AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗಸ್ಟ್ ಮೊದಲ ವಾರದಲ್ಲಿ ಬಲಿಷ್ಠ ಗ್ರಹಗಳ ಸಂಯೋಗ: ಉದ್ಯೋಗ ಕ್ಷೇತ್ರದಲ್ಲಿ ಯಾರಿಗೆ ಬಡ್ತಿ, ಯಾರಿಗೆ ಸ್ಥಾನ ಪಲ್ಲಟ?: 12 ರಾಶಿಗಳ ವೃತ್ತಿ ಭವಿಷ್ಯ

ಆಗಸ್ಟ್ ಮೊದಲ ವಾರದಲ್ಲಿ ಗ್ರಹಗಳ ಸಂಯೋಗ ಮತ್ತು ದೃಷ್ಟಿಯಿಂದ ಉದ್ಯೋಗ ಭವಿಷ್ಯದ ಮೇಲೆ ಮಹತ್ತರ ಪರಿಣಾಮ ಬೀಳಲಿದೆ. ಪ್ರತಿ ರಾಶಿಗೂ ವಿಭಿನ್ನ ಯೋಗಗಳಿದ್ದು, ಕೆಲವರಿಗೆ ಹೊಸ ಉದ್ಯೋಗಾವಕಾಶ, ಬಡ್ತಿ ಸಿಗುವ ಸಾಧ್ಯತೆ ಇದೆ. ಇನ್ನು ಕೆಲವರಿಗೆ ಒತ್ತಡ ಅಥವಾ ಬದಲಾವಣೆ ಎದುರಾಗಬಹುದು. ಈ ಜ್ಯೋತಿಷ್ಯ ಮಾರ್ಗದರ್ಶನವು ನಿಮ್ಮ ವೃತ್ತಿಜೀವನಕ್ಕೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗಲಿದೆ.

ಆಗಸ್ಟ್ ಮೊದಲ ವಾರದಲ್ಲಿ ಬಲಿಷ್ಠ ಗ್ರಹಗಳ ಸಂಯೋಗ: ಉದ್ಯೋಗ ಕ್ಷೇತ್ರದಲ್ಲಿ ಯಾರಿಗೆ ಬಡ್ತಿ, ಯಾರಿಗೆ ಸ್ಥಾನ ಪಲ್ಲಟ?: 12 ರಾಶಿಗಳ ವೃತ್ತಿ ಭವಿಷ್ಯ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jul 31, 2026 | 6:18 PM

Share

ಆಗಸ್ಟ್​​ ಮೊದಲ ವಾರದಲ್ಲಿ ಗ್ರಹಗಳ ಸಂಯೋಗ ಮತ್ತು ದೃಷ್ಟಿಯ ಕಾರಣದಿಂದ ಉದ್ಯೋಗದ ಮೇಲೆ ವಿಪರೀತ ಪರಿಣಾಮಗಳೂ ಬೀರಬಹುದು. ಯಾವುದಕ್ಕೆ ಎಷ್ಟು ಮಹತ್ತ್ವ ಎಂಬ ನಿರ್ಧಾರವನ್ನು ಅವರೇ ಮಾಡಿಕೊಂಡರೆ ಸುಲಭ. ಒತ್ತಡಕ್ಕೆ ಸಿಕ್ಕಿಬಿದ್ದರೆ ನಿಮ್ಮ ಯೋಜನೆ ಮಾರ್ಗವನ್ನು ತಪ್ಪಬಹುದು. ಶುಭವಾಗಲಿ.

ಮೇಷ ರಾಶಿ :

​ನಿಮ್ಮ ರಾಶ್ಯಾಧಿಪತಿ ಮಂಗಳ ಮಿಥುನದಲ್ಲಿದ್ದು ಗುರು-ಸೂರ್ಯ-ಬುಧರ ಉಪಸ್ಥಿತಿ ೪ನೇ ಮನೆಯಲ್ಲಿದೆ. ಹೊಸ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಲಿವೆ. ಬಡ್ತಿ ಅಥವಾ ಉನ್ನತ ಹುದ್ದೆ ಸಿಗುವ ಬಲವಾದ ಯೋಗವಿದೆ. ಹೊಸ ಸಾಹಸಗಳಿಗೆ ಕೈಹಾಕಲು ಇದು ಸೂಕ್ತ ಸಮಯ. ​ ವೃಷಭ ರಾಶಿ :

​ಚಂದ್ರನು ನಿಮ್ಮದೇ ರಾಶಿಯಲ್ಲಿ ಉಚ್ಛ ಸ್ಥಿತಿಗೆ ಬರಲ್ಲಿದ್ದಾನೆ. ನಿಮ್ಮ ಕೆಲಸದಲ್ಲಿ ಸ್ಥಿರತೆ ಮತ್ತು ಗೌರವ ಹೆಚ್ಚಾಗಲಿದೆ. ಸೃಜನಶೀಲ ಮತ್ತು ಕಲಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ ಅತ್ಯುತ್ತಮ ಪ್ರಗತಿ. ಆತುರದ ನಿರ್ಧಾರಗಳನ್ನು ತಳೆದು ಶಾಂತತೆಯಿಂದ ಕೆಲಸ ನಿರ್ವಹಿಸಿ. ​ ಮಿಥುನ ರಾಶಿ :

​ನಿಮ್ಮ ರಾಶಿಯಲ್ಲಿಯೇ ಮಂಗಳನಿದ್ದು, ಧನ ಭಾವದಲ್ಲಿ ಗ್ರಹಗಳ ಬಲವಿದೆ. ಶ್ರಮ ಹೆಚ್ಚಾಗಲಿದೆಯಾದರೂ ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ವಿದೇಶಿ ಸಂಪರ್ಕಗಳಿಂದ ಲಾಭ. ಕಚೇರಿಯಲ್ಲಿ ಕೋಪ ಮತ್ತು ವಾಗ್ವಾದಗಳನ್ನು ಹದ್ದುಬಸ್ತಿನಲ್ಲಿಡುವುದು ಒಳಿತು.

​ಕರ್ಕಾಟಕ ರಾಶಿ :

​ನಿಮ್ಮ ರಾಶಿಯಲ್ಲಿ ಗುರು ಉಚ್ಚ. ಸೂರ್ಯ ಮತ್ತು ಬುಧ ಒಟ್ಟಿಗಿದ್ದಾರೆ. ನಾಯಕತ್ವದ ಗುಣಗಳು ಹೊರಹೊಮ್ಮಲಿವೆ. ಸರ್ಕಾರಿ ಅಥವಾ ಪ್ರಭಾವಿ ರಂಗದಲ್ಲಿ ಇರುವವರಿಗೆ ಭಾರೀ ಯಶಸ್ಸು, ಹುದ್ದೆ ಬದಲಾವಣೆ ಅಥವಾ ದೊಡ್ಡ ಮಟ್ಟದ ಪ್ರಮೋಷನ್ ಕಾಯುತ್ತಿದೆ. ಅಹಂಕಾರವನ್ನು ದೂರವಿಟ್ಟು ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡಿ. ​ ಸಿಂಹ ರಾಶಿ :

​ನಿಮ್ಮ ರಾಶಿಯಲ್ಲಿ ಕೇತು ಇದ್ದು, ರಾಶ್ಯಾಧಿಪತಿ ಸೂರ್ಯ ೧೨ನೇ ಮನೆಯಲ್ಲಿದ್ದಾನೆ. ಸ್ಥಳ ಬದಲಾವಣೆ ಅಥವಾ ಕಂಪನಿ ಬದಲಾವಣೆಯ ಸಾಧ್ಯತೆ ಹೆಚ್ಚು. ದೂರದೂರು ಅಥವಾ ವಿದೇಶಿ ಉದ್ಯೋಗಾವಕಾಶಗಳು ಒದಗಿಬರಲಿವೆ. ಕೆಲಸದ ಸ್ಥಳದಲ್ಲಿ ತಪ್ಪು ತಿಳುವಳಿಕೆಗಳಾಗದಂತೆ ಎಚ್ಚರವಹಿಸಿ. ​ ಕನ್ಯಾ ರಾಶಿ :

​ನಿಮ್ಮ ರಾಶಿಯಲ್ಲಿ ಶುಕ್ರನಿದ್ದು, ಲಾಭ ಸ್ಥಾನದಲ್ಲಿ ಗುರು-ಸೂರ್ಯ-ಬುಧರ ಬಲವಿದೆ. ಹೊಸ ಆದಾಯದ ಮೂಲಗಳು ತೆರೆಯಲಿವೆ. ಸ್ವಂತ ಉದ್ಯೋಗ ಮಾಡುವವರಿಗೆ ಸುವರ್ಣ ಅವಕಾಶಗಳು ಬರಲಿವೆ. ವೃತ್ತಿಜೀವನದಲ್ಲಿ ಜಾಣ್ಮೆಯ ನಿರ್ಧಾರಗಳು ಉತ್ತಮ ಫಲ ನೀಡಲಿವೆ. ​ ತುಲಾ ರಾಶಿ :

​ನಿಮ್ಮ ಕರ್ಮ ಸ್ಥಾನದಲ್ಲಿ ಗುರು, ಸೂರ್ಯ ಮತ್ತು ಬುಧ ಯೋಗ ಸಾಧಿಸುತ್ತಿದ್ದಾರೆ. ಉದ್ಯೋಗ ರಂಗದಲ್ಲಿ ಅತ್ಯಂತ ಸಕಾರಾತ್ಮಕ ಬದಲಾವಣೆ ಕಾಣಲಿದ್ದೀರಿ. ವೃತ್ತಿಯಲ್ಲಿ ಮೇಲಧಿಕಾರಿಗಳ ಸಂಪೂರ್ಣ ಬೆಂಬಲ ಸಿಗಲಿದೆ. ಈ ಸಮಯವನ್ನು ನಿಮ್ಮ ವೃತ್ತಿ ಬೆಳವಣಿಗೆಗೆ ಗರಿಷ್ಠವಾಗಿ ಬಳಸಿಕೊಳ್ಳಿ. ​ ವೃಶ್ಚಿಕ ರಾಶಿ :

​ಭಾಗ್ಯ ಸ್ಥಾನದಲ್ಲಿ ಗುರು-ಸೂರ್ಯ ಸಂಯೋಗ ಇದೆ. ಉನ್ನತ ಶಿಕ್ಷಣ ಅಥವಾ ಹೊಸ ತರಬೇತಿಗಳ ಮೂಲಕ ಉದ್ಯೋಗದಲ್ಲಿ ಬಡ್ತಿ ಪಡೆಯುತ್ತೀರಿ. ದೂರದ ಪ್ರಯಾಣ ಅಥವಾ ಹೊಸ ಪ್ರಾಜೆಕ್ಟ್‌ಗಳು ಸಿಗಲಿವೆ. ಹಿರಿಯರ ಮಾರ್ಗದರ್ಶನ ಪಡೆದು ಮುನ್ನಡೆಯಿರಿ.

​ಧನು ರಾಶಿ :

​ಎಂಟನೇ ಮನೆಯಲ್ಲಿ ಗ್ರಹಗಳ ಒತ್ತಡವಿದ್ದರೂ, ಮೀನದಲ್ಲಿದ್ದ ಶನಿಯ ದೃಷ್ಟಿ ನಾಲ್ಕನೇ ಮನೆಯಲ್ಲಿ ಇದೆ. ಹಠಾತ್ ಬದಲಾವಣೆಗಳು ಅಥವಾ ಕೆಲಸದ ಒತ್ತಡ ಹೆಚ್ಚಾಗಬಹುದು. ತಾಳ್ಮೆಯಿಂದಿದ್ದರೆ ಮುಂದೆ ಉತ್ತಮ ದಿನಗಳು ಬರಲಿವೆ. ಈಗಿರುವ ಕೆಲಸವನ್ನು ಆತುರಪಟ್ಟು ಬಿಡಬೇಡಿ.

​ಮಕರ ರಾಶಿ :

​ಸಪ್ತಮ ಭಾವದಲ್ಲಿ ಶುಭ ಗ್ರಹಗಳ ಸಂಚಾರವಿದೆ. ಪಾಲುದಾರಿಕೆ ವ್ಯವಹಾರ ಅಥವಾ ಕ್ಲೈಂಟ್ ಆಧಾರಿತ ಕೆಲಸಗಳಲ್ಲಿ ಸಫಲತೆ. ಹೊಸ ಉದ್ಯೋಗ ಒಪ್ಪಂದಗಳು ಕೈಗೂಡಲಿವೆ. ಕೆಲಸದಲ್ಲಿ ಸ್ಪಷ್ಟತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಿ.

ಇದನ್ನೂ ಓದಿ: ಆಗಸ್ಟ್ ಮಾಸಿಕ ರಾಶಿ ಭವಿಷ್ಯ: ಯಾವ ರಾಶಿಗೆ ಧನಲಾಭ, ಯಾರಿಗೆ ಉದ್ಯೋಗದಲ್ಲಿ ಪ್ರಗತಿ?

​ಕುಂಭ ರಾಶಿ :

​ನಿಮ್ಮ ರಾಶಿಯಲ್ಲಿ ರಾಹು ಇದ್ದು, ೬ನೇ ಮನೆಯಲ್ಲಿ ಗುರು ಹಾಗೂ ಸೂರ್ಯರಿದ್ದಾರೆ. ಸ್ಪರ್ಧಾತ್ಮಕ ವಾತಾವರಣವಿರುತ್ತದೆ. ಶತ್ರುಗಳು ಅಥವಾ ಸವಾಲುಗಳನ್ನು ಮೆಟ್ಟಿ ನಿಂತು ಜಯಗಳಿಸುತ್ತೀರಿ. ಹೊಸ ಉದ್ಯೋಗಕ್ಕೆ ಸವಾಲಿನ ಹಾದಿ ಇರಲಿದೆ. ಆರೋಗ್ಯ ಹಾಗೂ ಒತ್ತಡ ನಿರ್ವಹಣೆಗೆ ಆದ್ಯತೆ ನೀಡಿ. ​ ಮೀನ ರಾಶಿ :

​ನಿಮ್ಮ ರಾಶಿಯಲ್ಲಿಯೇ ಶನಿಯು ವಕ್ರನಾಗಿದ್ದು, ೫ನೇ ಮನೆಯಲ್ಲಿ ಗುರು, ಸೂರ್ಯ, ಬುಧರಿದ್ದಾರೆ. ಕೌಶಲ್ಯ ಅಭಿವೃದ್ಧಿಗೆ ಸೂಕ್ತ ಸಮಯ. ಹಳೆಯ ಯೋಜನೆಗಳು ಪೂರ್ಣಗೊಳಿಸಿ ಹೊಸ ಸ್ಥಾನಮಾನ ಪಡೆಯಲಿದ್ದೀರಿ. ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗಲಿದ್ದು, ಶಿಸ್ತು ಪಾಲಿಸಿ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us