AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಡಿ ಹಾಡಿನ ವಿವಾದ: ಜನರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಗಾಯಕ ನವೀನ್ ಸಜ್ಜು ಹೇಳಿದ್ದಿಷ್ಟು..

ಕೆಡಿ ಹಾಡಿನ ವಿವಾದ: ಜನರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಗಾಯಕ ನವೀನ್ ಸಜ್ಜು ಹೇಳಿದ್ದಿಷ್ಟು..

Malatesh Jaggin
| Edited By: |

Updated on:Apr 06, 2026 | 9:58 PM

Share

‘ಕೆಡಿ’ ಚಿತ್ರದ ‘ಸರ್ಸೆ ನಿನ್ನ ಸೆರಗ’ ಹಾಡು ವಿವಾದಕ್ಕೆ ಕಾರಣ ಆಯಿತು. ಕಡೆಗೂ ಆ ಸಾಂಗ್ ಡಿಲೀಟ್ ಮಾಡಬೇಕಾಯಿತು. ಆ ರೀತಿ ಆಗಿದ್ದರ ಬಗ್ಗೆ ಗಾಯಕ ನವೀನ್ ಸಜ್ಜು ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ನಾವೇ ಒಳ್ಳೆಯ ಟ್ರೆಂಡ್ ಸೆಟ್ ಮಾಡಬೇಕು’ ಎಂದು ಅವರು ಹೇಳಿದ್ದಾರೆ.

‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ’ ಹಾಡು ತುಂಬಾ ವಿವಾದಕ್ಕೆ ಕಾರಣ ಆಯಿತು. ಕಡೆಗೂ ಆ ಹಾಡು ಡಿಲೀಟ್ ಮಾಡಬೇಕಾಯಿತು. ಆ ರೀತಿ ಆಗಿದ್ದರ ಬಗ್ಗೆ ಗಾಯಕ ನವೀನ್ ಸಜ್ಜು (Naveen Sajju) ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಸಂಗೀತಗಾರರು ನಾವು ಟ್ರೆಂಡ್ ಹಿಂದೆ ಹೋಗುವುದಲ್ಲ. ನಾವೇ ಟ್ರೆಂಡ್ ಸೆಟ್ ಮಾಡುವುದು. ನನಗೆ ಮೊದಲು ಆರ್ಕೆಸ್ಟ್ರಾಗಳಲ್ಲಿ ಜನಪದ ಗೀತೆಗಳನ್ನು ಹಾಡಲು ನನಗೆ ಅವಕಾಶ ಕೊಡುತ್ತಿರಲಿಲ್ಲ. ಆದರೆ ನಾನು ಆಗ ಅವರಿಗೆ ಸವಾಲು ಹಾಕಿದ್ದೆ. ಈಗ ನನ್ನ ಬ್ಯಾಂಡ್ ಮೂಲಕ ಜನರು ಜನಪದ ಹಾಡಿಗೆ ಕುಣಿಯುವಂತೆ ಮಾಡಿದ್ದೇನೆ’ ಎಂದು ನವೀನ್ ಅವರು ಹೇಳಿದ್ದಾರೆ. ‘ಲೋ ನವೀನ’ ಸಿನಿಮಾದಲ್ಲಿ ಅವರು ಹೀರೋ ಆಗಿ ನಟಿಸಿದ್ದಾರೆ. ಈ ಚಿತ್ರವೀಗ ಬಿಡುಗಡೆಗೆ ಸಜ್ಜಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Apr 06, 2026 09:57 PM
Follow Us