
Rajinikanth
ರಜನಿಕಾಂತ್ ಅವರು ಕಾಲಿವುಡ್ನ ಸ್ಟಾರ್ ಹೀರೋ. ಅವರು 1950ರ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಶಿವಾಜಿ ರಾವ್ ಗಾಯಕ್ವಾಡ್ ಆಗಿ ಜನಿಸಿದರು. ಆರಂಭದಲ್ಲಿ ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದರು. ಆ ಬಳಿಕ ಹೀರೋ ಆಗಬೇಕು ಎಂದು ತಮಿಳುನಾಡಿಗೆ ತೆರಳಿದರು. ತಮಿಳು ಚಲನಚಿತ್ರಗಳಲ್ಲಿನ ವಿವಿಧ ಪಾತ್ರಗಳೊಂದಿಗೆ ಖ್ಯಾತಿಗೆ ಪಡೆದರು. ಕನ್ನಡದಲ್ಲೂ ಅವರು ನಟಿಸಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ‘ಎಂದಿರನ್’, ‘ಜೈಲರ್’ ಅಂಥ ಸಿನಿಮಾ ಮಾಡಿ ಅವರು ಗಮನ ಸೆಳೆದಿದ್ದಾರೆ. ವೃತ್ತಿಜೀವನವು ನಾಲ್ಕು ದಶಕ ಕಳೆದಿದ್ದಾರೆ. ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳಿಂದ ಪೂಜಿಸಲ್ಪಟ್ಟ ಅವರನ್ನು ‘ಸೂಪರ್ ಸ್ಟಾರ್’ ಎಂದು ಕರೆಯಲಾಗುತ್ತದೆ. ಅವರು ಆಧ್ಯಾತ್ಮಿಕದ ಕಡೆಗೆ ಆಕರ್ಷಿಸಲ್ಪಟ್ಟಿದ್ದಾರೆ
ಕಂಡಕ್ಟರ್ ಆಗಿದ್ದಾಗಲೇ ಸ್ಟೈಲ್ ಕಲಿತಿದ್ದ ರಜನಿಕಾಂತ್; ಯುವತಿಯರನ್ನು ಹೇಗೆ ಇಂಪ್ರೆಸ್ ಮಾಡುತ್ತಿದ್ದರು ಗೊತ್ತಾ?
ರಜನಿಕಾಂತ್ ಅವರ ಸ್ಟೈಲಿಶ್ ವ್ಯಕ್ತಿತ್ವವು ಬೆಂಗಳೂರಿನ ಬಸ್ ಕಂಡಕ್ಟರ್ ಆಗಿದ್ದ ಅವರ ಆರಂಭಿಕ ಜೀವನದಿಂದಲೇ ರೂಪುಗೊಂಡಿದೆ. ಅವರು ತ್ವರಿತವಾಗಿ ಟಿಕೆಟ್ ನೀಡುತ್ತಿದ್ದರು ಮತ್ತು ಮಹಿಳೆಯರಿಗೆ ಗೌರವ ತೋರಿಸುತ್ತಿದ್ದರು. ಈ ವರ್ತನೆ ಅವರ ಸ್ಟಾರ್ ಡಮ್ಗೆ ಕಾರಣವಾಯಿತು. ಅವರ ಚಿತ್ರರಂಗದ ಪ್ರಯಾಣ ಮತ್ತು ಯಶಸ್ಸಿನ ಕುರಿತು ಈ ಲೇಖನ ವಿವರಿಸುತ್ತದೆ. ಅವರು ಈಗ ಲೋಕೇಶ್ ಕನಗರಾಜ್ ಅವರ 'ಕೂಲಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
- Shreelaxmi H
- Updated on: Mar 12, 2025
- 10:57 am
ನಿಜವಾದ ಫ್ಯಾನ್ಸ್ ಇಂಥ ಕೆಲಸ ಮಾಡಲ್ಲ: ಎಚ್ಚರಿಕೆ ನೀಡಿದ ರಜನಿಕಾಂತ್ ಟೀಮ್
ದಳಪತಿ ವಿಜಯ್ ಬಗ್ಗೆ ರಜನಿಕಾಂತ್ ಅವರ ಅಭಿಮಾನಿಯೊಬ್ಬ ಕೆಟ್ಟದಾಗಿ ಮಾತನಾಡಿದ್ದಾನೆ. ಅದನ್ನು ರಜನಿ ಟೀಮ್ ಖಂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಹೆಚ್ಚಾಗದೇ ಇರಲಿ ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಲಾಗಿದೆ. ಫ್ಯಾನ್ಸ್ ಸರಿಯಾಗಿ ನಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
- Madan Kumar
- Updated on: Feb 12, 2025
- 8:02 pm
ವಿಶ್ವ ಚೆಸ್ ಚಾಂಪಿಯನ್ ಡಿ ಗುಕೇಶ್ಗೆ ಉಡುಗೊರೆ ನೀಡಿದ ರಜನಿಕಾಂತ್
ಚೆಸ್ನಲ್ಲಿ ವಿಶ್ವ ಚಾಂಪಿಯನ್ ಆಗುವ ಮೂಲಕ ಸಾಧನೆ ಮಾಡಿರುವ ಡಿ. ಗುಕೇಶ್ ಅವರಿಗೆ ಚಿತ್ರರಂಗದ ಸಾಧಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಗುಕೇಶ್ ಅವರಿಗೆ ರಜನಿಕಾಂತ್ ಮತ್ತು ಶಿವಕಾರ್ತಿಕೇಯನ್ ಭೇಟಿಯಾಗುವ ಅವಕಾಶ ಸಿಕ್ಕಿದೆ. ಈ ಸ್ಟಾರ್ ನಟರು ಗುಕೇಶ್ಗೆ ಅಭಿನಂದನೆ ತಿಳಿಸಿ, ಉಡುಗೊರೆ ನೀಡಿದ್ದಾರೆ. ಈ ಸಂದರ್ಭದ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ.
- Madan Kumar
- Updated on: Dec 26, 2024
- 2:42 pm
ಲಿಫ್ಟ್ ಕೊಡಲ್ಲ ಎಂದು ಅವಮಾನ ಮಾಡಿದ್ದ ಸ್ಟುಡಿಯೋಗೆ ಐಷಾರಾಮಿ ಕಾರಲ್ಲಿ ಬಂದಿದ್ದ ರಜನಿಕಾಂತ್
Rajinikanth: ರಜನಿಕಾಂತ್ ಅವರ ಜೀವನ ಕೇವಲ ಚಲನಚಿತ್ರ ನಟನ ಕಥೆಯಲ್ಲ, ಅದು ಒಂದು ಸಾಧನೆಯ ಕಥೆ. ಕಂಡಕ್ಟರ್ ಆಗಿ ವೃತ್ತಿ ಪ್ರಾರಂಭಿಸಿ, ಅವಮಾನ, ಆರ್ಥಿಕ ಸಂಕಷ್ಟಗಳನ್ನು ಎದುರಿಸಿ ಅವರು ಸೂಪರ್ ಸ್ಟಾರ್ ಆದರು. 'ದರ್ಬಾರ್' ಚಿತ್ರದ ರಿಲೀಸ್ ಸಂದರ್ಭದಲ್ಲಿ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ರಜನಿಕಾಂತ್, ಆರಂಭದ ದಿನಗಳಲ್ಲಿ ಎದುರಿಸಿದ ಅವಮಾನಗಳನ್ನು ಹಂಚಿಕೊಂಡಿದ್ದಾರೆ.
- Shreelaxmi H
- Updated on: Dec 12, 2024
- 12:43 pm
ಸಖತ್ ಶ್ರೀಮಂತ ರಜನಿಕಾಂತ್; ಒಂದು ಚಿತ್ರಕ್ಕೆ ಪಡೆಯೋ ಸಂಭಾವನೆ ಎಷ್ಟು?
ಫೋರ್ಬ್ಸ್ ಇಂಡಿಯಾ ವರದಿ ಪ್ರಕಾರ ರಜನಿಕಾಂತ್ ಅವರು 150ರಿಂದ 210 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಇದು ಅವರು ಪ್ರತಿ ಚಿತ್ರಕ್ಕೆ ಪಡೆಯೋ ಸಂಭಾವನೆ. ‘ಜೈಲರ್’ ಚಿತ್ರದ ನಟನೆಗೆ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆದ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.
- Shreelaxmi H
- Updated on: Dec 12, 2024
- 7:56 am
ಬೆಂಗಳೂರಲ್ಲಿ ಕಂಡಕ್ಟರ್ ಆಗಿದ್ದಾಗ ರಜನಿಕಾಂತ್ಗೆ ಹುಡುಗಿ ಮೇಲೆ ಮೂಡಿತ್ತು ಪ್ರೀತಿ; ಆಮೇಲೆ ಏನಾಯ್ತು?
ರಜನಿಕಾಂತ್ ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದಾಗ 10ಜೆ ಬಸ್ ನಂಬರ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗುದೆ. ಅವರು ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದಾಹ ಹುಡಗಿ ಒಬ್ಬಳನ್ನು ನೋಡಿದ್ದರು. ಅವರ ಬಳಿ ಹೋಗಿ ರಜನಿಕಾಂತ್ ಅವರು ಮದುವೆ ಪ್ರಪೋಸ್ ಮಾಡಿದ್ದರು. ಮುಂದೇನಾಯ್ತು? ಈ ಸ್ಟೋರಿಯಲ್ಲಿದೆ ಉತ್ತರ.
- Shreelaxmi H
- Updated on: Dec 12, 2024
- 7:39 am
ನಟ ಧನುಶ್-ಐಶ್ವರ್ಯಾ ವಿಚ್ಛೇದನ, 20 ವರ್ಷದ ದಾಂಪತ್ಯ ಅಂತ್ಯ
Dhanush and Aishwarya: ರಜನೀಕಾಂತ್ ಪುತ್ರಿ ಐಶ್ವರ್ಯಾ ಹಾಗೂ ನಟ ಧನುಶ್ಗೆ ಅಧಿಕೃತವಾಗಿ ವಿಚ್ಛೇದನ ದೊರೆತಿದೆ. ಚೆನ್ನೈ ಫ್ಯಾಮಿಲಿ ಕೋರ್ಟ್ ಇವರಿಗೆ ವಿಚ್ಛೇದನ ಮಂಜೂರು ಮಾಡಿದೆ. ಇವರ 20 ವರ್ಷದ ದಾಂಪತ್ಯ ಅಂತ್ಯವಾಗಿದೆ.
- Manjunatha C
- Updated on: Nov 28, 2024
- 11:39 am