ಬೀದರ್ನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!
ಬೀದರ್‌ನ ಶ್ಯಾಮರಾಜಪುರ ಬಡಾವಣೆಯ ಫರೀನಾ ಬೇಗಂ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಿಜೇರಿಯನ್ ಮೂಲಕ ಒಂದೇ ಹೆರಿಗೆಯಲ್ಲಿ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಲಾ ಒಂದೂವರೆ ಕೆಜಿ ತೂಕವಿದ್ದ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಬ್ರಿಮ್ಸ್ ವೈದ್ಯರು ನೀಡಿದ ಅತ್ಯುತ್ತಮ ಆರೈಕೆಯ ನಂತರ ತಾಯಿ ಮತ್ತು ಶಿಶುಗಳು ಸಂಪೂರ್ಣ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಬೀದರ್, ಅಕ್ಟೋಬರ್ 02: ನಗರದ ಶ್ಯಾಮರಾಜಪುರ ಬಡಾವಣೆಯ ನಿವಾಸಿ ಫರೀನಾ ಬೇಗಂ ಎಂಬುವರು ಬ್ರಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಹೆರಿಗೆಯಲ್ಲಿ ಮೂವರು ಮಕ್ಕಳಿಗೆ (ಎರಡು ಹೆಣ್ಣು, ಒಂದು ಗಂಡು) ಜನ್ಮ ನೀಡಿದ್ದಾರೆ. ಈ ಹಿಂದೆ ಮೊದಲ ಹೆರಿಗೆಯಲ್ಲಿ ನಾರ್ಮಲ್ ಹೆರಿಗೆಯಾಗಿ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದ ಫರೀನಾ ಬೇಗಂ, ಇದೀಗ ಎರಡನೇ ಹೆರಿಗೆಯಲ್ಲಿ ಸಿಜೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಮೂವರು ಹಸುಗೂಸುಗಳಿಗೆ ತಾಯಿಯಾಗಿದ್ದಾರೆ. ಸೆಪ್ಟೆಂಬರ್ 12 ರಂದು ಜನಿಸಿದ ಈ ಮಕ್ಕಳು ತಲಾ ಒಂದೂವರೆ ಕೆಜಿಯಷ್ಟು ತೂಕವಿದ್ದು, ವೈದ್ಯರ ಅತ್ಯುತ್ತಮ ಆರೈಕೆಯ ನಂತರ ತಾಯಿ ಮತ್ತು ಮೂವರೂ ನವಜಾತ ಶಿಶುಗಳು ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಇದೀಗ ತಾಯಿ-ಮಕ್ಕಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us

