AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದದೇಗಲ್ ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ವಾರ್ಡನ್ ಅನುಪಸ್ಥಿತಿ, ಊಟಕ್ಕೂ ವಿದ್ಯಾರ್ಥಿಗಳ ಪರದಾಟ

ದದೇಗಲ್ ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ವಾರ್ಡನ್ ಅನುಪಸ್ಥಿತಿ, ಊಟಕ್ಕೂ ವಿದ್ಯಾರ್ಥಿಗಳ ಪರದಾಟ

ಶಿವಕುಮಾರ್ ಪತ್ತಾರ್
| Edited By: |

Updated on: Aug 23, 2026 | 1:18 PM

Share

ಕೊಪ್ಪಳದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ತರಕಾರಿ ಇಲ್ಲದ ಊಟದಿಂದ ಪರದಾಡುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ವಾರ್ಡನ್ ಕೊಟ್ರೇಶ್ ಅವರು ನಿಲಯಕ್ಕೆ ಭೇಟಿ ನೀಡಿಲ್ಲ. ಅಷ್ಟೇ ಅಲ್ಲದೆ, ಹಣದ ಕೊರತೆಯಿಂದ ಸಿಬ್ಬಂದಿಗಳೇ 50,000ಕ್ಕೂ ಹೆಚ್ಚು ಹಣ ಹಾಕಿ ವಿದ್ಯಾರ್ಥಿಗಳಿಗೆ ಊಟ, ತರಕಾರಿ, ಮೊಟ್ಟೆ, ಚಿಕನ್ ವ್ಯವಸ್ಥೆ ಮಾಡುತ್ತಿದ್ದಾರೆ. ವಸತಿ ನಿಲಯದಲ್ಲಿ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಕಳೆದ ಮೂರು ತಿಂಗಳಿಂದ ವಾರ್ಡನ್ ಹಾಸ್ಟೆಲ್​​ನತ್ತ ಮುಖವನ್ನೇ ಮಾಡಿಲ್ಲ ಎನ್ನಲಾಗಿದೆ.

ಕೊಪ್ಪಳ, ಆಗಸ್ಟ್​​ 23: ತಾಲೂಕಿನ ದದೇಗಲ್ ಬಳಿ ಇರುವ ಡಾ. ಅಂಬೇಡ್ಕರ್ ಮೆಟ್ರಿಕ್ ನಂತರ ವಸತಿ ನಿಲಯ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಕನಿಷ್ಠ ಉತ್ತಮ ಊಟ ವಿತರಣೆ ನಡೆಯದ ಸ್ಥಿತಿ ಇದ್ದು, ಊಟಕ್ಕೆ ತರಕಾರಿ ಇಲ್ಲದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ತರಕಾರಿ ತರಲು ಹಣ ಇಲ್ಲದೆ ಪರದಾಟ ನಡೆಸುತ್ತಿರುವ ಸಿಬ್ಬಂದಿ, ಮತ್ತೊಂದು ವಸತಿ ನಿಲಯದಿಂದ ತರಕಾರಿ ತಂದು ಅಡುಗೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಊಟಕ್ಕಾಗಿ ತರಕಾರಿ, ಮೊಟ್ಟೆ ಹಾಗೂ ಚಿಕನ್ ತರಲು ಸುಮಾರು 50 ಸಾವಿರ ರೂ. ಹಣವನ್ನು ನೈಟ್ ವಾಚಮನ್ ಹಾಗೂ ಅಡುಗೆ ಸಹಾಯಕ ಸಿಬ್ಬಂದಿಗಳೇ ವಿನಿಯೋಗಿಸಿದ್ದಾರೆ ಎನ್ನಲಾಗಿದೆ. ವಸತಿ ನಿಲಯದಲ್ಲಿ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಕಳೆದ ಮೂರು ತಿಂಗಳಿಂದ ವಾರ್ಡನ್ ಹಾಸ್ಟೆಲ್​​ನತ್ತ ಮುಖವನ್ನೇ ಮಾಡಿಲ್ಲ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನ ಕೇಳಿದ್ರೆ ಪಕ್ಕದ ವಸತಿ ನಿಲಯದಿಂದ ತಂದು ಅಡುಗೆ ಮಾಡಿ ಎಂದಿದ್ದಾರೆ ಎಂದು ದೂರಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us