2017 ಜೂನ್ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.
ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಹಣ ವಸೂಲಿ ಆರೋಪ: ಬೆಂಗಳೂರಲ್ಲಿ ಆರ್‌ಟಿಐ ಕಾರ್ಯಕರ್ತ ಅರೆಸ್ಟ್
ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಕೋಲಾರ ಮೂಲದ ಆರ್‌ಟಿಐ ಕಾರ್ಯಕರ್ತ ಮುರಳಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಹಣ ವಸೂಲಿಗೆ ಆರೋಪಿ ಬಳಸಿದ್ದ ಬ್ಯಾಂಕ್ ಖಾತೆಗಳ ವಹಿವಾಟಿನ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಖಾತೆಗಳು ಮೂರನೇ ವ್ಯಕ್ತಿಯ ಹೆಸರಿನಲ್ಲಿ ನೋಂದಣಿಯಾಗಿರುವುದು ಕಂಡುಬಂದಿದೆ ಎನ್ನಲಾಗಿದೆ.
- Prajwal Kumar NY
- Updated on: Oct 8, 2026
- 1:08 pm
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: ಪ್ರಮುಖ ಆರೋಪಿಗಳ ಪಾತ್ರ ತನಿಖೆ ವೇಳೆ ಬಟಾಬಯಲು
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್, ಮಧ್ಯವರ್ತಿ ಬಸವರಾಜ್ ಕನ್ನಾಳೆಯ ಪಾತ್ರ ಏನಾಗಿತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ. ಆರೋಪಿಗಳು ಹೇಗೆ ಅಭ್ಯರ್ಥಿಗಳನ್ನು ಸಂಪರ್ಕಿಸಿ ಡೀಲ್ ನಡೆಸುತ್ತಿದ್ದರು? ಅವರಿಂದ ಎಷ್ಟು ಹಣ ಪಡೆದಿದ್ದರು ಎಂಬುದು ಕೂಡ ಬಹಿರಂಗಗೊಂಡಿದೆ. ಪ್ರಕರಣ ಸಂಬಂಧ ಕೆಪಿಎಸ್‌ಸಿ ಸದಸ್ಯೆ ಬಿ.ವಿ.ಗೀತಾರನ್ನು ಸಹ ಅದಾಗಲೇ ಇಡಿ ಬಂಧಿಸಿದೆ.
- Prajwal Kumar NY
- Updated on: Oct 7, 2026
- 3:28 pm
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದ ತನಿಖೆ ವಿಚಾರದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮತ್ತು ಸಿಐಡಿ ನಡುವೆ ಬಿಕ್ಕಟ್ಟು ತಲೆದೋರಿದೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಇಡಿ ಪ್ರಮುಖ ದಾಖಲೆಗಳನ್ನು ಸಿಐಡಿಗೆ ನೀಡಲು ನಿರಾಕರಿಸಿದೆ. ಮನಿ ಲಾಂಡರಿಂಗ್ ಮತ್ತು ಕ್ರಿಮಿನಲ್ ಅಂಶಗಳ ತನಿಖೆಯ ವಿಭಿನ್ನ ದೃಷ್ಟಿಕೋನಗಳಿಂದಾಗಿ ತನಿಖೆಯು ಕುಂಠಿತಗೊಂಡಿದೆ.
- Prajwal Kumar NY
- Updated on: Oct 6, 2026
- 11:15 am
ಕ್ಷುಲ್ಲಕ ಕಾರಣಕ್ಕೆ ಜಿಮ್ ಟ್ರೈನರ್‌ಗಳ ನಡುವೆ ಗಲಾಟೆ: ಗಂಭೀರ ಗಾಯಗೊಂಡಿದ್ದ ಓರ್ವ ಚಿಕಿತ್ಸೆ ಫಲಿಸದೆ ಸಾವು
ಬೆಂಗಳೂರಿನಲ್ಲಿ ಜಿಮ್ ಆ್ಯನಿವರ್ಸರಿ ಪಾರ್ಟಿ ವೇಳೆ ಕ್ಷುಲ್ಲಕ ಕಾರಣಕ್ಕೆ ಟ್ರೈನರ್‌ಗಳ ನಡುವೆ ನಡೆದ ಗಲಾಟೆಯಲ್ಲಿ ತೀವ್ರ ಗಾಯಗೊಂಡಿದ್ದ 25 ವರ್ಷದ ಯುವಕ ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಯಾಕೆ ಗಲಾಟೆ ಆಯ್ತು? ಕೊಲೆ ಯಾಕೆ ಮಾಡಿದ್ರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಮೃತ ಯುವಕನ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
- Prajwal Kumar NY
- Updated on: Oct 5, 2026
- 12:20 pm
ನಕಲಿ ಔಷಧಕ್ಕೆ ಅಸಲಿ ಲೇಬಲ್!: ಎಸ್ಐಟಿ ತನಿಖೆ ವೇಳೆ ಹಲವು ಸ್ಫೋಟಕ ವಿಚಾರಗಳು ಬಹಿರಂಗ
ರಾಜ್ಯದಲ್ಲಿ ಬೆಳಕಿಗೆ ಬಂದಿದ್ದ ನಕಲಿ ಔಷಧ ದಂಧೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಪ್ರಶಾಂತ್ ಬಂಧನದ ನಂತರ ಸ್ಫೋಟಕ ವಿಚಾರಗಳು ಹೊರಬಿದ್ದಿವೆ. ಟರ್ಕಿಯಿಂದ ಒರಿಜಿನಲ್ ಲೇಬಲ್ ತರಿಸಿ ನಕಲಿ ಮೆಡಿಸಿನ್‌ಗೆ ಬಳಸಿರುವುದು ಎಸ್‌ಐಟಿ ತನಿಖೆಯಲ್ಲಿ ಬಹಿರಂಗವಾಗಿದೆ. ಹಲವು ಬಾರಿ ಒರಿಜಿನಲ್ ಮೆಡಿಸಿನ್ಗಳ ಜೊತೆಗೆ ನಕಲಿ ಮೆಡಿಸಿನ್ಗಳನ್ನು ಜೋಡಿಸಿ ಸರಬರಾಜು ಮಾಡುತ್ತಿದ್ದರು ಎಂಬುದನ್ನು ಕೂಡ ಗೊತ್ತಾಗಿದೆ.
- Prajwal Kumar NY
- Updated on: Oct 4, 2026
- 12:18 pm
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮಾಹಿತಿ, ದಾಖಲೆಗಳನ್ನು ನೀಡುವಂತೆ ಸಿಬಿಐ-ಸಿಐಡಿಗೆ SIT ಪತ್ರ
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಸಂಬಂಧ, ಎಸ್ಐಟಿ ಸಿಬಿಐ ಮತ್ತು ಸಿಐಡಿ ಗೆ ಪತ್ರ ಬರೆದಿದೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಚನೆಯಾಗಿರುವ ಎಸ್ಐಟಿ, ಈ ಹಿಂದೆ ಪ್ರಕರಣವನ್ನು ತನಿಖೆ ನಡೆಸಿದ್ದ ಸಿಬಿಐ ಮತ್ತು ಸಿಐಡಿ ಯಿಂದ ಮಾಹಿತಿ ಹಾಗೂ ದಾಖಲೆಗಳನ್ನು ಪಡೆದುಕೊಳ್ಳಲು ಮುಂದಾಗಿದೆ. ಇದು ಮರುತನಿಖೆಗೆ ಮಹತ್ವದ ಹೆಜ್ಜೆಯಾಗಿದೆ.
- Prajwal Kumar NY
- Updated on: Oct 2, 2026
- 11:32 am
KPSC ಅಕ್ರಮ ಪ್ರಕರಣದಲ್ಲಿ ED ಸ್ಫೋಟಕ ವರದಿ: ಹುದ್ದೆಗೆ 40 ಲಕ್ಷ ರೂ. ರೇಟ್, ಬಯಲಾಯ್ತು ಚೆಕ್ ಗ್ಯಾರಂಟಿ ಡೀಲ್
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದಲ್ಲಿ ಇಡಿ ತನಿಖೆ ಮಹತ್ವದ ವಿವರಗಳನ್ನು ಬಹಿರಂಗಪಡಿಸಿದೆ. ಅಭ್ಯರ್ಥಿಗಳಿಂದ ₹80 ಲಕ್ಷದವರೆಗೆ ಡೀಲ್ ನಡೆಸಿ, ಪ್ರಶ್ನೆಪತ್ರಿಕೆಗಳನ್ನು ಲೀಕ್ ಮಾಡಿ, ಒಂದು ದಿನ ಮುಂಚಿತವಾಗಿ ಉತ್ತರಗಳನ್ನು ಕಂಠಪಾಠ ಮಾಡಿಸಲಾಗಿತ್ತು. ಹಣಕ್ಕೆ ಬ್ಲಾಂಕ್ ಚೆಕ್‌ಗಳನ್ನು ಗ್ಯಾರಂಟಿಯಾಗಿ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
- Prajwal Kumar NY
- Updated on: Oct 1, 2026
- 1:03 pm
ಕೊರಿಯನ್ BTS ಬ್ಯಾಂಡ್ ಭೇಟಿಯಾಗಲು ಮನೆ ಬಿಟ್ಟಿದ್ದ 13 ವರ್ಷದ ಬಾಲಕಿ: ಮುಂದೇನಾಯ್ತು ನೋಡಿ
ಬೆಂಗಳೂರಿನ 13 ವರ್ಷದ ಬಾಲಕಿಯೊಬ್ಬಳು ಬಿಟಿಎಸ್ (BTS) ತಂಡವನ್ನು ಭೇಟಿಯಾಗಲು ದಕ್ಷಿಣ ಕೊರಿಯಾಗೆ ಹೋಗಲು ಮನೆ ಬಿಟ್ಟು ಹೋಗಿದ್ದಳು. ಕೆ-ಪಾಪ್‌ನ ಅತಿಯಾದ ಪ್ರಭಾವದಿಂದಾಗಿ ಈ ಘಟನೆ ನಡೆದಿದೆ. ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಪೊಲೀಸರು ಬಾಲಕಿಯನ್ನು ರಕ್ಷಿಸಿ, ಸೂಕ್ತ ಸಲಹೆ ನೀಡಿ ಪೋಷಕರಿಗೆ ಒಪ್ಪಿಸಿದ್ದಾರೆ. ಮಕ್ಕಳ ಮೇಲೆ ಮೊಬೈಲ್ ಹಾಗೂ ಆನ್‌ಲೈನ್ ವಿಷಯಗಳ ಪ್ರಭಾವದ ಬಗ್ಗೆ ಪೋಷಕರು ಜಾಗೃತರಾಗಿರಬೇಕು.
- Prajwal Kumar NY
- Updated on: Oct 1, 2026
- 9:43 am
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ: ಇಡಿ ತನಿಖೆಯಲ್ಲಿ ಆರೋಪಿಗಳ ಕಳ್ಳಾಟ ಬಹಿರಂಗ
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದ ಬಗ್ಗೆ ಇಡಿ ತನಿಖೆಯಲ್ಲಿ ಸ್ಫೋಟಕ ಸತ್ಯಗಳು ಬಯಲಾಗಿವೆ. ಪ್ರಕರಣದ ಸಂಬಂಧ ಪ್ರಮುಖ ಆರೋಪಿ ಬಸವರಾಜ ಕನ್ನಾಳೆ ಪಾತ್ರವೇನು ಮತ್ತು KPSCಯ ಅಂದಿನ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಈತನಿಗೆ ಹೇಗೆ ನೆರವಾಗಿದ್ದ ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಅಕ್ರಮದ ಇಂಚಿಂಚು ಮಾಹಿತಿಯನ್ನೂ ಇಡಿ ಬಹಿರಂಗಪಡಿಸಿದ್ದು, ಆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
- Prajwal Kumar NY
- Updated on: Sep 30, 2026
- 4:19 pm
ದರ್ಶನ್‌ಗೆ ಶಾಕ್ ಮೇಲೆ ಶಾಕ್; ಸಾಧ್ಯವಾಗಲೇ ಇಲ್ಲ ಪ್ರದೋಷ್ ಮಾಫಿ ಸಾಕ್ಷಿ ವಿಚಾರಣೆ ತಡೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗುವುದಕ್ಕೆ ತಡೆಕೋರಿ ನಟ ದರ್ಶನ್ ಸಲ್ಲಿಸಿದ್ದ ಮೆಮೋವನ್ನು 59ನೇ ಸಿಸಿಹೆಚ್ ಕೋರ್ಟ್ ವಜಾಗೊಳಿಸಿದೆ. ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಹಕ್ಕಿದ್ದರೂ ಪ್ರದೋಷ್ ವಿಚಾರಣೆಗೆ ತಡೆ ನೀಡಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿ, ಮುಚ್ಚಿದ ಕೊಠಡಿಯಲ್ಲಿ ಮಾಫಿ ಸಾಕ್ಷಿಯ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ನ್ಯಾಯಾಲಯ ಆರಂಭಿಸಿದೆ.
- Prajwal Kumar NY
- Updated on: Sep 28, 2026
- 12:40 pm
ಖಾಸಗಿ ಫೋಟೋ ಇಟ್ಟುಕೊಂಡು ಮಹಿಳೆಗೆ ಬ್ಲಾಕ್‌ಮೇಲ್: ಟ್ಯಾಟೂ ಆರ್ಟಿಸ್ಟ್ ಅರ್ಜುನ್ ವಿರುದ್ಧ ಎಫ್‌ಐಆರ್
ಟ್ಯಾಟೂ ಹಾಕಿಸಿಕೊಳ್ಳಲು ಬಂದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಹಂತಹಂತವಾಗಿ ಸುಮಾರು 09 ಲಕ್ಷ ರೂ ಸುಲಿಗೆ ಮಾಡಿರುವ ಆರೋಪದ ಮೇಲೆ ಟ್ಯಾಟೂ ಆರ್ಟಿಸ್ಟ್ ಅರ್ಜುನ್ ಅಲಿಯಾಸ್ ಟ್ಯಾಟೂ ಘೋಸ್ಟ್ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
- Prajwal Kumar NY
- Updated on: Sep 25, 2026
- 3:35 pm
ಅಟ್ಟಿಕಾ ಗೋಲ್ಡ್ ಕಂಪನಿಗೆ ಡಬಲ್ ಶಾಕ್: ಇಡಿ ಬೆನ್ನಲ್ಲೇ ಐಟಿ ರೇಡ್; 19 ಸ್ಥಳಗಳಲ್ಲಿ ದಾಳಿ
ಅಟ್ಟಿಕಾ ಗೋಲ್ಡ್ ಕಂಪನಿಗೆ ಜಾರಿ ನಿರ್ದೇಶನಾಲಯದ (ಇಡಿ) ದಾಳಿ ಮುಕ್ತಾಯಗೊಂಡ ಕೆಲವೇ ಗಂಟೆಗಳಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಂಪನಿಯ 19 ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ವ್ಯವಹಾರದಲ್ಲಿನ ಅಕ್ರಮಗಳು ಮತ್ತು ಗ್ರಾಹಕರಿಂದ ಚಿನ್ನ ಖರೀದಿ ಸಂಬಂಧಿಸಿದಂತೆ ಕೇಳಿಬಂದ ಆರೋಪಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.
- Prajwal Kumar NY
- Updated on: Sep 25, 2026
- 12:14 pm