‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಿಂದ ಹೊರಬಂದಿರುವ ಮಾನಸಾ ಅವರು ಸಂದರ್ಶನ ನೀಡಿದ್ದಾರೆ. ಅವರ ಜೊತೆ ಪತಿ ತುಕಾಲಿ ಸಂತೋಷ್ ಕೂಡ ಭಾಗಿ ಆಗಿದ್ದಾರೆ. ದೊಡ್ಮನೆಯಲ್ಲಿ ಇದ್ದಾಗ ಮಾನಸಾ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಅಂತಹ ನೆಗೆಟಿವ್ ಟ್ರೋಲ್ಗಳ ಬಗ್ಗೆ ತುಕಾಲಿ ಸಂತೋಷ್ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಗರುಡ ರಾಮ್ ಅವರು ಖಡಕ್ ನಟನಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಈ ಇಮೇಜ್ ಸಿಕ್ಕಿದ್ದು ‘ಕೆಜಿಎಫ್’ ಸಿನಿಮಾದಿಂದ. ಈಗ ಅವರು ‘ಬಘೀರ’ ಸಿನಿಮಾದಲ್ಲಿ ಕೂಡ ಪ್ರಮುಖ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆಜಿಎಫ್’ ಸಿನಿಮಾ ತೆರೆಕಂಡ ಬಳಿಕ ಅವರಿಗೆ ಹಲವು ಅವಕಾಶಗಳು ಸಿಕ್ಕವು. ಆ ಬಗ್ಗೆ ಅವರು ಮಾತನಾಡಿದ್ದಾರೆ.
ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾ ತೆರೆಕಾಣಲು ಸಜ್ಜಾಗಿದೆ. ಈ ಚಿತ್ರದಲ್ಲಿ ಗರುಡಾ ರಾಮ್ ಅವರು ವಿಲನ್ ಪಾತ್ರ ಮಾಡಿದ್ದಾರೆ. ಸಿನಿಮಾದಲ್ಲಿ ತಮ್ಮ ಪಾತ್ರ ಹೇಗಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ಈ ಸಿನಿಮಾಗೆ ‘ಹೊಂಬಾಳೆ ಫಿಲ್ಮ್ಸ್’ ಬಂಡವಾಳ ಹೂಡಿದೆ. ಈ ಸಂಸ್ಥೆಯ ಜೊತೆ ಗರುಡಾ ರಾಮ್ ಮಾಡಿದ ಮೂರನೇ ಸಿನಿಮಾ ಇದು.
ರಾಜಕೀಯಕ್ಕೆ ಬರಬೇಕು ಎಂಬುದು ಜಗದೀಶ್ ಗುರಿ. ಆ ಬಗ್ಗೆ ಅವರು ಈಗಾಗಲೇ ಮಾತನಾಡಿದ್ದಾರೆ. ಸಿಎಂ ಆಗಬೇಕು ಎಂದು ಕನಸು ಕಂಡಿರುವ ಜಗದೀಶ್ ಅವರು ‘ಟಿವಿ 9’ ಎಕ್ಸ್ಕ್ಲೂಸೀವ್ ಸಂದರ್ಶನದಲ್ಲೂ ಆ ಬಗ್ಗೆ ಮಾತನಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದಿಂದ ಹೊರಬಂದ ಬಳಿಕ ಅವರು ಈ ಸಂದರ್ಶನ ನೀಡಿದ್ದು, ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಅವಾಚ್ಯ ಪದಗಳನ್ನು ಬಳಸಿದ್ದಕ್ಕಾಗಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಜಗದೀಶ್ ಅವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಲವು ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದಾರೆ. ಜಗದೀಶ್ ಮತ್ತೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರಬೇಕು ಎಂಬುದು ಅವರ ಅಭಿಮಾನಿಗಳ ಆಸೆ. ಆ ಆಸೆ ಈಡೇರುತ್ತಾ ಅಥವಾ ಇಲ್ಲವಾ ಎಂಬುದನ್ನು ಕಾದು ನೋಡಬೇಕು.
ಬಿಗ್ ಬಾಸ್ ಮನೆಯಿಂದ ಯಮುನಾ ಶ್ರೀನಿಧಿ ಅವರು ಎಲಿಮಿನೇಟ್ ಆಗಿದ್ದು ಅನೇಕರಿಗೆ ಅಚ್ಚರಿ ಆಯಿತು. ಒಂದು ವಾರದ ಅನುಭವದ ಬಗ್ಗೆ ಅವರೀಗ ಮಾತನಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಇಷ್ಟು ದಿನ ಸ್ಪರ್ಧಿಸಿದ್ದಕ್ಕೆ ಯಮುನಾ ಶ್ರೀನಿಧಿ ಅವರಿಗೆ ಎಷ್ಟು ಸಂಭಾವನೆ ಸಿಕ್ಕಿರಬಹುದು ಎಂಬ ಕೌತುಕ ಎಲ್ಲರಿಗೂ ಇದೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ ಕಾರ್ಯಕ್ರಮದಲ್ಲಿ ತನಿಷಾ ಕುಪ್ಪಂಡ ಮತ್ತು ವರ್ತೂರು ಸಂತೋಷ್ ನಡುವೆ ಆತ್ಮೀಯತೆ ಬೆಳೆದಿತ್ತು. ರಿಯಾಲಿಟಿ ಶೋ ಮುಗಿದ ನಂತರವೂ ಅವರ ನಡುವಿನ ಸ್ನೇಹ ಮುಂದುವರಿದಿದೆ. ಹಾಗಾಗಿ ಅವರಿಬ್ಬರು ಮದುವೆ ಆಗಲಿ ಎಂದು ಕೆಲವು ಅಭಿಮಾನಿಗಳು ಆಸೆಪಟ್ಟಿದ್ದಾರೆ. ಆ ಕುರಿತ ಪ್ರಶ್ನೆಗೆ ವರ್ತೂರು ಸಂತೋಷ್ ಉತ್ತರ ನೀಡಿದ್ದಾರೆ.
ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ನಡೆಸಲು ಸರ್ಕಾರ ನಿರ್ಧರಿಸಿದ ಹಿನ್ನೆಲೆಯಲ್ಲಿ ಗಂಗಾ ಆರತಿ ಬಗ್ಗೆ ತಿಳಿಯಲು ಕೃಷಿ ಸಚಿವ ಹಾಗೂ ಕಾವೇರಿ ಆರತಿ ಅಧ್ಯಯನ ಸಮಿತಿ ಅಧ್ಯಕ್ಷ ಎನ್. ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಹರಿದ್ವಾರಕ್ಕೆ ತೆರಳಿ, ಗಂಗಾರತಿ ಸಭಾದೊಂದಿಗೆ ಸಭೆ ನಡೆಸಿದೆ.
ಗಂಗೆಯಷ್ಟೇ ಪವಿತ್ರ ನದಿ ಕಾವೇರಿ ಎಂಬ ನಿಟ್ಟಿನಲ್ಲಿ ಕಾವೇರಿ ಆರತಿ ಮಾಡಲು ಸರ್ಕಾರ ಮುಂದಾಗಿದೆ. ಹಾಗಾಗಿ ಸಚಿವ ಚೆಲುವರಾಯಸ್ವಾಮಿ ನೇತೃತ್ವದ ನಿಯೋಗ ಕಾವೇರಿ ಆರತಿಯ ರೂಪುರೇಷೆ ತಯಾರಿಸಲಿದೆ. ಇದಕ್ಕಾಗಿ ನಿಯೋಗ ಇಂದು ಮತ್ತು ನಾಳೆ ಹರಿದ್ವಾರ ಹಾಗೂ ವಾರಣಾಸಿಯಲ್ಲಿ ಅಧ್ಯಯನ ನಡೆಸಿ ವರದಿ ತಯಾರಿಸಲಿದೆ.
ಸಿನಿಮಾದ ಪ್ರಚಾರಕ್ಕಾಗಿ ಹಲವು ತಂತ್ರಗಳನ್ನು ಮಾಡಲಾಗುತ್ತದೆ. ಕಿರಣ್ ರಾಜ್ ಕೂಡ ಅದೇ ಹಾದಿ ತುಳಿದಿದ್ದಾರಾ ಎಂಬ ಪ್ರಶ್ನೆ ಕೆಲವರಲ್ಲಿ ಮೂಡಿದೆ. ಈ ಕುರಿತು ಅವರ ಆಪ್ತರು ಪ್ರತಿಕ್ರಿಯೆ ನೀಡಿದ್ದಾರೆ. ರಸ್ತೆ ಅಪಘಾತ ಆಗಿದ್ದು ಎಲ್ಲಿ ಮತ್ತು ಯಾವಾಗ ಎಂಬ ಬಗ್ಗೆ ಗಿರೀಶ್ ಅವರು ಮಾಹಿತಿ ನೀಡಿದ್ದಾರೆ. ಗಿಮಿಕ್ ಬಗ್ಗೆ ಎದುರಾದ ಪ್ರಶ್ನೆಗೂ ಅವರು ಉತ್ತರಿಸಿದ್ದಾರೆ.
ಕಿರಣ್ ರಾಜ್ ಅವರು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಸಿದ್ದೇಶ್ವರ ನಿರಾಶ್ರಿತರ ಕೇಂದ್ರಕ್ಕೆ ಕಿರಣ್ ರಾಜ್ ತೆರಳಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಅವರು ಓಡಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರಿನ ಬಲಭಾಗಕ್ಕೆ ಹಾನಿ ಆಗಿದೆ. ಸದ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಟ ದರ್ಶನ್ ಹಾಗೂ ಗ್ಯಾಂಗ್ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿನಲ್ಲಿ ಇದ್ದಾರೆ. ಈ ಪ್ರಕರಣ ನಡೆದು ಮೂರು ತಿಂಗಳು ಕಳೆಯುತ್ತಾ ಬಂದಿವೆ. ಇಂದಿಗೆ (ಸೆಪ್ಟೆಂಬರ್ 9) ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳಲಿದೆ. ಕೋರ್ಟ್ನಲ್ಲಿ ಇದರ ವಿಚಾರಣೆ ಇಂದು ನಡೆಯಲಿದೆ. ಈಗ ದರ್ಶನ್ ಅವರನ್ನು ಪೆರೋಲ್ ಮೇಲೆ ತರಲು ಪ್ಲ್ಯಾನ್ ನಡೆದಿದೆ.