AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳುವಾದ ಮೊಬೈಲ್​​ಗಳ ರಿಕವರಿಯಲ್ಲಿ ಭಾರತದಲ್ಲೇ ಕರ್ನಾಟಕ ನಂಬರ್ 1: ದೆಹಲಿ ಲಾಸ್ಟ್!

ಭಾರತ ಸರ್ಕಾರದ ಸಿಇಐಆರ್ (CEIR) ಪೋರ್ಟಲ್ ನೆರವಿನಿಂದ ಕಳುವಾದ ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚಿ ವಾಪಸ್ ಕೊಡಿಸುವಲ್ಲಿ ಕರ್ನಾಟಕ ಪೊಲೀಸರು ದೇಶದಲ್ಲೇ ಮೊದಲ ಸ್ಥಾನ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕರ್ನಾಟಕದಲ್ಲಿ ಒಂದು ವರ್ಷಕ್ಕೆ 5 ಲಕ್ಷದ 71 ಸಾವಿರ ಮೊಬೈಲ್ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಇವುಗಳನ್ನು ಭಾರತ ಸರ್ಕಾರದ ಸಿಇಐಆರ್ ಪೋರ್ಟಲ್​​ ಮೂಲಕ ರಿಕವರಿ ಕಾರ್ಯ ನಡೆಸಲಾಗುತ್ತಿದೆ.

ಕಳುವಾದ ಮೊಬೈಲ್​​ಗಳ ರಿಕವರಿಯಲ್ಲಿ ಭಾರತದಲ್ಲೇ ಕರ್ನಾಟಕ ನಂಬರ್ 1: ದೆಹಲಿ ಲಾಸ್ಟ್!
ಸಾಂದರ್ಭಿಕ ಚಿತ್ರImage Credit source: Getty Images
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Jul 31, 2026 | 6:33 PM

Share

ಮುಖ್ಯಾಂಶಗಳು

  • ಕಳುವಾಗಿರುವ ಮೊಬೈಲ್​​ ಫೋನ್​​ಗಳ ರಿಕವರಿಯಲ್ಲಿ ಸಾಧನೆ
  • ದೇಶದಲ್ಲಿಯೇ ನಂಬರ್​​ 1 ಸ್ಥಾನದಲ್ಲಿರುವ ರಾಜ್ಯ ಕರ್ನಾಟಕ
  • ರಿಕವರಿ ಶೇಕಡಾವಾರು ಆಧಾರದಲ್ಲಿ ರಾಜ್ಯದ ಪೊಲೀಸರ ಸಾಧನೆ

ಬೆಂಗಳೂರು, ಜುಲೈ 31: ಸದ್ಯ ದೇಶದಲ್ಲಿಯೇ ಅತಿಹೆಚ್ಚು ಕಳ್ಳತನ ಆಗುವ ವಸ್ತು ಅಂದ್ರೆ ಅದು ಮೊಬೈಲ್​​ ಫೋನ್​​ಗಳು. ಈ ಬಗ್ಗೆ ಪ್ರತಿನಿತ್ಯವೂ ಸಾವಿರಾರು ದೂರುಗಳು ದಾಖಲಾಗುತ್ತವೆ. ಬಹುತೇಕರು ಕಳುವಾಗಿರುವ ತಮ್ಮ ಬೊಬೈಲ್​​ ಆಸೆಯನ್ನೇ ಬಿಟ್ಟಿರುತ್ತಾರೆ. ಆದರೆ ಕಳುವಾದ ಮೊಬೈಲ್​​ಗಳನ್ನು ಪತ್ತೆ ಮಾಡಿ ವಾಪಸ್​​ ಕೊಡಿಸುವುದರಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಹೆಚ್ಚು ಮೊಬೈಲ್ ಕಳ್ಳತನ ಪ್ರಕರಣಗಳು ದಾಖಲಾದ ಟಾಪ್ 5 ರಾಜ್ಯಗಳ ಪೈಕಿ, ರಿಕವರಿ ಶೇಕಡಾವಾರು ಆಧಾರದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಗಮನಾರ್ಹ ಸಾಧನೆ ಮಾಡಿದೆ.

ಕರ್ನಾಟಕದಲ್ಲಿ ಒಂದು ವರ್ಷಕ್ಕೆ 5 ಲಕ್ಷದ 71 ಸಾವಿರ ಮೊಬೈಲ್ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಇವುಗಳನ್ನು ಭಾರತ ಸರ್ಕಾರದ ಸಿಇಐಆರ್ ಪೋರ್ಟಲ್​​ ಮೂಲಕ ರಿಕವರಿ ಕಾರ್ಯ ನಡೆಸಲಾಗುತ್ತಿದೆ. ಮೊಬೈಲ್​​ IMEI ನಂಬರ್​​ ಮೂಲಕ ಕಳುವಅದ ಮೊಬೈಲ್​​ಗಳ ಮೇಲೆ ನಿಗಾ ಇಡಲಾಗುವ ಕಾರಣ ಅವನ್ನು ಯಾರು ಬಳಸಿದರೂ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಅಲರ್ಟ್​​ ಆಗಲಿದೆ. ಇದರ ಆಧಾರದಲ್ಲಿ ಭಾರತದಲ್ಲಿ ಪತ್ತೆ ಮಾಡಲಾಗಿರುವ ಮೊಬೈಲ್​​ಗಳ ಅಂಕಿ-ಅಂಶ ಗಮನಿಸಿದಾಗ ಕರ್ನಾಟಕವೇ ಮೊಬೈಲ್​​ಗಳ ರಿಕವರಿಯಲ್ಲಿ ಮುಂಚೂಣಿಯಲ್ಲಿರೋದು ಕಂಡುಬಂದಿದೆ.

ಇದನ್ನೂ ಓದಿ: ಅಪ್ಪ ಡ್ರಗ್ಸ್ ಜಾಗೃತಿ ಹರಿಕಾರ, ಮಗ ಗಾಂಜಾ ದಂಧೆಯ ಕಿಂಗ್‌ಪಿನ್! ಕ್ಯೂಆರ್ ಕೋಡ್‌ನಿಂದ ಬಯಲಾಯ್ತು ಪೊಲೀಸ್ ಪುತ್ರನ ಕರಾಳ ಕಥೆ

ಕರ್ನಾಟಕ ಫಸ್ಟ್, ದೆಹಲಿ ಲಾಸ್ಟ್!

ರಾಜ್ಯ ದಾಖಲಾದ ಪ್ರಕರಣಗಳು ವಶಪಡಿಸಿಕೊಂಡ ಫೋನ್‌ಗಳು ರಿಕವರಿ ಪ್ರಮಾಣ
ದೆಹಲಿ 1024244 45931 7.09%
ಮಹಾರಾಷ್ಟ್ರ 689044 159068 39.74%
ಕರ್ನಾಟಕ 572972 155940 47.48%
ತೆಲಂಗಾಣ 526792 137049 44.16%
ಉತ್ತರ ಪ್ರದೇಶ 493678 493678 45.77%

ಭಾರತದಲ್ಲಿ ಅತಿಹೆಚ್ಚು ಮೊಬೈಲ್ ಕಳ್ಳತನ ಮೊಬೈಲ್ ಸ್ನಾಚಿಂಗ್ ಪ್ರಕರಣಗಳ ಸಂಖ್ಯೆ ಸಹ ಇದೇ ಐದು ರಾಜ್ಯಗಳಲ್ಲಿ ಹೆಚ್ಚಿದ್ದು, ಸದ್ಯ ಒಂದು ಹಂತಕ್ಕೆ ಪೊಲೀಸರು ರಿಕವರಿ ಮಾಡಿ ಕೊಡುವುದರಲ್ಲಿ ಯಶಸ್ವಿಯಾಗಿ ಕೆಲಸ ಮಾಡುತಿದ್ದಾರೆ. ಇದು ಖುಷಿಯ ವಿಚಾರವಾದರೂ ಈ ಮಾದರಿಯ ಕಳ್ಳತನ ಪ್ರಕರಣಗಳ ತಡೆಯುವಲ್ಲಿ ಪೊಲೀಸರು ವಿಫಲರಾಗಿರುವ ಆರೋಪಗಳೂ ಕೇಳಿಬಂದಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us