AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿಗೆ ಇಸ್ರೇಲ್ ಸಂಸತ್​​ನ ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ ಪ್ರದಾನ

ಪ್ರಧಾನಿ ಮೋದಿಗೆ ಇಸ್ರೇಲ್ ಸಂಸತ್​​ನ ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ ಪ್ರದಾನ

ಸುಷ್ಮಾ ಚಕ್ರೆ
|

Updated on:Feb 25, 2026 | 10:28 PM

Share

ಪ್ರಧಾನಿ ಮೋದಿ ಅವರಿಗೆ ಇಸ್ರೇಲ್ ಸಂಸತ್ತು 'ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ' ನೀಡಿ ಗೌರವಿಸಿದೆ. ಈ ಗೌರವ ಪಡೆದ ಮೊದಲ ಭಾರತೀಯ ಪ್ರಧಾನಿ ಮೋದಿ. ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಎರಡರಿಂದಲೂ ಉನ್ನತ ನಾಗರಿಕ ಗೌರವಗಳನ್ನು ಪಡೆದ ಕೆಲವೇ ಜಾಗತಿಕ ನಾಯಕರಲ್ಲಿ ಮೋದಿ ಕೂಡ ಒಬ್ಬರು. 2018ರಲ್ಲಿ ವಿದೇಶಿ ಗಣ್ಯರಿಗೆ ನೀಡಲಾಗುವ ಅತ್ಯುನ್ನತ ಪ್ಯಾಲೆಸ್ಟೀನಿಯನ್ ಪ್ರಶಸ್ತಿಯಾದ ಪ್ಯಾಲೆಸ್ಟೈನ್ ರಾಜ್ಯದ ಗ್ರ್ಯಾಂಡ್ ಕಾಲರ್ ಅನ್ನು ಮೋದಿಗೆ ನೀಡಲಾಗಿತ್ತು.

ಜೆರುಸಲೆಮ್, ಫೆಬ್ರವರಿ 25: ಇಸ್ರೇಲ್ ಸಂಸತ್ ಅನ್ನು ಉದ್ದೇಶಿಸಿ ಮಾತನಾಡಿದ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿ (PM Modi in Israel) ಅವರಿಗೆ ಇಂದು “ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ” ಪ್ರದಾನ ಮಾಡಲಾಗಿದೆ. ಇದು ಇಸ್ರೇಲ್ ಸಂಸತ್​ ನೆಸ್ಸೆಟ್‌ನ ಅತ್ಯುನ್ನತ ಗೌರವವಾಗಿದೆ. ಭಾರತ ಮತ್ತು ಇಸ್ರೇಲ್ ನಡುವಿನ ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ ತಮ್ಮ ವೈಯಕ್ತಿಕ ನಾಯಕತ್ವದ ಮೂಲಕ ನೀಡಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಈ ಪದಕವನ್ನು ನೀಡಲಾಗಿದೆ. ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಎರಡರಿಂದಲೂ ಉನ್ನತ ನಾಗರಿಕ ಗೌರವಗಳನ್ನು ಪಡೆದ ಕೆಲವೇ ಜಾಗತಿಕ ನಾಯಕರಲ್ಲಿ ಮೋದಿ ಕೂಡ ಒಬ್ಬರು. 2018ರಲ್ಲಿ ವಿದೇಶಿ ಗಣ್ಯರಿಗೆ ನೀಡಲಾಗುವ ಅತ್ಯುನ್ನತ ಪ್ಯಾಲೆಸ್ಟೀನಿಯನ್ ಪ್ರಶಸ್ತಿಯಾದ ಪ್ಯಾಲೆಸ್ಟೈನ್ ರಾಜ್ಯದ ಗ್ರ್ಯಾಂಡ್ ಕಾಲರ್ ಅನ್ನು ಮೋದಿಗೆ ನೀಡಲಾಗಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Feb 25, 2026 10:25 PM
Follow Us