AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರಣ್ ಶಾಸ್ತ್ರಿ ದಿಟ್ಟ ಆಟಕ್ಕೆ ಸುದೀಪ್ ಕಡೆಯಿಂದ ಸಿಕ್ತು ವಿಶೇಷ ಉಡುಗೊರೆ

ಬಿಗ್ ಬಾಸ್ ಕನ್ನಡ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಿರಣ್ ಶಾಸ್ತ್ರಿ ಆಟಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್ ನಿರ್ಧಾರ ಬದಲಿಸುವಂತೆ ಸ್ಟ್ಯಾಂಡ್ ತೆಗೆದುಕೊಂಡ ಕಿರಣ್ ಅವರಿಗೆ ಕಿಚ್ಚನ ಚಪ್ಪಾಳೆ, ವಿಶೇಷ ಜಾಕೆಟ್ ಹಾಗೂ ಫೋಟೋ ಫ್ರೇಮ್ ಉಡುಗೊರೆ ನೀಡಿ ಗೌರವಿಸಲಾಗಿದೆ. ಈ ಸಂಚಿಕೆ ಇಂದು ರಾತ್ರಿ 9ಕ್ಕೆ ಪ್ರಸಾರವಾಗಿದೆ.

ಕಿರಣ್ ಶಾಸ್ತ್ರಿ ದಿಟ್ಟ ಆಟಕ್ಕೆ ಸುದೀಪ್ ಕಡೆಯಿಂದ ಸಿಕ್ತು ವಿಶೇಷ ಉಡುಗೊರೆ
ಬಿಗ್ ಬಾಸ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 21, 2026 | 10:42 PM

Share

ಬಿಗ್ ಬಾಸ್ ಕನ್ನಡ ಸೀಸನ್ 13ರ ಕಿಚ್ಚನ ಪಂಚಾಯ್ತಿಯಲ್ಲಿ ಸ್ಪರ್ಧಿ ಕಿರಣ್ ಶಾಸ್ತ್ರಿ ಅವರ ಆಟಕ್ಕೆ ವಿಶೇಷ ಮೆಚ್ಚುಗೆ ವ್ಯಕ್ತವಾಗಿದೆ. ವಯಸ್ಸಿನಲ್ಲಿ ಕಿರಿಯವರಾದರೂ ಕಿರಣ್ ಶಾಸ್ತ್ರಿ ಅವರ ತಿಳುವಳಿಕೆ ಮತ್ತು ವಿಚಾರಗ್ರಹಣ ಶಕ್ತಿ ಎಲ್ಲರಿಗಿಂತಲೂ ಜೋರಾಗಿದೆ ಎಂದು ನಿರೂಪಕ ಕಿಚ್ಚ ಸುದೀಪ್ ಶ್ಲಾಘಿಸಿದ್ದಾರೆ. ಈ ಮೂಲಕ ದೊಡ್ಮನೆಯಲ್ಲಿ ಕಿರಣ್ ಅವರ ಬುದ್ಧಿವಂತಿಕೆಯ ನಡೆ ಗಮನ ಸೆಳೆದಿದೆ.

ಮನೆಯೊಳಗೆ ಮೂವರ ವಿಷಯದಲ್ಲಿ ದೃಢವಾಗಿ ನಿಂತು, ಬಿಗ್ ಬಾಸ್ ನಿರ್ಧಾರವನ್ನೇ ಬದಲಾಯಿಸುವಂತೆ ಸ್ಟ್ಯಾಂಡ್ ತೆಗೆದುಕೊಂಡಿದ್ದಕ್ಕೆ ಕಿರಣ್ ಶಾಸ್ತ್ರಿ ಅವರನ್ನು ಸುದೀಪ್ ಪ್ರಶಂಸಿಸಿದ್ದಾರೆ. ನೇರವಾದ ಮಾತು ಮತ್ತು ನಿರ್ಣಾಯಕ ಸನ್ನಿವೇಶಗಳಲ್ಲಿ ತೋರಿದ ಧೈರ್ಯ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಆಟದ ಆರಂಭದ ದಿನಗಳಲ್ಲಿ ಎದುರಾದ ಟೀಕೆಗಳನ್ನು ಮೀರಿ, ತಾವು ತೆಗೆದುಕೊಂಡ ನಿಲುವಿನಿಂದಲೇ ಕಿರಣ್ ಈಗ ಗಮನಾರ್ಹ ಬದಲಾವಣೆ ತೋರಿಸಿದ್ದಾರೆ.

ಈ ವಾರದ ಪ್ರದರ್ಶನಕ್ಕಾಗಿ ಕಿರಣ್ ಶಾಸ್ತ್ರಿ ಅವರಿಗೆ ‘ಕಿಚ್ಚನ ಚಪ್ಪಾಳೆ’ ನೀಡಿ ಗೌರವಿಸಲಾಗಿದೆ. ಸೌಂದರ್ಯ ಅವರ ಕೈಯಿಂದ ಕಿರಣ್ ಶಾಸ್ತ್ರಿ ಅವರಿಗೆ ವಿಶೇಷ ಜಾಕೆಟ್ ತೊಡಿಸಿ ಸಂಭ್ರಮಿಸಲಾಗಿದೆ. ಜೊತೆಗೆ, ಅವರಿಗೆ ವಿಶೇಷ ಫೋಟೋ ಫ್ರೇಮ್ ಉಡುಗೊರೆಯನ್ನೂ ನೀಡುವ ಮೂಲಕ ಅವರ ಸಾಧನೆಯನ್ನು ಗುರುತಿಸಲಾಗಿದೆ.

ಸಾಮಾನ್ಯ ಜನರ ಆಯ್ಕೆ ಪ್ರಕ್ರಿಯೆಯಾದ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಮೂಲಕ ದೊಡ್ಮನೆಗೆ ಕಾಲಿಟ್ಟ ಕಿರಣ್ ಶಾಸ್ತ್ರಿ, ಆರಂಭದಿಂದಲೂ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಆಟವಾಡುತ್ತಾ ಬಂದಿದ್ದಾರೆ. ನಾಮಿನೇಷನ್ ಮತ್ತು ಟಾಸ್ಕ್‌ಗಳ ನಡುವೆಯೂ ತಮ್ಮ ನಿಲುವುಗಳನ್ನು ಸ್ಪಷ್ಟವಾಗಿ ಮಂಡಿಸುತ್ತಿರುವ ಅವರು, ವೀಕ್ಷಕರ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದ್ದಾರೆ. ಕಿಚ್ಚನ ಚಪ್ಪಾಳೆ ಮತ್ತು ವಿಶೇಷ ಉಡುಗೊರೆ ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹುರುಪು ನೀಡಿದೆ.

ಇದನ್ನೂ ಓದಿ: ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?

ಕಿರಣ್ ಶಾಸ್ತ್ರಿ ಅವರಿಗೆ ಕಿಚ್ಚನ ಚಪ್ಪಾಳೆ ಮತ್ತು ವಿಶೇಷ ಉಡುಗೊರೆ ದೊರೆತಿರುವ ಸಂಚಿಕೆ ಇಂದು ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದೆ. ಇದೇ ವೇಳೆ, ಜಿಯೋ ಹಾಟ್‌ಸ್ಟಾರ್‌ನಲ್ಲಿ 24/7 ಲೈವ್ ಮೂಲಕವೂ ವೀಕ್ಷಕರು ಈ ಸಂಚಿಕೆಯನ್ನು ಕಣ್ತುಂಬಿಕೊಳ್ಳಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಕಾಮರ್ಸ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದು, ಟಿವಿ9 ಕನ್ನಡದಲ್ಲಿಯೂ ಬರೆಯುತ್ತಿದ್ದೇನೆ.

Read More