AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಪ್ರಬೋಧಿನಿ ಏಕಾದಶಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ

ಇಂದು ಪ್ರಬೋಧಿನಿ ಏಕಾದಶಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ

ಗಣಪತಿ ಶರ್ಮಾ
|

Updated on: Nov 20, 2026 | 6:31 AM

Share

ಪ್ರಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ 2026ರ ನವೆಂಬರ್ 20ರ ದಿನಭವಿಷ್ಯವನ್ನು ವಿವರಿಸಿದ್ದಾರೆ. ಶುಕ್ರವಾರ, ಪ್ರಬೋಧಿನಿ ಏಕಾದಶಿ ಮತ್ತು ವಿಶ್ವ ಮಕ್ಕಳ ದಿನದ ಈ ವಿಶೇಷ ದಿನದಂದು, ಮೇಷ ಮತ್ತು ವೃಷಭ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಗ್ರಹಗಳ ಸಂಚಾರ, ಆರ್ಥಿಕ ಸ್ಥಿತಿ, ಆರೋಗ್ಯ, ಸಂಬಂಧಗಳು ಮತ್ತು ಪರಿಹಾರಗಳ ಕುರಿತು ಮಾಹಿತಿ ಇಲ್ಲಿದೆ.

ಇಂದು 2026ರ ನವೆಂಬರ್ 20, ಶುಕ್ರವಾರ, ಪರಾಭವನಾಮ ಸಂವತ್ಸರ, ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿ. ದಕ್ಷಿಣಾಯನ, ಕಾರ್ತಿಕ ಮಾಸ, ಶರದೃತು, ಶುಕ್ಲ ಪಕ್ಷದ ಏಕಾದಶಿ ತಿಥಿ, ಉತ್ತರಾಭಾದ್ರ ನಕ್ಷತ್ರ, ವಜ್ರ ಯೋಗ ಮತ್ತು ವಣಿಕ ಕರಣ ಇರುತ್ತದೆ. ರಾಹುಕಾಲ ಬೆಳಗ್ಗೆ 10:38 ರಿಂದ 12:05 ರವರೆಗೆ ಇರುತ್ತದೆ. ಸಂಕಲ್ಪ ಕಾಲ ಅಥವಾ ಶುಭಕಾಲ ಮಧ್ಯಾಹ್ನ 12:05 ರಿಂದ 1:31 ರವರೆಗೆ ಇರುತ್ತದೆ. ಇದು ಪ್ರಬೋಧಿನಿ ಏಕಾದಶಿ, ದೇವೋತ್ಥಾನ ಏಕಾದಶಿ, ಭೀಷ್ಮ ಪಂಚಕ ವ್ರತದ ದಿನ ಹಾಗೂ ವಿಶ್ವ ಮಕ್ಕಳ ದಿನವೂ ಹೌದು. ಶುಕ್ರವಾರ ಲಕ್ಷ್ಮಿ ಆರಾಧನೆಗೆ ವಿಶೇಷವಾಗಿದೆ. ಸೂರ್ಯ ವೃಶ್ಚಿಕ ರಾಶಿಯಲ್ಲೂ, ಚಂದ್ರ ಮೀನ ರಾಶಿಯಲ್ಲೂ ಸಂಚರಿಸುತ್ತಿದ್ದಾರೆ. ಇಂದಿನ ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ಪ್ರಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More