AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಭಾವಸ್ಥೆಯಲ್ಲಿ ಕೇಸರಿ ಹಾಲು ಕುಡಿಯುತ್ತಿದ್ದೀರಾ? ಈ ವಿಷಯಗಳನ್ನು ತಿಳಿದುಕೊಳ್ಳಿ!

ಗರ್ಭಾವಸ್ಥೆಯಲ್ಲಿ ಕೇಸರಿ ಹಾಲು ಕುಡಿಯುವವರ ಸಂಖ್ಯೆ ತುಸು ಹೆಚ್ಚು. ಇತ್ತೀಚಿಗೆ ಇದೊಂದು ರೀತಿಯ ಪದ್ಧತಿಯಾಗಿದೆ. ಆದರೆ ಕೇಸರಿ ಎಲ್ಲ ಹಂತಗಳಲ್ಲೂ, ಎಲ್ಲ ಪ್ರಮಾಣದಲ್ಲೂ ಸುರಕ್ಷಿತವೇ? ಎಂಬುದನ್ನು ತಿಳಿಯುವುದು ಬಹಳ ಮುಖ್ಯ. ಹಾಗಾದರೆ ಕೇಸರಿಯಲ್ಲಿ ಏನಿದೆ, ಯಾಕೆ ಗರ್ಭಾವಸ್ಥೆಯಲ್ಲಿ ಇದನ್ನು ಕುಡಿಯಲು ಹೇಳಲಾಗುತ್ತದೆ, ನಿಜವಾಗಿಯೂ ಕೇಸರಿ ಹಾಲು ಮಗುವಿನ ಬಣ್ಣ ಬದಲಿಸುತ್ತದೆಯೇ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಗರ್ಭಾವಸ್ಥೆಯಲ್ಲಿ ಕೇಸರಿ ಹಾಲು ಕುಡಿಯುತ್ತಿದ್ದೀರಾ? ಈ ವಿಷಯಗಳನ್ನು ತಿಳಿದುಕೊಳ್ಳಿ!
Saffron Milk In PregnancyImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Oct 01, 2026 | 8:08 PM

Share

ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ಪ್ರತಿಯೊಂದು ಆಹಾರವನ್ನೂ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ಕೇಸರಿ ಬೆರೆಸಿದ ಹಾಲು ಕುಡಿಯುವ ಪದ್ಧತಿ ಹಲವೆಡೆ ಕಂಡುಬರುತ್ತದೆ. ಕೇಸರಿ ಆರೋಗ್ಯಕರವಾಗಿದ್ದರೂ, ಗರ್ಭಾವಸ್ಥೆಯಲ್ಲಿ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಅಥವಾ ಔಷಧೀಯ ಉದ್ದೇಶದಿಂದ ಬಳಸುವುದು ಸುರಕ್ಷಿತವೇ ಎಂದು ತಿಳಿಯಬೇಕಾಗುತ್ತದೆ. ಅದರಲ್ಲಿಯೂ ಕೆಲವರಿಗೆ ಯಾವುದೇ ಹರ್ಬಲ್ ಉತ್ಪನ್ನ ಅಥವಾ ಸಪ್ಲಿಮೆಂಟ್ ಬಳಸುವ ಮೊದಲು ವೈದ್ಯರ ಸಲಹೆ ಪಡೆಯಬೇಕಾಗುತ್ತದೆ. ಹಾಗಾದರೆ ಕೇಸರಿಯಲ್ಲಿ ಏನಿದೆ, ಯಾಕೆ ಗರ್ಭಾವಸ್ಥೆಯಲ್ಲಿ ಇದನ್ನು ಕುಡಿಯಲು ಹೇಳಲಾಗುತ್ತದೆ, ನಿಜವಾಗಿಯೂ ಕೇಸರಿ ಹಾಲು ಮಗುವಿನ ಬಣ್ಣ ಬದಲಿಸುತ್ತದೆಯೇ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕೇಸರಿಯಲ್ಲಿ ಏನಿದೆ?

ಕೇಸರಿಯಲ್ಲಿ ಹಲವು ಸಸ್ಯಸಂಯುಕ್ತಗಳು ಮತ್ತು ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಅಂಶಗಳಿವೆ. ಸಾಮಾನ್ಯ ಆಹಾರದಲ್ಲಿ ಬಳಸುವ ಪ್ರಮಾಣ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸಪ್ಲಿಮೆಂಟ್‌ನಂತೆ ತೆಗೆದುಕೊಳ್ಳುವುದನ್ನು ಒಂದೇ ರೀತಿಯಾಗಿ ನೋಡಬಾರದು. ಬಳಕೆ ಪ್ರಮಾಣ ಒಂದು ಮಿತಿಯಲ್ಲಿದ್ದರೆ ಒಳ್ಳೆಯದು.

ಮೂಡ್ ಮತ್ತು ಒತ್ತಡಕ್ಕೆ ಕೇಸರಿ ಸಹಾಯ ಮಾಡುತ್ತದೆಯೇ?

ಕೇಸರಿಯನ್ನು ಮನಸ್ಥಿತಿ ಸುಧಾರಣೆ ಸೇರಿದಂತೆ ಹಲವು ಉದ್ದೇಶಗಳಿಗೆ ಬಳಸಲಾಗುತ್ತದೆ. ಆದರೆ ಗರ್ಭಿಣಿಯರಲ್ಲಿ ಕೇಸರಿ ಹಾಲು ಕುಡಿಯುವುದರಿಂದ ಒತ್ತಡ ಅಥವಾ ಆತಂಕ ಖಚಿತವಾಗಿ ಕಡಿಮೆಯಾಗುತ್ತದೆ ಎಂದು ಹೇಳಲು ಸಾಕಷ್ಟು ವೈದ್ಯಕೀಯ ಸಾಕ್ಷ್ಯವಿಲ್ಲ. ಗರ್ಭಾವಸ್ಥೆಯಲ್ಲಿ ನಿರಂತರ ಆತಂಕ ಅಥವಾ ಮನಸ್ಥಿತಿ ಸಮಸ್ಯೆ ಇದ್ದರೆ ವೈದ್ಯರೊಂದಿಗೆ ಮಾತನಾಡುವುದು ಉತ್ತಮ.

ಇದನ್ನೂ ಓದಿ: ಚೀಟ್ ಡೇ ಹೃದಯಕ್ಕೆ ಹಾನಿಕರವೇ? ಇಷ್ಟದ ಆಹಾರ ತಿನ್ನುವಾಗ ಈ ವಿಷಯ ನೆನಪಿರಲಿ!

ಜೀರ್ಣಕ್ರಿಯೆ ಮತ್ತು ವಾಕರಿಕೆ

ಗರ್ಭಾವಸ್ಥೆಯಲ್ಲಿ ವಾಕರಿಕೆ, ವಾಂತಿ, ಗ್ಯಾಸ್ ಮತ್ತು ಮಲಬದ್ಧತೆ ಸಾಮಾನ್ಯವಾಗಬಹುದು. ಕೆಲವರಿಗೆ ಕೇಸರಿ ಹಾಲು ಇಂತಹ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಇದು ಎಲ್ಲರಿಗೂ ಒಂದೇ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆಹಾರ ಪದ್ಧತಿ, ಸಾಕಷ್ಟು ನೀರು ಮತ್ತು ವೈದ್ಯರು ಸೂಚಿಸುವ ಸುರಕ್ಷಿತ ಕ್ರಮಗಳು ಕೂಡ ಮುಖ್ಯವಾಗುತ್ತದೆ.

ಕೇಸರಿ ಹಾಲು ಮಗುವಿನ ಬಣ್ಣ ಬದಲಿಸುತ್ತದೆಯೇ?

ಸಾಮಾನ್ಯವಾಗಿ ಕೇಸರಿ ಹಾಲು ಕುಡಿದರೆ ಮಗು ಹೆಚ್ಚು ಬೆಳ್ಳಗೆ ಹುಟ್ಟುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ನಂಬಿಕೆಗೆ ವೈಜ್ಞಾನಿಕ ಆಧಾರವಿಲ್ಲ. ಮಗುವಿನ ಚರ್ಮದ ಬಣ್ಣ ಮುಖ್ಯವಾಗಿ ಆನುವಂಶಿಕ ಅಂಶಗಳಿಗೆ ಸಂಬಂಧಿಸಿದೆ. ಆದ್ದರಿಂದ ಕೇಸರಿ ಹಾಲನ್ನು ಮಗುವಿನ ಮೈಬಣ್ಣ ಬದಲಿಸುವ ಆಹಾರವೆಂದು ಪರಿಗಣಿಸಬಾರದು.

ಮೊದಲ ಮೂರು ತಿಂಗಳು ಮಾತ್ರ ಬೇಡವೇ?

ಮೊದಲ ಮೂರು ತಿಂಗಳು ಮಾತ್ರ ಕೇಸರಿ ಬೇಡ, ನಂತರದಿಂದ ಸುರಕ್ಷಿತ ಎಂದು ಹೇಳಲು ಸಾಧ್ಯವಿಲ್ಲ. ಗರ್ಭಾವಸ್ಥೆಯ ಯಾವುದೇ ಹಂತದಲ್ಲಿ ಕೇಸರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಅಥವಾ ಸಪ್ಲಿಮೆಂಟ್ ರೂಪದಲ್ಲಿ ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ವಿಶೇಷವಾಗಿ ಗರ್ಭಾವಸ್ಥೆಯ ತೊಂದರೆಗಳು, ಔಷಧ ಸೇವನೆ ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದರೆ ಹೆಚ್ಚು ಎಚ್ಚರಿಕೆ ಅಗತ್ಯ.

ಎಷ್ಟು ತೆಗೆದುಕೊಳ್ಳಬೇಕು?

ಎಲ್ಲಾ ಗರ್ಭಿಣಿಯರಿಗೂ ಒಂದೇ ರೀತಿಯ ಪ್ರಮಾಣ ಅನ್ವಯಿಸುವುದಿಲ್ಲ. ಹಾಗಾಗಿ ಕೇಸರಿ ಹಾಲು ಕುಡಿಯಲು ಆರಂಭಿಸುವ ಮೊದಲು ವೈದ್ಯರು ಅಥವಾ ಪ್ರಸೂತಿ ತಜ್ಞರ ಸಲಹೆ ಪಡೆಯುವುದು ಉತ್ತಮ. ಮುಖ್ಯವಾಗಿ ಗರ್ಭಾವಸ್ಥೆಯಲ್ಲಿ ಕೇಸರಿಯನ್ನು ಔಷಧಿಯಂತೆ ಬಳಸಬಾರದು. ಸಮತೋಲಿತ ಆಹಾರ, ವೈದ್ಯರು ಸೂಚಿಸುವ ಪ್ರೆಗ್ನೆನ್ಸಿ ಸಪ್ಲಿಮೆಂಟ್‌ಗಳು ಮತ್ತು ನಿಯಮಿತ ತಪಾಸಣೆಗಳು ತಾಯಿ-ಮಗುವಿನ ಆರೋಗ್ಯಕ್ಕೆ ಹೆಚ್ಚು ಮುಖ್ಯ. ಕೇಸರಿ ಸೇವಿಸಿದ ನಂತರ ಯಾವುದೇ ಅಸಹಜ ಲಕ್ಷಣ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
ಗಾನವಿಯ ಟಾರ್ಗೆಟ್ ಮಾಡಿದರೇ ಮನೆ ಮಂದಿ: ವಿಡಿಯೋ ನೋಡಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ
Live Video: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುದ್ದಿಗೋಷ್ಠಿ