AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 22 November : ಇಂದು ಈ ರಾಶಿಯವರು ನಿರ್ದೋಷಿಗಳೆಂದು ತಿಳಿಯುವ ಸಂದರ್ಭ

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಅನುರಾಧಾ, ವಾರ : ಭಾನು ಪಕ್ಷ : ಶುಕ್ಲ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ವಜ್ರ, ಕರಣ : ಕೌಲವ, ಸೂರ್ಯೋದಯ - 06 - 22 am, ಸೂರ್ಯಾಸ್ತ - 05 - 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:23 - 17:49, ಯಮಗಂಡ ಕಾಲ 12:06 - 13:31, ಗುಳಿಕ ಕಾಲ 14:57 - 16:23

Horoscope Today 22 November : ಇಂದು ಈ ರಾಶಿಯವರು ನಿರ್ದೋಷಿಗಳೆಂದು ತಿಳಿಯುವ ಸಂದರ್ಭ
ಸಾಂದರ್ಭಿಕ ಚಿತ್ರ
ಭಾವನಾ ಹೆಗಡೆ
|

Updated on:Nov 22, 2026 | 12:42 AM

Share

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಶುಕ್ಲ ಪಕ್ಷದ ತ್ರಯೋದಶೀ ತಿಥಿಯ ಭಾನುವಾರದಂದು ವೃತ್ತಿಯ ಗೊಂದಲ, ಅಶ್ರದ್ಧೆ, ದೀರ್ಘಯೋಜನೆ, ಭರವಸೆ, ಶೋಕ, ನೆರೆಹೊರೆಯರ ಕಲಹ, ದುಡುಕು ನಿರ್ಧಾರ ಇವೆಲ್ಲ ಇಂದಿನ ಭವಿಷ್ಯ.

ಮೇಷ ರಾಶಿ : ಯಾವುದಾದರೂ ಒಪ್ಪಂದವನ್ನು ಮಾಡಿಕೊಳ್ಳುವಾಗ ಸ್ವಲ್ಪ ಚಿಂತನೆ ಮಾಡುವುದು ಅವಶ್ಯಕ. ವಾಹನದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭ ಗಳಿಸುವ ಸಾಧ್ಯತೆ ಇದೆ. ಇಂದು ನಿಮಗೆ ವೃತ್ತಿಯಲ್ಲಿ ಸಹಾಕಾರವು ಸಿಗದೇ ತೊಂದರೆಪಡುವಿರಿ. ನಿಮ್ಮ ಮನಸ್ಸು ಯಾವುದರಲ್ಲಿಯೂ ಸ್ಥಿರವಾಗಿ ಇರದೇ ಬಹಳ ಚಂಚಲವಾಗಿ ಇರುವುದು. ಮನಸ್ಸು ಬಹಳ ದುರ್ಬಲಗೊಂಡು ನಕಾರಾತ್ಮಕ ಆಲೋಚನೆಯೇ ಹೆಚ್ಚು ಇರುವುದು. ನಿಮಗೆ ವಿರೋಧಿಗಳ ಭಯವು ಕಾಡುವುದು.‌

ವೃಷಭ ರಾಶಿ : ತಮ್ಮ ಪ್ರಾಮಾಣಿಕತೆಗೆ ಉತ್ತಮ ಯಶಸ್ಸನ್ನು ಪಡೆಯುವಿರಿ. ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗಲಿದ್ದು ನೆಮ್ಮದಿಯು ಇರಲಿದೆ. ಸಿಟ್ಟಿನ ಮೇಲೆ ನಿಯಂತ್ರಣ ಬೇಕಾಗುವುದು. ನಿಮ್ಮ ಮೇಲೆ‌ ಜವಾಬ್ದಾರಿಗಳು ಅಧಿಕವಾಗಲಿವೆ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ನೀವು ಹುಸಿಗೊಳಿಸುವವಿರಿ. ಅನಿರೀಕ್ಷಿತವಾಗಿ ಉಡುಗೊರೆಯನ್ನು ಆಪ್ತರಿಂದ ಪಡೆಯುವಿರಿ. ಇಷ್ಟಪಟ್ಟವರ ಭೇಟಿಯು ಮನಸ್ಸಿಗೆ ಹಿತವೆನಿಸುವುದು.

ಮಿಥುನ ರಾಶಿ : ಸೌಂದರ್ಯಕ್ಕೆ ಹೆಚ್ಚು ಮನಸ್ಸು ಕೊಡುವಿರಿ. ವ್ಯಾಪಾರದಲ್ಲಿ ಸಾಧಾರಣ ಆದಾಯವು ಇದ್ದು ನಿಮಗೆ ಸಮಾಧಾನವಾಗುವುದು. ವಾಹನ ಖರೀದಿಯಲ್ಲಿ ಮೋಸವಾಗುವ ಸಂಭವವಿದೆ. ಮಕ್ಕಳ ಪ್ರಗತಿಯು ನಿಮಗೆ ಸಂತೋಷವನ್ನು ಕೊಡುವುದು. ಕಛೇರಿಯ ಕೆಲಸಗಳು ಒತ್ತಡದಿಂದ ಇರಲಿದೆ. ಬೇರೆಯವರ ತಪ್ಪುಗಳನ್ನು ಹುಡುಕಿ ಹೇಳುವುದನ್ನು ಕಡಿಮೆ ಮಾಡಿ. ನಿಮ್ಮ ಅಹಂಕಾರವನ್ನು ಪ್ರದರ್ಶಿಸುವಿರಿ. ಮಿತ್ರರ ಸಹಯೋಗದಿಂದ ಭೂಮಿಯ ಖರೀದಿ ಆಗುವುದು.

ಕರ್ಕಾಟಕ ರಾಶಿ : ಇಂದು ಮಿತ್ರರು ಸಹಾಯವನ್ನು ಕೇಳುವ ಮೊದಲೇ ನೀವೇ ಸಹಾಯ ಮಾಡುವಿರಿ. ಹಿರಿಯರ ಆಶೀರ್ವಾದವನ್ನು ಪಡೆದು ಕಾರ್ಯದಲ್ಲಿ ಪ್ರವೃತ್ತರಾಗುವಿರಿ. ಜಾಣ್ಮೆಯ ವ್ಯವಹಾರದಿಂದ ನಿಮಗೆ ಲಾಭವಾಗುವುದು. ರಾಜಕೀಯವಾಗಿ ಬೆಳೆಯಲು ಬಹಳ ಆಸಕ್ತಿಯನ್ನು ತೋರುವಿರಿ. ಕಛೇರಿಯಲ್ಲಿ ಸ್ತ್ರೀಯರ ಅಲ್ಪ ಸಹಕಾರವು ಸಿಗುವುದು. ಸಂಗಾತಿಯ ಅನೇಕ ವಿಚಾರಗಳು ನಿಮಗೆ ತಿಳಿಯದೇ ಇರುವುದು.

ಸಿಂಹ ರಾಶಿ : ಆರ್ಥಿಕವಾಗಿ ಸಬಲರಾಗಲು ಗುರಿಯೂ ಹಾದಿಯೂ ಮುಖ್ಯ. ಕೆಲವನ್ನು ಪಡೆಯಲು ಕೆಲವನ್ನು ಬಿಡಬೇಕು. ಆದರೆ ನಿಮ್ಮ ವಿವೇಚನೆಯಿಂದ ಮುಖ್ಯಾಮುಖ್ಯಗಳನ್ನು ತಿಳಿದರೆ ನೆಮ್ಮದಿಯಿಂದ ಇರಬಹುದು. ಅಪರಿಚಿತರು ನಿಮ್ಮಿಂದ ಧನವನ್ನು ಪಡೆಯುವರು. ಮನೆಗೆ ಬಂದ ಅತಿಥಿಯನ್ನು ಸತ್ಕಾರಿಸುವಿರಿ. ಹಳೆಯ ಸ್ನೇಹಿತರು ಕಾರಣಾಂತರಗಳಿಂದ ಸಂಪರ್ಕಕ್ಕೆ ಬರುವರು. ವಾಹನದಿಂದ ಬಿದ್ದು ಗಾಯವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ.

ಕನ್ಯಾ ರಾಶಿ : ಕೆಟ್ಟ ಆಲೋಚನೆಯಿಂದ ದೂರವಿರುವುದು ಸುಖ. ಹಿರಿಯರಿಗೆ ಬಾಯ್ತಪ್ಪಿ ಮಾತನಾಡಿ ಪಶ್ಚಾತ್ತಾಪಪಡುವಿರಿ. ತೀರ್ಥಯಾತ್ರೆಯ ಸಂದರ್ಭವು ಬರಬಹುದು. ಹಣಕಾಸಿನ ಕೊರತೆಯಿಂದ ಯಾವದೋ ಕಾರ್ಯವನ್ನು ಮಾಡುವಿರಿ. ಎಂದೋ ಮಾಡಿದ ಸಹಾಯವು ಇಂದು ಉಪಯೋಗಕ್ಕೆ ಬರುವುದು. ಪರೋಕ್ಷವಾಗಿ ನಿಮ್ಮವರನ್ನು ದ್ವೇಷಿಸುವಿರಿ.‌ ಮಕ್ಕಳ‌ ಮೇಲೆ‌ ನಿಮ್ಮ ಮೋಹವು ಅತಿಯಾಗಿದ್ದು ಅದು ಬಂಧನವೂ ಆಗಬಹುದು.

ತುಲಾ ರಾಶಿ : ನೀವು ಕಾರ್ಯದಲ್ಲಿ ಎಷ್ಟೇ ಪಳಗಿದರೂ ಎಚ್ಚರಿಕೆಯಿಂದ ಇರುವುದು ಮುಖ್ಯ. ಉತ್ತಮ‌ ದಿನದ ನಿರೀಕ್ಷೆಯಿಂದ ನಿಮಗೆ ಬೇಸರವಾಗಬಹುದು. ಇನ್ನೊಬ್ಬರ ಸಂಧಾನಕ್ಕೆ ಮಧ್ಯಸ್ತಿಕೆಯನ್ನು ವಹಿಸುವಿರಿ. ಕಛೇರಿಯ ವ್ಯವಹಾರವು ನಿಮಗೆ ಸರಿ ಕಾಣಿಸದು. ಹೇಳದೇ ಮೌನದಿಂದ ಇರುವಿರಿ. ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವಿರಿ. ಬಂಧುಗಳ ಮಾತಿನಿಂದ ಅಸಮಾಧನವು ಇರುವುದು. ಒಬ್ಬರೇ ಹೊರಗೆ ಸುತ್ತಾಟ ಮಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳುವಿರಿ.

ವೃಶ್ಚಿಕ ರಾಶಿ : ಅಲ್ಪ ಶ್ರಮದಿಂದ ಗಳಿಸುವ ಮಾರ್ಗದ ಅನ್ವೇಷಣೆ ಆಗಲಿದೆ. ನಿಮ್ಮ ಅನುಕೂಲತೆಯನ್ನು ಗಮನಿಸಿಕೊಂಡು ಯಾವುದಾದರೂ ಕಾರ್ಯವನ್ನು ಒಪ್ಪಿಕೊಳ್ಳಿ. ಇಂದಿನ ಕೆಲಸದಲ್ಲಿ ಕೆಲವು ತೊಂದರೆಗಳು ಕಾಣಿಸಿಕೊಂಡರೂ ಅದನ್ನು ಲೆಕ್ಕಿಸದೇ ಮುಂದೆ ಸಾಗುವಿರಿ. ದೈಹಿಕ ಏರುಪೇರಿಗೆ ವಿಶ್ರಾಂತಿ ಅಗತ್ಯ. ಸರ್ಕಾರಿ ಕೆಲಸಕ್ಕಾಗಿ ಅರ್ಜಿಯನ್ನು ಹಾಕಿ ಕಾಯುತ್ತ ಕುಳಿತಿರುವಿರಿ. ಸಂಗಾತಿಯ ಕೋಪವನ್ನು ಶಾಂತ ಮಾಡುವಿರಿ.

ಧನು ರಾಶಿ : ಸಾಲದಿಂದ ನಿಮ್ಮ ದೊಡ್ಡ ಆಲೋಚನೆಗಳು ಸಣ್ಣದಾಗುವುವು. ನಿಮ್ಮ ಭೀತಿಯನ್ನು ನೀವು ಹೊರಹಾಕದಿದ್ದರೂ ಅರಿವಿಗೆ ಬರುವುದು. ಬಂಧುಗಳ ಆರೋಗ್ಯದ ವಿಚಾರಣೆಗೆ ತಿರುಗಾಟ ಮಾಡಬೇಕಾಗುವುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಂದ ಶಾಂತಿ ಲಭಿಸುವುದು. ಅನಿರೀಕ್ಷವಾಗಿ ಬರುವ ಕಾರ್ಯದ ಒತ್ತಡಕ್ಕೆ ಸಿಕ್ಕಿಕೊಳ್ಳುವಿರಿ. ಧ್ಯಾನದ ಅವಶ್ಯಕತೆ ಇದೆ ಎಂದು ಅನ್ನಿಸಬಹುದು. ಸಣ್ಣ ವಿಷಯವನ್ನು ದೊಡ್ಡ ಮಾಡಿಕೊಳ್ಳುವಿರಿ.

ಮಕರ ರಾಶಿ : ನಿಮಗಾದ ಒಳ್ಳೆಯ ಅನುಭವವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ. ಇಷ್ಟವಾಗದವರು ನಿಮ್ಮೆದುರಿಗೆ ಬರುವಾಗ ಕಣ್ತಪ್ಪಿಸಿಕೊಳ್ಳುವಿರಿ. ದಂಡವನ್ನು ತುಂಬಬೇಕಾದ ಸ್ಥಿತಿಯು ಬರಬಹುದು. ಸ್ವಂತ ವಾಹನದಲ್ಲಿ ಒಂಟಿಯಾಗಿ ಓಡಾಡುವಾಗ ಎಚ್ಚರಿಕೆ ಇರಲಿ. ಆಸ್ತಿಯ ದಾಖಲೆಗಳನ್ನು ಅಧಿಕಾರಿಗಳು ವಿಚಾರಿಸಬಹುದು. ಹೊಸ ಅವಕಾಶಗಳು ಕಾಣಿಸಿಕೊಳ್ಳುವ ದಿನ. ಆದರೆ ಅವಸರದ ನಿರ್ಧಾರಗಳು ಬೇಡ.

ಕುಂಭ ರಾಶಿ : ಇಂದು ವೃತ್ತಿಯಲ್ಲಿ ಬಂದ ಸಮಸ್ಯೆಯನ್ನು ತಾಳ್ಮೆಯಿಂದ ಗಮನಿಸಿಕೊಂಡು. ಗೆಳೆತನ ಸಾಕು ಎನಿಸಿ ಒಂಟಿಯಾಗಿ ಇರಬೇಕು ಎನಿಸುವುದು. ನಿಮ್ಮದಾದ ಸ್ವಂತಿಕೆಯನ್ನು ಉಳಿಸಿಕೊಳ್ಳಿ. ಮಕ್ಕಳ ವಿಚಾರಕ್ಕೆ ವಾದಗಳು ಆಡಬಹುದು. ನಿಮ್ಮ ವಿರುದ್ಧ ತಂತ್ರಗಳು ನಡೆಯಲಿದ್ದು ನಿಮಗೆ ಗೊತ್ತಾಗದು. ಉದ್ಯೋಗಿಗಳ ಆದಾಯದಲ್ಲಿ ಅಲ್ಪ ಏರಿಕೆ. ಪಾಲುದಾರಿಕೆಯಲ್ಲಿ ತಾಳ್ಮೆಯನ್ನು ಕಳೆದುಕೊಳ್ಳುವಿರಿ. ಅವಿವಾಹಿತರಿಗೆ ವಿವಾಹಯೋಗವು ಬರಬಹುದು.

ಮೀನ ರಾಶಿ : ನಿಮ್ಮ ದೂರಾಲೋಚನೆಯು ಸರಿಯಾದ ಹಾದಿಯಲ್ಲಿ ಇದೆಯೇ ಎಂಬುದನ್ನು ತಿಳಿದುಕೊಳ್ಳಿ. ಆದಾಯದ ಮೂಲಗಳು ಸೊರಗಿಹೋದಂತೆ ಅನ್ನಿಸಬಹುದು. ಕೊಟ್ಟಿದ್ದನ್ನು ಮರಳಿ ಕೊಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಇನ್ನೊಬ್ಬರಿಗೆ ಆಕರ್ಷಿತರಾಗುವಿರಿ. ನಿಮ್ಮ ಶಾಂತ ಮನಸ್ಸಿನಿಂದ ಸಂಕಷ್ಟವನ್ನು ಎದುರಿಸುವಿರಿ. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ ಇರಲಿ. ನಿಮ್ಮ ಆಪ್ತರ ಜೊತೆ ಕೆಲವು ರಹಸ್ಯವನ್ನು ಹೇಳಿಕೊಳ್ಳುವಿರಿ.

-ಲೋಹಿತ್ ಹೆಬ್ಬಾರ್-8762924271 (what’s app only)

Published On - 12:41 am, Sun, 22 November 26

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More