AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ಕಿ.ಮೀ ಆಟೋ ಪ್ರಯಾಣಕ್ಕೆ 800 ರೂ. ದರ!: ಮಹಿಳೆಯ ಆಕ್ರೋಶದ ವಿಡಿಯೋ ವೈರಲ್​​

ಗುರುಗ್ರಾಮ್‌ನಲ್ಲಿ ಸುರಿದ ಭಾರಿ ಮಳೆ ಹಾಗೂ ಸಂಚಾರ ದಟ್ಟಣೆಯ ನಡುವೆ ಆಟೋ ಚಾಲಕನೊಬ್ಬ ಕೇವಲ 7 ಕಿಲೋಮೀಟರ್‌ ಪ್ರಯಾಣಕ್ಕೆ ಬರೋಬ್ಬರಿ 800 ರೂ. ಶುಲ್ಕ ವಿಧಿಸಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ರೈಡ್ ಆ್ಯಪ್‌ಗಳ ಸರ್ಜ್ ಪ್ರೈಸಿಂಗ್ ಹಾಗೂ ಆಟೋ ಚಾಲಕರ ಹೆಚ್ಚಿನ ದರ ವಸೂಲಿ ಕುರಿತು ಸಂತ್ರಸ್ತ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದು, ಈ ವೀಡಿಯೋ ಈಗ ವೈರಲ್ ಆಗಿದೆ.

7 ಕಿ.ಮೀ ಆಟೋ ಪ್ರಯಾಣಕ್ಕೆ 800 ರೂ. ದರ!: ಮಹಿಳೆಯ ಆಕ್ರೋಶದ ವಿಡಿಯೋ ವೈರಲ್​​
7 ಕಿ.ಮೀ ಆಟೋ ಪ್ರಯಾಣಕ್ಕೆ ದುಬಾರಿ ಬೆಲೆ ತೆತ್ತ ಮಹಿಳೆImage Credit source: Astha Goyal Instagram Page
ಪ್ರಸನ್ನ ಹೆಗಡೆ
|

Updated on: Aug 09, 2026 | 8:12 AM

Share

ಮುಖ್ಯಾಂಶಗಳು

  • 7 ಕಿ.ಮೀ ಆಟೋ ಪ್ರಯಾಣಕ್ಕೆ ದುಬಾರಿ ಬೆಲೆ ತೆತ್ತ ಮಹಿಳೆ
  • ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವಿಡಿಯೋ ವೈರಲ್​​
  • ಪರಿಸ್ಥಿತಿ ಲಾಭ ಪಡೆಯುತ್ತಿದ್ದಾರಾ ಆಟೋ ಚಾಕಲರು?: ಚರ್ಚೆ

ಗುರುಗ್ರಾಮ್​​, ಆಗಸ್ಟ್​​ 09: ಭಾರಿ ಮಳೆ ಹಾಗೂ ತೀವ್ರ ಸಂಚಾರ ದಟ್ಟಣೆಯ ನಡುವೆ ಗುರುಗ್ರಾಮ್‌ನಲ್ಲಿ ಕೇವಲ ಏಳು ಕಿಲೋಮೀಟರ್‌ ಆಟೋ ಪ್ರಯಾಣಕ್ಕೆ 800 ರೂ. ಶುಲ್ಕ ವಿಧಿಸಲಾಗಿದೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಈ ಘಟನೆ ನಗರದಲ್ಲಿ ಹೆಚ್ಚುತ್ತಿರುವ ಸರ್ಜ್‌ ಪ್ರೈಸಿಂಗ್‌ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. 7 ಕಿ.ಮೀಗೆ 800 ರೂಪಾಯಿ? ಎಂಬ ಶೀರ್ಷಿಕೆಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಆಸ್ಥಾ ಗೋಯಲ್‌ ಎಂಬುವವರು ದುಬಾರಿ ದರದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ವಿಡಿಯೋ ವೈರಲ್​

ವೈರಲ್‌ ಆಗಿರುವ ವಿಡಿಯೋದಲ್ಲಿ ಗೋಯಲ್‌ ಅವರು, ಏಳು ಕಿಲೋಮೀಟರ್‌ ಪ್ರಯಾಣಕ್ಕೆ 800 ರೂ. ಶುಲ್ಕ ವಿಧಿಸಿರುವುದು ಅತಿರೇಕವಾಗಿದೆ. ಗುರುಗ್ರಾಮ್‌ನಲ್ಲಿ ಮಳೆ ಬಂದಾಗ ಪರಿಸ್ಥಿತಿ ಹೇಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ನನಗೇ ಇಂತಹ ಅನುಭವವಾಗಿದೆ. ಬೆಂಗಳೂರಿನಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಮಳೆಯ ಸಂದರ್ಭದಲ್ಲಿ ಪ್ರಯಾಣ ದರಗಳು ಭಾರಿ ಪ್ರಮಾಣದಲ್ಲಿ ಅಲ್ಲಿ ಏರಿಕೆಯಾಗುತ್ತವೆ ಎನ್ನುವ ಮೂಲಕ ಘಟನೆಯನ್ನು ಬೆಂಗಳೂರಿನ ಸ್ಥಿತಿಗೆ ಅವರು ಹೋಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ದುಡಿಮೆಯಲ್ಲಿ ಆಟೋ ಡ್ರೈವರ್‌ಗೆ ಜತೆಯಾಗುವ ಶ್ವಾನ, ವೈರಲ್‌ ಆಯ್ತು ದೃಶ್ಯ

ಮಹಿಳೆ ಆರೋಪಕ್ಕೆ ಹಲವರ ಸಹಮತ

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮಂದಿ ಗೋಯಲ್‌ ಅವರ ಅನುಭವಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಮಳೆಯ ಸಂದರ್ಭದಲ್ಲಿ ಗುರುಗ್ರಾಮ್‌ನಲ್ಲಿ ಪ್ರಯಾಣ ಮಾಡುವುದು ಒತ್ತಡ, ದುಬಾರಿ ಮತ್ತು ಸಮಯ ತೆಗೆದುಕೊಳ್ಳುವ ಸಂಗತಿಯಾಗುತ್ತದೆ ಎಂದು ಹಲವರು ಹೇಳಿದ್ದಾರೆ. ಪೀಕ್‌ ಅವರ್‌ಗಳಲ್ಲಿ ಆಟೋ ಅಥವಾ ಕ್ಯಾಬ್‌ ಬುಕ್‌ ಮಾಡುವಾಗ ತಮಗೂ ಇದೇ ರೀತಿಯ ಅನುಭವವಾಗಿದೆ ಎಂದು ಕೆಲವರು ತಿಳಿಸಿದ್ದಾರೆ. ನಿನ್ನೆ ಕೇವಲ 3-4 ಕಿ.ಮೀ ಕ್ಯಾಬ್‌ ಪ್ರಯಾಣಕ್ಕೆ 500 ರೂ. ಪಾವತಿಸಬೇಕಾಯಿತು ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಗುರುಗ್ರಾಮ್‌ನಲ್ಲಿ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಗಳು ಕಡಿಮೆ ಇರುವಾಗ ಆಟೋ ಚಾಲಕರು ಅದರ ಲಾಭ ಪಡೆದು ಹೆಚ್ಚಿನ ದರ ವಸೂಲಿ ಮಾಡುತ್ತಾರೆ ಎಂದು ಮಗದೊಬ್ಬರು ಅಭಿಪ್ರಾಯಪಟ್ಟಿರೋದಾಗಿ ಎನ್​​ಡಿಟಿವಿ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಇಂದು ಕಾಮಿಕಾ ಏಕಾದಶಿ; ಉಪವಾಸ ವೃತದಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ
ಇಂದು ಕಾಮಿಕಾ ಏಕಾದಶಿ; ಉಪವಾಸ ವೃತದಿಂದ ಭಗವಂತನ ಕೃಪೆಗೆ ಪಾತ್ರರಾಗುವಿರಿ
ಹೈದರಾಬಾದ್​ನ ರಸ್ತೆ ಮಧ್ಯೆ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ
ಹೈದರಾಬಾದ್​ನ ರಸ್ತೆ ಮಧ್ಯೆ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟ
ಒಳ್ಳೆಯ ಸಿನಿಮಾಕ್ಕಾಗಿ ನನ್ನ ಬಳಿ ಸಾಕಷ್ಟು ಹಣ ಇದೆ: ನಿರ್ಮಾಪಕ ವೆಂಕಟ್
ಒಳ್ಳೆಯ ಸಿನಿಮಾಕ್ಕಾಗಿ ನನ್ನ ಬಳಿ ಸಾಕಷ್ಟು ಹಣ ಇದೆ: ನಿರ್ಮಾಪಕ ವೆಂಕಟ್
ಟಾಕ್ಸಿಕ್ ಟ್ರೇಲರ್​: ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ
ಟಾಕ್ಸಿಕ್ ಟ್ರೇಲರ್​: ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ
‘ನನ್ನ ಜೀವನದ ಸ್ಮರಣೀಯ ಅನುಭವ’: ಟಾಕ್ಸಿಕ್ ಚಿತ್ರದ ಬಗ್ಗೆ ನಟ ಅಕ್ಷಯ್ ಓಬೆರಾ
‘ನನ್ನ ಜೀವನದ ಸ್ಮರಣೀಯ ಅನುಭವ’: ಟಾಕ್ಸಿಕ್ ಚಿತ್ರದ ಬಗ್ಗೆ ನಟ ಅಕ್ಷಯ್ ಓಬೆರಾ
‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ
‘ಆಲ್​ ದಿ ಬೆಸ್ಟ್​ ಟಾಕ್ಸಿಕ್’: ಟ್ರೈಲರ್​ ಲಾಂಚ್ ಮಾಡಿದ ಶಿವಣ್ಣ
ಕಾಂಗ್ರೆಸ್ ಅಸಮಾಧಾನಿತ ಶಾಸಕರಿಗೆ ಕುಮಾರಸ್ವಾಮಿ ಓಪರ್ ಆಫರ್!
ಕಾಂಗ್ರೆಸ್ ಅಸಮಾಧಾನಿತ ಶಾಸಕರಿಗೆ ಕುಮಾರಸ್ವಾಮಿ ಓಪರ್ ಆಫರ್!
LIVE: ‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಬಿಡುಗಡೆ ಇವೆಂಟ್ ಲೈವ್ ಇಲ್ಲಿ ನೋಡಿ
LIVE: ‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಬಿಡುಗಡೆ ಇವೆಂಟ್ ಲೈವ್ ಇಲ್ಲಿ ನೋಡಿ
ಸಚಿವರನ್ನು ಬರಮಾಡಿಕೊಳ್ಳುವ ಭರದಲ್ಲಿ 1 ಲಕ್ಷ ರೂ. ಕಳೆದುಕೊಂಡ ಅಭಿಮಾನಿ
ಸಚಿವರನ್ನು ಬರಮಾಡಿಕೊಳ್ಳುವ ಭರದಲ್ಲಿ 1 ಲಕ್ಷ ರೂ. ಕಳೆದುಕೊಂಡ ಅಭಿಮಾನಿ
ಭಾರತದಲ್ಲಿ ಸ್ವಾವಲಂಬನೆಯ ನವ ಯುಗ ಆರಂಭ ಎಂದ ಪ್ರಧಾನಿ ಮೋದಿ
ಭಾರತದಲ್ಲಿ ಸ್ವಾವಲಂಬನೆಯ ನವ ಯುಗ ಆರಂಭ ಎಂದ ಪ್ರಧಾನಿ ಮೋದಿ