AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇತಿಹಾಸ ಪುಟ ಸೇರಿದ ಸಿಸಿಬಿ ಹೆಸರು: 'ಆ್ಯಂಟಿ ರೌಡಿ ಸ್ಕ್ವಾಡ್' ಆಗಿ ಮರುನಾಮಕರಣ ಮಾಡಿದ ರಾಜ್ಯ ಸರ್ಕಾರ

ಇತಿಹಾಸ ಪುಟ ಸೇರಿದ ಸಿಸಿಬಿ ಹೆಸರು: ‘ಆ್ಯಂಟಿ ರೌಡಿ ಸ್ಕ್ವಾಡ್’ ಆಗಿ ಮರುನಾಮಕರಣ ಮಾಡಿದ ರಾಜ್ಯ ಸರ್ಕಾರ

ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Nov 19, 2026 | 12:33 PM

Share

ಬೆಂಗಳೂರಿನ ಸಿಸಿಬಿ (CCB) ಇನ್ನು ಮುಂದೆ ಆ್ಯಂಟಿ ರೌಡಿ ಸ್ಕ್ವಾಡ್ ಎಂದು ಮರುನಾಮಕರಣಗೊಂಡಿದೆ. 1971ರಲ್ಲಿ ಸ್ಪೆಷಲ್ ಸ್ಕ್ವಾಡ್ ಆಗಿ ಆರಂಭಗೊಂಡು, 1993ರಲ್ಲಿ ಸಿಸಿಬಿ ಆಗಿ ಬದಲಾಗಿತ್ತು. ಕಾಲಾಂತರದಲ್ಲಿ ಹಲವು ಸುಧಾರಣೆಗಳನ್ನು ಕಂಡ ಈ ವಿಭಾಗವು, 2024ರಲ್ಲಿ ಎಫ್‌ಐಆರ್ ದಾಖಲಿಸುವ ಅಧಿಕಾರವನ್ನು ಪಡೆದಿತ್ತು. ಇದೀಗ ಹೊಸ ಹೆಸರಿನೊಂದಿಗೆ ಕಾರ್ಯನಿರ್ವಹಿಸಲಿದೆ.

ಬೆಂಗಳೂರು, ನ.19: ಸಿಸಿಬಿ (CCB) ವಿಭಾಗವನ್ನು ಸರ್ಕಾರವು ಆ್ಯಂಟಿ ರೌಡಿ ಸ್ಕ್ವಾಡ್ ಎಂದು ಮರುನಾಮಕರಣ ಮಾಡಿದೆ. ಈ ನಿರ್ಧಾರವು ಸಿಸಿಬಿಯ ಸುದೀರ್ಘ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಬದಲಾವಣೆಯಾಗಿದೆ. ಈ ಘಟಕವು 1971ರಲ್ಲಿ ಸ್ಪೆಷಲ್ ಸ್ಕ್ವಾಡ್ ಎಂದು ಅಸ್ತಿತ್ವಕ್ಕೆ ಬಂದಿತ್ತು. ಆಗ ಓರ್ವ ಎಸಿಪಿ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿತ್ತು. 1993ರಲ್ಲಿ ಇದನ್ನು ಸಿಸಿಬಿ ಎಂದು ಮರುನಾಮಕರಣ ಮಾಡಲಾಯಿತು ಮತ್ತು ಅಂದಿನ ಸ್ಪೆಷಲ್ ಸ್ಕ್ವಾಡ್ ಅನ್ನು ಸಿಸಿಬಿ ಜೊತೆ ವಿಲೀನಗೊಳಿಸಲಾಯಿತು. ಕಾಲಾನಂತರದಲ್ಲಿ, 1994ರಲ್ಲಿ ಸಿಸಿಬಿಯನ್ನು ಮರುಸಂಘಟಿಸಿ ಡಿಸಿಪಿ ಮೇಲ್ವಿಚಾರಣೆಗೆ ಒಳಪಡಿಸಲಾಯಿತು. 2002ರಲ್ಲಿ ಅಪರಾಧಗಳ ವರ್ಗೀಕರಣದ ಆಧಾರದ ಮೇಲೆ ವಿವಿಧ ವಿಭಾಗಗಳಿಗೆ ಜವಾಬ್ದಾರಿಗಳನ್ನು ನಿಗದಿಪಡಿಸಲಾಯಿತು. 2004ರಲ್ಲಿ ತನಿಖಾಧಿಕಾರಿಗಳ ನೇಮಕ ಮತ್ತು ತನಿಖಾ ಸಾಮರ್ಥ್ಯವನ್ನು ವಿಸ್ತರಿಸಲಾಯಿತು. 2019ರಲ್ಲಿ ಸಿಸಿಬಿಯನ್ನು ಆರು ಪ್ರಮುಖ ವಿಭಾಗಗಳಾಗಿ ಪುನಾರಚಿಸಲಾಯಿತು. 2021ರಲ್ಲಿ ಸಿಸಿಬಿ ಅಧಿಕಾರಿಗಳ ತನಿಖಾ ಅಧಿಕಾರದ ಕುರಿತು ಸರ್ಕಾರದಿಂದ ಅಧಿಸೂಚನೆಯನ್ನು ಹೊರಡಿಸಲಾಯಿತು. ಇತ್ತೀಚೆಗೆ, 2024ರಲ್ಲಿ, ಸಿಸಿಬಿಗೆ ಸ್ಟೇಷನ್ ಮಾನ್ಯತೆ ಅಂದರೆ ಎಫ್‌ಐಆರ್ ದಾಖಲಿಸುವ ಅಧಿಕಾರವನ್ನು ನೀಡಲಾಗಿತ್ತು. ಇದೀಗ ಸರ್ಕಾರವು ಆ್ಯಂಟಿ ರೌಡಿ ಸ್ಕ್ವಾಡ್ ಎಂದು ಮರುನಾಮಕರಣ ಮಾಡುವ ಮೂಲಕ ಇತಿಹಾಸ ಪುಟ ಸೇರಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಜ್ವಲ್​ ಕುಮಾರ್ ಎನ್​ ವೈ
ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More