಲ್ಲಿ ಯಶಸ್ವಿಯಾಗಿ ಚಲಿಸಿದೆ. ಈ ಯಶಸ್ವಿ ಪ್ರಯೋಗದ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, “ಭಾರತದ ಎಂಜಿನಿಯರಿಂಗ್ ಹೆಮ್ಮೆಯ ಮೇಲಿಂದ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್ ಎಕ್ಸ್​ಪ್ರೆಸ್!” ಎಂದು ಬರೆದುಕೊಂಡಿದ್ದಾರೆ.

111 ಕಿಲೋಮೀಟರ್ ಉದ್ದದ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ-ಬನಿಹಾಲ್ ರೈಲ್ವೆ ವಿಭಾಗದಲ್ಲಿ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 75 ಕಿ.ಮೀ.ನಿಂದ 100 ಕಿ.ಮೀ.ಗೆ ಏರಿಸಲಾಗಿದೆ. ಇಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಬಳಸಿ ಈ ವೇಗದ ಪರೀಕ್ಷೆಯನ್ನು ನಡೆಸಲಾಯಿತು. ಈ ಪ್ರಾಯೋಗಿಕ ಸಂಚಾರದ ಸಮಯದಲ್ಲಿ ರೈಲು ಚೆನಾಬ್ ರೈಲ್ವೆ ಸೇತುವೆ ಮತ್ತು ಅಂಜಿ ಖಾಡ್ ಸೇತುವೆಗಳೆರಡನ್ನೂ ಯಶಸ್ವಿಯಾಗಿ ದಾಟಿದೆ. ನದಿಯ ತಳದಿಂದ 359 ಮೀಟರ್ ಎತ್ತರದಲ್ಲಿರುವ ಚೆನಾಬ್ ರೈಲ್ವೆ ಸೇತುವೆಯು ವಿಶ್ವದಲ್ಲೇ ಅತ್ಯಂತ ಎತ್ತರದ ರೈಲ್ವೆ ಆರ್ಚ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1,315 ಮೀಟರ್ ಉದ್ದವಿರುವ ಈ ಸೇತುವೆಯನ್ನು ಗಂಟೆಗೆ 100 ಕಿ.ಮೀ. ವೇಗದಲ್ಲಿ ರೈಲುಗಳು ಸಂಚರಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More