AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳೆಯ ವಾಸುಕಿ ವೈಭವ್​ ಕಾನ್ಸರ್ಟ್​ಗೆ ಟಿಕೆಟ್ ಖರೀದಿಸಿ ಬಂದ ಶೈನ್; ದೊಡ್ಡ ಸರ್​ಪ್ರೈಸ್

ಗೆಳೆಯ ವಾಸುಕಿ ವೈಭವ್​ ಕಾನ್ಸರ್ಟ್​ಗೆ ಟಿಕೆಟ್ ಖರೀದಿಸಿ ಬಂದ ಶೈನ್; ದೊಡ್ಡ ಸರ್​ಪ್ರೈಸ್

ರಾಜೇಶ್ ದುಗ್ಗುಮನೆ
|

Updated on:Aug 11, 2026 | 8:50 AM

Share

ಸಂಗೀತ ನಿರ್ದೇಶಕ ವಾಸೂಕಿ ವೈಭವ್ ಅವರ ಲೈವ್ ಕಾನ್ಸರ್ಟ್‌ನಲ್ಲಿ ನಟ ಶೈನ್ ಶೆಟ್ಟಿ ಸರ್ಪ್ರೈಸ್ ಎಂಟ್ರಿ ನೀಡಿದ್ದಾರೆ. ಸ್ವತಃ ಟಿಕೆಟ್ ಖರೀದಿಸಿ ಕಾನ್ಸರ್ಟ್‌ಗೆ ಆಗಮಿಸಿದ್ದ ಶೈನ್, ವಾಸೂಕಿ ಅವರ ಲೈವ್ ಪರ್ಫಾರ್ಮೆನ್ಸ್ ಹಾಗೂ ಮ್ಯೂಸಿಕ್ ಟೀಮ್ ಅನ್ನು ವೇದಿಕೆ ಮೇಲೆ ಮುಕ್ತವಾಗಿ ಹೊಗಳಿ ಶುಭ ಹಾರೈಸಿದರು.

ವಾಸುಕಿ ವೈಭವ್ ಅವರು ಬೆಂಗಳೂರಲ್ಲಿ ಕಾನ್ಸರ್ಟ್ ನಡೆಸಿದ್ದಾರೆ. ಈ ವೇಳೆ ವಾಸುಕಿಗೆ ಒಂದು ಸರ್​​ಪ್ರೈಸ್ ಸಿಕ್ಕಿದೆ. ವೇದಿಕೆ ಮೇಲಿದ್ದ ವಾಸುಕಿ ವೈಭವ್, ‘ಶೈನ್ ಶೆಟ್ಟಿ ಇಲ್ಲ ಎಲ್ಲೋ ಇದ್ದಾರೆ, ನನಗೆ ಕಾಣಿಸುತ್ತಿಲ್ಲ’ ಎಂದು ಹುಡುಕಿದಾಗ ಶೈನ್ ವೇದಿಕೆಗೆ ಆಗಮಿಸಿದರು. ಈ ವೇಳೆ ಮಾತನಾಡಿದ ವಾಸುಕಿ, ‘ನಾನು ಕರೆದಿದ್ದಕ್ಕೆ ಶೈನ್ ಇಲ್ಲಿಗೆ ಬಂದಿಲ್ಲ. ಅವರು ಸ್ವತಃ ಟಿಕೆಟ್ ಖರೀದಿಸಿ ಕಾನ್ಸರ್ಟ್‌ಗೆ ಬಂದಿದ್ದಾರೆ’ ಎಂದು ಶೈನ್ ಅವರ ಸರಳತೆಯನ್ನು ಕೊಂಡಾಡಿದರು.

‘ಶಂಕರಭರಣ’ ಚಿತ್ರಕ್ಕೆ ವಾಸೂಕಿ ಸಾಥ್

ಇದೇ ಸಂದರ್ಭದಲ್ಲಿ ಶೈನ್ ಶೆಟ್ಟಿ ನಟಿಸಿ, ನಿರ್ಮಿಸುತ್ತಿರುವ ‘ಶಂಕರಭರಣ’ ಚಿತ್ರದ ಬಗ್ಗೆ ವಾಸುಕಿ ಮಾಹಿತಿ ಹಂಚಿಕೊಂಡರು. ರಾಷ್ಟ್ರ ಪ್ರಶಸ್ತಿ ವಿಜೇತ ‘ಮಿಥ್ಯ’ ಚಿತ್ರವನ್ನು ನಿರ್ದೇಶಿಸಿದ್ದ ಮನೀಶ್ ಶೆಟ್ಟಿ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಚರಣ್ ರಾಜ್ ಸಂಗೀತ ನೀಡುತ್ತಿದ್ದಾರೆ ಎಂದು ತಿಳಿಸಿದರು. ‘ಇದು ಸಂಪೂರ್ಣ ಪಕ್ಕಾ ಎಂಟರ್‌ಟೈನರ್ ಚಿತ್ರವಾಗಿದ್ದು, ಸಖತ್ ಆಗಿ ಮೂಡಿಬಂದಿದೆ’ ಎಂದು ವಾಸುಕಿ ಶಂಕರಭರಣ ಚಿತ್ರತಂಡಕ್ಕೆ ಶುಭ ಹಾರೈಸಿದರು.

ವೇದಿಕೆ ಮೇಲೆ ಶೈನ್ ಭಾವನಾತ್ಮಕ ಮಾತು

ಮೈಕ್ ಕೈಗೆತ್ತಿಕೊಂಡ ಶೈನ್ ಶೆಟ್ಟಿ, ‘ನಾನಿಲ್ಲಿ ನಟನಾಗಿ ಅಥವಾ ಸ್ನೇಹಿತನಾಗಿ ಬಂದಿಲ್ಲ, ಒಬ್ಬ ಮ್ಯೂಸಿಕ್ ಲವರ್ ಆಗಿ ಬಂದಿದ್ದೇನೆ. ವಾಸುಕಿ ಅವರ ಹಾಡುಗಳನ್ನು ಲೈವ್ ಆಗಿ ಕೇಳಲು ಟಿಕೆಟ್ ತಗೊಂಡು ಬಂದಿದ್ದೇನೆ. ಇಂತಹ ಅದ್ಭುತ ಸೆಟಪ್‌ನಲ್ಲಿ ಅವರನ್ನು ಲೈವ್ ನೋಡಿ ತುಂಬಾ ಹೆಮ್ಮೆಯಾಗುತ್ತಿದೆ’ ಎಂದರು. ನಂತರ ವೇದಿಕೆ ಮೇಲಿದ್ದ ಇಡೀ ಮ್ಯೂಸಿಕ್ ತಂಡಕ್ಕೆ ಶೈನ್ ಧನ್ಯವಾದ ತಿಳಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Aug 11, 2026 08:50 AM

Follow Us