AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು-ರಜನಿಕಾಂತ್​​ ನಡುವಿದೆ ಅವಿನಾಭಾವ ನಂಟು: ಸಾಂಸ್ಕೃತಿಕ ನಗರಿ ಮೇಲೆ ತಲೈವರ್ ಪ್ರೀತಿಗೆ ಇದುವೇ ಅಸಲಿ ಕಾರಣ

ಮೈಸೂರು-ರಜನಿಕಾಂತ್​​ ನಡುವಿದೆ ಅವಿನಾಭಾವ ನಂಟು: ಸಾಂಸ್ಕೃತಿಕ ನಗರಿ ಮೇಲೆ ತಲೈವರ್ ಪ್ರೀತಿಗೆ ಇದುವೇ ಅಸಲಿ ಕಾರಣ

ರಾಮ್​, ಮೈಸೂರು
| Edited By: |

Updated on: Oct 02, 2026 | 11:57 AM

Share

ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಮೈಸೂರು ಅಚ್ಚುಮೆಚ್ಚಿನ ತಾಣ. ಅವರ ಬಹುತೇಕ ಸಿನಿಮಾಗಳು ಮೈಸೂರು, ಮಂಡ್ಯ ಸುತ್ತಮುತ್ತ ಚಿತ್ರೀಕರಣವಾಗಿವೆ. ಈಗಲೂ ಧರ್ಮನ್ ಚಿತ್ರೀಕರಣಕ್ಕಾಗಿ ಮೈಸೂರಿಗೆ ಆಗಮಿಸಿದ್ದು, ಸೋಮನಾಥಪುರದಲ್ಲಿ ಅಭಿಮಾನಿಗಳಿಗೆ ಕೈಬೀಸಿದ್ದಾರೆ ಹಾಗೂ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಮೈಸೂರಿನ ಮೇಲಿನ ಅವರ ಪ್ರೀತಿ ಇದರಿಂದ ಮತ್ತೊಮ್ಮೆ ಸಾಬೀತಾಗಿದೆ.

ಮೈಸೂರು, ಅಕ್ಟೋಬರ್​​ 02: ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅವರ “ಧರ್ಮನ್” ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಅಷ್ಟಕ್ಕೂ ರಜನಿಕಾಂತ್‌ಗೆ ಮೈಸೂರು ಹೊಸ ಸ್ಥಳವೇನಲ್ಲ. ಮೈಸೂರಿಗೂ ಮತ್ತು ಅವರಿಗೂ ಅವಿನಾಭಾವ ಸಂಬಂಧವಿದೆ. ಅವರ ಬಹುತೇಕ ಸಿನಿಮಾಗಳು ಮೈಸೂರು ಮತ್ತು ಅದರ ಸುತ್ತಮುತ್ತಲಿನ ಮಂಡ್ಯ, ಮೇಲುಕೋಟೆ, ಕೆ.ಆರ್.ಎಸ್. ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣವಾಗಿವೆ. ವಿಶೇಷವಾಗಿ ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ಅವರ ಅಚ್ಚುಮೆಚ್ಚಿನ ತಾಣವಾಗಿದ್ದು, ಅನೇಕ ಸಿನಿಮಾಗಳ ಪ್ರಮುಖ ದೃಶ್ಯಗಳು ಇಲ್ಲಿ ಚಿತ್ರೀಕರಣಗೊಂಡಿವೆ.

1999ರಲ್ಲಿ ತೆರೆಕಂಡ “ಪಡಯಪ್ಪ” ಚಿತ್ರದ ಬಹುಪಾಲು ಚಿತ್ರೀಕರಣ ಮೈಸೂರಿನಲ್ಲಿಯೇ ನಡೆದಿದೆ. ಇದರ ಜೊತೆಗೆ, 2014ರಲ್ಲಿ ಬಿಡುಗಡೆಯಾದ “ಲಿಂಗಾ” ಚಿತ್ರಕ್ಕೂ ಮೈಸೂರು ಪ್ರಮುಖ ಚಿತ್ರೀಕರಣ ತಾಣವಾಗಿತ್ತು. ಆಗ ಮೈಸೂರು ಅರಮನೆಯಲ್ಲಿಯೂ ಚಿತ್ರೀಕರಣಕ್ಕೆ ಅವಕಾಶ ದೊರೆತಿತ್ತು ಅವರ. “ಮುತ್ತು”, “ಯಜಮಾನ್” ಸೇರಿದಂತೆ ಅನೇಕ ಸಿನಿಮಾಗಳು ಮೈಸೂರಿನ ಸೊಬಗನ್ನು ಅನಾವರಣಗೊಳಿಸಿವೆ. ಅದೇ ಮೈಸೂರಲ್ಲಿ ಈಗ ರಜನಿಕಾಂತ್​ “ಧರ್ಮನ್” ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಟಿ. ನರಸೀಪುರ ತಾಲೂಕಿನ ಸೋಮನಾಥಪುರಕ್ಕೆ ಭೇಟಿ ನೀಡುವ ಜೊತೆಗೆ ನಾಡ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಾನಕ್ಕೂ ತೆರಳಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇದು ಮೈಸೂರಿನ ಮೇಲೆ ತಲೈವರ್ ರಜನಿಕಾಂತ್‌ಗಿರುವ ಅಪಾರ ಪ್ರೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More