AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲ ತೀರಿಸಲು ಕಿಡ್ನ್ಯಾಪ್​ ನಾಟಕ: ತಂದೆಯಿಂದಲೇ ಹಣ ವಸೂಲಿಗೆ ಯತ್ನಿಸಿ ಪೊಲೀಸರ ಅತಿಥಿಯಾದ ಮಗ!

ಸಾಲ ತೀರಿಸಲು ಕಿಡ್ನ್ಯಾಪ್​ ನಾಟಕ: ತಂದೆಯಿಂದಲೇ ಹಣ ವಸೂಲಿಗೆ ಯತ್ನಿಸಿ ಪೊಲೀಸರ ಅತಿಥಿಯಾದ ಮಗ!

ವಿಕಾಸ್​ ಬಿಎಂ
| Edited By: |

Updated on:Oct 02, 2026 | 12:57 PM

Share

ಸಾಲ ತೀರಿಸಲು ಮಗನೊಬ್ಬ ತನ್ನ ತಂದೆಗೆ ವಂಚಿಸಲು ನಕಲಿ ಅಪಹರಣ ನಾಟಕವಾಡಿ 90 ಲಕ್ಷ ಬೇಡಿಕೆ ಇಟ್ಟಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿದ್ಯುತ್ ಗುತ್ತಿಗೆಯಲ್ಲಿ 1.5 ಕೋಟಿ ರೂ. ಸಾಲ ಮಾಡಿದ್ದ ಮನೀಷ್​​ ಎಂಬಾತ, ತಂದೆ ಮನೋಹರ್ ಅವರ ಬಳಿ ಹಣಕ್ಕಾಗಿ ನಕಲಿ ಅಪಹರಣದ ಕರೆ ಮಾಡಿಸಿದ್ದ. ಈ ಸಂಬಂಧ ಹುಡುಕಾಟದ ವೇಳೆ ಹಾಸನದಲ್ಲಿ ಪತ್ತೆಯಾದ ಮನೀಶ್ ಹಾಗೂ ಇಬ್ಬರು ಸ್ನೇಹಿತರನ್ನು ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್​​ 02: ಸಾಲ ತೀರಿಸುವ ಸಲುವಾಗಿ ಕಿಡ್ನ್ಯಾಪ್​ ನಾಟಕವಾಡಿ ತಂದೆಯಿಂದ ಹಣ ವಸೂಲಿಗೆ ಮಗನೇ ಯತ್ನಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಸೆ.29ರಂದು ಮನೀಷ್​ ತಂದೆ ಮನೋಹರ್​ ಪಾಟೀಲ್​ಗೆ ಮನಿಷ್ ಮೊಬೈಲ್​ನಿಂದ ವಾಟ್ಸಾಪ್​ ಕರೆ ಮಾಡಿದ್ದ ಗ್ಯಾಂಗ್​​ ನಿಮ್ಮ ಮಗನ ಕಿಡ್ನ್ಯಾಪ್ ಮಾಡಿದ್ದೇವೆ ಎಂದು 90 ಲಕ್ಷ ರೂ. ಹಣಕ್ಕೆ ಡಿಮ್ಯಾಂಡ್ ಇಟ್ಟಿತ್ತು. ಇತ್ತ ಹಣದ ವ್ಯವಹಾರಕ್ಕಾಗಿ ಗದಗಕ್ಕೆ ಹೋಗ್ತೇನೆ ಎಂದು ಮನೆಯಿಂದ ತೆರಳಿದ್ದ ಮನೀಷ್, ಟ್ರೈನ್​ನಲ್ಲಿ ಹೋಗ್ತೀನಿ ಎಂದು ಬೆಳಗ್ಗೆ ಫೋನ್ ಮಾಡ್ತೀನಿ ಎಂದು ಹೇಳಿದ್ದ. ಈ ನಡುವೆ ಬಂದ ಕಿಡ್ನ್ಯಾಪ್​ ಕರೆಯಿಂದ ಮನೀಷ್ ತಂದೆ ಮನೋಹರ್ ಬೆಚ್ಚಿಬಿದ್ದಿದ್ದು, ತಕ್ಷಣ ಆರ್.ಆರ್.ನಗರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸರು ಮನೀಷ್ ಮೊಬೈಲ್ ಟ್ರ್ಯಾಕ್ ಮಾಡಿದಾಗ ಸ್ವಿಚ್​ಆಫ್ ಬಂದಿದೆ. ಬಳಿಕ ಬೇರೊಂದು ನಂಬರ್​​ನಿಂದ ಹಣ ಅರೆಂಜ್ ಆಯ್ತಾ ಎಂದು ಕರೆ ಬಂದಿದ್ದು, ಆ ನಂಬರ್ ಟ್ರ್ಯಾಕ್ ಮಾಡಿ ಹಾಸನ ಭಾಗದಲ್ಲಿ ಪೊಲೀಸರು ಹುಡುಕಾಡಿದ್ದರು. ಈ ವೇಳೆ ಇಬ್ಬರು ಸ್ನೇಹಿತರ ಜೊತೆ ಆರಾಮಾಗಿ ಮನೀಷ್​​ ಮಲಗಿರೋದು ಕಂಡುಬಂದಿದೆ. ಮನೀಷ್ ಸೇರಿ ಮೂವರನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಕಿಡ್ನ್ಯಾಪ್​ ನಾಟಕ ಬಯಲಾಗಿದೆ. ಎಲೆಕ್ಟ್ರಿಕ್ ಕಂಟ್ರಾಕ್ಟ್​ಗೆ ಮನೀಷ್ 1.5 ಕೋಟಿ ಸಾಲ ಮಾಡಿಕೊಂಡಿದ್ದ. ಈ ಸಾಲ ತೀರಿಸಲು ಕಿಡ್ನ್ಯಾಪ್​ ನಾಟಕವಾಡಿದ್ದಾಗಿ ಆತ​ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Oct 02, 2026 12:56 PM

Follow Us
ವಿಕಾಸ್​ ಬಿಎಂ
ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More