ಮಕ್ಕಳ ಬಗ್ಗೆ ಎಚ್ಚರ; ಬಾಳೆಹಣ್ಣು ಗಂಟಲಲ್ಲಿ ಸಿಕ್ಕಿ 5 ವರ್ಷದ ಬಾಲಕ ಸಾವು!
ಬಾಳೆಹಣ್ಣು ತಿಂದು ಉಸಿರುಗಟ್ಟಿ 5 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ತಮಿಳುನಾಡಿನಾದ್ಯಂತ ತೀವ್ರ ಆಘಾತವನ್ನುಂಟು ಮಾಡಿದೆ. ಈರೋಡ್ನ ಬಾಲಕನ ಶವವನ್ನು ಈರೋಡ್ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ಪೋಷಕರಿಗೆ ಹಸ್ತಾಂತರಿಸಲಾಯಿತು. ತಮಿಳುನಾಡಿನಲ್ಲಿ ವೈದ್ಯರು ಸೇರಿದಂತೆ ಅನೇಕ ಜನರು ಬಾಲಕನ ಸಾವಿಗೆ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ವೈದ್ಯರು ಕೂಡ ಶವಪರೀಕ್ಷೆಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ.
- Sushma Chakre
- Updated on: Dec 4, 2025
- 9:53 pm
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷರಿಗೆ ಖಾಸಗಿ ಭೋಜನ ಕೂಟವನ್ನು ಆಯೋಜಿಸಿದ್ದಾರೆ. ಇಂದು ಸಂಜೆ ನವದೆಹಲಿಗೆ ಆಗಮಿಸಿದ ಪುಟಿನ್, ಪ್ರಧಾನ ಮಂತ್ರಿಯವರ ಲೋಕ ಕಲ್ಯಾಣ್ ಮಾರ್ಗ್ ನಿವಾಸಕ್ಕೆ ಭೋಜನ ಕೂಟಕ್ಕೆ ತೆರಳಿದರು. ಇಂದು ಸಂಜೆ ಉಭಯ ನಾಯಕರ ನಡುವಿನ ಸಂಭಾಷಣೆಯು ಶುಕ್ರವಾರ ನಡೆಯಲಿರುವ 23ನೇ ಭಾರತ-ರಷ್ಯಾ ಶೃಂಗಸಭೆಯ ಮಾತುಕತೆಗೆ ನಾಂದಿ ಹಾಡುವ ನಿರೀಕ್ಷೆಯಿದೆ, ಇದು ಹಲವಾರು ಪ್ರಮುಖ ಒಪ್ಪಂದಗಳನ್ನು ರೂಪಿಸುವ ನಿರೀಕ್ಷೆಯಿದೆ.
- Sushma Chakre
- Updated on: Dec 4, 2025
- 8:38 pm
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದಿನಿಂದ ಭಾರತಕ್ಕೆ ಎರಡು ದಿನಗಳ ಭೇಟಿ ನೀಡಿದ್ದು, ಅವರನ್ನು ಪಾಲಂ ವಿಮಾನ ನಿಲ್ದಾಣದಲ್ಲಿ ಖುದ್ದು ಮೋದಿಯವರೇ ಬರಮಾಡಿಕೊಂಡಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಪ್ರದರ್ಶಿಸಿದ ಭಾರತೀಯ ಶಾಸ್ತ್ರೀಯ ನೃತ್ಯಕ್ಕೆ ಪುಟಿನ್ ಮನಸೋತಿದ್ದಾರೆ. ಇದಾದ ಬಳಿಕ ಇಬ್ಬರೂ ಒಂದೇ ಕಾರಿನಲ್ಲಿ ತೆರಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಾರ್ಷಿಕ ಶೃಂಗಸಭೆ ಮಾತುಕತೆ ನಡೆಸಲಿದ್ದಾರೆ.
- Sushma Chakre
- Updated on: Dec 4, 2025
- 8:13 pm
ಭಾರತಕ್ಕೆ ಬಂದ ಗೆಳೆಯ ಪುಟಿನ್ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಎರಡು ದಿನಗಳ ರಾಜ್ಯ ಭೇಟಿಗಾಗಿ ಭಾರತದಲ್ಲಿದ್ದಾರೆ. ರಷ್ಯಾದ ನಿಯೋಗವು ವ್ಯಾಪಾರ, ಆರ್ಥಿಕತೆ, ವಿಜ್ಞಾನ, ತಂತ್ರಜ್ಞಾನ ಮತ್ತು ಸಂಸ್ಕೃತಿಯಂತಹ ಕ್ಷೇತ್ರಗಳಲ್ಲಿ ಸಹಕಾರದ ಕುರಿತು ಚರ್ಚೆ ನಡೆಸಲಿದೆ. ಪುಟಿನ್ 23 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಡಿಸೆಂಬರ್ 5 ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪುಟಿನ್ ಭಾಗವಹಿಸಲಿದ್ದಾರೆ.
- Sushma Chakre
- Updated on: Dec 4, 2025
- 7:40 pm
ಪ್ರೋಟೋಕಾಲ್ ಬದಿಗೊತ್ತಿ ರಷ್ಯಾ ಅಧ್ಯಕ್ಷ ಪುಟಿನ್ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಪ್ರಧಾನಿ ಮೋದಿ
ಇಂದು ಸಂಜೆ ನವದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಪುಟಿನ್ ಎರಡು ದಿನಗಳ ಭೇಟಿಯಲ್ಲಿದ್ದು, ಪ್ರಧಾನಿ ಮೋದಿ ಅವರೊಂದಿಗೆ 23ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 2022ರಲ್ಲಿ ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಭಾರತಕ್ಕೆ ಪುಟಿನ್ ಅವರ ಮೊದಲ ಭೇಟಿ ಇದಾಗಿದೆ.
- Sushma Chakre
- Updated on: Dec 4, 2025
- 7:01 pm
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಜಾರ್ಖಂಡ್ನಲ್ಲಿ "ವಿಷಕಾರಿ ಅನಿಲ ಸೋರಿಕೆ"ಯಾಗಿ, ಈ ಗಾಳಿ ಉಸಿರಾಡಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಮತ್ತು ಒಂದು ಡಜನ್ಗೂ ಹೆಚ್ಚು ಜನರು ಆಸ್ಪತ್ರೆಯಲ್ಲಿದ್ದಾರೆ. ಅನಿಲ ಸೋರಿಕೆಯ ಮೂಲ ಮತ್ತು ಕಾರಣವನ್ನು ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ. ಇದು ಸರ್ಕಾರಿ ಸ್ವಾಮ್ಯದ ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ನ (BCCL) ಕಲ್ಲಿದ್ದಲು ಗಣಿಗಾರಿಕೆ ಪ್ರದೇಶದ ಭಾಗವಾಗಿದೆ. ಗ್ಯಾಸ್ ಸೋರಿಕೆಯಾದ ನಂತರ ಕಂಪನಿಯು ನಿವಾಸಿಗಳನ್ನು ಸ್ಥಳಾಂತರಿಸಲು ಪ್ರಾರಂಭಿಸಿದೆ.
- Sushma Chakre
- Updated on: Dec 4, 2025
- 6:35 pm
ಭಾರತಕ್ಕೆ ಪುಟಿನ್ ಭೇಟಿ; ರಷ್ಯಾ ಅಧ್ಯಕ್ಷ 2 ದಿನ ದೆಹಲಿಯಲ್ಲಿ ಏನು ಮಾಡಲಿದ್ದಾರೆ?
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಸಂಜೆ 6.30ಕ್ಕೆ ದೆಹಲಿಗೆ ಆಗಮಿಸಲಿದ್ದಾರೆ. ಪುಟಿನ್ ಅವರ ಜೊತೆಗೆ ಅವರ ನೆಚ್ಚಿನ ಕಾರು ಔರಸ್ ಸೆನಾಟ್ ಲಿಮೋಸುಯಿನ್ ಕೂಡ ಭಾರತಕ್ಕೆ ಬರಲಿದೆ. ಈ ಕಾರನ್ನು ಅತ್ಯಂತ ಸುರಕ್ಷತೆಯ ದೃಷ್ಟಿಯಿಂದ ಐಷಾರಾಮಿಯಾಗಿ ಸಿದ್ಧಪಡಿಸಲಾಗಿದೆ. ಇದು ರಷ್ಯಾದ ಅಧಿಕೃತ ಅಧ್ಯಕ್ಷೀಯ ಸರ್ಕಾರಿ ಕಾರು. ಇದನ್ನು ಹೆಚ್ಚಾಗಿ ರೋಲ್ಸ್ ರಾಯ್ಸ್ಗೆ ಹೋಲಿಸಲಾಗುತ್ತದೆ. ಈ ಕಾರು ಪುಟಿನ್ ಜೊತೆಗೆ ದೆಹಲಿಗೂ ಬರಲಿದೆ. ದೆಹಲಿಯಲ್ಲಿ ಪುಟಿನ್ ಅವರ ವೇಳಾಪಟ್ಟಿ ಹೀಗಿದೆ.
- Sushma Chakre
- Updated on: Dec 4, 2025
- 5:31 pm
ಪ್ರಧಾನಿ ಮೋದಿ- ಪುಟಿನ್ ಗೆಳೆತನ 25 ವರ್ಷಕ್ಕೂ ಹಿಂದಿನದು; ವಾಜಪೇಯಿ ಜೊತೆಗಿನ ಫೋಟೋ ಮತ್ತೆ ವೈರಲ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 4 ವರ್ಷಗಳ ಬಳಿಕ ಇದೀಗ ಮತ್ತೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದು ಸಂಜೆ ಅವರು ದೆಹಲಿಗೆ ಬಂದಿಳಿಯಲಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಸಂಜೆ 6.30ಕ್ಕೆ ನವದೆಹಲಿಗೆ ಆಗಮಿಸಲಿದ್ದಾರೆ. ಇದು ಉಕ್ರೇನ್ ಸಂಘರ್ಷ ಪ್ರಾರಂಭವಾದ ನಂತರದ ಅವರ ಮೊದಲ ಭಾರತ ಭೇಟಿಯಾಗಿದೆ. ಮೋದಿ ಹಾಗೂ ಪುಟಿನ್ ನಡುವಿನ ಉತ್ತಮ ಬಾಂಧವ್ಯದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ, ಈ ಸ್ನೇಹ ಮೋದಿ ಪ್ರಧಾನಿಯಾದ ಬಳಿಕ ಶುರುವಾಗಿದ್ದಲ್ಲ; ಈ ಗೆಳೆತನಕ್ಕೆ 25ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ.
- Sushma Chakre
- Updated on: Dec 4, 2025
- 4:48 pm
ದೆಹಲಿಯಲ್ಲಿ ಇಂದು ಪುಟಿನ್ ತಂಗಲಿರುವ ಹೋಟೆಲ್ ರೂಂ ಬಾಡಿಗೆ ಕೇಳಿದರೆ ಶಾಕ್ ಆಗುತ್ತೀರಿ!
Putin Visit to Delhi: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎರಡು ದಿನಗಳ ಭೇಟಿಗಾಗಿ ಇಂದು (ಡಿಸೆಂಬರ್ 4) ನವದೆಹಲಿಗೆ ಆಗಮಿಸಲಿದ್ದಾರೆ. ಈ ಉನ್ನತ ಮಟ್ಟದ ಭೇಟಿಗಾಗಿ ದೆಹಲಿಯ ಐಟಿಸಿ ಮೌರ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ, ಈ ಐಷಾರಾಮಿ ಹೋಟೆಲ್ ಮಾಧ್ಯಮ ಮತ್ತು ಭದ್ರತಾ ಸಂಸ್ಥೆಗಳ ಗಮನ ಸೆಳೆಯುತ್ತಿರುವ ಕೇಂದ್ರಬಿಂದುವಾಗಿದೆ. ಈ ಹೋಟೆಲ್ ಈಗ ಬಿಗಿಯಾದ ಕಣ್ಗಾವಲಿನಲ್ಲಿದೆ. ಈ ಹೋಟೆಲ್ನ ಬಹುತೇಕ ಎಲ್ಲಾ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಈ ಹೋಟೆಲ್ನ ರೂಂನ ಬಾಡಿಗೆ ಎಷ್ಟು ಗೊತ್ತಾ?
- Sushma Chakre
- Updated on: Dec 4, 2025
- 4:17 pm
ಭಾರತ S-500 ವ್ಯವಸ್ಥೆ ಖರೀದಿಸಲು ಶ್ರಮಿಸಬೇಕು; ಪಾಟ್ನಾ ಮೂಲದ ರಷ್ಯಾದ ಶಾಸಕ ಅಭಯ್ ಸಿಂಗ್
ರಷ್ಯನ್, ಇಂಗ್ಲಿಷ್, ಹಿಂದಿ ಮಾತನಾಡುವ ಅಭಯ್ ಕುಮಾರ್ ಸಿಂಗ್, 1991ರಲ್ಲಿ ಕುರ್ಸ್ಕ್ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಅಧ್ಯಯನ ಮಾಡಲು ರಷ್ಯಾಕ್ಕೆ ತೆರಳಿದರು. 2015ರಲ್ಲಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯುನೈಟೆಡ್ ರಷ್ಯಾ ಪಕ್ಷವನ್ನು ಸೇರಿದರು. 2018ರಲ್ಲಿ ಕುರ್ಸ್ಕ್ನಲ್ಲಿ ಪ್ರಾಂತೀಯ ಚುನಾವಣೆಯಲ್ಲಿ ಗೆದ್ದರು. ಈ ಮೂಲಕ ರಷ್ಯಾದ ಮೊದಲ ಭಾರತೀಯ ಮೂಲದ ಶಾಸಕರಾದರು. ಅವರು 2022ರಲ್ಲಿ ಮರು ಆಯ್ಕೆಯಾದರು.
- Sushma Chakre
- Updated on: Dec 4, 2025
- 3:23 pm
ಪಾನ್ ಮಸಾಲಾ ಪ್ಯಾಕೆಟ್ ಮೇಲೆ ಚಿಲ್ಲರೆ ಮಾರಾಟ ಬೆಲೆ ನಮೂದಿಸುವುದು ಕಡ್ಡಾಯ
ಪಾನ್ ಮಸಾಲಾ ಪ್ಯಾಕೆಟ್ಗಳ ಮೇಲೆ ಚಿಲ್ಲರೆ ಮಾರಾಟ ಬೆಲೆಯನ್ನು ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶದಂತೆ ಇನ್ಮುಂದೆ ಪಾನ್ ಮಸಾಲಾ ಪ್ಯಾಕ್ಗಳ ಮೇಲೆ RSP ಹಾಕುವುದು ಕಡ್ಡಾಯವಾಗಿದೆ. ಕಡ್ಡಾಯವಾಗಿ ಚಿಲ್ಲರೆ ಮಾರಾಟ ಬೆಲೆ ಹಾಕುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 2026ರ ಫೆಬ್ರವರಿ 1ರಿಂದ ಕೇಂದ್ರ ಸರ್ಕಾರದ ಹೊಸ ಆದೇಶ ಅನ್ವಯವಾಗಲಿದೆ. ಗ್ರಾಹಕರಿಗೆ ಪಾರದರ್ಶಕತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಎಲ್ಲಾ ಗಾತ್ರದ ಪಾನ್ ಮಸಾಲಾ ಪ್ಯಾಕ್ ಮೇಲೂ ಚಿಲ್ಲರೆ ಮಾರಾಟ ಬೆಲೆ ಹಾಕುವುದು ಕಡ್ಡಾಯವಾಗಿದೆ. ಕಾನೂನು ಮಾಪನಶಾಸ್ತ್ರ ತಿದ್ದುಪಡಿ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
- Sushma Chakre
- Updated on: Dec 3, 2025
- 8:59 pm
ಛತ್ತೀಸ್ಗಢದಲ್ಲಿ 12 ನಕ್ಸಲರ ಎನ್ಕೌಂಟರ್, ಮೂವರು ಜವಾನರ ಸಾವು
ಛತ್ತೀಸ್ಗಢದ ಬಿಜಾಪುರದಲ್ಲಿ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ 12 ನಕ್ಸಲರು ಸಾವನ್ನಪ್ಪಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಜಿಲ್ಲಾ ಮೀಸಲು ಪಡೆ ( ಡಿಆರ್ಜಿ) ಜವಾನರು ಹುತಾತ್ಮರಾಗಿದ್ದಾರೆ. ಎನ್ಕೌಂಟರ್ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಅರಣ್ಯಗಳಲ್ಲಿ ಇತರ ನಕ್ಸಲರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ. ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ ಮಾವೋವಾದಿಗಳ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ.
- Sushma Chakre
- Updated on: Dec 3, 2025
- 8:06 pm