AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾಹ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ನಿಮ್ಮ ಹತ್ರ ಇರಲಿ

1955ರ ಹಿಂದೂ ವಿವಾಹ ಕಾಯ್ದೆಯಡಿ  ವಿವಾಹ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಹೌದು, ಮದುವೆಯ ಬಾಂಧವ್ಯವನ್ನು ದೃಢೀಕರಿಸುವ ಕಾನೂನುಬದ್ಧ ದಾಖಲೆಯೇ ಈ ವಿವಾಹ ಪ್ರಮಾಣಪತ್ರ. ಸೂಕ್ತ ದಾಖಲೆಗಳೊಂದಿಗೆ ಆನ್ಲೈನ್‌ನಲ್ಲಿ ಮ್ಯಾರೇಜ್ ಸರ್ಟಿಫಿಕೇಟ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ನಿಮ್ಮ ಬಳಿ ಈ ದಾಖಲೆಗಳು ಇರುವುದು ಕಡ್ಡಾಯ. ಈ ಕುರಿತಾದ ಸ್ಟೋರಿ ಇಲ್ಲಿದೆ.

ವಿವಾಹ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ನಿಮ್ಮ ಹತ್ರ ಇರಲಿ
ಸಾಂದರ್ಭಿಕ ಚಿತ್ರImage Credit source: Blend Images - Kyle Monk/Tetra images/ Getty Images
ಸಾಯಿನಂದಾ
|

Updated on:Jul 31, 2026 | 6:04 PM

Share

ಮುಖ್ಯಾಂಶಗಳು

  • ಮದುವೆ ಎಂಬ ಸುಂದರ ಬಂಧವನ್ನು ದೃಢೀಕರಿಸಲು ವಿವಾಹ ಪ್ರಮಾಣ ಪತ್ರ ಅತ್ಯಗತ್ಯ
  • ವಿವಾಹ ಪ್ರಮಾಣಪತ್ರಕ್ಕೆ ಕಾವೇರಿ ಆನ್ಲೈನ್ ಸರ್ವಿಸಸ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು
  • ವಿವಾಹ ಪ್ರಮಾಣ ಪತ್ರ ಕಾನೂನುಬದ್ಧ ರಕ್ಷಣೆ, ಸಾಮಾಜಿಕ ಭದ್ರತೆ ಒದಗಿಸುತ್ತದೆ

ಗಂಡು ಹೆಣ್ಣು ಸತಿ ಪತಿಗಳಾಗಿ ಜತೆಯಾಗಿ ಬದುಕಲು ಯೋಗ ಕೂಡಿ ಬರಬೇಕು. ಈ ಸುಂದರ ಬಾಂಧವ್ಯ ದೀರ್ಘಕಾಲ ಉಳಿಯಲು ನಂಬಿಕೆ ಇರಲೇ ಬೇಕು. ಅದಲ್ಲದೇ, ಈ  ಮದುವೆ ಎಂಬ ಸುಂದರ ಬಂಧವನ್ನು ದೃಢೀಕರಿಸಲು ವಿವಾಹ ಪ್ರಮಾಣ ಪತ್ರ (marriage certificate) ಅತ್ಯಗತ್ಯ. ಇದು ಕಾನೂನುಬದ್ಧ ರಕ್ಷಣೆ, ಸಾಮಾಜಿಕ ಭದ್ರತೆಯಾಗಿದೆ. ಇನ್ನು ಉಳಿದಂತೆ ಪಾಸ್‌ಪೋರ್ಟ್, ವೀಸಾ ಸೇರಿದಂತೆ ಇತರ ಕೆಲಸಗಳಿಗೆ ಅತ್ಯಗತ್ಯ ದಾಖಲೆಯಲ್ಲಿ ಒಂದು. ನಿಮ್ಮ ವೈಯುಕ್ತಿಕ ಹಾಗೂ ಮದುವೆಯಾಗಿರುವ ದಾಖಲೆಗಳು ಇದ್ದರೆ ಕರ್ನಾಟಕದಲ್ಲಿ ವಿವಾಹ ಪ್ರಮಾಣಪತ್ರ ಪಡೆಯಲು ಕಾವೇರಿ ಆನ್ಲೈನ್ ಸರ್ವಿಸಸ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ವಿವಾಹ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಎಸ್.ಎಸ್.ಎಲ್.ಸಿ ಅಂಕಪಟ್ಟಿ
  • ಜನನ ಪ್ರಮಾಣ ಪತ್ರ ಅಥವಾ ಪಾಸ್‌ಪೋರ್ಟ್
  • ಆಧಾರ್ ಕಾರ್ಡ್, ವೋಟರ್ ಐಡಿ, ಅಥವಾ ಪಡಿತರ ಚೀಟಿ
  • ಮದುವೆಯ ಆಮಂತ್ರಣ ಪತ್ರಿಕೆ
  • ದಂಪತಿಗಳ ಜಂಟಿ ಫೋಟೋ ಹಾಗೂ ಮದುವೆ ಸಮಾರಂಭದ ಫೋಟೋ
  • ಮೂವರು ಸಾಕ್ಷಿಗಳ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್

ವಿವಾಹ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ಕಾವೇರಿ ಕರ್ನಾಟಕ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಹೊಸ ಬಳಕೆದಾರರಾಗಿ ನೋಂದಾಯಿಸಿ.

ಹಂತ 2: ಮದುವೆ ನೋಂದಣಿ ಆಯ್ಕೆಮಾಡಿ ಹಾಗೂ ವಿವರವಾದ ಮಾಹಿತಿಯನ್ನು ಭರ್ತಿ ಮಾಡಿ.

ಹಂತ 3: ವೈಯುಕ್ತಿಕ ಹಾಗೂ ಮದುವೆಯ  ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

ಹಂತ 4: ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.

ಹಂತ 5: ಕೊನೆಗೆ ಅರ್ಡರ್ ರಶೀದಿ ಪ್ರಿಂಟ್ ಮಾಡಿಸಿ, ಮುಂದಿನ ಪರಿಶೀಲನೆಗಾಗಿ ನಿಮ್ಮ ಬಳಿಯೇ ಇಟ್ಟುಕೊಳ್ಳುವುದು ಸೂಕ್ತ.

ಇದನ್ನೂ ಓದಿ: Tech Tips: ಪಾರ್ಟ್ನರ್ ಜೊತೆ ಖಾಸಗಿ ಸಮಯ ಕಳೆಯುವಾಗ ಈ ಫೋನ್ ಸೆಟ್ಟಿಂಗ್ಸ್ ತಪ್ಪದೇ ಆಫ್ ಮಾಡಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ವಿವಾಹ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಉತ್ತರ: ವಿವಾಹ ಪ್ರಮಾಣ ಪತ್ರಕ್ಕೆ ಆಫ್ ಲೈನ್ ಹಾಗೂ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಶ್ನೆ: ವಿವಾಹ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ವೆಬ್ಸೈಟ್ ಯಾವುದು?

ಉತ್ತರ: ಕಾವೇರಿ ಕರ್ನಾಟಕ ಅಧಿಕೃತ ವೆಬ್‌ಸೈಟ್‌ ವಿವಾಹ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಇರುವ ವೆಬ್ಸೈಟ್ ಆಗಿದೆ

ಪ್ರಶ್ನೆ: ವಿವಾಹ ಪ್ರಮಾಣ ಪತ್ರ ಏಕೆ ಮುಖ್ಯ?

ಉತ್ತರ: ವಿವಾಹ ಪ್ರಮಾಣ ಪತ್ರ ಕಾನೂನುಬದ್ಧ ರಕ್ಷಣೆ, ಸಾಮಾಜಿಕ ಭದ್ರತೆ ಜತೆಗೆ ಪಾಸ್‌ಪೋರ್ಟ್, ವೀಸಾ ಸೇರಿದಂತೆ ಇತರ ಕೆಲಸಗಳಿಗೆ ಬಹಳ ಮುಖ್ಯ ದಾಖಲೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Fri, 31 July 26

Follow Us