‘ಚೇತನ್ ನಿಜವಾಗಿಯೂ ಒಬ್ಬ ಅರೆಹುಚ್ಚ’: ಸಾರಾ ಗೋವಿಂದು ಖಡಕ್ ಪ್ರತಿಕ್ರಿಯೆ
ಡಾ. ರಾಜ್ಕುಮಾರ್ ಸಮಾಧಿ ಜಾಗಕ್ಕೆ ಸಂಬಂಧಿಸಿದಂತೆ ಚೇತನ್ ಅಹಿಂಸಾ ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣ ಆಗಿದೆ. ಸಮಾಧಿಗೆ ಎರಡೂವರೆ ಎಕರೆ ಜಾಗ ನೀಡಿದ್ದು ಸರಿಯಲ್ಲ ಎಂದು ಹಲವರು ವಿರೋಧಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಟ ಚೇತನ್ ಅಹಿಂಸಾ ಅವರು ಡಾ. ರಾಜ್ಕುಮಾರ್ ಸಮಾಧಿ (Dr Rajkumar Samadhi) ಜಾಗಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣ ಆಗಿದೆ. ಸಮಾಧಿಗೆ ಎರಡೂವರೆ ಎಕರೆ ಜಾಗ ನೀಡಿದ್ದು ಸರಿಯಲ್ಲ ಎಂದು ಅನೇಕರು ವಿರೋಧಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಚೇತನ್ ಕ್ಷಮೆ ಕೇಳಿದ ಬಳಿಕ ಮತ್ತೆ ಮಾತು ಬದಲಿಸಿದ್ದಾನೆ. ನಿಜವಾಗಿಯೂ ಅವನು ಒಬ್ಬ ಅರೆಹುಚ್ಚ. ಅವನಿಗೆ ಯೋಚನಾ ಶಕ್ತಿ ಇಲ್ಲ. ಅಂಥವರನ್ನು ನಮ್ಮ ಜೊತೆ ಇಟ್ಟುಕೊಂಡರೆ ನಮಗೂ ಕೆಟ್ಟ ಹೆಸರು ಬರುತ್ತದೆ. ಅವನು ಯಾವುದೇ ಸಿನಿಮಾದಲ್ಲಿ ನಟಿಸಿದರೂ ಅದನ್ನು ಬಹಿಷ್ಕರಿಸಬೇಕು ಅಂತ ಜನರು ತೀರ್ಮಾನ ಮಾಡಿದ್ದಾರೆ’ ಎಂದು ಸಾರಾ ಗೋವಿಂದು (Sa Ra Govind) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕೆಪಿಎಸ್ಸಿ ನೇಮಕಾತಿ ಹಗರಣ: 1.5 ಕೋಟಿ, 22 ಲಕ್ಷದ ಚಿನ್ನಾಭರಣ ಜಪ್ತಿ
ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ‘ಬಿಗ್ ಬಾಸ್ ಕನ್ನಡ 13’ ಶೋ ಸ್ಪರ್ಧಿಗಳು
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಗುಜರಾತ್ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!

